ದೇವರಿಗೆ ಯಾವ ಸಮಯದಲ್ಲಿ ಪೂಜೆ ಮಾಡಿದ್ರೆ ನಿಮಗೆ ಹೆಚ್ಚು ಒಳ್ಳೇದು ಆಗುತ್ತೆ

0
1103

ಜೀವನವೇ ಒಂದು ರೀತಿಯಲ್ಲಿ ವಿಚಿತ್ರ. ಈ ಜೀವನದಲ್ಲಿ ಎಲ್ಲ ಕೆಲಸಕ್ಕೂ ಸಹ ಒಂದು ನಿಯಮ ಸಮಯ ಎಂಬುದು ಇದೆ. ಈ ಸಮಯ ಎಂಬುದು ಎಲ್ಲರಿಗೂ ತುಂಬಾ ಮುಖ್ಯ ಏಕೆಂದರೆ ಹೋದ ಸಮಯ ಮತ್ತೆ ನಮಗೆ ಸಿಗುವುದಿಲ್ಲ ಹಾಗೆಯೇ ನಾವು ನಿತ್ಯ ಮಾಡುವ ಕೆಲಸಗಳನ್ನು ಯಾವ ಸಮಯದಲ್ಲಿ ಮಾಡಬೇಕು ಎಂಬ ನಿಯಮ ಕೂಡ ಇದೆ. ಆ ಕೆಲಸವನ್ನು ಆ ಸಮಯಕ್ಕೆ ಮಾಡಿದರೆ ಒಳ್ಳೆಯದು ಹಾಗೆಯೇ ನಾವು ನಿತ್ಯ ದೇವರಿಗೆ ಪೂಜೆ ಮಾಡುತ್ತೇವೆ

ಈ ಪೂಜೆಯನ್ನು ನಮಗೆ ಸಮಯ ಸಿಕ್ಕಾಗ ಮಾಡುವುದಲ್ಲ ದೇವರ ಪೂಜೆ ಮಾಡಲು ಸಹ ಅದರದೇ ಆದ ನಿರ್ದಿಷ್ಟ ಸಮಯ ಎಂಬುದು ಇದೆ ಎಂದು ನಮ್ಮ ಶಾಸ್ತ್ರದಲ್ಲಿ ಹೇಳಿದ್ದಾರೆ. ಆ ಸಮಯದಲ್ಲಿ ಪೂಜೆ ಮಾಡಿದರೆ ಮಾತ್ರ ನಮ್ಮ ಪೂಜೆಗೆ ತಕ್ಕ ಫಲ ಸಿಗುವುದು ಹಾಗಾದರೆ ದೇವರ ಪೂಜೆಯನ್ನು ಯಾವ ಸಮಯದಲ್ಲಿ ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ದೇವರ ಪೂಜೆಯನ್ನು ಪ್ರಶಾಂತ ಮನಸ್ಸಿನಿಂದ. ಶುಚಿ ಬದ್ಧವಾಗಿ ಮಾಡಬೇಕು ಬೆಳಿಗ್ಗೆ ಮದ್ಯಾಹ್ನ ಸಾಯಂಕಾಲ ಮೂರು ಕಾಲದಲ್ಲೂ ಮಾಡಬಹುದು ಇದನ್ನು ಬಾಹ್ಯ ಪೂಜೆ ಎನ್ನುತ್ತಾರೆ.

ಆದರೆ ಪುರಾಣದಲ್ಲಿ ಹೇಳಿರುವ ಪ್ರಕಾರ ಬೆಳ್ಳಗೆ ಸೂರ್ಯ ಹುಟ್ಟುವ ಮುಂಚೆ ಬ್ರಮ್ಹಿ ಮುಹೂರ್ತದಲ್ಲಿ ಸ್ನಾನ ಮಾಡಿ ಶುದ್ದ ಮನಸಿನಿಂದ ದೇವರ ಪ್ರಾರ್ಥನೆ ಮಾಡಿದ್ರೆ ಭಗವಂತ ಹೆಚ್ಚಿನ ಕೃಪೆ ತೋರುವರು ಎಂದು ಹೇಳಲಾಗಿದೆ. ಮನಸ್ಸಿನಲ್ಲೇ ದೇವರನ್ನು ನೆನೆದು ಪೂಜಿಸುವುದನ್ನು ಮಾನಸಿಕ ಪೂಜೆ ಎನ್ನುತ್ತಾರೆ. ಆದರೆ ಇದಕ್ಕೆ ಯಾವುದೇ ಸಮಯ ಇರುವುದಿಲ್ಲ. ನಮ್ಮ ಮನೆಗಳಲ್ಲಿ ಹಿರಿಯರು ಏನಾದರು ಇದ್ದರೆ ದಿನದ ಸಾಕಷ್ಟು ಸಮಯ ಕಣ್ಣು ಮುಚ್ಚಿ ದೇವರ ಸ್ಮರಣೆ ಮಾಡುತ್ತಲೇ ಇರುವುದು ನಾವು ಸಾಕಷ್ಟು ನೋಡಿದ್ದೇವೆ.

ದೇವರಿಗೆ ಪೂಜೆ ಹೇಗೆ ಮಾಡಬೇಕು ಎಂದರೆ ಮೊದಲಿಗೆ ಶುಚಿಯಾಗಿ ಇರಬೇಕು. ನಮ್ಮ ಮನಸ್ಸನ್ನು ಶಾಂತ ಸ್ವಭಾವದಲ್ಲಿ ಇಟ್ಟುಕೊಳ್ಳಬೇಕು. ದೇವರ ಪೂಜೆ ಮಾಡುವಾಗ ಏಕಾಗ್ರತೆ ಎಂಬುದನ್ನು ಕಾಪಾಡಿಕೊಳ್ಳಬೇಕು. ಗಲಾಟೆ ಇಲ್ಲದೆ ಮನೆಯು ನಿಶಬ್ದವಾಗಿ ಇರಬೇಕು. ಪೂಜೆಯ ಸಮಯದಲ್ಲಿ ಟಿವಿ ಹಾಕುವುದು ಮೊಬೈಲ್ ಉಪಯೋಗ ಮಾಡುವುದು ಶುದ್ದ ತಪ್ಪು. ದೇವರಿಗೆ ಮಾಡುವ ಆರತಿಯಲ್ಲಿ ಕರ್ಪೂರವನ್ನು ಹಾಕಿ ಬೆಳಗುವುದು ಮುಖ್ಯ ಅಲ್ಲ ನಮ್ಮಲ್ಲಿನ ಅಹಂಕಾರ ಎಂಬುದನ್ನು ಹಾಕಿ ಪರಮಾತ್ಮನಿಗೆ ಅರ್ಪಿಸುವುದು. ನಮ್ಮ ಅಹಂಕಾರವನ್ನು ಕಡಿಮೆ ಮಾಡು ಎಂದು ಕೇಳಿಕೊಳ್ಳುವುದು.

ದೇವರಿಗೆ ನಾನಾ ರೀತಿಯ ಹೂಗಳನ್ನು ಸಮರ್ಪಿಸುವ ಬದಲು ನಮ್ಮಲ್ಲಿ ಇರುವ ಪಾತ್ರೆಗಳನ್ನು ಅಥವ ಒಂದೆರಡು ಹೂವು ಅರ್ಪಣೆ ಮಾಡಿ ಶುದ್ದ ಮನಸಿನಿಂದ ಬೇಡುವುದು. ದೇವರ ಪೂಜೆಯ ನಂತರ ದೇವರ ಮುಂದೆ ಕುಳಿತು ಜಪ ಮಾಡಬೇಕು. ಆ ಜಪ ಮಾಡುವಾಗ ಒಂದು ಕಡೆ ಕುಳಿತು ಜಪ ಮಾಲೆಯನ್ನು ಹಿಡಿದುಕೊಂಡು ಜಪ ಮಾಡಿ ಕೊನೆಗೆ ಆ ಮಾಲೆಯನ್ನು ಹಿಡಿಯದೆ ಜಪ ಮಾಡಬೇಕು ಇದನ್ನು ಅಜಪಾಜಪಸ್ಥಿತಿ ಎನ್ನುತ್ತಾರೆ. ಇಷ್ಟೇ ಅಲ್ಲದೆ ನಾವು ಮಾಡುವ ಕೆಲಸದಲ್ಲಿ ದೇವರು ಇದ್ದಾನೆ ಎಂದು ಮಾಡುವ ಕೆಲಸವನ್ನು ಜಾಗರೂಕತೆಯಿಂದ ಶುದ್ಧ ಮನಸ್ಸಿನಿಂದ ಮಾಡಬೇಕು.ನಮ್ಮಲ್ಲಿ ಈಗಲೂ ಎಲ್ಲರು ಎಲ್ಲ ಪಾಪಗಳನು ಮಾಡಿ ಮುಗ್ದ ಜನರಿಗೆ ಮೋಸ ಮಾಡಿ ಕೊನೆಗೆ ದೇವರ ಬಳಿ ಕ್ಷಮೆಯನ್ನು ಕೇಳುವುದು ವಾಡಿಕೆ ಆಗಿದೆ ಆದರೆ ಗರುಡ ಪುರಾಣದಲ್ಲಿ ಹೇಳುವ ಪ್ರಕಾರ ಮನುಷ್ಯ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕು ಈಗ ಚೆನ್ನಾಗಿದ್ದರೂ ಮುಂದೊಂದು ದಿನ ಅದು ನಮ್ಮನು ಸುಡದೆ ಸುಮ್ಮನೆ ಬಿಡುವುದಿಲ್ಲ ಎಂದು ಹೇಳುತ್ತಾರೆ.

LEAVE A REPLY

Please enter your comment!
Please enter your name here