ಹುಡಗರಿಗೆ ಹುಡಗಿಯರಿಗೆ ಯಾರಿಗೆ ತಾನೇ ಕೂದಲು ಚೆನ್ನಾಗಿ ಅಂದವಾಗಿ ಕಾಣಬೇಕು ಎಂದು ತುಂಬಾ ಆಸೆ ಪಡುತ್ತಾರೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ವಿಧವಿಧವಾದ ಎಣ್ಣೆಗಳನ್ನು ಸಾಂಪುಗಳನ್ನು ಬಳಕೆ ಮಾಡುತ್ತಾರೆ ಆದರೆ ಪ್ರತಿನಿತ್ಯ ಹೊರಗಡೆ ಹೋಗಲೇ ಬೇಕು ಹೊರಗಿನ ಹೊಗೆ, ಧೂಳು. ಗಾಳಿಗೆ ಕೂದಲು ಹಾಳಾಗುತ್ತದೆ ಇದಕ್ಕಾಗಿ ಬೇರೆ ಬೇರೆ ಶ್ಯಾಂಪೂಗಳನ್ನು ಬಳಕೆ ಮಾಡುತ್ತಾರೆ ಈ ರೀತಿ ಬೇರೆ ಬೇರೆ ಶ್ಯಾಂಪೂ ಬಳಕೆಯಿಂದ ಕೂದಲು ಕಾಂತಿ ಕಳೆದುಕೊಳ್ಳುತ್ತದೇ ಜೊತೆಗೆ ಕೂದಲು ಬೆಳ್ಳಗಾಗುತ್ತೆ. ಈ ಬಿಳಿ ಕೂದಲಿಗೆ ಪರಿಹಾರ ಕಂಡು ಕೊಳ್ಳಲು ಎಲ್ಲರು ಬಳಕೆ ಮಾಡುವುದು ಹೇರ್ ಡೈ.
ಇತ್ತೀಚಿಗಂತೂ ಮಾರ್ಕೆಟ್ನಲ್ಲಿ ನೂರಾರು ಕಂಪನಿಗಳ ಹೇರ್ ಡೈ ಸಿಗುತ್ತಿದೆ ಹಾಗಂತ ಯಾವುದೋ ಒಂದು ಹೇರ್ ಡೈ ತೆಗೆದುಕೊಂಡು ಕೂದಲಿಗೆ ಹಚ್ಚಿದರೆ ಹಲವಾರು ತೊಂದರೆಗಳನ್ನು ಅನುಭವಿಸಬೇಕು ಏಕೆ ಗೊತ್ತೇ ಈ ಹೇರ್ ಡೈ ಅಲ್ಲಿ ಹಲವಾರು ಬಗೆಯ ಕೆಮಿಕಲ್ ಅನ್ನು ಹಾಕಿರುತ್ತಾರೆ ಇದು ಕೂದಲಿಗೆ ಹಚ್ಚಿದಾಗ ಅದು ತಲೆಗೆ ಮುಖಕ್ಕೆ ಹೆಚ್ಚು ಪರಿಣಾಮ ಬೀರಿ ಕಣ್ಣು ಉರಿ. ತಲೆಯಲ್ಲಿ ಗುಳ್ಳೆಗಳು. ತಲೆನೋವು ಮುಖ ಕೆಂಪಾಗುವುದು ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಒಂದು ಸಮೀಕ್ಷೆ ಪ್ರಕಾರ ಸತತವಾಗಿ ಹೇರ್ ಡೈ ಬಳಕೆ ಮಾಡಿ ಕೆಲವರಿಗೆ ಇರೋ ಕೂದಲು ಉದುರಿಹೋಗಿದೇ ಅಂದು ಹೇಳುತ್ತಾರೆ ಮತ್ತಷ್ಟು ಜನಕ್ಕೆ ಗಂಭೀರ ಖಾಯಿಲೆಗಳು ಸಹ ಬಂದಿದೆ ಎನುತ್ತಾರೆ. ಅಂತಹ ಪ್ರಕರಣ ಒಂದು ಫ್ರಾನ್ಸ್ ಅಲ್ಲಿ ನೆಡೆದಿದೆ ಅದು ಏನು ಎಂದು ನೋಡೋಣ ಬನ್ನಿ. ಫ್ರಾನ್ಸ್ ಮೂಲದ 19 ವರ್ಷದ ಯುವತಿ ಒಬ್ಬಳು ಹೇರ್ ಡೈ ಬಳಸಿದ್ದಳು ಸ್ವಲ್ಪ ಸಮಯದಲ್ಲೇ ಆಕೆಯ ಮುಖ ಮತ್ತು ಕಣ್ಣಿನ ಭಾಗ ಊದಿಕೊಂಡು ತುಂಬಾ ನೋವು ಕಾಣಿಸಿತು. ಹೇರ್ ಡೈ ಅಲ್ಲಿ ಪ್ಯಾರಾ ಫಿನಾಯ್ಲೆನ್ಡೈಮಿನ್ ಪಿಪಿಡಿ ಎಂಬ ರಾಸಾಯನಿಕ ಅಂಶ ಇದ್ದು ಇದ್ರಿಂದ ನನಗೆ ಈ ತೊಂದರೆಯಾಗಿದೆ ಎಂದು ಆ ಯುವತಿ ಹೇಳಿದಳು. ಈ ಪಿಪಿಡಿಯನ್ನು ಗಾಢ ಬಣ್ಣದ ಹೇರ್ ಡೈ ಮತ್ತು ಮೇಕಪ್ಗಳಲ್ಲಿ ಬಳಸಲಾಗುತ್ತೆ.
ಈ ಅಂಶವಿರುವ ಹೇರ್ಡೈಯನ್ನು ಟೆಸ್ಟ್ ಮಾಡೋದಕ್ಕಾಗಿ ಸ್ವಲ್ಪ ಪ್ರಮಾಣದಲ್ಲಿ ಅದನ್ನ ಬಳಸಿದ್ದಾರೆ. ಆದ್ರೆ ಅದು ಸ್ವಲ್ಪ ಹೊತ್ತಲ್ಲೇ ರಿಯಾಕ್ಟ್ ಆಗಿದ್ದು ಮುಖವು ಸ್ವಲ್ಪ ಸ್ವಲ್ಪವೇ ಊದಿಕೊಳ್ಳುತ್ತಾ ಬಂದಿದೆ. ಅಲ್ಲದೇ ಮುಖದಲ್ಲಿ ತುರಿಕೆ ಸಹ ಉಂಟಾಗಿ ಅಲರ್ಜಿಯಂತೆ ಆಗಿದೆ. ನಂತರ ಅವರು ಅದಕ್ಕೆ ಚಿಕಿತ್ಸೆ ತೆಗೆದುಕೊಂಡರು ಪ್ರಯೋಜನವಾಗಿಲ್ಲ. ರಾತ್ರಿ ಮಲಗಿ ಬೆಳಗ್ಗೆ ಏಳುವುದರ ಒಳಗೆ ಮುಖವು ಊದಿಕೊಂಡು ಉಸಿರಾಡಲು ಸಹ ತೊಂದರೆ ಆಯಿತು. ನೋಡಿದರಲ್ಲ ಹೇರ್ ಡೈ ಬಳಕೆ ಇಂದ ಎಷ್ಟೆಲ್ಲ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ಹೇರ್ ಡೈ ಬಳಸುವ ಮೊದಲು ಆ ಪ್ರಾಡಕ್ಟ್ ಬಗ್ಗೆ ಪೂರ್ಣವಾಗಿ ತಿಳಿದು ನಂತರ ಬಳಕೆ ಮಾಡುವುದು ಒಳ್ಳೆಯದು