ಜೀವನ ಬೇಜಾರು ಬಂದಿದ್ಯ ನಿಮಗೆ ಕುಶಿ ಸ್ವಲ್ಪವು ಇಲ್ಲವೇ ಒಮ್ಮೆ ಓದಿ

0
1003

ಇತ್ತೀಚಿನ ಆಧುನಿಕ ಜಗತ್ತಿನಲ್ಲಿ ಜನರು ತಮ್ಮ ಒತ್ತಡದ ಜೀವನದಿಂದ ಬೇಸತ್ತು ಹೋಗಿದ್ದಾರೆ. ಮತ್ತು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ ಆಗೋ ಖಿನ್ನತೆಯಿಂದ ಬಳಲುತ್ತಿದ್ದಾರೆ. ಖಿನ್ನತೆಗೆ ಬಹಳ ಮುಖ್ಯವಾಗಿ ಆರ್ಥಿಕ ಸಮಸ್ಯೆಗಳು ಬಡತನ ಕೆಲಸದ ಒತ್ತಡ ಮತ್ತು ಒತ್ತಡದ ಜೀವನ ಹೀಗೆ ಹಲವಾರು ಕಾರಣಗಳು ಇವೆ. ಕೆಲವರನ್ನು ಅಲ್ಪವಾಗಿ ಕಾಣುವುದರಿಂದ ಕೂಡ ಅವರು ಮಾನಸಿಕವಾಗಿ ಕುಗ್ಗಿ ಹೋಗಬಹುದು ಅಥವಾ ಖಿನ್ನತೆಗೆ ಒಳಗಾಗಬಹುದು. ಇದರಿಂದ ಅವರು ಮಾನಸಿಕವಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು.

ಮಾನಸಿಕವಾಗಿ ಕುಗ್ಗಿ ಹೋಗಿರುವ ವರ ಲಕ್ಷಣಗಳ ಬಗ್ಗೆ ತಿಳಿಯುವುದಾದರೆ. ಯಾವಾಗಲೂ ಅವರು ಹತಾಶೆಯ ಭಾವದಿಂದ ಕೂಡಿರುತ್ತಾರೆ. ಯಾವುದೇ ಖುಷಿಯ ವಿಚಾರ ಗಳಲ್ಲಿ ಅವರಿಗೆ ಆಸಕ್ತಿ ಇರುವುದಿಲ್ಲ. ಯಾವಾಗಲೂ ಏನಾದರೂ ಒಂದು ಯೋಚನೆ ತಾನು ನಿಷ್ಪ್ರಯೋಜಕ ಎಂಬ ಭಾವನೆಗೆ ಒಳಗಾಗಿರುತ್ತಾರೆ.

ತನ್ನ ಜೀವನ ನರಕ ಎಂದು ಭಾವಿಸಿರುತ್ತಾರೆ. ಊಟ ತಿಂಡಿ ಮಾಡುವುದರಲ್ಲಿ ಆಸಕ್ತಿಯನ್ನು ಹೊಂದಿರುವುದಿಲ್ಲ ಯಾವಾಗಲೂ ಮಲಗಿರುವುದು ಸೋಂಬೇರಿತನ ಆಯಾಸ ನಿಶ್ಯಕ್ತಿ ಯಾವ ಕೆಲಸದಲ್ಲೂ ಆಸಕ್ತಿ ಇಲ್ಲದಿರುವುದು ಮತ್ತು ಯಾವಾಗಲೂ ಏನೋ ಕಳೆದುಕೊಂಡಂತೆ ಕುಳಿತಿರುತ್ತಾರೆ. ಕೆಲವೊಮ್ಮೆ ಅವರು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆಯೂ ಯೋಚಿಸುತ್ತಿರುತ್ತಾರೆ

ಈ ರೀತಿಯ ಗುಣಗಳನ್ನು ಹೊಂದಿದ್ದರೆ ಅವರು ಬಹಳ ಬೇಗ ಮಾನಸಿಕವಾಗಿ ಅಸ್ವಸಥ ರಾಗುತ್ತಾರೆ ಮತ್ತು ಅವರ ಆರೋಗ್ಯ ಕ್ಷೀಣಿಸುತ್ತ ಹೋಗುತ್ತದೆ. ಬಹಳ ಬೇಗ ರೋಗರುಜಿನಗಳು ಅವರ ದೇಹವನ್ನು ಅಂಟುತ್ತದೆ. ಆದ್ದರಿಂದ ಖಿನ್ನತೆಗೆ ಒಳಗಾಗದಂತೆ ಎಲ್ಲರೂ ಹೆಚ್ಚರವಾಗಿರಬೇಕು. ಖಿನ್ನತೆಯನ್ನು ತಡೆಗಟ್ಟಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.

ಮೊದಲಿಗೆ ಖಿನ್ನತೆಗೆ ಒಳಗಾಗದಿರಲು ನಾವು ಯಾವಾಗಲೂ ಹೆಚ್ಚು ಹುಚ್ಚು ಕತೆಯಿಂದ ಇರಬೇಕು ನಾವು ಮಾಡುವ ಕೆಲಸದಲ್ಲಿ ಆಸಕ್ತಿಯನ್ನು ಹೊಂದಿರಬೇಕು. ಸ್ನೇಹಿತರ ಜೊತೆ ಹೆಚ್ಚು ಕಾಲ ಇರುವುದು ಮನೆಯವರ ಮತ್ತು ಕುಟುಂಬದವರ ಜೊತೆ ಹೆಚ್ಚು ಮಾತನಾಡುವುದು ಕಾಲ ಕಳೆಯುವುದು ಮಾಡಬೇಕು. ಪ್ರತಿನಿತ್ಯ ಬೆಳಗ್ಗೆ ಬೇಗ ಎದ್ದು ಯೋಗ ವ್ಯಾಯಾಮ ಮಾಡಬೇಕು. ಇದರಿಂದ ನಮ್ಮ ದೇಹ ಮತ್ತು ಮನಸ್ಸು ಎರಡೂ ಹಗುರಾಗುತ್ತದೆ ಹಾಗೂ ಇಡೀ ದಿನ ನಾವು ಉಲ್ಲಾಸಭರಿತವಾಗಿರುತ್ತದೆ.

ಯಾವುದೇ ಸಮಸ್ಯೆಗಳು ಬಂದರು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಹೊಂದಬೇಕು. ಹೆಚ್ಚು ಯೋಚನೆ ಮಾಡುತ್ತಾ ಕೂರಬಾರದು. ಯಾವುದೇ ತೊಂದರೆಗಳು ಬಂದರೆ ಬೇಗ ಉದ್ವೇಗಕ್ಕೆ ಒಳಗಾಗಬಾರದು ನಿಧಾನವಾಗಿ ತಾಳ್ಮೆಯಿಂದ ಯೋಚನೆ ಮಾಡಿ ಪರಿಹಾರವನ್ನು ಕಂಡುಕೊಳ್ಳಬೇಕು. ನೀವು ಇಷ್ಟಪಡುವ ಮತ್ತು ಹೆಚ್ಚು ಆಸಕ್ತಿ ಹೊಂದಿರುವ ಕೆಲಸಗಳನ್ನು ಹೆಚ್ಚಾಗಿ ಮಾಡಿರಿ. ಯಾವುದೇ ಕೆಲಸ ಕಾರ್ಯಗಳನ್ನು ಬಲವಂತವಾಗಿ ಮಾಡಬೇಡಿ. ನೀವು ಹೆಚ್ಚು ಇಷ್ಟಪಡುವ ವ್ಯಕ್ತಿಗಳ ಜೊತೆ ಹೆಚ್ಚು ಕಾಲ ಕಳೆಯಿರಿ ಇದರಿಂದ ನಿಮ್ಮ ಮನಸ್ಸು ಯಾವಾಗಲೂ ಸಂತೋಷವಾಗಿರುತ್ತದೆ. ಪುಸ್ತಕಗಳನ್ನು ಓದುವುದು ಒಳ್ಳೆಯ ವಿಚಾರಗಳ ಬಗ್ಗೆ ಹೇಳುವುದು ಹೀಗೆ ಮಾಡುವುದರಿಂದ ನಮ್ಮ ಜ್ಞಾನವು ಹೆಚ್ಚುತ್ತದೆ ಮತ್ತು ಯಾವುದೇ ಬೇಡದಿರುವ ಯೋಜನೆಗಳಿಗೆ ನಮ್ಮ ಮನಸ್ಸು ಒಳಗಾಗುವುದಿಲ್ಲ.

LEAVE A REPLY

Please enter your comment!
Please enter your name here