ಆರ್ಥಿಕ ಸಮಸ್ಯೆ ಜೀವನದಲ್ಲಿ ನೆಮ್ಮದಿ ಇಲ್ಲ ಈ ದೇಗುಲಕ್ಕೆ ಒಮ್ಮೆ ಹೋಗಿ

0
971

ಹನುಮ ಹಿಂದೂ ಧರ್ಮ ಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ ವಾಯುಪುತ್ರ ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ. ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬ ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ ವ್ಯಾಕರಣಿ ಮಹಾ ಮೇಧಾವಿ ಸಂಗೀತ ತಿಳಿದವ ವಾಸ್ಕೋವಿದ ಕುಶಲಮತಿ ಕವಿಕುಲಯೋಗಿ ನೀತಿಕೋವಿದ ಇಚ್ಛಾರೂಪಿ ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿ.

ಇಂಥ ಸಾಮರ್ಥ್ಯಗಳೆಲ್ಲ ಇದ್ದುದರಿಂದಲೇ ರಾಮನ ಪರಮಭಕ್ತನಾದ. ಇಂದಿಗೂ ಚಿರಂಜೀವಿಯೆಂದೇ ಪ್ರಸಿದ್ಧನಾಗಿರುವ ಆಂಜನೇಯ ಎಲ್ಲಿ ರಾಮಕಥೆ ರಾಮಕೀರ್ತನ ಜರುಗುತ್ತಿದೆಯೋ ಅಲ್ಲಿ ಭಕ್ತಿಯಿಂದ ಕೈಮುಗಿದು ಸಹೃದಯನಾಗಿ ಕೇಳುತ್ತಾನೆಂದೇ ಜನರ ನಂಬಿಕೆ ಇದೆ. ಈ ಹನುಮನು ನುಗ್ಗಿಕೇರಿ ಹನುಮ ಉತ್ತರ ಕರ್ನಾಟಕದಲ್ಲಿ ತುಂಬಾ ವೈಶಿಷ್ಟ್ಯ ಪಡೆದಿರುವ ದೇವಾಲಯ. ಜೊತೆಗೆ ಈ ದೇವಾಲಯ ದೇಸಾಯಿ ಮನೆತನದ ಒಡೆತನದಲ್ಲಿದೇ. ಧಾರವಾಡದಿಂದ ಕಲಘಟಗಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೆರೆಯ ದಂಡೆಯಲ್ಲಿ ನಿರ್ಮಾಣವಾಗಿದೆ. ಇದು ಮೂಲತಃ ಕೆರೆಯುಳ್ಳ ಅರಣ್ಯ ಪ್ರದೇಶದಲ್ಲಿದೆ.

ಈ ದೇವಾಲಯವು ಸುಮಾರು 60 ದಶಕದ ಹಿಂದೆ ವ್ಯಕ್ತಿಯೋರ್ವ ಹನುಮಂತನ ಮೂರ್ತಿಯನ್ನು ಕೆರೆಯಲ್ಲಿ ಎಸೆದುಬಿಟ್ಟನಂತೆ. ಆಗ ಕಾಲಾನು ಕ್ರಮದಲ್ಲಿ ಈ ಜಾಗವು ದೇಸಾಯಿ ಅವರ ಮನೆತನಕ್ಕೆ ಸೇರಿಕೊಂಡಿರುವ ಪರಿಣಾಮ ಅವರು ಅಲ್ಲಿಯೇ ವಾಸಿಸುತ್ತಿದ್ದರೆ. ಹನುಮನ ಮೂರ್ತಿಯು ಕೆಂಪು ಶಿಲೆಯಿಂದ ಕೂಡಿದ್ದು ಗರ್ಭಗೃಹದ ಗೋಡೆಗೆ ಗೋಮುಖ ಎನಿಸುವ ಅಪರೂಪದ ಸಾಲಿಗ್ರಾಮ ಕೂಡ ಇದೆ. ಇಲ್ಲಿ ಹನುಮ ಜಯಂತಿಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಾಗು ತೊಟ್ಟಿಲ ಸೇವೆಯೂ ಆಪ್ತವಾಗಿ ನಡೆಯುತ್ತದೆ. ಹಾಗೆಯೇ ಇಲ್ಲಿನ ಮೂರ್ತಿಯನ್ನು ನೋಡುತ್ತಿದ್ದರೆ ಏನೋ ಒಂದು ರೀತಿಯ ಶಕ್ತಿ ಬರುತ್ತದೆ. ಮನಸ್ಸಿಗೆ ನೆಮ್ಮದಿ ಧನಾತ್ಮಕ ಹಾಗೂ ಧರ್ಮ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವ ಅಪರೂಪದ ಗುಡಿ ಸಹ ಇದಾಗಿದೇ.

ಎಲ್ಲ ದೇವಾಲಯಗಳಂತೆ ಇಲ್ಲಿಯೂ ಪಂಚಾಮೃತ ಕುಂಕುಮ ಎಲೆ ಬೆಣ್ಣೆ ಪೂಜೆಗಳನ್ನು ಮಾಡಲಾಗುತ್ತದೆ. ಅನ್ನಸಂತರ್ಪಣೆಯೂ ಇಲ್ಲಿ ನಡೆಯುತ್ತದೆ. ಈ ದೇವಸ್ಥಾನದಲ್ಲಿ ಎಲ್ಲ ರೀತಿಯ ಅನುಕುಲಗಳನ್ನು ಸಹ ಮಾಡಿದ್ದಾರೆ ಯಾವುದಕ್ಕೂ ಸಹ ತೊಂದರೆ ಆಗುವುದಿಲ್ಲ. ಯಾವುದೇ ರೀತಿಯ ಅನಾರೋಗ್ಯದ ಸಮಸ್ಯೆ. ದುಷ್ಟ ಶಕ್ತಿಗಳ ಸಮಸ್ಯೆ ಭಯ ಹೀಗೆ ಇನ್ನು ಇತರ ಸಮಸ್ಯೆಗಳು ಇದ್ದಾಗ ಈ ದೇವಸ್ಥಾನಕ್ಕೆ ಭೇಟಿ ನೀಡಿ ಹನುಮನ ಹತ್ತಿರ ಬೇಡಿ ಕೊಂಡರೆ ಎಲ್ಲ ಸಮಸ್ಯೆಗಳನ್ನು ಸಹ ನಿವಾರಣೆ ಆಗುತ್ತದೆ. ಈ ದೇವಸ್ಥಾನಕ್ಕೆ ಹೋದರೆ ಸಾಕು ಮನಸ್ಸು ತುಂಬಾ ಶಾಂತವಾಗುತ್ತದೆ. ಮನಸ್ಸಿನಲ್ಲಿ ಇರುವ ಸಮಸ್ಯೆಗಳೆಲ್ಲ ಪರಿಹಾರ ಸಿಗುತ್ತದೆ. ದೇಹಕ್ಕೆ ಶಕ್ತಿ ಬರುತ್ತದೆ ಹಾಗಾಗಿ ಒಮ್ಮೆ ಆದರೂ ಈ ಹನುಮನ ಬಳಿ ಹೋಗಿ ಹನುಮನ ದರ್ಶನ ಪಡೆದುಕೊಳ್ಳಿ.

LEAVE A REPLY

Please enter your comment!
Please enter your name here