ಮನೆಯಲ್ಲಿರುವ ಸಣ್ಣ ಮಕ್ಕಳಿಗೆ ಈ ಕೆಲಸ ಮಾಡಿ ಆಮೇಲೆ ವತ್ಯಾಸ ನೋಡಿ

0
1146

ಚಿಕ್ಕ ಮಕ್ಕಳು ಚಿಕ್ಕ ಪುಟ್ಟ ಶಬ್ದಗಳಿಗೆ ತುಂಬಾ ವಿಕಾರವಾದ ದೃಶ್ಯಗಳಿಗೆ ಎಲ್ಲದಕ್ಕೂ ಬೇಗ ಬೆಚ್ಚಿ ಬೀಳುತ್ತಾರೆ ತುಂಬಾ ಅಳುತ್ತಾರೆ ಬೆಚ್ಚುತ್ತಾರೆ ರಾತ್ರಿಯಲ್ಲ ತುಂಬಾ ಅಳುತ್ತಾರೆ ಜೊತೆಗೆ ಚಿಕ್ಕ ಮಕ್ಕಳು ಅಂದವಾಗಿ ಕಾಣುವುದರಿಂದ ಎಲ್ಲರೂ ಚಿಕ್ಕ ಮಕ್ಕಳನ್ನು ಕಂಡರೆ ಮದ್ದು ಮಾಡಬೇಕು ಎಂದು ಮಾಡುತ್ತರೆ ಇನ್ನು ಆ ಮಕ್ಕಳನ್ನು ನೋಡುತ್ತಲೇ ಇರುತ್ತಾರೆ ಅದು ಮಕ್ಕಳಿಗೆ ದೃಷ್ಟಿ ಆಗುತ್ತದೆ ಅದಕ್ಕೂ ಸಹ ಮಕ್ಕಳು ಅಳುತ್ತಾರೆ ಮತ್ತು ಕೆಲವು ಮಕ್ಕಳು ಇದ್ದಕಿದ್ದಂತೆ ಮಂಕಾಗಿ ಬಿಡುತ್ತಾರೆ ಇದೆಲ್ಲವನ್ನು ತಡೆಯಲು ಇಲ್ಲಿದೆ ಉಪಾಯ.

ನಮ್ಮ ಅಧುನಿಕ ಜನಕ್ಕೆ ಮತ್ತು ಸಿಟಿಯಲ್ಲಿ ಬದುಕುತ್ತಿರುವ ಹೆಚ್ಚಿನ ಜನಕ್ಕೆ ಇಂತಹ ವಿಷಯಗಳು ಗೊತ್ತಿರೋದಿಲ್ಲ ಆದ್ರೆ ನಮ್ಮ ಹಳ್ಳಿ ವಾತಾವರಣ ಇದ್ದು ಮನೆಯಲ್ಲಿ ಏನಾದರು ಹಿರಿಯ ಅಜ್ಜಿ ಇದ್ದರೆ ಹೀಗೆ ಮಾಡೋದು ಮಾಮೂಲಿ ಆಗಿರುತ್ತೆ. ಇನ್ನು ಮನೆಯಲ್ಲಿರುವ ಅಜ್ಜಿ ದೃಷ್ಟಿ ತೆಗೆಯುವುದರ ಜೊತೆಗೆ ಕಾಲು ಕೈ ಉಳಿಕಿದರೆ ಮಂತ್ರ ಹಾಕುವುದು ಇದೆ. ಹೀಗೆ ಮಾಡುವುದರಿಂದ ಮಕ್ಕಳಿಗೆ ಕೆಟ್ಟ ಶಕ್ತಿಗಳು ಹತ್ರ ಸುಳಿಯುವುದಿಲ್ಲ ಮತ್ತು ಮಕ್ಕಳು ಹೆಚ್ಚು ದೈರ್ಯವಂತರಾಗಿ ಇರುತ್ತಾರೆ ಎಂಬ ನಂಬಿಕೆ ಇದೆ.

ಈ ಮಕ್ಕಳ ಅಳುವನ್ನು ತಡೆಯಲು ಸಾಮಾನ್ಯವಾಗಿ ಮಾಡುವ ಕೆಲಸಗಳು ಎಂದರೆ ಒಂದು ತಟ್ಟೆಗೆ ಸ್ವಲ್ಪ ನೀರು ಹಾಕಿ ಅದಕ್ಕೆ ಸ್ವಲ್ಪ ಅರಿಶಿನ ಸ್ವಲ್ಪ ಸುಣ್ಣ ಹಾಕಿ ಕೆಂಪು ನೀರು ಮಾಡಿ ಮಕ್ಕಳಿಗೆ ನಿವಾಳಿಸುತ್ತಾರೆ. ಉಪ್ಪನ್ನು ಸಹ ನಿವಾಳಿಸಿ ಆ ಉಪ್ಪನ್ನು ನೀರಿಗೆ ಬಿಡುತ್ತಾರೆ. ಮಗುವಿನ ಕೆನ್ನೆಗೆ ಹಣೆಗೆ ಕಾಲಿನ ಪಾದಕ್ಕೆ ಕಪ್ಪು ಚುಕ್ಕಿಯನ್ನು ಇಡುತ್ತಾರೆ.

ವೀಳ್ಯದೆಲೆಯಲ್ಲಿ ಮೂರು ತೂತುಗಳನ್ನು ಮಾಡಿ ಅದಕ್ಕೆ ಉಪ್ಪು. ಒಣ ಮೆಣಸಿನಕಾಯಿ ಬರಲಿನ ಕಡ್ಡಿ ಹಿದ್ದಲೂ ಎಲ್ಲವನ್ನು ಹಾಕಿ ನಿವಾಳಿಸುತ್ತಾರೆ. ಮಕ್ಕಳ ಕೈ ಮತ್ತು ಕಾಲಿಗೆ ಕಪ್ಪು ದಾರವನ್ನು ಕಟ್ಟುತ್ತರೆ ಇದರಿಂದ ಸಹ ಮಕ್ಕಳ ಮೇಲೆ ಬೀಳುವ ದೃಷ್ಟಿಯನ್ನು ತಡೆಯುತ್ತದೆ. ಸಾಸಿವೆಯಿಂದ ಮಕ್ಕಳಿಗೆ ನಿವಾಳಿಸಿ ಅದನ್ನು ಬೆಂಕಿಯ ಕೆಂಡದ ಒಳಗಡೆ ಹಾಕಿದಾಗ ಅದು ಪಟ ಪಟ ಶಬ್ದ ಮಾಡುತ್ತದೆ ಇದರಿಂದ ಸಹ ಮಕ್ಕಳ ದೃಷ್ಟಿ ಹೋಗುತ್ತದೆ.

ಹಳ್ಳಿಗಳಲ್ಲಿ ಹಸುವಿಗೆ ಎಮ್ಮೆಗೆ ಕುಡಿಸಲು ಎಂದು ಕುಡಿಟ್ಟಿರುವ ಕಲಗುಚ್ಚು ಇದರ ಒಳಗೆ ಪೊರಕೆ ಕಡ್ಡಿಯನ್ನು ಹೆಜ್ಜಿ ಅದನ್ನು ಮಕ್ಕಳಿಗೆ ನಿವಾಳಿಸಿ ಮಕ್ಕಳ ಮೈಮೇಲೆ ಹೊರೆಸಿದರೆ ಮಕ್ಕಳ ದೃಷ್ಟಿ ಹೋಗುತ್ತದೆ. ಮಕ್ಕಳು ತುಂಬಾ ಅಳುತ್ತಿದ್ದರೆ ಮಕ್ಕಳನ್ನು ಮನೆಯ ಬಾಗಿಲಿನ ಮುಂದೆ ನಿಲ್ಲಿಸಿ ಕರ್ಪುರವನ್ನು ಹತ್ತಿಸಿ ಮಕ್ಕಳಿಗೆ ನಿವಾಳಿಸಿ ಕರ್ಪುರವನ್ನು ಹೊರ ಹಾಕುತ್ತಾರೆ. ಪೊರಕೆ ಕಡ್ಡಿಗಳನ್ನು ಒಟ್ಟಿಗೆ ಹೊತ್ತಿಸಿ ಮುಖದ ಹತ್ತಿರ ನಿವಾಳಿಸಿ ಕೋಣೆಯ ಮೂಲೆಯಲ್ಲಿ ಉರಿಸುತ್ತಾರೆ. ಹೀಗೆ ಮಾಡುವುದರಿಂದ ಪೊರಕೆ ಕಡ್ಡಿಯನ್ನು ಹೊತ್ತಿಸಿದಗ ಅದು ಚಟ ಚಟ ಶಬ್ದ ಆಲಿಸುವುದರಿಂದ ಏಕಾಗ್ರತೆ ಮೂಡುತ್ತದೆ ಮಗುವು ಅಷ್ಟೊತ್ತಿಗೆ ಮೌನದಲ್ಲಿ ಮೈಮರೆತು ಮಲಗುತ್ತದೆ.

ಜೊತೆಗೆ ಈ ರೀತಿಯ ಕೆಲಸಗಳನ್ನು ಮಾಡುವುದರಿಂದ ಮಗುವಿನ ಮೇಲೆ ಬಿದ್ದಿರುವ ದೃಷ್ಟಿ ಹೊರ ಹೋಗುತ್ತದೆ ಇದರಿಂದ ಮಗುವಿನ ಮನಸ್ಸು ಸರಿಹೋಗುತ್ತದೆ ಮಗು ಹಳುವುದನ್ನು ನಿಲ್ಲಿಸುತ್ತದೆ. ಇದು ಹಿಂದಿನ ಕಾಲದಿಂದಲೂ ನೆಡೆದುಕೊಂಡು ಬಂದ ಅಚಾರವಾಗಿದ್ದು ಇವುಗಳನ್ನು ಮಾಡುವುದರಿಂದ ಮಗುವಿಗೆ ಯಾವುದೇ ರೀತಿಯ ದೃಷ್ಟಿ ತಗುಲಿದರು ಅದು ಹೊರ ಹೋಗುತ್ತದೆ ಮಗುವು ಸಂತೋಷವಾಗಿ ಇರುತ್ತದೆ ಇವೆಲ್ಲವನ್ನು ಮಾಡಿದರು ಮಕ್ಕಳು ಅಳುವುದನ್ನು ನಿಲ್ಲಿಸಲಿಲ್ಲ ಮತ್ತಷ್ಟು ಮಂಕಾಗಿ ಇದ್ದಾರೆ ಎಂದರೆ ವೈದ್ಯರ ಬಳಿ ಕರೆದುಕೊಂಡು ಹೋಗುವುದು ಒಳ್ಳೆಯದು.

LEAVE A REPLY

Please enter your comment!
Please enter your name here