ಎಲ್ಲರಲ್ಲೂ ಕೆಮ್ಮು ಮತ್ತು ಶೀತದ ಸಮಸ್ಯೆಯ ಸಾಮಾನ್ಯವಾಗಿ ಬಿಟ್ಟಿದೆ ಇಂತಹ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗಿ ಅಥವಾ ಮೆಡಿಕಲ್ ಗೆ ಹೋಗಿ ಅನೇಕ ಇಂಗ್ಲಿಷ್ ಮೆಡಿಸನ್ ಗಳನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚು ಇಂಗ್ಲಿಷ್ ಮೆಡಿಸನ್ ಗಳನ್ನು ತೆಗೆದು ಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಇತ್ತೇಚೆಗೆ ನಮ್ಮ ಜನಕ್ಕೆ ಅರ್ಥ ಆಗ್ತಿದೆ. ನಮ್ಮ ದೇಹದಲ್ಲಿ ಈಗಾಗಲೇ ಕ್ರೋಸಿನ್ ನಂತಹ ಕೆಲವು ಟ್ಯಾಬ್ಲೆಟ್ ಬ್ಯಾನ್ ಮಾಡಿರುವುದು ಗೊತ್ತಿರೋ ವಿಚಾರ ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುತ್ತಾ ಇರೋದು. ಈ ಇಂಗ್ಲಿಷ್ ಮೆಡಿಸಿನ್ ತೆಗೆದುಕೊಳ್ಳುವುದರಿಂದ ದುಡ್ಡು ಹಾಳು ಜೊತೆಗೂ ಆರೋಗ್ಯವು ಹಾಳು.
ಶೀತ ಮತ್ತು ನೆಗಡಿ ಸಮಸ್ಯೆಗೆ ನಮ್ಮ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದು ಆದ್ರೆ ಈ ಮದ್ದುಗಳು ಕೆಲವು ಜನಕ್ಕೆ ಮಾತ್ರ ಗೊತ್ತಿದೆ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ಮೊದಲಿಗೆ ಶುಂಠಿ ಕಷಾಯ: ಶುಂಠಿ ಕಷಾಯ ನೆಗಡಿ ಮತ್ತು ಶೀತಕ್ಕೆ ರಾಮಬಾಣ ಇದ್ದಂತೆ. ಶೀತ ಮತ್ತು ನೆಗಡಿಯು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಶುಂಠಿಯ ಕಷಾಯವನ್ನು ಕುಡಿಯುವುದರಿಂದ ಈ ಸಮಸ್ಯೆಗಳು ದೂರವಾಗುತ್ತದೆ. ಶುಂಠಿ ಕಷಾಯವನ್ನು ಮಾಡಲು ಬೇಕಾಗುವ ಸಾಮಗ್ರಿಗಳು

ಒಣಶುಂಠಿ ಕರಿಮೆಣಸು ಕೊತ್ತಂಬರಿ ಬೀಜ ಜೀರಿಗೆ ನಿಂಬೆಹಣ್ಣು ಬಿಳಿ ಬೆಲ್ಲ ಕಲ್ಲು ಸಕ್ಕರೆ ಮತ್ತು ಒಂದಿಷ್ಟು ಉಪ್ಪು. ಶುಂಠಿ ಕಷಾಯ ಮಾಡುವ ವಿಧಾನ: ಒಣ ಶುಂಠಿಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಇಟ್ಟುಕೊಳ್ಳಬೇಕು ಅಥವಾ ಜಜ್ಜಿ ಇಟ್ಟು ಕೊಳ್ಳಿ. ನಂತರ ಜೀರಿಗೆ ಕೊತ್ತಂಬರಿ ಬೀಜ ಮತ್ತು ಕರಿಮೆಣಸನ್ನು ಹುರಿದಿಟ್ಟುಕೊಳ್ಳಬೇಕು. ತದನಂತರ ಇಟ್ಟುಕೊಂಡು ಮಿಶ್ರಣದ ಜೊತೆ ಒಣ ಶುಂಠಿಯನ್ನು ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ಈ ಪುಡಿಯನ್ನು ಒಂದು ಒಗಟಿನ ಗಾಜಿನ ಬಾಟಲಿಯಲ್ಲಿ ಇಟ್ಟುಕೊಂಡು ಯಾವಾಗ ಬೇಕಾದರೂ ಕಷಾಯ ಮಾಡಲು ಉಪಯೋಗಿಸಿ ಕೊಳ್ಳಬಹುದು.
ಒಂದು ಪಾತ್ರೆಯಲ್ಲಿ 2 ಲೋಟ ನೀರನ್ನು ಹಾಕಿ ಆ ನೀರನ್ನು ಚೆನ್ನಾಗಿ ಕುದಿಸಿರಿ ನೀರು ಕುದಿಯುತ್ತಿರುವಾಗ ಸ್ವಲ್ಪ ಉಪ್ಪು ನಿಂಬೆ ಹಣ್ಣಿನ ರಸ ಮತ್ತು ಬೆಲ್ಲದ ಚೂರನ್ನು ಹಾಕಿರಿ. ಉಪ್ಪು ಮತ್ತು ಬೆಲ್ಲದ ಚೂರು ಕರಗಿದ ನಂತರ ಮಾಡಿಟ್ಟುಕೊಂಡ ಶುಂಠಿಯ ಮಿಶ್ರಣವನ್ನು 2 ಸಮಾಚಾರ ಹಾಕಿರಿ ನಂತರ ಇದನ್ನು ಚೆನ್ನಾಗಿ ಕುದಿಸಿರಿ. ಈ ಶುಂಠಿಯ ಕಷಾಯ ಕುಡಿಯಲು ಒಗರು ಒಗರು ಎನಿಸಿದರೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಮಿಶ್ರಣ ಮಾಡಿರಿ. ಕೊನೆಯಲ್ಲಿ ನಿಮಗೆ ಬೇಕು ಎಂದಾದರೆ ಅದಕ್ಕೆ ಹಾಲನ್ನು ಸೇರಿಸಿ ಕುಡಿಯಬಹುದು ಅಥವಾ ಹಾಗೆಯೇ ಇದನ್ನು ಕುಡಿಯಬಹುದು.
ಜೀರಿಗೆ ಕಷಾಯ ಮಾಡಲು ಬೇಕಾಗುವ ಸಾಮಗ್ರಿಗಳು: ಜೀರಿಗೆ ಕರಿಮೆಣಸು ಚಕ್ಕೆ ಲವಂಗ ಪುದಿನಾ ಎಲೆ ತುಳಸಿ ಎಲೆ ಹಸಿ ಶುಂಠಿ ಉಪ್ಪು ಹಸಿ ಶುಂಟಿಯನ್ನು ಚೆನ್ನಾಗಿ ಜಜ್ಜಿ ಒಂದು ಪಾತ್ರೆಯಲ್ಲಿ ಕರಿಮೆಣಸು ಜೀರಿಗೆ ಮತ್ತು ಶುಂಠಿಯನ್ನು ಹಾಕಿರಿ. ಅದಕ್ಕೆ ಅರ್ಧ ಲೀಟರ್ ನೀರನ್ನು ಹಾಕಿ ನಂತರ ಅದಕ್ಕೆ ಪುದೀನಾ ಸೊಪ್ಪಿನ ಎಲೆ ಮತ್ತು ತುಳಸಿ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಇದಕ್ಕೆ ಚಕ್ಕೆ ಲವಂಗವನ್ನು ಪುಡಿಮಾಡಿ ಹಾಕಿರಿ. ನಂತರ ಇದನ್ನು ಚೆನ್ನಾಗಿ ಕುದಿಸಿರಿ. ಬೇಕೆಂದರೆ ಇದಕ್ಕೆ ಹಾಲನ್ನು ಸೇರಿಸಿ ಕುಡಿಯಬಹುದು ಅಥವಾ ಹಾಗೆ ಕುಡಿಯಬಹುದು.