ಈ ನಿಯಮ ಪಾಲಿಸಿದರೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆ ನಿಮಗೆ ಬೇಗ ಸಿಗಲಿದೆ.

0
1090

ಶ್ರೀ ಮಂಜುನಾಥ ಸ್ವಾಮಿ ಎಂದರೆ ಸಾಕು ನಮ್ಮ ಮನಸ್ಸಿಗೆ ಬರುವುದು ಧರ್ಮಸ್ಥಳ ಈ ಕ್ಷೇತ್ರದಲ್ಲಿ ಸಾಕ್ಷಾತ್ ಮಂಜುನಾಥ ಸ್ವಾಮಿಯೇ ನೆಲೆ ನಿಂತಿದ್ದಾನೆ ಎಂಬುದು ಎಲ್ಲರ ನಂಬಿಕೆ ಹಾಗಾಗಿ ನಿತ್ಯ ಸಾವಿರಾರು ಮಂದಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಾರೆ. ನೇತ್ರಾವತಿ ನದಿಯಲ್ಲಿ ಮಿಂದು ಮಂಜುನಾಥನ ದರ್ಶನ ಪಡೆದು ತಮ್ಮ ಪಾಪ ಕರ್ಮಗಳನ್ನು ಕಳೆದುಕೊಳ್ಳುತ್ತಾರೆ ಎಷ್ಟೇ ಕಷ್ಟ ಆದರೂ ಸಹ ಮಂಜುನಾಥನ ದರ್ಶನ ಮಾಡಿ ಅವರ ಪ್ರಸಾದ ಸೇವಿಸಿ ಹೋದರೆ ಜೀವನ ಪಾವನವಾಯಿತು ಎಂದು ಅಂದು ಕೊಳ್ಳುತ್ತಾರೆ. ಎಲ್ಲರಿಗು ದೇವರ ಮೇಲೆ ಭಕ್ತಿ ಎಂಬುದು ಇದ್ದೆ ಇರುತ್ತದೆ ಆದರೆ ಕೆಲವರಿಗೆ ತಮ್ಮ ಮನಸಲ್ಲಿನ ಕೋರಿಕೆ ಎಷ್ಟು ಬಾರಿ ಹೇಳಿಕೊಂಡರು ಅದಕ್ಕೆ ಪರಿಹಾರ ಎಂಬುದು ಸಿಗುವುದೇ ಇಲ್ಲ ಇದಕ್ಕೆ ಕಾರಣ ನಾವು ಮಾಡುವ ಕೆಲವು ಸಣ್ಣ ಸಣ್ಣ ತಪ್ಪುಗಳು.

ದೇವರ ಅನುಗ್ರಹ ಸಿಗಬೇಕು ಅಂದ್ರೆ ಕೆಲವು ರೀತಿ ನೀತಿ ನಿಯಮಗಳು ಇದೆ ಅದನ್ನು ಪಾಲಿಸಿದರೆ ಮಾತ್ರ ನಿಮಗೆ ದೇವರ ಅನುಗ್ರಹ ಬೇಗನೆ ದೊರೆಯುತ್ತದೆ. ಹಾಗೆಯೇ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ನಮಗೆ ಸಿಗಬೇಕು ಎಂದರೆ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಅವುಗಳು ಏನು ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಅಷ್ಟೇ ಅಲ್ಲದೆ ಯಾವುದೇ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು ಶುಭ್ರವಾದ ಉಡುಪುಗಳನ್ನು ಧರಿಸಬೇಕು ಹಾಗೂ ಹೆಂಗಸರು ಸೀರೆ ಮತ್ತು ಗಂಡಸರು ಪಂಚೆ ಧರಿಸಬೇಕು ಯಾವುದೇ ಕಾರಣಕ್ಕೂ ಅಸಭ್ಯವಾದ ಉಡುಪುಗಳನ್ನು ಧರಿಸಿಕೊಂಡು ಹೋಗಬಾರದು. ಹಾಗೆಯೇ ಪುಣ್ಯಕ್ಷೇತ್ರಗಳಿಗೆ ಹೋಗುವಾಗ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು ಏಕೆಂದರೆ ಕಪ್ಪು ಬಣ್ಣ ಕೆಟ್ಟ ಶಕ್ತಿಗಳನ್ನು ಆಕರ್ಷಿಸುತ್ತದೆ ಕಪ್ಪು ನಕಾರಾತ್ಮಕ ಶಕ್ತಿಯನ್ನು ಬಲು ಬೇಗನೆ ಸೆಳೆಯುತ್ತದೆ.

ದರ್ಶನ ಮಾಡುವ ಪುಣ್ಯಕ್ಷೇತ್ರಗಳ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ನಾವು ವಾಸ್ತವ್ಯ ಹೂಡುವ ಸ್ಥಳ ವಾಗಲಿ ಅಥವಾ ಪುಣ್ಯ ಕ್ಷೇತ್ರಕ್ಕೆ ಸಂಚರಿಸುವ ದಾರಿಯಲ್ಲಿ ಆಗಲಿ ಯಾವುದೇ ಕಾರಣಕ್ಕೂ ಗಲೀಜು ಮಾಡಬಾರದು. ನಾವು ಮಂಜುನಾಥನ ಪುಣ್ಯಕ್ಷೇತ್ರಕ್ಕೆ ಹೋಗುವಾಗ ಕ್ಷೇತ್ರದಲ್ಲಿ ಇದ್ದಾಗ ನಾವು ಅಂದುಕೊಂಡ ಕೆಲಸ ಯಾವುದೇ ಅಡಚಣೆಗಳಿಲ್ಲದೆ ಪೂರ್ಣಗೊಳ್ಳಲು ಶಿವ ಪಂಚಾಕ್ಷರಿ ಮಂತ್ರ ಪಠಿಸುತ್ತಾ ಇರಬೇಕು.

ಪುಣ್ಯಕ್ಷೇತ್ರಕ್ಕೆ ಹೋಗುವಾಗ ಪುಣ್ಯಕ್ಷೇತ್ರಕದಲ್ಲಿ ಧೂಮಪಾನ ಮದ್ಯಪಾನಗಳಿಂದ ದೂರವಿರಬೇಕು ಮಾಂಸಾಹಾರ ಸೇವನೆ ನಿಷೇಧ ಹಾಗೂ ಊಟ ತಿಂಡಿಗಳನ್ನು ಇನ್ನುವಾಗ ಆದಷ್ಟು ದರ್ಶನದ ಹಿಂದಿನ ದಿನ ಮತ್ತು ಆ ಸಮಯದಲ್ಲಿ ಈರುಳ್ಳಿ ಬೆಳುಳ್ಳಿ ಆಹಾರ ಸೇವನೆ ಯೋಗ್ಯ ಅಲ್ಲ. ಪುಣ್ಯಕ್ಷೇತ್ರಗಳಲ್ಲಿ ದೇವರ ದರ್ಶನ ಪಡೆಯುವಾಗ ಯಾವುದೇ ಕಾರಣಕ್ಕೂ ಕೆಟ್ಟ ಕೆಲಸಗಳನ್ನು ಮಾಡಬಾರದು ಜೊತೆಗೆ ಕೆಟ್ಟ ಯೋಚನೆಗಳು ಕೂಡ ಬರಬಾರದು.

ದೇವಸ್ಥಾನದ ಸಾಲಿನಲ್ಲಿ ನಿಂತಾಗ ನಮ್ಮ ಎಷ್ಟೋ ಜನರು ಒಂದು ಕ್ಷಣವೂ ಸುಮ್ಮನೆ ಇಲ್ಲದೆ ಕೆಲ್ಸಕ್ಕೆ ಬಾರದ ಮಾತುಗಳನ್ನು ಆಡುವುದು ಎಲ್ಲರಿಗು ಗೊತ್ತು. ಹೀಗೆ ಮಾಡುವುದು ಸಹ ತಪ್ಪು ದೇವರ ದರ್ಶನ ಪಡೆಯುವ ಮುನ್ನ ಸರದಿ ಸಾಲಿನಲ್ಲಿ ನಿಂತಾಗ ನೀವು ಮಂಜುನಾಥ ಸ್ವಾಮಿಯ ಮಹಾ ಮಂತ್ರ ಪಾರಾಯಣ ಮಾಡಿದ್ರೆ ನಿಮ್ಮ ಇಷ್ಟಾರ್ಥಗಳು ಬೇಗನೆ ಫಲಿಸುತ್ತದೆ. ಪುಣ್ಯಕ್ಷೇತ್ರಗಳಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಎಂದು ಬರೆದು ಹಾಕಿರುತ್ತಾರೆ ಅವುಗಳನ್ನು ದಯವಿಟ್ಟು ಪಾಲಿಸಿ. ನಾವು ಹೇಳಿದ ಮಾತುಗಳನ್ನು ತಪ್ಪದೇ ಪಾಲಿಸಿ ಮಂಜುನಾಥ ಸ್ವಾಮಿಯು ನಿಮ್ಮ ಕೋರಿಕೆ ಬೇಗನೆ ಈಡೇರಿಸುತ್ತಾರೇ ನಿಮ್ಮ ಜೀವನ ಪಾವನವಾಗುತ್ತದೆ. ಈ ಮಾಹಿತಿ ತಪ್ಪದೇ ಶೇರ್ ಮಾಡಿ ಎಲ್ಲ ಸ್ನೇಹಿತರಿಗೂ ತಿಳಿಸಿ ಖಂಡಿತ ನಿಮಗೆ ಶುಭ ಆಗಲಿದೆ.

LEAVE A REPLY

Please enter your comment!
Please enter your name here