ಮನೆಯಲ್ಲೇ ಗೋಬಿ ಸಮೋಸ ಮಾಡೋದು ತುಂಬಾ ಸುಲಭ

0
1171

ಸಮೋಸ ಅಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ ಎಲ್ಲರೂ ಬಹಳ ಇಷ್ಟಪಟ್ಟು ಸಮೋಸವನ್ನು ತಿನ್ನುತ್ತಾರೆ. ಮುಸ್ಸಂಜೆ ವೇಳೆಯಲ್ಲಿ ಟೀ ಜೊತೆ ಬಿಸಿ ಬಿಸಿ ಸಮೋಸ ಇದ್ದರೆ ಅದರ ಮಜವೇ ಬೇರೆ. ಅದಕ್ಕೆ ಸಮೋಸ ಮಾಡುವ ವಿಧಾನವನ್ನು ನೀವು ಕಲಿಯಲು ಬಯಸುತ್ತಿದ್ದರೆ ಇದನ್ನು ಓದಿ. ಸಮೋಸ ಗಳಲ್ಲಿ ಹಲವು ಬಗೆಯ ಸಮಸ್ಯೆಗಳನ್ನು ಮಾಡಬಹುದು ಅದರಲ್ಲಿ ಒಂದು ವಿಧಾನವನ್ನು ನಾವು ತಿಳಿಸುತ್ತೇವೆ. ಗೋಬಿ ಸಮೋಸ: ಗೋಬಿ ಸಮೋಸವನ್ನು ಮಾಡಲು ಬೇಕಾಗುವ ಸಾಮಗ್ರಿಗಳು. ಹೂಕೋಸು ಮೈದಾ ಹಿಟ್ಟು ಹುರಿಗಡಲೆ ಹಸಿಮೆಣಸಿನಕಾಯಿ ಜೀರಿಗೆ ಕರಿಬೇವಿನ ಸೊಪ್ಪು ಅರಿಶಿಣ ಗೋಧಿ ಹಿಟ್ಟು ಹುಣಸೆ ಹಣ್ಣಿನ ರಸ ಶುಂಠಿ ಬೆಳ್ಳುಳ್ಳಿ ಪೇಸ್ಟ್

ಗೋಬಿ ಸಮೋಸವನ್ನು ಮಾಡುವ ವಿಧಾನ: ಒಂದು ಬಟ್ಟಲು ಗೋಧಿ ಹಿಟ್ಟು ಮತ್ತು ಒಂದು ಬಟ್ಟಲು ಮೈದಾ ಹಿಟ್ಟನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಅದಕ್ಕೆ ಎರಡು ಸ್ಪೂನ್ ಎಣ್ಣೆಯನ್ನು ಹಾಕಿ ಹದ ಬರುವವರೆಗೂ ಕಲಸಿಕೊಳ್ಳಿ. ನಂತರ 30 ನಿಮಿಷ ಹಾಗೆ ಬಿಡಿ. ನಂತರ ಒಂದು ಬಾಣಲೆಗೆ ಎಣ್ಣೆ 2 ಚಮಚ ಕರಿಬೇವಿನ ಸೊಪ್ಪು ಜೀರಿಗೆ ಮತ್ತು ತುಂಡುಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಮೆಣಸಿನ ಕಾಯಿ ಪೇಸ್ಟ್ ಅನ್ನು ಒಂದೊಂದು ಚಮಚ ಹಾಕಿ ಮಿಶ್ರಣ ಮಾಡಿರಿ.

ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿರಿ. ನಂತರ ಇದನ್ನು ಐದು ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ. ಈಗ ಕಲಸಿಟ್ಟ ಹಿಟ್ಟನ್ನು ತೆಗೆದುಕೊಂಡು ಅದರಲ್ಲಿ ಪೂರಿಯಾ ಆಕಾರವನ್ನು ಮಾಡಿಕೊಂಡು ಕೊನ್ ಆಕಾರದಲ್ಲಿ ಕತ್ತರಿಸಿ ಅದರೊಳಗೆ ಬೇಯಿಸಿಟ್ಟ ಮಸಾಲೆ ಮಿಶ್ರಣವನ್ನು ತುಂಬಿ ಎಣ್ಣೆಯಲ್ಲಿ ಕರೆಯಿರಿ. ಈಗ ಗೋಧಿ ಸಮೋಸ ಸವಿಯಲು ಸಿದ್ದ.

ಈಗ ಸಮೋಸ ರೆಡಿಯಾಯಿತು ಆದರೆ ಸಮೋಸವನ್ನು ತಿನ್ನಲು ಸಿಹಿ ಹುಳಿ ರಸ ಬೇಕಲ್ಲವೇ. ಸಿಹಿ ಹುಳಿ ರಸವನ್ನು ಮಾಡುವುದು ತುಂಬಾ ಸುಲಭ. ಸಿಹಿ ಹುಳಿ ರಸವನ್ನು ಮಾಡಲು ಬೇಕಾಗುವ ಸಾಮಗ್ರಿಗಳು: ಹುಣಸೆರಸ ಅಡಿಗೆ ಎಣ್ಣೆ ಕಾಳು ಮೆಣಸಿನ ಪುಡಿ ಜೀರಿಗೆ ಬೆಲ್ಲ ಇಂಗು

ಸಿಹಿ ಹುಳಿ ರಸವನ್ನು ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲೆಯಲ್ಲಿ ಎರಡು ಸ್ಪೂನ್ ಎಣ್ಣೆಯನ್ನು ಹಾಕಿ ಅದಕ್ಕೆ ಜೀರಿಗೆ ಮತ್ತು ಇಂಗನ್ನು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ಒಂದು ಬಟ್ಟಲು ಹುಣಸೆರಸ ಕಾಳು ಮೆಣಸಿನ ಪುಡಿ ಕಾಲು ಬಟ್ಟಲು ಬೆಲ್ಲವನ್ನೂ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಚೆನ್ನಾಗಿ ಕುದಿ ಬರುವವರೆಗೂ ಕಾಯಿಸಿರಿ. ಈ ಮಿಶ್ರಣ ತಣ್ಣಗಾದ ಮೇಲೆ ಸಮೋಸ ಮತ್ತು ಸಿಹಿ ಹುಳಿ ರಸ ಸವಿಯಲು ಸಿದ್ದ. ಶೇರ್ ಮಾಡಿ ಎಲ್ಲರಿಗು ಸಹಾಯ ಆಗಲಿ.

LEAVE A REPLY

Please enter your comment!
Please enter your name here