ಉರಿ ಉತ ಚರ್ಮ ರೋಗ ಮತ್ತು ಪಿತ್ತದ ಸಮಸ್ಯೆಗಳಿಗೆ ಇದುವೇ ಮನೆ ಮದ್ದು

0
890

ಶ್ರೀಗಂಧದ ಮರವನ್ನು ಎಲ್ಲರೂ ನೋಡಿರುತ್ತೀರಿ ಅದರ ಬಗ್ಗೆ ಕೇಳಿರುತ್ತೀರಾ ಸರ್ಕಾರದ ಪರ್ಮಿಶನ್ ಇಲ್ಲದೇ ಶ್ರೀಗಂಧದ ಮರವನ್ನು ಬೆಳೆಯುವಂತಿಲ್ಲ ಮತ್ತು ಕಡಿಯುವಂತಿಲ್ಲ. ಅಷ್ಟು ಪ್ರಾಮುಖ್ಯತೆಯನ್ನು ಈ ಮರ ಹೊಂದಿದೆ. ಶಾಸ್ತ್ರ ಸಂಪ್ರದಾಯಗಳಲ್ಲೂ ಶ್ರೀ ಗಂಧದ ಮರಕ್ಕೆ ಅತ್ಯುತ್ತಮವಾದ ಸ್ಥಾನವಿದೆ. ಆದ್ದರಿಂದ ದೇವಸ್ಥಾನಗಳಲ್ಲಿ ಮತ್ತು ದೇವರ ಕಾರ್ಯಗಳಲ್ಲಿ ಶ್ರೀಗಂಧವನ್ನು ಉಪಯೋಗಿಸುತ್ತಾರೆ. ಅಷ್ಟು ಶ್ರೇಷ್ಠತೆಯನ್ನು ಈ ಮರ ಹೊಂದಿದೆ. ಅದೇ ರೀತಿ ಈ ಮರದ ಆರೋಗ್ಯದ ವಿಚಾರದಲ್ಲಿ ಬಹಳ ಉಪಕಾರಿಯಾದ ಮರವಾಗಿದೆ. ಶ್ರೀಗಂಧದ ಮರದಿಂದ ಬಹಳಷ್ಟು ಔಷಧಿಗಳನ್ನು ತಯಾರಿ ಮಾಡುತ್ತಾರೆ.

ಶ್ರೀಗಂಧದ ಮರದ ಉಪಯೋಗಗಳನ್ನು ಹೇಳುವುದಾದರೆ. ಬಹು ಮುಖ್ಯವಾಗಿ ಈ ಮರವನ್ನು ಸಾಬೂನು ತಯಾರಿಕೆ ಮತ್ತು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸುತ್ತಾರೆ. ಅಷ್ಟೇ ಅಲ್ಲದೆ ಈ ಮರವನ್ನು ಪೀಠೋಪಕರಣಗಳ ತಯಾರಿಕೆಯಲ್ಲೂ ಬಳಸುತ್ತಾರೆ. ಶ್ರೀಗಂಧದಿಂದ ತಯಾರಿಸಿದ ತೈಲವನ್ನು ಆಯುರ್ವೇದದಲ್ಲಿ ಬಹಳ ಹೆಚ್ಚಾಗಿ ಉಪಯೋಗಿಸುತ್ತಾರೆ. ಮತ್ತು ಈ ತೈಲವನ್ನು ಸೌಂದರ್ಯವರ್ಧಕವಾಗಿ ಕೂಡ ಉಪಯೋಗಿಸುತ್ತಾರೆ. ಈ ತೈಲವನ್ನು ಹಚ್ಚುವುದರಿಂದ ಚರ್ಮದ ಸೌಂದರ್ಯ ಇನ್ನಷ್ಟು ಹೆಚ್ಚುತ್ತದೆ.

ಶ್ರೀಗಂಧದಿಂದ ತಯಾರಿಸಿದ ಎಣ್ಣೆಯನ್ನು ಕ್ರಿಮಿನಾಶಕಗಳನ್ನು ತಯಾರು ಮಾಡಲು ಉಪಯೋಗಿಸುತ್ತಾರೆ. ಎಷ್ಟು ನೀರು ಕುಡಿದರೂ ಬಾಯಾರಿಕೆ ಯಾಗುತ್ತಿದ್ದಾರೆ ಶ್ರೀಗಂಧ ಯುಕ್ತ ನೀರನ್ನು ಕುಡಿಯುವುದರಿಂದ ನಿವಾರಣೆಯಾಗುವುದು.ಕೂದಲು ಉದುರುವ ಸಮಸ್ಯೆ ಇದ್ದರೆ ಶ್ರೀಗಂಧವನ್ನು ಆ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಚರ್ಮದ ಅಲರ್ಜಿ ಆಗಿದ್ದರೆ ಶ್ರೀ ಗಂಧದ ಪುಡಿಯನ್ನು ನಿಂಬೆರಸದೊಂದಿಗೆ ಮಿಶ್ರಣ ಮಾಡಿ ಹಚ್ಚುವುದರಿಂದ ಚರ್ಮದ ಅಲರ್ಜಿ ನಿವಾರಣೆಯಾಗುವುದು.

ಅರಿಶಿಣದ ಕೊಂಬನ್ನು ಚೆನ್ನಾಗಿ ಅರೆದು ಅದನ್ನು ಶ್ರೀಗಂಧದ ಪುಡಿಯೊಂದಿಗೆ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಾಲಿನ ಕೆನೆಯನ್ನು ಹಾಕಿ ನಂತರ ಈ ಮಿಶ್ರಣವನ್ನು ಮುಖಕ್ಕೆ ಲೇಪಿಸುವುದರಿಂದ ಮುಖದ ಮೇಲಿರುವ ಮೊಡವೆಗಳು ದೂರವಾಗುತ್ತವೆ. ನಿಮ್ಮ ಮುಖವು ಆಯಿಲ್ ಸ್ಕಿನ್ ಆಗಿದ್ದರೆ ಶ್ರೀಗಂಧ ಮತ್ತು ಬಜೆಯನ್ನು ಮಜ್ಜಿಗೆಯಲ್ಲಿ ಚೆನ್ನಾಗಿ ತೇಯ್ದು ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ನೀರಿನಿಂದ ತೊಳೆಯುವುದರಿಂದ ನಿಮ್ಮ ಮುಖದ ಜಿಡ್ಡು ಹೊರಟು ಹೋಗುತ್ತದೆ.

ನಿಮಗೆ ಉರಿ ಮೂತ್ರದ ಸಮಸ್ಯೆ ಇದ್ದರೆ ಶ್ರೀಗಂಧದಿಂದ ತಯಾರಿಸಿದ ಕಷಾಯವನ್ನು ಕುಡಿಯುವುದರಿಂದ ನಿಮ್ಮ ಉರಿ ಮೂತ್ರದ ಸಮಸ್ಯೆ ಶಮನವಾಗುತ್ತದೆ. ಕಜ್ಜಿ ಅಥವಾ ತುರಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಶ್ರೀಗಂಧವನ್ನು ಮೊಸರಿನಲ್ಲಿ ಚೆನ್ನಾಗಿ ಅರೆದು ಹಚ್ಚುವುದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ. ಶ್ರೀಗಂಧ ಮಿಶ್ರಿತ ನೀರಿನಿಂದ ಸ್ನಾನ ಮಾಡುವುದರಿಂದ ಯಾವುದೇ ಚರ್ಮ ರೋಗಗಳು ಬರುವುದಿಲ್ಲ ಮತ್ತು ಚರ್ಮದ ಕಾಂತಿ ಇನ್ನಷ್ಟು ಹೆಚ್ಚಾಗುತ್ತದೆ. ಕೆಮ್ಮು ಕಫ ಮತ್ತು ಪಿತ್ತದ ಸಮಸ್ಯೆಯಿಂದ ಬಳಲುತ್ತಿದ್ದರೆ ಶ್ರೀಗಂಧವನ್ನು ಅಂದರೆ ಗ್ರಂಧಗಿ ಅಂಗಡಿಯಲ್ಲಿ ಖರೀದಿ ಮಾಡಿ ಸಿಗುವ ಪುಡಿಯನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ. ಮರೆಯದೇ ಈ ಮಾಹಿತಿ ಶೇರ್ ಮಾಡಿ.

LEAVE A REPLY

Please enter your comment!
Please enter your name here