ವೈಷ್ಣವ ದೇವಸ್ಥಾನದ ಮುಂಭಾಗದಲ್ಲಿ ಆಮೆಯ ಮೂರ್ತಿ ಬಗ್ಗೆ ಗೂತ್ತಾದ್ರೆ ಆಶ್ಚರ್ಯ ಪಡ್ತೀರ

0
1231

ನಮ್ಮ ಭಾರತದಲ್ಲಿ ಅನೇಕ ರೀತಿಯ ದೇಗುಲಗಳು ಇದೆ ಒಂದೊಂದು ದೇವಾಲಯದಲ್ಲಿ ವಿಶೇಷ ರೀತಿಯ ಆಚರಣೆ ಮತ್ತು ಸಂಪ್ರದಾಯಕ್ಕೆ ತಕ್ಕಂತೆ ಪೂಜೆ ಪುನಸ್ಕಾರ ನೋಡಿರುತ್ತೇವೆ. ನಾವು ನಿಮಗೆ ಇಂದು ಹೇಳಲು ಹೊರಟಿರುವುದು ದೇಗುಲದ ಮುಂದೆ ಇರುವ ಆಮೆ ಬಗ್ಗೆ. ನಾವು ಇದನ್ನು ಕಂಡರೂ ಇದರ ಬಗ್ಗೆ ವಿಶೇಷ ನಮಗೆ ತಿಳಿದಿಲ್ಲ ನಾವು ದೇಗುಲದ ಮುಂದೆ ಇರುವ ಆಮೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ ಒಮ್ಮೆ ಓದಿ ಶೇರ್ ಮಾಡಿ ಎಲ್ಲರಿಗು ಸಹಾಯ ಆಗಲಿ.

ನೀವು ಸಾಮಾನ್ಯವಾಗಿ ವೈಷ್ಣವ ಅಂದರೆ ವಿಷ್ಣು ವೆಂಕಟೇಶ್ವರ ದೇವಸ್ಥಾನಕ್ಕೆ ಹೋದಾಗ ನೋಡಿರಬಹುದು ಅಲ್ಲಿನ ದೇವಸ್ಥಾನದ ಹೊರಗಡೆ ಆಮೆಯ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿ ಅದಕ್ಕೆ ಪೂಜೆ ಸಲ್ಲಿಸಿರುತ್ತಾರೆ ನಾವು ಸಹ ಅದಕ್ಕೆ ಕೈ ಮುಗಿದು ನಮಸ್ಕರಿಸುತ್ತೇವೆ. ಆದರೆ ವೈಷ್ಣವ ದೇವಸ್ಥಾನದ ಮುಂದೆ ಆಮೆಯ ಪ್ರತಿಮೆಯನ್ನು ಯಾಕೆ ಪ್ರತಿಷ್ಠಾಪನೆ ಮಾಡಿರುತ್ತಾರೆ ಎಂದು ಗೊತ್ತೇ ತಿಳಿದುಕೊಳ್ಳೋಣ ಬನ್ನಿ.

ಬ್ರಹ್ಮದೇವ ಸೃಷ್ಟಿಕರ್ತನಾದರೆ ವಿಷ್ಣು ಸ್ಥಿತಿ ಸ್ಥಾಪಕ ಶಿವ ಲಯಕರ್ತ ತ್ರಿಮೂರ್ತಿಗಳಲ್ಲಿ ಸ್ಥಿತಿ ಸ್ಥಾಪಕತ್ವನಾದ ಶ್ರೀಮನ್ ನಾರಾಯಣ ದುಷ್ಟರನ್ನು ಸಂಹರಿಸಲು ಹಾಗೂ ಶಿಷ್ಟರನ್ನು ರಕ್ಷಿಸಲು ಈ ಭೂಮಿಯ ಮೇಲೆ ಹತ್ತು ಅವತಾರಗಳನ್ನು ಎತ್ತಿದ್ದನು ಈ ಹತ್ತು ಅವತಾರಗಳಲ್ಲಿ ಒಂದಾದ ಕೂರ್ಮವತಾರ. ಕೂರ್ಮ ಅರ್ಥತ್ ಆಮೆಯ ಅವತಾರವನ್ನು ವಿಷ್ಣು ಎತ್ತಿದ್ದು ಲೋಕ ಕಲ್ಯಾಣಕ್ಕಾಗಿ.

ಕಲ್ಪವೃಕ್ಷ ಕಾಮದೇನು ಐರಾವತ ಅಮೃತವೇ ಮೊದಲಾದ ಅತ್ಯಮೂಲ್ಯವಾದವುಗಳನ್ನು ಪಡೆಯಲು ಮಂದರ ಪರ್ವತವನ್ನು ಕಡೆಗೋಲು ಮಾಡಿ ವಾಸುಕಿಯೆಂಬ ಸರ್ಪವನ್ನು ಹಗ್ಗವನ್ನಾಗಿ ಮಾಡಿಕೊಂಡು ಸಮುದ್ರ ಮಂಥನ ಮಾಡುತ್ತಿದ್ದ ಕಾಲದಲ್ಲಿ ಮಂದರ ಪರ್ವತವು ಸಮುದ್ರದಲ್ಲಿ ಮುಳುಗಡೆ ಆಗದಂತೆ ತಡೆಯಲು ವಿಷ್ಣು ಎತ್ತಿದ ಅವತಾರ ಇದು.

ಹಾಗಾಗಿ ವಿಷ್ಣು ಭಗವಂತನ ದಶಾವತಾರಗಳಲ್ಲಿ ಆಮೆಯು ಸಹ ಒಂದು ಅದನ್ನು ಕೂರ್ಮಾವತಾರ ಎಂದು ಹೇಳುತ್ತಾರೆ. ಸಮುದ್ರ ಮಂಥನ ಕಾಲದಲ್ಲಿ ವಿಷ್ಣು ಆಮೆಯ ರೂಪ ತೊಟ್ಟು ಭೂ ಮಾತೆಯನ್ನು ಹೊತ್ತುಕೊಂಡು ದೇವತೆಗಳಿಗೂ ಹಾಗೂ ಮಾನವನೊಳಗೊಂಡಂತೆ ಇರುವ 84 ಕೋಟಿ ಜೀವರಾಶಿಗಳ ಉಪಕಾರ ಮಾಡಿರುವುದರಿಂದ ಮೊದಲು ಆಮೆಯ ರೂಪವಿರುವ ವಿಷ್ಣುವಿನ ದರ್ಶನ ಮಾಡಿಕೊಂಡು ಆಮೇಲೆ ಗರ್ಭಗುಡಿಯಲ್ಲಿರುವ ದೇವರ ದರ್ಶನ ಮಾಡಬೇಕು ಅದಕ್ಕಾಗಿಯೇ ಆಮೆಯ ಮೂರ್ತಿಗಳನ್ನು ವಿಷ್ಣು ದೇವಸ್ಥಾನದ ಮುಂಬಾಗದಲ್ಲಿ ಪ್ರತಿಷ್ಠಾಪನೆ ಮಾಡಿರುತ್ತಾರೆ.

ಹಾಗಾಗಿ ವಿಷ್ಣುವಿನ ದೇವಸ್ಥಾನದ ಒಳಗೆ ಹೋಗುವ ಮೊದಲು ಆ ಆಮೆಯ ಪ್ರತಿಮೆಗೆ ನಮಸ್ಕರಿಸಿ ಹೋದರೆ ನಾವು ಅಂದು ಕೊಂಡಿದ್ದೆಲ್ಲ ನಮ್ಮ ಕಷ್ಟಗಳೆಲ್ಲವನ್ನು ಆ ಮಹಾವಿಷ್ಣು ಪರಿಹಾರ ಮಾಡುತ್ತಾನೆ ಎಂಬ ನಂಬಿಕೆ ಇದೆ ಅದಕ್ಕಾಗಿ ಆಮೆಗೆ ನಮಸ್ಕರಿಸಿ ಪೂಜಿಸಿ ಒಳ್ಳೆದಾಗುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ಪ್ರಕಟ ವಾಗಿರುವ ಎಲ್ಲ ಚಿತ್ರಗಳಿಗೂ ಮತ್ತು ಬರಹಗಳಿಗೂ ಕಾಪಿ ರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ

LEAVE A REPLY

Please enter your comment!
Please enter your name here