ಶಿವನ ವಸ್ತ್ರ ಹುಲಿಯ ಚರ್ಮವಾಗಲು ಕಾರಣವೇನು ತಿಳಿಯಿರಿ

0
828

ಸೃಷ್ಟಿಯಾದ ಜೀವಿಗಳಿಗೆ ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ ಸ್ಥಿತಿ ಪಡೆದ ಜೀವಿಗಳಿಗೆ ಕೊನೆಕಾಣಿಸುವವನು ಶಿವ. ಆದ್ದರಿಂದ ಶಿವನಿಗೆ ಲಯಕಾರ ಎಂದೂ ಸಹ ಕರೆಯುತ್ತಾರೆ. ಶಿವ ಎನ್ನುವ ಶಬ್ದವು ಎರಡು ಮೂಲತತ್ವಗಳನ್ನು ಪ್ರತಿನಿಧಿಸುತ್ತದೆ.ಇಂದು ಆಧುನಿಕ ವಿಜ್ಞಾನವೂ ಕೂಡ ಹೇಳುವುದೇನೆಂದರೆ ವಿಶ್ವವು ಶೂನ್ಯದಿಂದ ಉತ್ಪತ್ತಿಯಾಗಿದೆ ಮತ್ತು ಶೂನ್ಯಕ್ಕೇ ಹಿಂದಿರುಗುತ್ತದೆ ಈ ಮೇರೆಯಿಲ್ಲದ ಶೂನ್ಯವೇ ಸಮಸ್ತ ವಿಶ್ವದ ಅಸ್ತಿತ್ವಕ್ಕೆ ಮೂಲವಾಗಿ ವಿಶ್ವದ ಮುಖ್ಯವಾದ ಗುಣವೇ ಆಗಿದೆ.

ಸಮಸ್ತ ವಿಶ್ವಕ್ಕೂ ಆಧಾರವಾಗಿರುವ ಕೊನೆಯಿಲ್ಲದ ಈ ಶೂನ್ಯವೇ ಶಿವ ಯಾವುದರಿಂದ ವಿಶ್ವದ ಉತ್ಪತ್ತಿಯಾಗಿದೆಯೋ ಯಾವುದರಲ್ಲಿ ವಿಶ್ವವು ಲಯವಾಗುವುದೋ ಅದಕ್ಕೆ ಶಿವ ಎಂದು ಹೇಳುತ್ತಾರೆ. ಶಿವನಿಗೆ ನಾನಾ ಹೆಸರುಗಳಿವೆ ಅವುಗಳೆಂದರೆ ಈಶ ಪಶುಪತಿ ಶೂಲೀ ಮಹೇಶ್ವರ ಈಶ್ವರ ಶಂಕರ ಚಂದ್ರಶೇಖರ ಭೂತೇಶ ಖಂಡಪರಶು ಗಿರೀಶ ಮೃಡ ಮೃತ್ಯುಂಜಯ ಶ್ರೀಕಂಠ ಮಹಾದೇವ ವಿರೂಪಾಕ್ಷ ಇನ್ನಿತರ ಹೆಸರುಗಳಿಂದ ಕರೆಯುತ್ತಾರೆ. ಶಿವ ಎಂದ ತಕ್ಷಣ ನಮ್ಮ ಕಣ್ಣ ಮುಂದೇ ಬರುವುದು ಹಣೆಯಲ್ಲಿ ಇರುವ ವಿಭೂತಿ ತಲೆಯ ಮೇಲೆ ಇರುವ ಗಂಗೆ ಕತ್ತಿನಲ್ಲಿ ಸುತ್ತಿರುವ ನಾಗರಹಾವು ಮತ್ತು ರುದ್ರಾಕ್ಷಿ ಮಾಲೆ ಹುಲಿಯ ಚರ್ಮವನ್ನು ದೇಹಕ್ಕೆ ಸುತ್ತಿಕೊಂಡಿರುವುದು ಈ ಪರಮಶಿವನಿಗೆ ಆಡಂಬರ ಎಂಬುದು ಇಲ್ಲ. ಆದರೆ ಇವರು ಹುಲಿಯ ಚರ್ಮವನ್ನು ಧರಿಸುತ್ತಾರೆ ಅದಕ್ಕೆ ಕಾರಣ ಏನು ಎಂದು ಗೊತ್ತೇ.

ನಮ್ಮ ಪುರಾಣದಲ್ಲಿ ಹೇಳಿರುವ ಉಲ್ಲೇಖದ ಪ್ರಕಾರ ಶಿವನು ಮೊದಲು ದಿಗಂಬರರಾಗಿದ್ದರು ಹೀಗೆ ಮೈಮೇಲೆ ಯಾವುದೇ ವಸ್ತ್ರವನ್ನು ದರಿಸದೆ ಒಂದು ದಿನ ಕಾಡಿನಲ್ಲಿ ಮಾರು ವೇಷದಲ್ಲಿ ಸಂಚಾರ ಮಾಡುತ್ತಾ ಇದ್ದಾಗ ಶಿವನ ತೇಜಸ್ಸನ್ನು ತಿಳಿಯದೆ ಋಷಿಗಳು ಮಹರ್ಷಿಗಳು ಪಂಡಿತರ ಪತ್ನಿಯರು ಅಶ್ವರ್ಯಗೊಂಡು ವಿಚಲಿತರಾದರು ಮಾರು ವೇಷದಾರಿ ಶಿವನು ಅಲ್ಲಿಂದ ಹೋದ ಮೇಲು ಅವನನ್ನೇ ನೆನಪಿಸಿಕೊಂಡು ಯಾವುದೇ ಕೆಲಸ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿರಲಿಲ್ಲ ಇದನ್ನು ಕಂಡ ಅವರ ಗಂಡಂದಿರು ಇದಕ್ಕೆ ಕಾರಣ ತಿಳಿದುಕೊಂಡು ಮಾರುವೇಷ ದಾರಿ ಶಿವ ಎಂದು ತಿಳಿಯದೆ ಸಾಯಿಸಬೇಕು ಎಂದು ಉಪಾಯ ಮಾಡಿದರು.

ಆ ಉಪಾಯ ಏನು ಎಂದರೆ ಶಿವನು ಬರುವ ದಾರಿಯಲ್ಲಿ ಒಂದು ದೊಡ್ಡ ಹಳ್ಳವನ್ನು ತೋಡಿ ಅದರ ಒಳಗೆ ತುಂಬಾ ಶಕ್ತಿಯುತವಾದ ಹುಲಿಯನ್ನು ಸೃಷ್ಟಿಸಿ ಇಡುತ್ತಾರೆ. ಆ ಹುಲಿಯು ಶಿವನು ಬರುವ ಸಮಯಕ್ಕೆ ಸರಿಯಾಗಿ ಪ್ರತ್ಯಕ್ಷವಾಗಿ ಶಿವನ ಮೇಲೆ ದಾಳಿ ಮಾಡಿತು. ಆದರೆ ಶಿವನು ಹುಲಿಯನ್ನು ಕೊಂದನು ನಂತರ ವಿಷಯವನ್ನು ತಿಳಿದುಕೊಂಡ ಶಿವನು ಆ ಹುಲಿಯ ಚರ್ಮವನ್ನೇ ತೆಗೆದುಕೊಂಡು ತಾನು ಧರಿಸಿಕೊಳ್ಳುತ್ತಾನೆ. ಮೊದಲಿಗೆ ಸಾಕ್ಷಾತ್ ಶಿವ ಎಂದು ತಿಳಿಯದ ಜನರು ಆ ಶಕ್ತಿಯನ್ನು ಕಂಡು ಆಶ್ಚರ್ಯ ಪಟ್ಟರು. ಮಹಾ ದೇವರ ನಿಜವಾದ ರೂಪವನ್ನು ಕಂಡು ಭಕ್ತಿಯಿಂದ ನಮಿಸಿದರು ತಮ್ಮ ತಪ್ಪನು ಕ್ಷಮಿಸಿ ಬಿಡಿ ಎಂದು ಕೇಳಿಕೊಂಡರು. ನಂತರ ಅಂದಿನಿಂದಲೂ ಶಿವನ ವಸ್ತ್ರ ಹುಲಿಯ ಚರ್ಮವಾಗಿದೆ ಎಂದು ಉಲ್ಲೇಖ ಇದೆ.

LEAVE A REPLY

Please enter your comment!
Please enter your name here