ಈ ವ್ರತ ಮಾಡಿದರೆ ಸಾಕು ನಿಮ್ಮ ಕಷ್ಟಗಳೆಲ್ಲ ಕಳೆದು ಇಷ್ಟಾರ್ಥ ನೆರವೇರುತ್ತದೆ.

0
1125

ಕಷ್ಟಗಳು ಯಾರಿಗೆ ತಾನೇ ಇರಲ್ಲ ಹೇಳಿ ಕಷ್ಟಗಳಿಲ್ಲದ ಮನುಷ್ಯ ಇಲ್ಲ ಆದರೆ ಕಷ್ಟಗಳು ಬಂದ ತಕ್ಷಣ ಮನುಷ್ಯನ ಮನಸ್ಸು ಗೊಂದಲಕ್ಕೆ ಒಳಗಾಗುತ್ತದೆ ಕಷ್ಟಗಳಿಂದ ಹೊರ ಬರುವುದು ಹೇಗೆ ಎಂದು ಯೋಚಿಸುತ್ತಾರೆ ಜೊತೆಗೆ ಕೆಲವರಂತೂ ಕಷ್ಟಗಳಿಂದ ಹೊರಬರಲು ಆಗದೆ ಅನಾಹುತ ಮಾಡಿಕೊಳ್ಳುತ್ತಾರೆ ಇನ್ನು ಕೆಲವರು ಕಷ್ಟಗಳಿಂದ ಮರೆಯಲು ದುಶ್ಚಟಗಳ ದಾಸರಾಗುತ್ತಾರೆ. ಆದರೆ ಕಷ್ಟಗಳು ಅಂತ ಬಂದ ಮೇಲೆ ಅದಕ್ಕೆ ಪರಿಹಾರ ಕೂಡ ಇದ್ದೆಇರುತ್ತದೆ. ಸಾಮಾನ್ಯವಾಗಿ ಕಷ್ಟಗಳು ಬಂದಾಗ ಎಲ್ಲರೂ ಹೆಚ್ಚಗಿ ಮಾಡುವ ಕೆಲಸ ಎಂದರೆ ದೇವರ ಮೊರೆ ಹೋಗುವುದು ದೇವರ ಹತ್ತಿರ ಹೋಗಿ ಅಭಿಷೇಕ. ಹರಕೆ ಪೂಜೆಗಳನ್ನು ಮಾಡಿಸುತ್ತಾರೆ. ಇದರ ಜೊತೆಗೆ ದೇವರಿಗೆ ಒಂದು ವ್ರತವನ್ನು ಮಾಡಿದರೆ ಸಾಕು ನಮ್ಮ ಕಷ್ಟಗಳೆಲ್ಲ ದೂರವಾಗುತ್ತವೆ.

ಹಾಗಾದರೆ ಆ ವ್ರತ ಯಾವುದು ಎಂದು ತಿಳಿಯೋಣ ಬನ್ನಿ. ಈ ವ್ರತವನ್ನು ಮಾಡಿದರೆ ತುಂಬಾ ಬೇಗ ಫಲ ಸಿಗುತ್ತದೆ ಈ ವ್ರತಕ್ಕೆ ಯಾವುದೇ ಸಮಯವಿಲ್ಲ ಯಾವುದೇ ರೀತಿಯ ವ್ಯಕ್ತಿ ಸ್ಥಳದ ತಾರತಮ್ಯ ಇಲ್ಲ. ಈ ವ್ರತವನ್ನು ಸೋಮವಾರದ ದಿನ ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು ಆದರೆ ವ್ರತವನ್ನು ತುಂಬಾ ಭಕ್ತಿ. ನಂಬಿಕೆಯಿಂದ ಮಾಡಬೇಕು ಏಕೆಂದರೆ ಸೋಮವಾರ ಶಿವನ ಪ್ರಿಯವಾದ ದಿನ ಶಿವನ ವಾರ ಇದು ಜೊತೆಗೆ ಶಿವನು ಭಕ್ತಿ ಪ್ರಿಯ ಭಕ್ತಿ ಇದ್ದರೆ ಬೇಗ ಒಲಿಯುತ್ತಾನೆ.

ಆದರೂ ವ್ರತಕ್ಕೆ ಅತೀ ಸೂಕ್ತ ಕಾಲವೆಂದರೆ ಚಾತುರ್ಮಾಸ ಹದಿನಾರು ಸೋಮವಾರ ಈ ವ್ರತ ಮಾಡಬೇಕು. ಪುರುಷರು ಅಥವ ಸ್ತೀಯರು ಯಾರು ಬೇಕಾದರೂ ಈ ವ್ರತವನ್ನು ಮಾಡಬಹುದು ಆದರೆ ಎಲ್ಲರೂ ನಿಯಮಗಳನ್ನು ಪಾಲಿಸಬೇಕು ಅದು ಏನು ಎಂದರೆ. ಪ್ರತೀ ಸೋಮವಾರ ಬೆಳಿಗ್ಗೆ ಸ್ನಾನ ಮಾಡಿ ತಮ್ಮ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಅಂದು ಸಾಯಂಕಾಲದವರೆಗೆ ಉಪವಾಸ ಇರಬೇಕು.

ಉಪವಾಸ ಸಾಧ್ಯ ಆಗದೆ ಆರೋಗ್ಯ ಸಮಸ್ಯೆ ಇರುವ ಜನರು ಹಣ್ಣು ಮತ್ತು ಹಾಲು ಮಾತ್ರ ಸ್ವೇಕರಿಸಬಹುದು. ಸೂರ್ಯಾಸ್ತದ ಸಮಯಕ್ಕೆ ಸ್ನಾನ ಮಾಡಿ ಹುತ್ತದ ಮಣ್ಣಿನಿಂದ ಶಿವಲಿಂಗವನ್ನು ರಚಿಸಬೇಕು ಎಷ್ಟು ತರಹದ ಹೂವು ಹಣ್ಣು ಪೂಜಾ ಸಾಮಾಗ್ರಿಗಳು ದೊರೆಯುವುದೋ ಅಷ್ಟು ಸಂಗ್ರಹಿಸಿ ನಿಮ್ಮ ಶಕ್ತ್ಯಾನುಸಾರ. ನಂತರ ಪಂಚಾಮೃತ ಅಭಿಷೇಕದೊಂದಿಗೆ ಷೋಡಶೋಪಚಾರದಿಂದ ಆ ಲಿಂಗವನ್ನು ಪೂಜೆ ಮಾಡಬೇಕು. ಹಾಗೂ ಬ್ರಹ್ಮಾರ್ಪಣ ಮಾಡಿ ವಿಸರ್ಜಿಸಬೇಕು.

ಪ್ರಾಯಶ್ಚಿತ್ತ ಸಂಕಲ್ಪ ಮತ್ತು ಮನೋಸಂಕಲ್ಪ ಎರಡೂ ಕೂಡ ಮಾಡಬೇಕು. ಬಿಲ್ವಪತ್ರೆಯನ್ನು ಪೂಜೆಯಲ್ಲಿ ಮುಖ್ಯವಾಗಿ ಬಳಸಬೇಕು. ಪೂರ್ಣಫಲ ನೈವೇದ್ಯ ಮಾಡಬೇಕು. ಪೂಜೆಯ ಸಾಂಗತಾ ಸಿದ್ಯರ್ಥವಾಗಿ ಬ್ರಾಹ್ಮಣರಿಗೆ ವಾಯನದಾನ ಮಾಡಬೇಕು. ನೈವೇದ್ಯಕ್ಕಾಗಿ ಅರ್ಧ ಸೇರು ಗೋಧಿಯ ಹಿಟ್ಟನ್ನು ಹುರಿದು ಸಾಕಷ್ಟು ಸಕ್ಕರೆ ತುಪ್ಪ ಏಲಕ್ಕಿ ಜಾಕಾಯಿ ಎಲ್ಲಾ ಹಾಕಿ ಗುಳುಪ್ಪಡಿಯನ್ನು ಮಾಡಬೇಕು. ಈ ಗುಳುಪ್ಪಡಿಯನ್ನು ಮೂರು ಭಾಗ ಮಾಡಿ ಮೂರು ಉಂಡೆಗಳನ್ನು ಮಾಡಬೇಕು, ಎಲ್ಲವನ್ನೂ ಶಿವಲಿಂಗಕ್ಕೆ ನೈವೇದ್ಯ ಮಾಡಬೇಕು. ಪೂಜೆಯ ನಂತರ ಒಂದನ್ನು ಹಸುವಿಗೆ ಒಂದನ್ನು ಪ್ರಸಾದ ರೂಪವಾಗಿ ಎಲ್ಲರಿಗೂ ಕೊಡಬೇಕು. ಮತ್ತೊಂದನ್ನು ಪೂಜಾ ಕರ್ತೃವು ಸೇವಿಸಬೇಕು. ಪೂಜಿಸಿದ ಶಿವಲಿಂಗವನ್ನು ನದಿಯಲ್ಲಿ, ಜಲಾಶಯದಲ್ಲಿ ವಿಸರ್ಜಿಸಬೇಕು. ಅಸಾಧ್ಯವಾದವರು ಪುಷ್ಕರಿಣಿಯಲ್ಲಿ ವಿಸರ್ಜಿಸಬಹುದು,

ದೇವರ ಪ್ರಾರ್ಥನೆ ಮಾಡಿ. ಕೊನೆಯ ಸೋಮವಾರ ಎಂದಿನಂತೆ ಪೂಜೆ ನೈವೇದ್ಯ ಮಾಡಿ ಅನ್ನದಾನ ಮಾಡಬೇಕು. ಎಷ್ಡು ಜನಕ್ಕೆ ಸಾಧ್ಯವೋ ಅಷ್ಟು ಜನಕ್ಕೆ ಮಾಡಬೇಕು. ಅಂದು ದೇವರಿಗೆ ಅಡುಗೆಯಲ್ಲಿ ವಿಶೇಷವಾಗಿ ತಯಾರಿಸಬಹುದು, ಕರ್ತೃವು ತಯಾರಿಸಿದರೆ ತುಂಬಾ ಒಳ್ಳೆಯದು, ಬ್ರಾಹ್ಮಣರಿಗೆ ತಾಂಬೂಲ ದಾನ ಮಾಡಬೇಕು. ಈ ವ್ರತವನ್ನು ತುಂಬಾ ಭಕ್ತಿ ನಿಷ್ಠೆಯಿಂದ ಮಾಡಿದರೆ ಎಲ್ಲ ಕಷ್ಟಗಳು ದೂರವಾಗುತ್ತವೇ ನಿಮ್ಮ ಇಷ್ಟಾರ್ಥ ಸಿದ್ಧಿಸುತ್ತವೆ.

LEAVE A REPLY

Please enter your comment!
Please enter your name here