ನಿಮ್ಮ ಮನೆಯಲ್ಲಿರುವ ತುಳಸಿ ಗಿಡ ಒಣಗಿ ಹೋಗುತ್ತಿದೆಯೇ? ನಿಮಗೆ ಏನೆಲ್ಲಾ ಸಮಸ್ಯೆ ಶುರು ಆಗುತ್ತೆ ಗೊತ್ತೇ

0
955

ಪ್ರತಿಯೊಬ್ಬರ ಮನೆಯ ಮುಂದೆ ತುಳಸಿ ಗಿಡವನ್ನು ಇಟ್ಟಿರುತ್ತಾರೆ ಮತ್ತು ಅದನ್ನು ಪ್ರತಿನಿತ್ಯ ಪೂಜೆ ಮಾಡುತ್ತಾರೆ. ಪುರಾಣದಲ್ಲಿ ಮತ್ತು ಆಯುರ್ವೇದದಲ್ಲಿ ತುಳಸಿ ಗಿಡಕ್ಕೆ ಬಹಳ ಮಹತ್ವದ ಸ್ಥಾನವನ್ನು ಕೊಟ್ಟಿದ್ದಾರೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿಗಿಡ ಇಲ್ಲದ ಮನೆಯೇ ಇಲ್ಲ ಬಿಡಿ. ಶಾಸ್ತ್ರದಲ್ಲಿ ತುಳಸಿ ಗಿಡವನ್ನು ದೇವರಿಗೆ ಹೋಲಿಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ತುಳಸಿ ಗಿಡವನ್ನು ಭಕ್ತಿಯಿಂದ ಪೂಜಿಸುತ್ತಾರೆ. ಇದೆ ಕಾರಣಕ್ಕೆ ದೇವಸ್ಥಾನಗಳಲ್ಲಿ ಕೂಡ ಹೂವಿನ ಹಾರದ ಜೊತೆ ತುಳಸಿ ಹಾರವನ್ನು ಹಾಕುತ್ತಾರೆ.

ಇದರ ಜೊತೆಜೊತೆಗೆ ತುಳಸಿ ಗಿಡದ ಎಲೆಗಳಿಂದ ಔಷಧಗಳನ್ನು ತಯಾರಿಸುತ್ತಾರೆ ಇದನ್ನು ತಿನ್ನುವುದರಿಂದ ಕೆಮ್ಮು ನೆಗಡಿ ಅಂತಹ ಸಮಸ್ಯೆಗಳು ಬರುವುದಿಲ್ಲ ಇಷ್ಟೆಲ್ಲಾ ಮಹತ್ವವನ್ನು ಹೊಂದಿರುವ ಈ ತುಳಸಿ ಗಿಡ ನಮ್ಮ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಹೌದು ಮನೆಯ ಮುಂದೆ ಇರುವ ತುಳಸಿಗಿಡ ನಮ್ಮ ಜೀವನದ ಆಗು ಹೋಗುಗಳ ಮುನ್ಸೂಚನೆಯನ್ನು ತಿಳಿಸುತ್ತಾ ಇರುತ್ತದೆ. ಕೆಲವು ಬಾರಿ ತುಳಸಿ ಗಿಡದ ಎಲೆಗಳು ಉದುರುವುದು ಗಿಡ ಒಣಗಿ ಹೋಗುವುದು ಬಾಡಿ ಹೋಗುವುದು ಆಗುತ್ತಿರುತ್ತದೆ ಇದು ಅಶುಭದ ಸಂಕೇತ. ತುಳಸಿ ಗಿಡ ಯಾವಾಗಲು ನಕಾರಾತ್ಮಕ ಮತ್ತು ಸಕಾರಾತ್ಮಕ ಸೂಚನೆ ನೀಡುತ್ತಾ ಇರುತ್ತದೆ ಇದರ ಅರ್ಥ ನೆಗಟಿವ್ ಮತ್ತು ಪಾಸಿಟಿವ್ ಎನರ್ಜಿ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ನಮಗೆ ಜಾಗೃತಿ ಮೂಡಿಸುತ್ತದೆ ಎಂದು. ಹೌದು ತುಳಸಿಗಿಡ ಬಾಡಿ ಹೋದರೆ ಅಥವಾ ಎಲೆ ಒಣಗಿ ಹೋದರೆ ನಮ್ಮ ಮನೆಯಲ್ಲಿ ಏನು ಸಮಸ್ಯೆಯಾಗುತ್ತದೆ ಎಂದರ್ಥ.

ತುಳಸಿ ಗಿಡದಲ್ಲಿ ಆಗುವ ಬದಲಾವಣೆಗಳ ಮೂಲಕ ನಾವು ನಮ್ಮ ಮನೆಯ ಪರಿಸ್ಥಿತಿಯನ್ನು ಮುಂಚೆಯೇ ಹರಿಯಬಹುದು. ತುಳಸಿ ಗಿಡ ಒಣಗಿ ಹೋಗುತ್ತಿದ್ದರೆ ಮನೆಯ ಯಜಮಾನನ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಆಗಬಹುದು ಎಂದು ಅರ್ಥ. ತುಳಸಿ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ಅಥವಾ ತನ್ನ ಬಣ್ಣವನ್ನು ಬದಲಾಯಿಸುತ್ತಿದ್ದರೆ ಮನೆಯಲ್ಲಿ ಯಾರಿಗಾದರೊಬ್ಬರಿಗೆ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಅರ್ಥ.

ಇದ್ದಕಿದ್ದಂತೆ ತುಳಸಿ ಗಿಡದ ಎಲೆಗಳು ಉದುರಿ ಹೋಗುತ್ತಿದ್ದರೆ ಮನೆಯಲ್ಲಿ ಯಾರಿಗಾದರೂ ಒಬ್ಬರ ಜೀವಕ್ಕೆ ಆಪಾಯ ಇದೆ ಎಂದು ಅರ್ಥ. ತುಳಸಿ ಗಿಡ ಚೆನ್ನಾಗಿ ಹಚ್ಚ ಹಸುರಾಗಿ ಬೆಳೆಯುತ್ತಿದ್ದರೆ ಅದು ಶುಭ ಸಂಕೇತ. ಮನೆಯಲ್ಲಿ ಇರುವವರಿಗೆ ಆರೋಗ್ಯ ಐಶ್ವರ್ಯ ಸಿರಿ ಸಂಪತ್ತು ಹೆಚ್ಚಾಗುತ್ತದೆ ಎಂದು ಅರ್ಥ. ತುಳಸಿ ಕಟ್ಟೆಯಲ್ಲಿ ಹೊಸದಾಗಿ ಮತ್ತೊಂದು ಗಿಡ ಬೆಳೆಯುತ್ತಿದ್ದರೆ ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಕೆಲಸದ ವಿಚಾರದಲ್ಲಿ ಆದಾಯ ಬರುವ ಸೂಚನೆ ಕೊಡುತ್ತಿರುತ್ತದೆ.

ತುಳಸಿ ಗಿಡ ಎಷ್ಟು ಚೆನ್ನಾಗಿ ಬೆಳೆಯುತ್ತದೆಯೋ ಅಷ್ಟು ನಮ್ಮ ಮನೆಯ ಮತ್ತು ಮನೆಯಲ್ಲಿರುವ ಜನಗಳಲ್ಲಿ ಸ್ಥಿತಿ ಉತ್ತಮವಾಗಿರುತ್ತದೆ. ಆದ್ದರಿಂದ ತುಳಸಿಗಿಡ ಬಾಡದಂತೆ ನೋಡಿಕೊಳ್ಳಬೇಕು. ಪ್ರತಿನಿತ್ಯ ಶ್ರದ್ಧೆ ಭಕ್ತಿಯಿಂದ ತುಳಸಿ ಗಿಡವನ್ನು ಪೂಜೆ ಮಾಡಬೇಕು. ಇದರಿಂದ ಮನೆಯ ವಾತಾವರಣ ಸುಖ ಶಾಂತಿಯಿಂದ ಇರುತ್ತದೆ ಮತ್ತು ಮನೆಯವರ ಮನಃಸ್ಥಿತಿ ಚೆನ್ನಾಗಿರುತ್ತದೆ ಮತ್ತು ಮಾಡುವ ಕೆಲಸದಲ್ಲಿ ಅಭಿವೃದ್ದಿ ಹೊಂದುತ್ತಾರೆ ಎಂಬುದು ಶಾಸ್ತ್ರದಲ್ಲಿ ಉಲ್ಲೇಖ ಇದೆ ಮನೆಗೆ ಯಾವ ಸಮಸ್ಯೆಗಳು ಬರುವುದಿಲ್ಲ.

LEAVE A REPLY

Please enter your comment!
Please enter your name here