ದೇವರಿಗೆ ಈ ರೀತಿ ಆರತಿ ಮಾಡಿದ್ರೆ ದೇವರ ಕೃಪೆ ನಿಮಗೆ ಸಿಗುತ್ತೆ

0
800

ದೇವರಿಗೆ ಪೂಜೆ ಸಲ್ಲಿಸಿದ ನಂತರ ಆರತಿ ಮಾಡುತ್ತೇವೆ ಅದು ಮನೆಯಲ್ಲಿ ದೇವರ ಪೂಜೆ ಮಾಡುವಾಗ ಆಗಲಿ ದೇವಸ್ಥಾನಗಳಲ್ಲಿ ಮಾಡುವಾಗ ಆಗಲಿ ದೇವರಿಗೆ ಆರತಿ ಮಾಡಲೇಬೇಕು ಅದು ನಮ್ಮ ಹಿಂದಿನ ಸಂಪ್ರದಾಯದಿಂದ ಬಂದ ಆಚಾರ ಪದ್ದತಿ ಆಗಿದೆ ದೇವರಿಗೆ ಆರತಿ ಮಾಡಿದರೆ ದೇವರ ಪೂಜೆ ಪರಿಪೂರ್ಣ ಆಗುವುದು ಎಂಬುದು ನಂಬಿಕೆ ಆದರೆ ಈ ಆರತಿ ಮಾಡುವಾಗ ನಾವು ನಿಯಮಗಳನ್ನು ಗಾಳಿಗೆ ತೂರಿದ್ದೇವೆ ಎಂಬುದು ಸತ್ಯ ಇನ್ನು ಕೆಲವು ಜನಕ್ಕೆ ಹೇಗೆ ಆರತಿ ಮಾಡಬೇಕು ಎಂಬುದು ಸಹ ತಿಳಿದಿಲ್ಲ ಎಲ್ಲದಕ್ಕೂ ರೀತಿ ನೀತಿ ನಿಯಮಗಳು ಇರುತ್ತೆ ಅವುಗಳನ್ನು ಭಕ್ತಿಯಿಂದ ನಾವು ಪಾಲಿಸಿದರೆ ಮಾತ್ರ ದೇವರ ಕೃಪೆ ನಮಗೆ ಸಿಗುವುದು ಕಾಟಾಚಾರಕ್ಕೆ ಮಾಡುವ ಯಾವ ಪೂಜೆಯು ಭಗವಂತ ಮೆಚ್ಚುವುದಿಲ್ಲ.

ಆರತಿ ಎಂಬ ಕನ್ನಡ ಪದ ಬಂದಿರುವುದು ಆರತ್ರಿಕ ಎಂಬ ಸಂಸ್ಕೃತ ಶಬ್ದದಿಂದ. ದೇವರಿಗೆ ಆರತಿ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಜೊತೆಗೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಶಾಂತಿ ಎಂಬುದು ನೆಲೆಸುತ್ತದೆ ಆರತಿ ಮಾಡುವಾಗ ಜ್ಯೋತಿಯನ್ನು ಹಚ್ಚಿಕೊಂಡು ದೇವರಿಗೆ ಆರತಿ ಮಾಡುತ್ತೇವೆ ಅಂದರೆ ಸದಾ ಆ ದೇವರು ಬೆಳಕು ನೀಡಲಿ ಯಾವುದೇ ಕೆಟ್ಟ ಶಕ್ತಿಗಳು ಇದ್ದರು ಸಹ ಅದು ಜ್ಯೋತಿಯನ್ನು ನೋಡಿ ಹೊರಹೋಗುತ್ತದೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ದೇವರಿಗೆ ಆರತಿ ಮಾಡುತ್ತೇವೆ. ಮನೆಯಲ್ಲಿ ಇರುವ ದುಷ್ಟ ಶಕ್ತಿಗಳನ್ನು ತೊಲಗಿಸಿ ಮನೆಗೆ ಭದ್ರತೆ ನೀಡುತ್ತದೆ.

ಆದರೆ ದೇವರಿಗೆ ಆರತಿ ಮಾಡುವಾಗ ಅದರದೇ ಆದ ಕೆಲವು ನಿಯಮಗಳು ಇವೆ ಅವುಗಳನ್ನು ಪಾಲಿಸಬೇಕು ಅವುಗಳು ಏನು ಎಂದರೆ. ದೀಪದಲ್ಲಿ ಆರತಿ ಬೆಳಗಲು ಇಚ್ಛಿಸುವರು ಸಾಮಾನ್ಯವಾಗಿ ತುಪ್ಪದ ದೀಪ ಅಥವಾ ಎಣ್ಣೆಯ ದೀಪವನ್ನು ಬಳಸುತ್ತಾರೆ ಆದರೆ ಸಾಮಾನ್ಯವಾಗಿ ಕರ್ಪೂರದಿಂದ ಆರತಿ ಬೆಳಗುವ ಪದ್ಧತಿ ಹೆಚ್ಚು ಇದರ ಜೊತೆಯಲ್ಲಿ ಭಜನೆ ಮಂತ್ರಘೋಷ ಕೂಡ ಇರಬೇಕು ಇದರ ಜೊತೆಗೆ ಘಂಟನಾದ ಸದ್ದು ಮಾಡಲೇ ಬೇಕು.

ಆರತಿ ಮಾಡುವ ಸಮಯದಲ್ಲಿ ಹೂವನ್ನು ಭೂಮಿಯ ಸೂಚಕವಾಗಿ ಹಾಗು ನೀರು ತುಪ್ಪದ ದೀಪವನ್ನು ಆಕಾಶದ ಸೂಚಕವಾಗಿ ಶಂಖ ನಾದವನ್ನು ಮನಸ್ಥಿತಿಯ ಸೂಚಕವಾಗಿ ಭಜನೆ ಹಾಗು ಮಂತ್ರಘೋಷಗಳ ನಡುವೆ ಆರತಿಯನ್ನ ಮಾಡಬೇಕು. ಸಾಂಪ್ರದಾಯಕವಾಗಿ ದೇವಸ್ಥಾನಗಳಲ್ಲಿ ರಾತ್ರಿಯೊತ್ತು ಪೂಜೆ ಮುಗಿಸುವ ಮುನ್ನ ಹಾಗು ಬೆಳಗ್ಗೆ ಆರಂಭದಂದು ಮಹಾಮಂಗಳಾರತಿ ಎಂದು ಮಾಡುತ್ತಾರೆ. ಆರತಿ ಮಾಡುವಾಗ ಯಾವಾಗಲೂ ಬಲಗಡೆಯಿಂದ ಇಂದ ಮಾಡಬೇಕು ಯಾವುದೇ ಕಾರಣಕ್ಕೂ ಎಡ ಕಡೆಯಿಂದ ಮಾಡಬಾರದು.

ದೇವರಿಗೆ ಆರತಿ ಮಾಡುವ ಸಂದರ್ಭದಲ್ಲಿ ಮಂತ್ರ ಘೋಷಣೆ ಘಂಟೆ ನಾದ ಮಾತ್ರ ಇರಬೇಕೆ ವಿನಹ ಜನರ ಮಾತು ಅನ್ಯ ಯೋಚನೆಗಳು ಮೊಬೈಲ್ ಬಳಕೆ ಮಾಡುವುದು ಸೂಕ್ತ ಅಲ್ಲವೇ ಅಲ್ಲ. ಆರತಿ ಮಾಡುವಾಗ ಭಕ್ತಿಯಿಂದ ದೇವರನ್ನು ನೆನೆಯಬೇಕು ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಇಟ್ಟುಕೊಂಡು ಆರತಿ ಮಾಡಬಾರದು. ಆರತಿ ಮಾಡಿದ ನಂತರ ಮೊದಲು ದೇವರ ಕಡೆ ಒಮ್ಮೆ ತೂರಿಸಿ ನಂತರ ಅಷ್ಟೇ ಮನೆ ಹಿರಿಯರಿಗೆ ಮೊದಲು ನೀಡಬೇಕು ನಂತರ ಅಷ್ಟೇ ಬೇರೆ ಅವರು ತೆಗೆದುಕೊಳ್ಳುವುದು ಪದ್ಧತಿ. ಹಾಗಾಗಿ ದೇವರಿಗೆ ಆರತಿ ಮಾಡುವಾಗ ಈ ಎಲ್ಲ ನಿಯಮಗಳನ್ನು ಪಾಲಿಸಿದರೆ ದೇವರ ಕೃಪೆ ಸಿಗುತ್ತದೆ.

LEAVE A REPLY

Please enter your comment!
Please enter your name here