ಮಕ್ಕಳು ಇಲ್ಲದವರು ಲಕ್ಷ್ಮೀಜನಾರ್ಧನಸ್ವಾಮಿ ದೇವಸ್ಥಾನಕ್ಕೆ ಹೋಗಿ ಬನ್ನಿ

0
960

ಶ್ರೀ ಲಕ್ಷ್ಮಿ ಜನಾರ್ದನಸ್ವಾಮಿ ದೇವಾಲಯವು ಮಂಡ್ಯ ಜಿಲ್ಲೆಯ ಪೇಟೆ ಬೀದಿಯಲ್ಲಿದೆ. ಸುಮಾರು ಎರಡು ಎಕರೆಗಳ ಜಮೀನಿನಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಗಂಗರ ಲಾಂಛನವನ್ನು ಹೊಂದಿದೆ. ರಾಜಗೋಪುರ ವಿಮಾನಗೋಪುರ ಗರ್ಭಗೃಹ ಶುಕನಾಸಿ ನವರಂಗಗಳನ್ನು ಹೊಂದಿರುವ ಲಕ್ಷ್ಮಿಜನಾರ್ದನಸ್ವಾಮಿ ದೇವಾಲಯವು ಒಂದು ಸುಂದರ ತಾಣವಾಗಿದೆ. ಇಲ್ಲಿರುವ ಲಕ್ಷ್ಮಿ ಜನಾರ್ಧನ ಸ್ವಾಮಿಯು ಅತ್ಯಂತ ಶಕ್ತಿಶಾಲಿ ಆಗಿದ್ದು ಕಷ್ಟ ಎಂದು ಬೇಡಿ ಬಂದ ಜನಕ್ಕೆ ಸ್ಪಂದನೆ ನೀಡುತ್ತಾ ಇದ್ದಾರೆ. ಇಲ್ಲಿನ ದೇಗುಲಕ್ಕೆ ಭೇಟಿ ನೀಡಿದ ಭಕ್ತರಿಗೆ ವರದಾನ ಸಿಗುವುದು ನಿಶ್ಚಿತ ಆದರೆ ನಿಮ್ಮ ಭಕ್ತಿ ಮೇಲೆ ಎಲ್ಲವು ಅವಲಂಬಿತವಾಗಿದೆ.

ಬೆಂಗಳೂರು ನಗರ ನಿವಾಸಿ ಆದ ಮೋಹನ್ ರಾವ್ ಮತ್ತು ವಿದ್ಯಾ ದಂಪತಿಗಳಿಗೆ ಮದ್ವೆ ಆಗಿ 8 ವರ್ಷ ಕಳೆಯದರು ಸಂತನ ಭಾಗ್ಯ ಆಗಿರಲಿಲ್ಲ. ಈ ದಂಪತಿಗಳು ಸುತ್ತದ ಆಸ್ಪತ್ರೆ ಇಲ್ಲ. ಮಕ್ಕಳನ್ನು ಪಡೆಯಲು ಸಾವಿರಾರು ರುಪಾಯಿ ಹಣ ಖರ್ಚು ಮಾಡಿದರು ಏನು ಉಪಯೋಗ ಆಗಿಲ್ಲ ಆದ್ರೆ ಇವರ ಪರಿಚಯಸ್ಥರು ಒಬ್ಬರು ಈ ಲಕ್ಷ್ಮಿ ಜನಾರ್ಧನ ಸ್ವಾಮಿ ದೇಗುಲದ ಬಗ್ಗೆ ಮಾಹಿತಿ ನೀಡಿದರು ಅಂತೆ ನಂತರ ದೇಗುಲಕ್ಕೆ ಬಂದು ಭಕ್ತಿಯಿಂದ ಬೇಡಿದ ನಂತರ ಇವರ ಕೋರಿಕೆ ತೀರಿದೆ ಎಂದು ನಮ್ಮ ತಂಡಕ್ಕೆ ಮೋಹನ್ ರಾವ್ ಅವರೇ ಸ್ವತಃ ಹೆಮ್ಮೆಯಿಂದ ತಿಳಿಸುತ್ತಾರೆ.

ಮಕ್ಕಳು ಇಲ್ಲದವರು ಈ ದೇವಸ್ಥಾನಕ್ಕೆ ಹೋದರೆ ಮಕ್ಕಳಗುತ್ತಾರೆ ಎಂಬ ನಂಬಿಕೆ ಇದೆ ಇದಕ್ಕೆ ಕಾರಣವೇನೆಂದರೆ. ಹಿಂದೆ ಮಾಂಡವ್ಯ ಖುಷಿಗಳು ವೇದಾರಣ್ಯದಲ್ಲಿ ತಪಸ್ಸನ್ನು ಆಚರಿಸಿರುವುದರಿಂದ ಮಾಂಡವ್ಯ ಕ್ಷೇತ್ರ ಮಾಂಡವ್ಯ ನಗರ ಮಂಡ್ಯ ಎಂದು ಹೆಸರಾಯಿತು. ಹಿಂದೆ ಗಂಗರು ತಲಕಾಡನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಬೆಂಗಳೂರು ಮಂಡ್ಯ ಮೈಸೂರು ಚಾಮರಾಜನಗರವನ್ನು ಆಳ್ವಿಕೆ ಮಾಡಿಕೊಂಡು ಬರುತ್ತಿದ್ದರು ಇವರು ತುಂಬಾ ಸಾಮಂತರಾಗಿ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಸುಮಾರು ಕ್ರಿ.ಶ.ಅವಧಿಯಲ್ಲಿ ಇಂದ್ರವರ್ಮ ಎಂಬ ಪಾಳೆಗಾರ ಮಂಡ್ಯ ಪ್ರದೇಶವನ್ನು ಆಳ್ವಿಕೆ ನಡೆಸುತ್ತಿದ್ದನು ಇವನಿಗೆ ಸಂತಾನ ಪ್ರಾಪ್ತಿ ಇರಲಿಲ್ಲ. ಆಗ ಅಲ್ಲಿ ತಪಸ್ಸು ಆಚರಿಸುತ್ತಿದ್ದ ಮಾಂಡವ್ಯ ಋಷಿಗಳನ್ನು ಕೇಳಿಕೊಂಡಾಗ ಅವರು ಲಕ್ಷ್ಮೀ ಸಮೇತನಾಗಿರುವ ಶ್ರೀ ಜನಾರ್ಧನ ಸ್ವಾಮಿಯನ್ನು ಪ್ರತಿಷ್ಟಾಪಿಸು ಇದರಿಂದ ನಿಮಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.

ಆಗ ಇಂದ್ರವರ್ಮನು ಶ್ರೀಲಕ್ಷ್ಮೀಜನಾರ್ಧನಸ್ವಾಮಿಯವರನ್ನು ಪ್ರತಿಷ್ಠಾಪಿಸಿದನು. ಪ್ರತಿಷ್ಠಾಪಿಸಿದ ನಂತರ ಇಂದ್ರವರ್ಮನಿಗೆ ಪುತ್ರ ಸಂತಾನವಾಯಿತು. ಆಗ ಇಂದ್ರವರ್ಮನು ತನ್ನ ಮಗನಿಗೆ ಸೋಮವರ್ಮ ಎಂದು ನಾಮಕರಣ ಮಾಡಿದನು. ಅವನು ಸಕಲೇಶ್ವರಸ್ವಾಮಿ ದೇವಸ್ಥಾನವನ್ನು ನಿರ್ಮಾಣ ಮಾಡಿದನು ಅಂದಿನಿಂದ ಇಂದಿನವರಗೂ ಯಾರಿಗೆ ಸಂತಾನವಿರುವುದಿಲ್ಲವೊ ಅವರು ಶ್ರೀ ಲಕ್ಷ್ಮಿಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಬಂದು ಹರಕೆ ಮಾಡಿಕೊಂಡರೆ ಸಾಕು ಅವರಿಗೆ ಸಂತಾನ ಪ್ರಾಪ್ತವಾಗುತ್ತದೇ. ಶ್ರೀಲಕ್ಷ್ಮೀಜನಾರ್ಧನಸ್ವಾಮಿ ದೇವಸ್ಥಾನದಲ್ಲಿರುವ ಮಹಾಲಕ್ಷ್ಮೀ ಅಮ್ಮನವರನ್ನು ವೇದವಲ್ಲಿ ಎಂದು ಸಹ ಕರೆಯುತ್ತಾರೆ. ಈ ದೇವಸ್ಥಾನ ಸುಮಾರು 2 ರಿಂದ 3 ಎಕರೆಯ ಪ್ರದೇಶದ ಮಧ್ಯದಲ್ಲಿದೆ. ಮಾಹಿತಿ ನಕಲು ಮಾಡಲು ಸಾಧ್ಯವೇ ಇಲ್ಲ ಶೇರ್ ಮಾಡಿ ಎಲ್ಲರಿಗು ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here