400 ವರ್ಷಗಳ ಅದ ನಂತರ ಪುರುಷರಿಗೆ ಪ್ರವೇಶ ನೀಡುತ್ತಿರುವ ದೇಗುಲದ ಕಥೆ

0
893

ನಮ್ಮ ದೇಶ ದೇಗುಲಗಳ ನಾಡು ಈ ದೇಶದಲ್ಲಿ ಅನೇಕ ಭಾಗಗಳಲ್ಲಿ ಅದೆಷ್ಟೊ ಪುರಾತನ ದೇಗುಲಗಳು ಇವೆ. ನಮ್ಮ ಭಾರತದ ಇತಿಹಾಸವನ್ನು ಇಂದಿಗೂ ಸಹ ಯಾವ ಇತಿಹಾಸಗಾರರು ಸಹ ನಿಖರವಾಗಿ ಹೇಳೋಕೆ ಸಾಧ್ಯ ಇಲ್ಲ ಏಕೆ ಅಂದ್ರೆ ಇಡೀ ಪ್ರಪಂಚದಲ್ಲೇ ಅತಂತ್ಯ ಪುಣ್ಯ ಭೂಮಿ ಭಾರತ ಇಲ್ಲಿ ಸಾಕ್ಷಾತ್ ದೇವತೆಗಳೇ ವಾಸ ಆಗಿರೋದಕ್ಕೆ ಈಗಾಗಲೇ ಸಾಕಷ್ಟು ದಾಖಲೆ ಸಹ ಸಿಕ್ಕಿದೆ. ನಮ್ಮ ದೇಶದ ದೇಗುಲಗಳಲ್ಲಿ ಪಾಲಿಸುವ ಆಚಾರ ವಿಚಾರ ವ್ಯವಹಾರಗಳು ಸಹ ಇಂದಿಗಿಂತ ವಿಚಿತ್ರವಾಗಿ ಇರುತ್ತಿದ್ದವು.

ಹಾಗೆಯೇ ಕೆಲವು ದೇಗುಲಗಳಿಗೆ ಮಹಿಳೆಯರಿಗೆ ಪ್ರವೇಶ ನೀಡುವುದಿಲ್ಲ ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ ಆದರೆ ಪುರುಷರಿಗೆ ಪ್ರವೇಶ ಇಲ್ಲದ ದೇಗುಲಗಳು ಇರುವುದಿಲ್ಲ ಆದರೆ ಒಂದು ವಿಚಿತ್ರ ಹಾಗೂ ಸತ್ಯದ ಸಂಗತಿ ಏನೆಂದರೆ ಒಂದು ದೇಗುಲದಲ್ಲಿ 400 ವರ್ಷಗಳಿಂದ ಪುರುಷರಿಗೆ ಪ್ರವೇಶ ನೀಡುತ್ತಿರಲಿಲ್ಲ ಇತ್ತೀಚೆಗೆ ಕೆಲವು ವರ್ಷಗಳಿಂದ ಪ್ರವೇಶ ನೀಡುತ್ತಿದ್ದಾರೆ ಆ ದೇಗುಲದ ಕಥೆ ಏನೆಂದರೆ.

ಒಡಿಶಾದಲ್ಲಿನ ಕೇಂದ್ರಪಾರ ಜಿಲ್ಲೆಯಲ್ಲಿನ ಸತಾಭ್ಯಾ ಎಂಬ ಗ್ರಾಮದಲ್ಲಿ ಪಂಚುವಾರಾಹಿ ದೇವತೆಯ ದೇಗುಲವಿದೆ ಈ ದೇಗುಲಕ್ಕೆ ತುಂಬಾ ಐತಿಹಾಸಿಕ ಹಿನ್ನೆಲೆ ಇದೆ ಈ ದೇಗುಲದಲ್ಲಿ ಪುರುಷರಿಗೆ ಅನುಮತಿ ಇರಲಿಲ್ಲ. ನಿತ್ಯ ವಿವಾಹವಾದ ಐದು ದಲಿತ ಮಹಿಳೆಯರು ದೇಗುಲವನ್ನು ಶುದ್ಧಿ ಮಾಡಿ ದೇವರಿಗೆ ಪೂಜೆ ಕಾರ್ಯಗಳನ್ನು ಮಾಡುತ್ತಿದ್ದರು. ಆದರೆ ಇತ್ತೀಚೆಗೆ ವಾತಾವರಣದಲ್ಲಿ ಆದ ಬದಲಾವಣೆ ಕಾರಣ ಬಂಗಾಳ ಕೊಲ್ಲಿಯಲ್ಲಿ ನೀರಿನ ಮಟ್ಟ ಬೆಳೆಯುತ್ತಿದೆ. ಹಾಗಾಗಿ ಸಮುದ್ರ ತೀರದಲ್ಲಿರುವ ಗ್ರಾಮದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಒಡಿಶಾ ಸರಕಾರ ನಿರ್ಧರಿಸಿತು. ಒಡಿಶಾ ವಿಪತ್ತು ನಿರ್ವಹಣಾ ಇಲಾಖೆ ವಿಶ್ವಬ್ಯಾಂಕ್ ಜಂಟಿಯಾಗಿ ಓಡಿಆರ್‌‍ಪಿ ಹೆಸರಿನಲ್ಲಿ ಪುನರ್ವಸತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಈ ಹಿನ್ನೆಲೆಯಲ್ಲಿ ಸತಾಭ್ಯಾ ಗ್ರಾಮವನ್ನು ಸ್ಥಳಾಂತರ ಮಾಡಿದರು

ಆದರೆ ತಮ್ಮ ಗ್ರಾಮವನ್ನು ಇಷ್ಟು ಕಾಲದವರೆಗೂ ರಕ್ಷಿಣೆ ಮಾಡಿದ ಪಂಚುವಾರಾಹಿ ದೇವಾಲಯವನ್ನು ಸ್ಥಳಾಂತರಿಸಲು ಸತಾಭ್ಯಾ ಗ್ರಾಮಸ್ಥರು ಎಲ್ಲರೂ ನಿರ್ಧರಿಸಿದರು. ಅದರ ಭಾಗವಾಗಿ ಸತಾಭ್ಯಾದಿಂದ 12 ಕಿ.ಮೀ ದೂರದಲ್ಲಿರುವ ಬಾಗಾಪಾಟಿಯಾ ಎಂಬ ಗ್ರಾಮದಲ್ಲಿ ಅಲ್ಲಿನ ಅಧಿಕಾರಿಗಳ ಸಹಾಯದಿಂದ ಗ್ರಾಮಸ್ಥರು ಹೊಸ ಆಲಯ ನಿರ್ಮಿಸಿಕೊಂಡರು. ಆದರೆ ಇಲ್ಲಿನ ಎಲಾಲ್ ವಿಗ್ರಹವನ್ನು ಮಹಿಳೆಯರೇ ಸ್ಥಳಾಂತರ ಮಾಡಬೇಕಾದುದ್ದರಿಂದ ಆ ದೇವಾಲಯದಲ್ಲಿ ಇದ್ದ ಐದು ವಿಗ್ರಹಗಳನ್ನು ಸ್ಥಳಾಂತರಿಸುವುದು ಮಹಿಳೆಯರಿಗೆ ತುಂಬಾ ಕಷ್ಟವಾಯಿತು.

ಯಾಕೆಂದರೆ ಆ ಕಲ್ಲಿನ ವಿಗ್ರಹಗಳಲ್ಲಿ ಒಂದೊಂದು ಒಂದೂವರೆ ಟನ್ ತೂಕ ಇತ್ತು. ಹಾಗಾಗಿ ವಿಧಿ ಇಲ್ಲದೆ ಮಹಿಳೆಯರು ಪುರುಷರ ಸಹಾಯವನ್ನು ತೆಗೆದುಕೊಳ್ಳಬೇಕಾಯಿತು. ಹಾಗಾಗಿ ಐದು ಮಂದಿ ಪುರುಷರ ಸಹಾಯದಿಂದ ವಿಗ್ರಹಗಳನ್ನು ಸ್ಥಳಾಂತರಿಸಲಾಯಿತು. ಹಡಗಿನ ಮೂಲಕ ಹೊಸ ಆಲಯಕ್ಕೆ ಸಾಗಿಸಲಾಯಿತು. ನಂತರ ಆ ಎಲ್ಲ ವಿಗ್ರಹಗಳಿಗೆ ಶುದ್ಧಿ ಕಾರ್ಯ ಮಾಡಿದರು. ಆಗಿನಿಂದ ಆ ದೇಗುಲಕ್ಕೆ ಪುರುಷರ ಪ್ರವೇಶ ಶುರು ಆಯಿತು. ಈ ಮಾಹಿತಿ ತಪ್ಪದೇ ಶೇರ್ ಮಾಡಿ.

LEAVE A REPLY

Please enter your comment!
Please enter your name here