ಇರುವೆ ಬಗ್ಗೆ ನಿಮಗೆ ಗೊತಿಲ್ಲದ ಅಚ್ಚರಿ ಮಾಹಿತಿ

0
1112

ಇರುವೆಗಳನ್ನು ಎಲ್ಲರೂ ನೋಡಿರುತ್ತೀರಾ ಯಾವುದೇ ಸ್ಥಳದಲ್ಲಿ ಸಕ್ಕರೆ ಅಥವಾ ಸಿಹಿ ಅಂಶಗಳು ಇರುವ ಪದಾರ್ಥಗಳು ಇದ್ದರೆ ಸಾಕು ಅಲ್ಲಿ ಇರುವೆಗಳು ಇರುತ್ತವೆ. ಯಾವಾಗಲೂ ಗುಂಪು ಗುಂಪಾಗಿ ಇರುವ ಇರುವೆಗಳು ನೂರಾರು ಸಾವಿರಾರು ಒಟ್ಟಿಗೆ ಇರುತ್ತವೆ. ಭೂಮಿಯ ಮೇಲೆ ಯಾವುದೇ ಪ್ರಾಣಿ ಹುಟ್ಟಬೇಕೆಂದರೆ ಅವುಗಳು ಲೈಂಗಿಕ ಕ್ರಿಯೆ ನಡೆಸಲೇಬೇಕು. ಅದೇ ರೀತಿಯಲ್ಲಿ ಇರುವೆಗಳು ಕೂಡ ಹುಟ್ಟಬೇಕೆಂದರೆ ಲೈಂಗಿಕ ಕ್ರಿಯೆ ನಡೆಸಬೇಕು. ಹೀಗೆ ಇರುವೆಗಳ ಲೈಂಗಿಕ ಕ್ರಿಯೆ ಹೇಗೆ ನಡೆಯುತ್ತದೆ ಮತ್ತು ಅವುಗಳು ಲೈಂಗಿಕ ಕ್ರಿಯೆ ಮಾಡುವ ಮುನ್ನ ತೆಗೆದುಕೊಳ್ಳುವ ಮುಂಜಾಗ್ರತೆ ಕ್ರಮಗಳ ಬಗ್ಗೆ ತಿಳಿಯೋಣ ಬನ್ನಿ.

ಇರುವೆಗಳಲ್ಲಿ ಸರಿಸುಮಾರು 12500 ಪ್ರಭೇದಗಳು ಇದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ 2500 ಪ್ರಭೇದಗಳನ್ನು ಗುರುತಿಸಲಾಗಿದೆ. ಇರುವೆಗಳ ಲೈಂಗಿಕ ಕ್ರಿಯೆಯ ಬಗ್ಗೆ ನಿಮಗೆ ತಿಳಿದರೆ ನೀವು ಅಚ್ಚರಿ ಪಡಬಹುದು. ಇರುವೆಗಳು ತಮ್ಮ ಲೈಂಗಿಕ ಕ್ರಿಯೆಯನ್ನು ನಡೆಸಲು ಸೂಕ್ತವಾದ ಸ್ಥಳಗಳನ್ನು ಆಯ್ಕೆ ಮಾಡುತ್ತವೆ. ಮತ್ತು ಹೆಚ್ಚು ತೇವಾಂಶ ಅಥವಾ ಶೀತ ಇರುವ ವಾತಾವರಣದಲ್ಲಿ ತಮ್ಮ ಲೈಂಗಿಕ ಕ್ರಿಯೆಯನ್ನು ನಡೆಸುವುದಿಲ್ಲ. ದೊಡ್ಡ ಗಾತ್ರದ ಹೆಣ್ಣು ಇರುವೆಯನ್ನು ಕ್ವೀನ್ ಎಂದು ಮತ್ತು ದೊಡ್ಡ ಗಾತ್ರದ ಗಂಡು ಇರುವೆಯನ್ನು ಡ್ರೋಮ್ಸ್ ಎಂದು ಕರೆಯುತ್ತಾರೆ. ಇರುವೆಗಳು ಸರಿ ಸುಮಾರು ಐದರಿಂದ ಆರು ಸೆಂಟಿಮೀಟರ್ ಉದ್ದವಾಗಿರುತ್ತವೆ.

ಎಲ್ಲಾ ಇರುವೆಗಳಿಗೆ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯವಿರುವುದಿಲ್ಲ. ಯಾವಾಗಲೂ ಗುಂಪಿನಲ್ಲಿ ವಾಸಿಸುವ ಇರುವ ಗಳಲ್ಲಿ ಕೆಲವು ಇರುವೆಗಳಿಗೆ ಮಾತ್ರ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯವಿರುತ್ತದೆ. ಇಂತಹ ಇರುವೆಗಳಿಗೆ ರೆಕ್ಕೆ ಗಳು ಇರುತ್ತವೆ. ಈ ರೀತಿ ರೆಕ್ಕೆಗಳಿರುವ ಇರುವೆಗಳು ಗಾಳಿಯಲ್ಲಿ ತಮ್ಮ ಲೈಂಗಿಕ ಕ್ರಿಯೆಯನ್ನು ನಡೆಸುತ್ತವೆ. ಗುಂಪು ಗುಂಪು ಗುಂಪಾಗಿದ್ದಾಗ ಇರುವೆಗಳು ತಮ್ಮ ಲೈಂಗಿಕ ಕ್ರಿಯೆಯನ್ನು ನಡೆಸುವುದಿಲ್ಲ. ಈ ರೀತಿ ತಮ್ಮ ಲೈಂಗಿಕ ಕ್ರಿಯೆ ನಡೆಸುವ ಇರುವೆಗಳಲ್ಲಿ ಲೈಂಗಿಕ ಕ್ರಿಯೆ ಮುಗಿದ ತಕ್ಷಣ ಗಂಡು ಇರುವೆಗಳು ಮರಣ ಹೊಂದುತ್ತವೆ.

ಏಕೆಂದರೆ ಲೈಂಗಿಕ ಕ್ರಿಯೆ ನಡೆದ ಬಳಿಕ ಗಂಡು ಇರುವೆಗಳ ಹೊಟ್ಟೆಯಲ್ಲಿ ಅವರು ಅವಯವಗಳು ಒಡೆದು ಹೋಗುತ್ತವೆ. ಇದರ ನೋವನ್ನು ತಾಳಲಾರದೆ ಗಂಡು ಇರುವೆಗಳು ತಕ್ಷಣ ಮರಣ ಹೊಂದುತ್ತವೆ. ನಂತರದ ದಿನಗಳಲ್ಲಿ ಹೆಣ್ಣು ಇರುವೆಗಳು ಮೊಟ್ಟೆಯನ್ನುಇಡುತ್ತದೆ. ಈ ಹೆಣ್ಣು ಇರುವೆಗಳು ಮೊಟ್ಟೆಗಳನ್ನು ಇಡಲು ಕೆಲವು ಸೂಕ್ತ ಸ್ಥಳಗಳನ್ನು ಆಯ್ಕೆ ಮಾಡುತ್ತವೆ. ನಂತರ ಆ ಮೊಟ್ಟೆಗಳನ್ನು ಉಳಿದ ಇರುವೆಗಳು ಸೈನಿಕರ ರೀತಿಯಲ್ಲಿ ಕಾಪಾಡುತ್ತವೆ. ಮೊಟ್ಟೆಗಳಿಂದ ಆಚೆ ಬಂದ ಇರುವೆಗಳಲ್ಲಿ ಎಲ್ಲರಿಗೂ ಲೈಂಗಿಕ ಸಾಮರ್ಥ್ಯ ಇರುವುದಿಲ್ಲ ಕೆಲವು ಇರುವೆಗಳಿಗೆ ಮಾತ್ರ ಈ ಸಾಮರ್ಥ್ಯವಿದ್ದು ಅವುಗಳನ್ನು ಕ್ವೀನ್ ಮತ್ತು ಡ್ರೋಮ್ಸ್ ಇರುವೆಗಳು ಎಂದು ವಿಂಗಡಿಸಲಾಗುತ್ತದೆ. ಇರುವೆಗಳು ಈ ರೀತಿಯಾಗಿ ತಮ್ಮ ಲೈಂಗಿಕ ಕ್ರಿಯೆಯನ್ನು ವಿಭಿನ್ನವಾಗಿ ಮಾಡಿಕೊಳ್ಳುತ್ತವೆ. ವಿಶೇಷ ಮಾಹಿತಿ ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ತಪ್ಪದೇ ತಿಳಿಸಿರಿ.

LEAVE A REPLY

Please enter your comment!
Please enter your name here