ನಿಮ್ಮ ಕೋಪ ಕಡಿಮೆ ಮಾಡಿಕೊಳ್ಳಿ ಇಲ್ಲ ಅಂದ್ರೆ ನಿಮಗೆ ಈ ಖಾಯಿಲೆ ಬರೋದು ಖಚಿತ

0
934

ಮನುಷ್ಯನಲ್ಲಿ ಸಂತೋಷ ದುಃಖ ಅಳು ನಗು ಕೋಪ ಹೀಗೆ ಹಲವಾರು ರೀತಿಯ ಭಾವನೆಗಳು ಬರುವುದು ಸಹಜ. ಅದರಲ್ಲಿ ಕೆಲವರಿಗೆ ಸ್ವಲ್ಪ ಕೋಪ ಜಾಸ್ತಿಯೇ ಬರುತ್ತದೆ. ಸಣ್ಣ ಸಣ್ಣ ಕಾರಣಗಳಿಗೆ ಬೇಗ ಕೋಪ ಮಾಡಿಕೊಳ್ಳುತ್ತಾರೆ. ಕೋಪದಲ್ಲಿ ಕೊಯ್ದುಕೊಂಡ ಮೂಗು ಮತ್ತೆ ಬರುವುದಿಲ್ಲ ಎಂಬ ಗಾದೆಯೇ ಇದೆ. ಕೋಪದಿಂದ ಆಗುವ ಅನಾಹುತಗಳನ್ನು ಮತ್ತೆ ಸರಿ ಮಾಡಲು ತುಂಬಾ ಕಷ್ಟ ಸಣ್ಣ ಸಣ್ಣ ವಿಚಾರಗಳಿಗೆ ಬೇಕಾದ ತಾಳ್ಮೆ ಕಳೆದುಕೊಂಡು ಅದರಿಂದ ಕೋಪ ಮಾಡಿಕೊಂಡು ಜಗಳವಾಡುವುದು ಅಥವಾ ರೇಗಾಡುವುದು ಇದರಿಂದ ಆ ಜಗಳ ತೀವ್ರ ಮಟ್ಟಕ್ಕೆರಬಹುದು. ಅದರಿಂದ ದೊಡ್ಡ ಅನಾಹುತವೇ ಆದರೂ ಆಗಬಹುದು. ಆದ್ದರಿಂದ ಬಹಳ ಬೇಗ ಕೋಪ ಬರುವವರು ತಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ತುಂಬಾ ಅಗತ್ಯ.

ಯಾವಾಗಲು ಕೊಪದಲ್ಲೇ ಮಾತನಾಡುವ ಜನಕ್ಕೆ ಮುಖವನ್ನು ಗಂಟು ಹಾಕಿಕೊಳ್ಳುವ ಜನಕ್ಕೆ ಮತ್ತು ಸಣ್ಣ ಸಣ್ಣ ವಿಷಯಗಳಿಗೂ ಸಿಡುಕುವ ಜನಕ್ಕೆ ಬಹುಬೇಗನೆ ಬಿಪಿ ಮತ್ತು ಸಕ್ಕರೆ ಖಾಯಿಲೆ ಬರುತ್ತದೆ ಎಂದು ಇತ್ತೇಚೆಗೆ ಅಮೇರಿಕ ದೇಶದ ಫ್ಲೋರಿಡಾ ವಿಶ್ವವಿದ್ಯಾನಿಲಯ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಕೋಪವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಈ ಕೆಳಗಿನ ಕೆಲವು ಸುಲಭ ವಿಧಾನಗಳನ್ನು ಅನುಸರಿಸಿ. ಮೊದಲಿಗೆ ಧ್ಯಾನ ಮಾಡುವುದು. ಹೌದು ಧ್ಯಾನ ಮಾಡುವುದರಿಂದ ನಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿದೆ. ಪ್ರತಿನಿತ್ಯ ಮುಂಜಾನೆಯೇ ಎದ್ದು ಅರ್ಧ ಗಂಟೆಗಳ ಕಾಲ ಧ್ಯಾನ ಮಾಡುವುದರಿಂದ ನಮ್ಮ ಮನಸ್ಸು ತಿಳಿಯಾಗಿರುತ್ತದೆ ಮತ್ತು ನಮ್ಮ ಮನಸ್ಸು ಹಗುರವಾದಂತೆ ಭಾವವಾಗುತ್ತದೆ. ಪ್ರತಿನಿತ್ಯ ಧ್ಯಾನ ಮಾಡುವುದರಿಂದ ಏಕಾಗ್ರತೆಯು ಕೂಡ ಹೆಚ್ಚುತ್ತದೆ ಇದರಿಂದ ನಮಗೆ ಕೋಪ ಬಂದಾಗ ನಾವು ಏನು ಮಾತನಾಡುತ್ತೇವೆ ಎಂದು ನಾವು ಯೋಚಿಸುತ್ತೇವೆ. ನಮಗೆ ಕೋಪ ಬಂದಾಗ ನಾವು ಯೋಚಿಸಿ ಮಾತನಾಡಿದಾಗ ಆಗುವ ಅನಾಹುತವನ್ನು ತಡೆಯಬಹುದು.

ಧೂಮಪಾನ ಮತ್ತು ಮದ್ಯಪಾನವನ್ನು ಮಾಡಬಾರದು. ಹೌದು ಕುಡಿದವರು ಸತ್ಯ ಹೇಳುತ್ತಾರೆ ಎಂಬ ಆಡು ಮಾತಿದೆ. ತುಂಬಾ ಚೆನ್ನ ಗಳು ತಮ್ಮ ನೋವನ್ನು ಮರೆಯಲು ಕುಡಿಯುತ್ತಾರೆ ಕುಡಿದಾಗ ತಮ್ಮಲ್ಲಿರುವ ಕೋಪವನ್ನು ಹೊರಹಾಕುತ್ತಾರೆ. ಇದರಿಂದ ಬಹಳ ಅನಾಹುತಗಳು ಸಂಭವಿಸಬಹುದು. ಮಟ್ಕಾ ಕುಡಿತದಿಂದ ಆ ನಮ್ಮ ಮೇಲಿನ ನಿಯಂತ್ರಣ ನಮಗೆ ತಪ್ಪುತ್ತದೆ. ನಮ್ಮ ಏಕಾಗ್ರತಾ ಶಕ್ತಿ ಕುಂದುತ್ತಾ ಹೋಗುತ್ತದೆ. ಇದರಿಂದ ನಾವು ನಮ್ಮ ಕೋಪವನ್ನು ತಡೆಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ಕುಡಿತವನ್ನು ಬಿಡಬೇಕು.

ಚೆನ್ನಾಗಿ ನಿದ್ದೆ ಮಾಡಬೇಕು. ತುಂಬಾ ಜನಗಳಿಗೆ ಇದು ಅನುಭವವಾಗಿರುತ್ತದೆ ಸರಿಯಾಗಿ ನಿದ್ದೆ ಬಾರದಿದ್ದರೆ ತಲೆನೋವು ಬರುತ್ತದೆ. ನಮ್ಮ ಮನಸ್ಸು ಅಶಾಂತಿಃಯಿಂದ ಕೂಡಿರುತ್ತದೆ. ಯಾವ ಕೆಲಸದ ಮೇಲೆ ಉತ್ಸಾಹ ಇರುವುದಿಲ್ಲ ಇಂತಹ ಸಂದರ್ಭದಲ್ಲಿ ಕೋಪ ಹೆಚ್ಚಾಗಿ ಬರುತ್ತದೆ. ಆದ್ದರಿಂದ ಚೆನ್ನಾಗಿ ನಿದ್ದೆ ಮಾಡಬೇಕು ಚೆನ್ನಾಗಿ ನಿದ್ದೆ ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸು ಎರಡು ಹಗುರವಾಗಿರುತ್ತದೆ ಮತ್ತು ಅಂದಿನ ಪೂರ್ತಿ ನಾವು ಉತ್ಸಾಹದಿಂದ ಕೂಡಿರುತ್ತೇವೆ.

ಪ್ರತಿದಿನ ವ್ಯಾಯಾಮ ಮಾಡಿರಿ ಮತ್ತು ದೀರ್ಘವಾಗಿ ಉಸಿರಾಡಿ. ಹೌದು ವ್ಯಾಯಾಮ ಮಾಡುವುದರಿಂದ ನಮ್ಮ ದೇಹವು ಹಗುರಾದಂತೆ ಭಾವ ವಾಗುತ್ತದೆ ಮತ್ತು ದೀರ್ಘವಾಗಿ ಉಸಿರಾಡುವುದರಿಂದ ನಮ್ಮ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದರಿಂದ ಕೂಡ ನಮ್ಮ ಕೋಪ ನಿಯಂತ್ರಣದಲ್ಲಿರುತ್ತದೆ.

LEAVE A REPLY

Please enter your comment!
Please enter your name here