ನೀವು ವಿಟಮಿನ್ ಬಿ9 ಜಾಸ್ತಿ ಮಾಡಿಕೊಂಡರೆ ಈ ಖಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ

0
903

ವಿಟಮಿನ್ ಬಿ9 ಅನ್ನು ಫೋಲಿಕ್ ಆಮ್ಲ ಎಂದು ಕೂಡ ಕರೆಯುತ್ತಾರೆ. ಇದು ನೋಡಲು ಸ್ಪಟಿಕದಂತೆ ಇದ್ದು ಹಳದಿ ಬಣ್ಣವನ್ನು ಹೊಂದಿದೆ ಮತ್ತು ನೀರಿನಲ್ಲಿ ಕರಗುತ್ತದೆ. ಆಹಾರದ ಮೂಲಕ ನಮ್ಮ ದೇಹವನ್ನು ಸೇರುವ ಫೋಲಿಕ್ ಆಮ್ಲವನ್ನು ಸಣ್ಣ ಕರುಳು ಹೀರಿಕೊಳ್ಳುತ್ತದೆ ನಂತರ ಇದು ಲಿವರ್ ನಲ್ಲಿ ಶೇಖರಿಸಲ್ಪಡುತ್ತದೆ. ಅದು ಕೇವಲ 5 ರಿಂದ 15 ಮಿಲಿ ಗ್ರಾo ನಷ್ಟು ಅಷ್ಟೇ. ವಿಟಮಿನ್ ಬಿ9 ನಿಜಕ್ಕೂ ನಮ್ಮ ದೇಹಕ್ಕೆ ತುಂಬಾ ಅತ್ಯವಶ್ಯಕ. ಇದರಿಂದ ಆಗುವ ಅನುಕೂಲಗಳ ಬಗ್ಗೆ ತಿಳಿಯುವುದಾದರೆ

ರಕ್ತದ ಉತ್ಪತ್ತಿಯಲ್ಲಿ ಫೋಲಿಕ್ ಆಮ್ಲ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವಿಟಮಿನ್ ಬಿ9 ಗರ್ಭಿಣಿಯರಿಗೆ ಬಹಳ ಅತ್ಯವಶ್ಯಕ. ಪೋಲಿಕ್ ಆಮ್ಲ ಗರ್ಭಿಣಿಯರಲ್ಲಿ ಕಡಿಮೆಯಾಗದಂತೆ ಅಥವಾ ಕೊರತೆಯಾಗದಂತೆ ಅವರನ್ನು ನೋಡಿಕೊಳ್ಳಬೇಕು ಏಕೆಂದರೆ ಗರ್ಭಿಣಿಯರಲ್ಲಿ ಫೋಲಿಕ್ ಆಮ್ಲದ ಕೊರತೆ ಉಂಟಾದರೆ ಹುಟ್ಟುವ ಮಕ್ಕಳು ಬುದ್ಧಿಮಾಂದ್ಯ ಹುಟ್ಟುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ವಿಟಮಿನ್ ಬಿ9 ಕೊರತೆಯಾದರೆ ಗರ್ಭಿಣಿಯರು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಇರುತ್ತದೆ ಇದರಿಂದ ಅವರಿಗೆ ನಡುಕ ಫೋಬಿಯಾ ನಡುಕ ಇಂತಹ ತೊಂದರೆಗಳು ಬರಬಹುದು.

ವಿಟಮಿನ್ ಬಿ9 ಕೊರತೆ ಉಂಟಾದರೆ ಚರ್ಮದ ಸಮಸ್ಯೆಗಳು ಬರಬಹುದು. ಅಂದರೆ ನಮ್ಮ ಚರ್ಮದ ಮೇಲೆ ಕಪ್ಪು ಕಲೆಗಳು ಅಥವಾ ಮುಖದ ಮೇಲೆ ಮೊಡವೆಗಳು ಉಂಟಾಗುವುದು ಅಥವಾ ಚರ್ಮ ಬಿಳಿಚಿ ಕೊಂಡಂತೆ ಆಗುವುದು ಹೀಗೆ ಹಲವಾರು ಸಮಸ್ಯೆಗಳು ಬರಬಹುದು. ಬಿಸಿಲಿನಲ್ಲಿ ತಿರುಗಾಡಿದಾಗ ಬಹಳ ಬೇಗ ಸುಸ್ತಾಗುವುದು ನಿಶಕ್ತಿಯಿಂದ ಬಳಲುವುದು ಇಂತಹ ಸಮಸ್ಯೆಗಳು ವಿಟಮಿನ್ ಬಿ9 ಕೊರತೆಯಿಂದ ಆಗುತ್ತದೆ. ವಯಸ್ಸಾದವರಿಗೆ ಬರುವ ಸಂಧಿವಾತದ ಸಮಸ್ಯೆಗಳು ವಿಟಮಿನ್ ಬಿ9 ಕೊರತೆಯಿಂದ ಉಂಟಾಗುತ್ತದೆ. ಇಂತಹ ಸಮಸ್ಯೆಗಳಿದ್ದರೆ ಕೀಳು ನೋವು ಮಂಡಿ ನೋವು ಅಥವಾ ಜಾಯಿಂಟ್ ಪೈನ್ ನಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರವೆಂದರೆ ಉತ್ತಮ ರೀತಿಯ ವ್ಯಾಯಾಮದ ಜೊತೆಗೆ ವಿಟಮಿನ್ ಬಿ9 ಕೊರತೆಯಾಗದಂತೆ ಅವರನ್ನು ನೋಡಿಕೊಳ್ಳಬೇಕು.

ರಕ್ತಹೀನತೆ ಅಥವಾ ರಕ್ತದ ಕೊರತೆ ಸಮಸ್ಯೆ ಇದ್ದರೆ ಅವರಲ್ಲಿ ವಿಟಮಿನ್ ಬಿ9 ಕೊರತೆ ಉಂಟಾಗಿದೆ ಎಂದರ್ಥ. ವಿಟಮಿನ್ ಬಿ9 ಭರಿತ ಆಹಾರಗಳನ್ನು ಸೇವಿಸುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ. ವಿಟಮಿನ್ ಬಿ9 ಅಥವಾ ಫೋಲಿಕ್ ಆಮ್ಲ ವನ್ನು ಹೊಂದಿರುವ ಆಹಾರ ಪದಾರ್ಥಗಳು ಬಗ್ಗೆ ಹೇಳುವುದಾದರೆ ಕಡಲೆಕಾಳು ಬೆಂಡೆಕಾಯಿ ಕರಿ ಬೇವಿನ ಸೊಪ್ಪು ಪಾಲಕ್ ಸೊಪ್ಪು ಕಪ್ಪು ಎಳ್ಳು ಉದ್ದಿನಬೇಳೆ ಹೆಸರು ಬೇಳೆ ಅಲಸಂದೆಕಾಯಿ ದಂಟಿನ ಸೊಪ್ಪು ಬೆಂಡೆಕಾಯಿ ಮೊಟ್ಟೆ ಹೀಗೆ ಮುಂತಾದ ಸಸ್ಯಹಾರ ಪದಾರ್ಥಗಳಲ್ಲಿ ವಿಟಮಿನ್ ಬಿ9 ಹೆಚ್ಚಾಗಿ ದೊರೆಯುತ್ತದೆ. ಇನ್ನು ಮಾಂಸಾಹಾರ ಹೆಚ್ಚು ತಿನ್ನುವವರಿಗೆ ನೋಡುವುದಾದರೆ ಕುರಿಮೇಕೆ ಇವುಗಳ ಲಿವರ್ ನಲ್ಲಿ ವಿಟಮಿನ್ ಬಿ 9 ಹೆಚ್ಚಾಗಿರುತ್ತದೆ. ನಾವು ಹೇಳಿದ ಮೇಲಿನ ಪದಾರ್ಥಗಳನ್ನು ತಿಂದು ಸುಖ ನೆಮ್ಮದಿಯಿಂದ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲದೆ ನೀವು ಬಾಳಬಹುದು.

LEAVE A REPLY

Please enter your comment!
Please enter your name here