ಮನೆಯಲ್ಲಿರುವ ಈ ಮನೆ ಮದ್ದು ಮಾಡಿ ಯಾವುದೇ ಸಮಸ್ಯೆ ಆಗೋದಿಲ್ಲ

0
645

ಚಳಿಗಾಲ ಬಂತು ಎಂದರೆ ಚಳಿಯಿಂದ ತಪ್ಪಿಸಿಕೊಳ್ಳಲು ಬೆಚ್ಚನೆಯ ಬಟ್ಟೆಯನ್ನು ಧರಿಸಿಕೊಂಡು ಚಳಿಯಿಂದ ರಕ್ಷಣೆ ಪಡೆಯುತ್ತೇವೆ ಆದರೆ ಈ ಚಳಿಗಾಲದಲ್ಲಿ ಹೆಚ್ಚು ಹಾನಿ ಆಗುವುದು ತಮ್ಮ ತ್ವಚೆಗೆ ನಮ್ಮ ತ್ವಚೆಯು ಉರಿ ಉರಿ ಆಗುತ್ತದೆ ಹೊಡೆಯುತ್ತದೆ. ಚಳಿಗೆ ಚರ್ಮವು ಸೇದುತ್ತದೆ ಒಟ್ಟಾರೆ ಚಳಿಗಾಲದಲ್ಲಿ ತಮ್ಮ ತ್ವಚೆಯು ಹಾನಿಯಾಗುತ್ತದೆ ಆದರೆ ಇದರಿಂದ ರಕ್ಷಣೆ ಪಡೆದುಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಬಗೆಯ ಕ್ರೀಮ್ ಗಳ ಮೊರೆ ಹೋಗುತ್ತೇವೆ ಅವುಗಳು ಎಷ್ಟೇ ದುಬಾರಿ ಆದರೂ ಅವುಗಳನ್ನು ಬಳಕೆ ಮಾಡುತ್ತೇವೆ ಆದರೆ ಈ ಚಳಿಗಾಲದಲ್ಲಿ ತ್ವಚೆಯ ಅಂದವನ್ನು ಕಾಪಾಡಿಕೊಳ್ಳಲು ನಮ್ಮ ಮನೆಯಲ್ಲಿ ಸಿಗುವಂತಹ ಕೆಲವು ವಸ್ತುಗಳಿಂದ ತ್ವಚೆಯು ಹಾನಿಗೆ ಹೊಳಗಾಗದ ಹಾಗೆ ನೋಡಿಕೊಳ್ಳಬಹುದು ಹಾಗಾದರೆ ಅದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

ಮನೆಯಲ್ಲಿ ಸಿಗುವ ತೆಂಗಿನ ಎಣ್ಣೆ ಇದನ್ನು ಸಾಮಾನ್ಯವಾಗಿ ಕೂದಲು ದಟ್ಟ ಹಾಗೂ ಬಲಿಷ್ಠವಾಗಿ ಬೆಳೆಯುವಂತೆ ಮಾಡುತ್ತದೆ ಎಂದು ಕೂದಲಿಗೆ ಬಳಸುತ್ತೇವೆ ಹಾಗೆಯೇ ಈ ತೆಂಗಿನ ಎಣ್ಣೆಗೆ ದೇಹದ ಉಷ್ಣಾಂಶವನ್ನು ನಿಯಂತ್ರಿಸುವ ಶಕ್ತಿ ಕೂಡ ಇದ್ದು ನಿತ್ಯ ಮಲಗುವಾಗ ತೆಂಗಿನ ಎಣ್ಣೆಯನ್ನು ಮುಖ. ಕೈ. ಕಾಲುಗಳಿಗೆ ಹಕ್ಚ್ಚಿಕೊಂಡು ಮಲಗಬೇಕು ಜೊತೆಗೆ ಬೆಳಿಗ್ಗೆ ಎದ್ದು ಸ್ವಲ್ಪ ಹಚ್ಚಿ ಕೊಂಡರೆ ಈ ತೆಂಗಿನ ಎಣ್ಣೆ ನಮ್ಮ ತ್ವಚೆಯ ತೇವಾಂಶವನ್ನು ಕಾಪಾಡುತ್ತದೆ ನಮ್ಮ ತ್ವಚೆಯು ಹಾಳಾಗುವುದಿಲ್ಲ.

ಹಿಂದಿನ ಕಾಲದಲ್ಲಿ ಸ್ನಾನಕ್ಕಾಗಿ ಧಾನ್ಯಗಳ ಹುಡಿಗಳನ್ನು ಬಳಸುತ್ತಿದ್ದರು. ಈ ಧಾನ್ಯಗಳ ಹುಡಿ ಕೇವಲ ದೇಹವನ್ನು ಶುಭ್ರಗೊಳಿಸುವುದಲ್ಲದೆ ತ್ವಚೆಗೆ ಕಾಂತಿಯನ್ನು ನೀಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಧಾನ್ಯಗಳ ಹುಡಿಯಿಂದ ಸ್ನಾನ ಮಾಡುವುದರಿಂದ ಡ್ರೈನೆಸ್​ನಿಂದ ಮುಕ್ತಿ ಸಿಗುತ್ತದೆ ತ್ವಚೆಯು ಹಾಳಾಗುವುದಿಲ್ಲ. ಹಾಲಿನಲ್ಲಿ ಲ್ಯಾಕ್ಟಿಕ್​ ಆಸಿಡ್​ ಅಂಶ ಇದ್ದು ಇದು ತ್ವಚೆಯನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಚರ್ಮದ ಮೇಲೆ ಯಾವುದಾದೂ ಬಿಳಿ ಕಲೆಗಳು ಅಥವಾ ತುರಿಕೆ ಉಂಟಾದಲ್ಲಿ ಹಸಿ ಹಾಲು ಒಳ್ಳೆಯದು ಹಾಗಾಗಿ ಹಸಿಹಾಲನ್ನು ತ್ವಚೆಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತೊಳೆಯಬೇಕು ಹೀಗೆ ಮಾಡಿದರೆ ತ್ವಚೆ ಹಾನಿಯಾಗುವುದಿಲ್ಲ

ಜೇನುತುಪ್ಪದಿಂದ ನಮ್ಮ ತ್ವಚೆಯನ್ನು ಸಹ ಕಾಪಾಡಿಕೊಳ್ಳಬಹುದು ಜೇನುತುಪ್ಪ ತುಂಬಾ ತೇವಾಂಶವನ್ನು ಹೊಂದಿರುತ್ತದೆ ಹಾಗಾಗಿ ಚಳಿಗಾಲದಲ್ಲಿ ತ್ವಚೆಯನ್ನು ತುಂಬಾ ಸಾಫ್ಟ್​ ಮಾಡುತ್ತದೆ ಹಾಗೂ ಒಡೆಯುವುದಿಲ್ಲ. ಹಾಲಿನ ಕೆನೆ ರಾತ್ರಿ ಮಲಗುವ ಮುನ್ನ ಹಾಲಿನ ಕೆನೆಯನ್ನು ತ್ವಚೆಗೆ ಹಚ್ಚಿಕೊಂಡು ಮಲಗಿ ಬೆಳಿಗ್ಗೆ ಬೆಚ್ಚನೆಯ ನೀರಿನಿಂದ ಕಡಲೆಪುಡಿಯನ್ನು ಬಳಸಿ ಮುಖವನ್ನು ತೊಳೆಯಬೇಕು ಹೀಗೆ ಮಾಡಿದರೆ ತ್ವಚೆಯು ಹಾಳಾಗುವುದಿಲ್ಲ. ಚಳಿಗಾಲದಲ್ಲಿ ಆದಷ್ಟು ಸೋಪುಗಳನ್ನು ಬಳಸಬಾರದು ಕಡಲೆಪುಡಿಯನ್ನು ಬಳಕೆ ಮಾಡಬೇಕು.

ಹೊರಗೆ ಹೋಗುವಾಗ ಆದಷ್ಟು ತ್ವಚೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ದೇಹ ಯಾವಾಗಲು ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು. ದೇಹದ ಬಿಸಿ ಕಡಿಮೆ ಆದಂತೆ ರಕ್ತ ಹೆಪ್ಪುಗಟ್ಟಿ ಕೆಲವರಿಗೆ ಹಾರ್ಟ್ ಅಟ್ಯಾಕ್ ಆಗುವ ಸಂಭವ ಹೆಚ್ಚಿರುತ್ತದೆ. ಮತ್ತು ಕೆಲವರಿಗೆ ಅಸ್ತಮ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚಿದೆ. ಹೀಗೆ ಮಾಡಿದರೆ ತ್ವಚೆಯು ಹಾನಿಯಾಗುವುದನ್ನು ತಪ್ಪಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here