ಪವಾಡ ಪುರುಷ ಮಲೆಮಹದೇಶ್ವರ ಸ್ವಾಮಿಯ ಜನ್ಮ ಕಥೆ

1
2015

ಮಹದೇಶ್ವರ ಸ್ವಾಮಿ ಬೇಡಿದನ್ನು ನೀಡುವ ಸ್ವಾಮಿ ಈ ಮಲೆಮಹದೇಶ್ವರ ಸ್ವಾಮಿಯ ಜನ್ಮದ ಕತೆಯನ್ನು ತಿಳಿಯೋಣ ಬನ್ನಿ. ಮಹದೇಶ್ವರ ಸ್ವಾಮಿ ಪಾಲಕರು ಶ್ರೀ ಚಂದ್ರಶೇಖರ ಮೂರ್ತಿ ಹಾಗೂ ಉತ್ತರಾಜಮ್ಮ ಅವರು ಮಹದೇಶ್ವರರನ್ನು ಮೊದಲ ಬಾರಿಗೆ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿಯ ಸನ್ನಿಧಿಯಲ್ಲಿ ನೋಡಿದರು ಅಲ್ಲಿಂದ ಬಂದು ನಂತರ ಸುತ್ತೂರು ಕುಂತೂರು ಮಠಗಳ ಮಾರ್ಗವಾಗಿ ಈಗಿನ ಮಹದೇಶ್ವರ ದೇವಸ್ಥಾನದ ಪ್ರದೇಶಕ್ಕೆ ಬಂದು ತಮಗೆ ವಾಸ ಮಾಡುವುದಕ್ಕೆ ಯೋಗ್ಯವಾದ ಸ್ಥಳ ಇದೆ ಎಂದು ತೀರ್ಮಾನ ಮಾಡಿ ಅಲ್ಲೇ ನೆಲೆ ನಿಂತರು. ಸುಮಾರು 600 ವರ್ಷಗಳ ಹಿಂದೆ ಇಲ್ಲಿಗೆ ಬಂದ ಅವರು ಬೆಟ್ಟದಲ್ಲಿ ನೆಲೆಸಿ ದೀರ್ಘಕಾಲ ತಪವನ್ನಾಚರಿಸಿದರೆಂದೂ ತಮ್ಮ ದಿವ್ಯ ಹಾಗೂ ತಪಃಶಕ್ತಿಯಿಂದ ಜನರ ಕಷ್ಟವನ್ನು ನಿವಾರಿಸುತ್ತಿದ್ದರೆಂದೂ ಹೇಳಲಾಗುತ್ತದೆ. ಇಂದಿಗೂ ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಜನರ ನಂಬಿಕೆ.

ಬೆಟ್ಟಗಳಿಂದಲೇ ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿದೆ. ಹುಲಿಯ ಬೆನ್ನೇರಿ ಸವಾರಿ ಮಾಡುತ್ತಿದ್ದ ಮಹದೇಶ್ವರರು ಒಬ್ಬ ಮಹಿಮಾಪುರುಷ, ಪವಾಡ ಪುರುಷ ಎಂಬುದು ಕಾವ್ಯಗಳಲ್ಲಿ ವೇದ್ಯವಾಗಿದೆ. ದಕ್ಷಿಣ ಕರ್ನಾಟಕದ ಬೇವಿನ ಕೊಲ್ಲಿಯಲ್ಲಿ ಮಾದೇಶ್ವರರು ಜನ್ಮತಳೆದರೆಂಬ ಪ್ರತೀತಿ ಇದೆ. ಇವರಲ್ಲಿ ಅಸಾಮಾನ್ಯವಾದ ಅಲೌಕಿಕ ಶಕ್ತಿಯಿತ್ತು. ತಮ್ಮ ಶಕ್ತಿಯಿಂದ ಅವರು ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಈಗಲೂ ತಮ್ಮ ಶಕ್ತಿಯಿಂದ ಭಕ್ತರನ್ನು ಹರಸುತ್ತಿದ್ದಾರೆ ಎಂಬುದು ನಂಬಿಕೆ. ಜೊತೆಗೆ ಹೈದರಲಿಯ ಕಾಲದ 1761ರ ಒಂದು ಶಾಸನದಲ್ಲಿ ಮಾದೇಶ್ವರರ ಬಗ್ಗೆ ವಿವರಗಳನ್ನು ಕಾಣಬಹುದು.

ಇವರು ಹರದನಹಳ್ಳಿ ಮಠದ ಮೂರನೇ ಮಠಾಧೀಶರಾಗಿದ್ದರೆಂದೂ ತಿಳಿದುಬರುತ್ತದೆ. ಮಹದೇಶ್ವರರು ಈಗಿನ ಮಹದೇಶ್ವರ ದೇವಸ್ಥಾನದ ಪ್ರದೇಶದಲ್ಲೂ ಮಠವೊಂದನ್ನು ಸ್ಥಾಪಿಸಿದ್ದುದಾಗಿ ಇತಿಹಾಸದಿಂದ ತಿಳಿದುಬರುತ್ತದೆ ಅಲ್ಲಿನ ಜನರನ್ನು ಪ್ರಮುಖವಾಗಿ ಆದಿವಾಸಿ ಗಿರಿಜನಗಳನ್ನು ಸುಶಿಕ್ಷಿತ ಸಭ್ಯ ಜನಗಳನ್ನಾಗಿ ಪರಿವರ್ತಿಸುವಂತಹ ಕಾರ್ಯಗಳಿಗಾಗಿ ಮಠ ಸ್ಥಾಪಿಸಿದ್ದರು ಎನ್ನುವುದು ಮಹದೇಶ್ವರರ ಲೋಕ ಕಲ್ಯಾಣಾರ್ಥ ಸೇವೆಯಲ್ಲಿ ಕಾಣಬಹುದು

ಮಹದೇಶ್ವರರ ಕಥಾನಕದಂತೆ ಅಲ್ಲಿನ ಏಳು ಮಲೆ ಬೆಟ್ಟಗಳನ್ನು ವಿವಿಧ ಜಾನಪದ ಹೆಸರುಗಳಿಂದ ಕರೆಯಲಾಗುತ್ತದೆ ೭೭ ಬೆಟ್ಟಗಳಲ್ಲಿ ಆನೆಮಲೆ ಜೇನುಮಲೆ ಕಾನುಮಲೆ ಪಚ್ಚೆಮಲೆ ಪವಳಮಲೆ ಪೊನ್ನಾಚಿಮಲೆ ರುದ್ರಾಕ್ಷಿ ಮಲೆ ವಿಭೂತಿಮಲೆ ಕೊಂಗುಮಲೆ ಬೆಟ್ಟಗಳಿಂದ ಸುತ್ತುವರೆದ ಸಂಪೂರ್ಣ ಪ್ರದೇಶವನ್ನು ಮಹದೇಶ್ವರ ಬೆಟ್ಟ ಎಂದು ಕರೆಯಲಾಗುತ್ತದೆ. ಈ ಪುಣ್ಯಕ್ಷೇತ್ರದ ಮಹಿಮಯು ಲೋಕ ವಿಖ್ಯಾತಿಯಿಂದಗಿ ಮಲೆಯ ಮಾಯ್ಕಾರ ಮಾದಪ್ಪನನ್ನು ನೆನೆದು ಧೂಪ ಮತ್ತು ದೀಪ ಹಚ್ಚಿ ಕಾಯ್ಯೊತಂದೆ ಎನ್ನುತ ಮಲೆ ಮಹದೇಶ್ವರ ಬೆಟ್ಟ ಕ್ಕೆ ಬಂದು ಹೋಗುವವರ ಪ್ರಮಾಣ ಹೆಚ್ಚು.

ಮಹದೇಶ್ವರ ಸ್ವಾಮಿಯು ಜನರು ಕೇಳಿದ ವರಗಳನ್ನು ನೀಡುತ್ತಾ ಜನರ ಸಂಕಷ್ಟಗಳನ್ನು ನಿವಾರಿಸುವ ಸ್ವಾಮಿ ಈ ಬೆಟ್ಟವು ಕೊಳ್ಳೇಗಾಲಕ್ಕೆ 80 ಕಿಲೋ ಮೀಟರ್ ಹಾಗೂ ಮೈಸೂರಿನಿಂದ 150 ಕಿಲೋ ಮೀಟರ್ ದೂರದಲ್ಲಿರುವ ಬೆಟ್ಟಶ್ರೇಣಿಯೇ ಮಹದೇಶ್ವರ ಬೆಟ್ಟ. ಮಾದೇಶನ ಬೆಟ್ಟ, ಮಹದೇಶ್ವರ ಗಿರಿ ಎಂಎಂಹಿಲ್ಸ್ ಎಂದು ಖ್ಯಾತವಾದ ಈ ಬೆಟ್ಟ ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳವಾಗಿದೆ.

1 COMMENT

LEAVE A REPLY

Please enter your comment!
Please enter your name here