ಸಾಕ್ಷಾತ್ ಶಿವನೇ ನೆಲೆಸಿರುವ ಮಹಾ ಕ್ಷೇತ್ರ ಇದು

0
882

ಕಾಶಿ ವಿಶ್ವನಾಥ ದೇವಾಲಯವು ಹಿಂದೂಗಳ ಪವಿತ್ರ ಆರಾಧನಾ ಸ್ಥಳವಾಗಿದೆ. ಶಿವದೇವನೇ ಸ್ವತಃ ಇಚ್ಛಿಸಿ ಇಲ್ಲಿ ನೆಲೆಗೊಂಡ ಎಂದು ಪುರಾಣಗಳು ತಿಳಿಸುತ್ತವೆ. ಇಲ್ಲಿನ ವಿಶ್ವನಾಥನ ಮಹಿಮೆ ಅಪಾರ. ಹಿಂದೂಗಳ ಪವಿತ್ರ ಯಾತ್ರೆಯಾದ ಕಾಶಿ ಯಾತ್ರೆಯಲ್ಲಿ ಎಲ್ಲ ಜ್ಯೋತಿರ್ಲಿಂಗ ದರ್ಶನ ಮಾಡಿದ್ರೆ ಸರ್ವ ಪಾಪಗಳು ಕಳೆದು ಮನುಷ್ಯನ ಜನ್ಮ ಸಾರ್ಥಕ ಆಗುತ್ತದೆ ಎಂದು ಪುರಾಣದಲ್ಲಿ ಉಲ್ಲೇಖ ಇದೆ. ಈ ದೇವಾಲಯ ಉತ್ತರಪ್ರದೇಶದ ವಾರಣಾಸಿಯಲ್ಲಿದೆ. ಪವಿತ್ರವಾದ ಗಂಗಾ ನದಿ ಕಾಶಿ ವಿಶ್ವನಾಥ ದೇಗುಲದ ಬಲಭಾಗದಿಂದ ಹರಿಯುತ್ತಿದೆ. ಇಲ್ಲಿ ಸಾವಿರರು ವರ್ಷಗಳಿಂದ ಕಾಶಿ ಕ್ಷೇತ್ರದಲ್ಲಿ ಜನಜೀವನ ಹಾಸುಹೊಕ್ಕಾಗಿದೆ. ಹಗಲು ರಾತ್ರಿ ಎಂಬ ವ್ಯತ್ಯಾಸ ಇಲ್ಲದಂತೆ ನಿತ್ಯ ಸಾವಿರಾರು ಮಂದಿ ಯಾತ್ರಿಕರೊಂದಿಗೆ ತುಂಬಿ ತುಳುಕುತ್ತಿರುತ್ತದೆ. ಪ್ರತಿ ಒಬ್ಬ ಹಿಂದೂ ಅಲ್ಲದೆ ಇಲ್ಲಿಗೆ ಸಾಕಷ್ಟು ಅನ್ಯ ಧರ್ಮದ ಜನರು ಸಹ ಆಗಮಿಸಿ ಧರ್ಮ ಬೇದ ಮರೆತು ದೇವರ ಕೃಪೆಗೆ ಪಾತ್ರರಾಗುತ್ತಾರೆ.

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ವಿಶ್ವನಾಥಕ್ಷೇತ್ರ ವಿಶಾಲಾಕ್ಷಿ ನೆಲೆಸಿರುವ ಪವಿತ್ರಭೂಮಿಯಾಗಿ ಇದು ಅನ್ನಪೂರ್ಣ ನೆಲವಾಗಿ ಈ ಕ್ಷೇತ್ರ ಖ್ಯಾತಿಗಳಿಸಿದೆ. ನಿಮ್ಮ ಸಮಸ್ಯೆಗಳು ಏನೇ ಇದ್ದರು ಅದನ್ನು ವಿಶ್ವನಾಥ ಖಂಡಿತ ನೆರವೇರಿಸುತ್ತಾರೆ. ಅಂದಾಜಿನ ಪ್ರಕಾರ ಪ್ರತಿ ನಿತ್ಯ ಎರಡು ಲಕ್ಷಕ್ಕೂ ಹೆಚ್ಚು ಜನರು ಕಾಶಿಗೆ ಆಗಮಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಕಾಶಿ ಎಂದರೆ ಪವಿತ್ರಕ್ಷೇತ್ರ. ಸಾವಿರಾರು ಆಲಯಗಳು ಗಂಗಾ ಆರತಿ ಕಾರ್ಯಕ್ರಮ, ನಿತ್ಯ ಪೂಜೆಗಳು ಭಜನೆಗಳು ಅರ್ಚನೆಗಳು ಭಕ್ತರ ಸಂಭ್ರಮ ಯಾವಾಗಲೂ ಆಧ್ಯಾತ್ಮಿಕವಾಗಿ ನೆಡಿಯುತ್ತಲೇ ಇರುತ್ತವೇ.

ಹಾಗಾಗಿಯೇ ಕಾಶಿ ಯಾತ್ರೆ ಬಗ್ಗೆ ನಮ್ಮ ಪೂರ್ವಿಕರು ಕಥೆಗಳಾಗಿ ಹೇಳುತ್ತಿರುತ್ತಾರೆ. ಕಾಶ್ಯಾನ್ತು ಮರಣಾನ್ ಮುಕ್ತಿ ಅಂದರೆ ಕಾಶಿಯಲ್ಲಿ ಮರಣಿಸಿದರೆ ಮೋಕ್ಷ ಲಭಿಸುತ್ತದೆಂದು ಪುರಾಣಗಳು ಹೇಳುತ್ತವೆ. ಇಲ್ಲಿನ ಪವಿತ್ರ ಗಂಗಾನದಿ ತೀರದಲ್ಲಿ ಇರುವ ಈ ಮಂದಿರದಲ್ಲಿ ದೇವರನ್ನು ದರ್ಶಿಸಿಕೊಂಡರೆ ಅದೆಷ್ಟೋ ಪುಣ್ಯ ಲಭಿಸುತ್ತದೆ ಅದೆಷ್ಟೋ ಸಾವಿರ ವರ್ಷಗಳಿಂದ ಈ ಆಲಯ ಹಲವು ದಂಡೆಯಾತ್ರೆಗಳ ಕಾರಣದಿಂದ ಶಿಥಿಲವಾಗಿದೆ. 18ನೇ ಶತಮಾನದಲ್ಲಿ ಮಹಾರಾಣಿ ಅಹಲ್ಯಾಭಾಯಿ ಹೋಲ್ಕರ್ ಆಲಯವನ್ನು ಪುನರ್‌ ನಿರ್ಮಿಸಿದರು. ರುಗ್ವೇದ ರಾಮಾಯಣ ಮಹಾಭಾರತ ಸ್ಕಂದಪುರಾಣದಲ್ಲಿನ ಕಾಶಿಖಾಂಡದಲ್ಲಿ ಈ ಆಲಯದ ಬಗ್ಗೆ ವಿವರಗಳಿವೆ.

ಹಾಗೆಯೇ ಅಲ್ಲೇ ಇರುವ ಕಾಶಿ ವಿಶಾಲಾಕ್ಷಿ ಆ ಜಗನ್ಮಾತೆ ಕಾಶಿಯಲ್ಲಿ ವಿಶಾಲಾಕ್ಷಿಯಾಗಿ ನೆಲೆಸಿದ್ದಾಳೇ ಸತೀದೇವಿ ಕಿವಿಯ ಓಲೆ ಬಿದ್ದ ಪ್ರದೇಶದಲ್ಲೇ ಉಂಟಾದ ದೇವಿಯ ಕ್ಷೇತ್ರವಿದು. ಜ್ಯೋತಿರ್ಲಿಂಗಗಳ ಜತೆಗೆ ಶಕ್ತಿಪೀಠ ಆದಕಾರಣ ಈ ಕ್ಷೇತ್ರ ಆರಾಧ್ಯನಿಲಯ. ಆ ಆದಿ ದಂಪತಿಗಳಿಗೆ ಸ್ವತಃ ಉದ್ಭವಿಸಿದ ಅಪರೂಪದ ಕ್ಷೇತ್ರಗಳಲ್ಲಿ ಇದೂ ಒಂದು. ಹಾಗೆಯೇ ಅನ್ನಪೂರ್ಣ ಆಲಯ ಇದು ಸಕಲ ಪ್ರಾಣಕೋಟಿಗೆ ಚೋದಕಶಕ್ತಿ ಆಹಾರ. ಆಹಾರವನ್ನು ಆ ಲೋಕಮಾತೆಯೇ ನೀಡುತ್ತಾಳಾದ ಕಾರಣ ಅನ್ನಪೂರ್ಣ ಮಾತೆಯಾಗಿ ಕರೆಯುತ್ತಾರೆ. ಆಕೆ ಕರುಣೆ ಕೃಪಾಕಟಾಕ್ಷೆ ಇಲ್ಲದಿದ್ದರೆ ಆಹಾರಕ್ಕೆ ಹಾಹಾಕಾರ ಉಂಟಾಗುತ್ತದೆ.

ಮಾನವರ ಹಸಿವನ್ನು ತೀರಿಸಲು ಆದಿಶಕ್ತಿ ಅನ್ನಪೂರ್ಣ ಮಾತೆಯಾಗಿ ಕಾಶಿಕ್ಷೇತ್ರದಲ್ಲಿ ನೆಲೆಸಿದ್ದಾಳೆ. ರಾಮಭಕ್ತ ಹನುಮಂತ ಆಲಯ ಸಂಕಟ ಮೋಚನ ಆಲಯವನ್ನು ಸಹ ವೀಕ್ಷಿಸಬೇಕು. ಕಾಶಿಯಲ್ಲಿ ಅದ್ವೈತ ಸಿದ್ಧಾಂತ ಕರ್ತರಾದ ಆದಿಶಂಕರರು ಈ ನಗರದೊಂದಿಗೆ ಒಳ್ಳೆಯ ಒಟನಾಡ ಹೊಂದಿದ್ದರು. ಅವರು ಇಲ್ಲೇ ಬ್ರಹ್ಮಸೂತ್ರಗಳನ್ನು, ಭಜಗೋವಿಂದಂ ಇನ್ನಿತರೆ ಗ್ರಂಥಗಳನ್ನು ರಚಿಸಿದರು. ರಾಮಕೃಷ್ಣ ಪರಮಹಂಸರು ಕಬೀರ್ ತುಳಸೀದಾಸರು, ರವಿದಾಸರು. ಈ ಕ್ಷೇತ್ರದ ಮಹತ್ವವನ್ನು ತಮ್ಮ ರಚನೆಗಳಲ್ಲಿ ಮಾತುಗಳಲ್ಲಿ ಪ್ರಸ್ತಾಪಿಸಿದ್ದಾರೆ.

ಹಾಗೆಯೇ ಈ ಕಾಶಿ ಕ್ಷೇತ್ರದಲ್ಲಿ ಅಂತಿಮ ಸಂಸ್ಕಾರಕ್ಕೆ ನಿಲಯವಿದೆ ಕಾಶಿಯಲ್ಲಿ ಕಣ್ಣು ಮುಚ್ಚಿದರೆ ಶಿವಸಾಯುಜ್ಯ ಪಡೆಯುತ್ತಾರೆಂಬುದು ಆರ್ಯೋಕ್ತಿ. ಹಾಗಾಗಿ ವಯೋವೃದ್ಧರು ಅನೇಕ ಮಂದಿ ತಮ್ಮ ಅಂತ್ಯಕಾಲವನ್ನು ಕಳೆಯಬೇಕೆಂದು ಇಲ್ಲಿಗೆ ಬರುತ್ತಿರುತ್ತಾರೆ ಅವರಿಗಾಗಿ ಎಲ್ಲ ರೀತಿಯ ಸೌಕರ್ಯಗಳು ಇಲ್ಲಿವೆ. ಎಲ್ಲಾ ಧರ್ಮಗಳಿಗೂ ಪವಿತ್ರ ಭೂಮಿ ಕಾಶಿ ಕೇವಲ ಹಿಂದೂಗಳಿಗಷ್ಟೇ ಅಲ್ಲ ಬೌದ್ಧ, ಜೈನ ಧರ್ಮಗಳಿಗೆ ಪವಿತ್ರಭೂಮಿ. ಬೌದ್ಧರಿಗೆ ಪವಿತ್ರವಾದ ಸ್ಥಳಗಳಲ್ಲಿ ಇದು ಸಹ ಒಂದು.

LEAVE A REPLY

Please enter your comment!
Please enter your name here