ಗಂಟಲಲ್ಲಿ ಉರಿಯೂತ ಇದ್ದರೆ ಈ ಮದ್ದು ಮಾಡಿ ಇಲ್ಲ ಅಂದ್ರೆ ಅಪಾಯ ತಪ್ಪಿದ್ದಲ್ಲ

0
965

ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಬರುವ ಯಾವುದೇ ರೀತಿಯ ರೋಗಗಳನ್ನು ನಿರ್ಲಕ್ಷಿಸಲು ಆಗುವುದಿಲ್ಲ ನೋಡಲು ಒಂದು ಚಿಕ್ಕ ಸಮಸ್ಯೆ ಎನ್ನಿಸಿದರು ಅದು ದಿನಗಳು ಕಳೆದಂತೆ ದೊಡ್ಡದು ಆಗಿ ಬಿಡುತ್ತದೆ. ನಾವು ಆಲಕ್ಷ್ಯ ಮಾಡಿದರೆ ಸಾವೇ ಗತಿ ಎನ್ನುವ ಮಟ್ಟಿಗೆ ನಮ್ಮ ದೈನಂದಿನ ಆಹಾರ ಪದ್ದತ್ತಿ ನಮ್ಮನು ಹಾಳು ಮಾಡುತ್ತಿದೆ. ಮುಖ್ಯವಾಗಿ ನಮ್ಮ ಈಗಿನ ಜನಕ್ಕೆ ಯಾವ ಸಮಯಕ್ಕೆ ಯಾವ ಆಹಾರ ತಿನ್ನಬೇಕು ಎಂದು ತಿಳಿದಿಲ್ಲ ಇದರಿಂದಲೇ ಸಾಕಷ್ಟು ಸಮಸ್ಯೆ ಅನುಭವಿಸುವ ಹಾಗೇ ಆಗಿದೆ.

ಗಂಟಲಿನ ಸಮಸ್ಯೆಗಳಲ್ಲಿ ಒಂದಾಗಿರುವುದು ಆಗಾಗ ಮೂಗು ಸೋರುವುದು ಆಹಾರವನ್ನ ನುಂಗಲು ಕಷ್ಟ ಆಗುವುದು ಶೀತ ಆಯಾಸ ಜ್ವರ ಉರಿಯೂತ ಈ ಸಮಸ್ಯೆಗಳು ಬಂದರೆ ಸಾಮಾನ್ಯವಾಗಿ ಎಲ್ಲರೂ ನಿರ್ಲಕ್ಷಿಸುತ್ತಾರೆ. ಆದರೆ ಈ ಸಮಸ್ಯೆಗಳು ಪದೇ ಪದೇ ಬರುತ್ತಿದ್ದಾರೆ ಹೆಚ್ಚುತ್ತು ಕೊಳ್ಳಬೇಕು ಏಕೆಂದರೆ ಈ ಸಮಸ್ಯೆಗಳು ಟಾನ್ಸಿಲ್​ನ ಸಾಮಾನ್ಯ ಲಕ್ಷಣಗಳಾಗಿವೆ. ಟಾನ್ಸಿಲ್ ಎಂದರೆ ಟಾನ್ಸಿಲ್ಸ ಗಳು ಗಂಟಲಿನ ಪಕ್ಕದಲ್ಲಿರುವ ಎರಡು ಅಂಗಾಂಶಗಳ ಮುದ್ದೆಗಳು. ಅವು ಅಂಗುಳಿನ ಅವಕಾಶದಲ್ಲಿ ಇರುತ್ತವೆ. ಪ್ರತಿ ಟಾನ್ಸಿಲ್ ನ ಕೆಳ ತುದಿಯು ನಾಲಿಗೆಯ ಬದಿ ಇರುವುದು. ಗಂಟಲಿನ ಹಿಂಭಾಗದಲ್ಲಿರುವುದು.

ಈ ಟಾನ್ಸಿಲ್ ಸಮಸ್ಯೆ ಎಂಬುದು ವೈರಸ್ ಗಾಳಿಯ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ವೇಗದಲ್ಲಿ ಹರಡುತ್ತದೆ.ಈ ಟಾನ್ಸಿಲ್ ಸಮಸ್ಯೆ ಎಂಬುದು ಹೆಚ್ಚಾದರೆ ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಅದಕ್ಕಾಗಿ ಈ ಟಾನ್ಸಿಲ್ ಸಮಸ್ಯೆಯ ಯಾವುದೇ ಒಂದು ಚಿಕ್ಕ ಲಕ್ಷಣ ಕಂಡು ಬಂದರೂ ಅದಕ್ಕೆ ಮುನ್ನೆಚ್ಚರಿಕೆ ವಹಿಸಿಕೊಂಡು ಮನೆಯಲ್ಲೇ ಕೆಲವು ಮನೆ ಮದ್ದುಗಳನ್ನು ತೆಗೆದುಕೊಳ್ಳಬಹುದು ಅವುಗಳನ್ನು ನೋಡೋಣ ಬನ್ನಿ.

ಟಾನ್ಸಿಲ್​ ಸಮಸ್ಯೆಗೆ ಉಪ್ಪು ನೀರು ಬಹಳ ಪರಿಣಾಮಕಾರಿಯಾದ ಮದ್ದು ಉಗುರ ಬೆಚ್ಚಗಿನ ನೀರಿಗೆ ಉಪ್ಪು ಬೆರೆಸಿ ಚೆನ್ನಾಗಿ ಬಾಯಿಯನ್ನ ಮುಕ್ಕಳಿಸಬೇಕು. ಇದು ಗಂಟಲಿನಲ್ಲಿರುವ ರೋಗಾಣುಗಳನ್ನು ಕೊಲ್ಲುತ್ತದೆ. ಜೊತೆಗೆ ಉಪ್ಪು ಗಂಟಲು ಊತವನ್ನ ಕಡಿಮೆ ಮಾಡುತ್ತದೆ. ನಿಂಬೆ ಹಣ್ಣಿನ ರಸ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ವಿರೋಧಿ ಗುಣಲಕ್ಷಣಗಳನ್ನ ಹೊಂದಿದ್ದು ಇದು ಟಾನ್ಸಿಲ್​ ಸಮಸ್ಯೆಗೆ ಉತ್ತಮ ಮದ್ದು ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ರೋಗನೀರೊಧಕ ಶಕ್ತಿ ಹೆಚ್ಚಿರುತ್ತದೆ. ಇದನ್ನು ಹೇಗೆ ಬಳಸುವುದು ಏನೆಂದರೆ ಒಂದು ನಿಂಬೆ ಹಣ್ಣಿಗೆ ಒಂದು ಚಿಟಿಕೆ ಉಪ್ಪು ಒಂದು ಚಮಚ ಜೇನು ತುಪ್ಪ ಬೆರೆಸಿ ಕುಡಿಯಬೇಕು ಇದನ್ನು ಒಂದು ವಾರ ಕುಡಿದರೆ ಟಾನ್ಸಿಲ್ ಸಮಸ್ಯೆ ನಿವಾರಣೆ ಆಗುತ್ತದೆ.

ಟಾನ್ಸಿಲ್​ ಸಮಸ್ಯೆಗೆ ಮನೆಯಲ್ಲಿ ಸಿಗುವ ಚಕ್ಕೆ ಒಂದು ಉತ್ತಮ ಮದ್ದು ಇದು ಟಾನ್ಸಿಲ್​​ನಲ್ಲಿ​ ರೋಗಾಣುಗಳ ಬೆಳವಣಿಗೆ. ಊತ ಉರಿಯನ್ನ ಕಡಿಮೆ ಮಾಡುತ್ತದೆ. ಒಂದು ಲೋಟದ ತುಂಬ ಬೆಚ್ಚನೆ ನೀರಿಗೆ ಒಂದು ಚಮಚ ಚಕ್ಕೆ ಪುಡಿ ಎರಡು ಚಮಚ ಜೇನು ತುಪ್ಪ ಬೆರೆಸಿ,ಒಂದು ವಾರ ಕುಡಿದರೆ ಟಾನ್ಸಿಲ್ ಸಮಸ್ಯೆ ನಿವಾರಣೆ ಆಗುತ್ತದೆ. ಟಾನ್ಸಿಲ್ ಸಮಸ್ಯೆಗೆ ಒಂದು ಗ್ಲಾಸ್​ ಅರಿಶಿಣದ ಹಾಲಿಗೆ ಕರಿಮೆಣಸು ಸೇರಿಸಿ ಕುಡಿದರೆ ಟಾನ್ಸಿಲ್​ ನಿವಾರಣೆ ಆಗುತ್ತದೆ.

ಮಿಂಟ್ ಪುದೀನಾ ಟೀ ಟಾನ್ಸಿಲ್​ ನಿವಾರಣೆಗೆ ಒಂದು ಮದ್ದು ಇದಕ್ಕೆ ನೀವು ಒಂದು ಚಮಚ ಜೇನು ತುಪ್ಪ ಸೇರಿಸಿ ಕುಡಿಯಬೇಕು. ಒರೆಗೊನೊ ಟಿ ಇದು ಇಟಲಿ ಮೂಲದ ಒಂದು ಗಿಡ ಮೂಲಿಕೆ ಇದು ರ್ಟಾನ್ಸಿಲ್​ ನಿವಾರಣೆಗೆ ಉತ್ತಮ ಮದ್ದು. ಒಂದು ಗ್ಲಾಸ್​ ನೀರಿನಲ್ಲಿ 15 ನಿಮಿಷ ಒರೆಗಾನೊವನ್ನು ನೆನೆಸಿಟ್ಟು ನಂತರ ಇದನ್ನು ಹಿಂಡಿ ಒರೆಗಾನೊ ಟೀ ಕುಡಿಯಬೇಕು. ಒರೆಗಾನೊದಲ್ಲಿ ನಂಜು ನಿರೋಧಕ ಗುಣ ಇರುವುದರಿಂದ ಟಾನ್ಸಿಲ್ ತೊಂದರೆ ನಿವಾರಣೆಗೆ ಉತ್ತಮ ಮದ್ದಾಗಿದೆ. ಹಾಗಾಗಿ ಟಾನ್ಸಿಲ್ ಸಮಸ್ಯೆ ಕಂಡು ಬಂದರೆ ತಕ್ಷಣ ಈ ಮನೆ ಮದ್ದುಗಳನ್ನು ತೆಗೆದುಕೊಂಡು ಟಾನ್ಸಿಲ್ ಸಮಸ್ಯೆಯಿಂದ ದೂರವಾಗಿ ಇಲ್ಲವಾದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಬರಬಹುದು.

LEAVE A REPLY

Please enter your comment!
Please enter your name here