ಹಣಕಾಸಿನ ಸಮಸ್ಯೆ ಸರಿ ಹೋಗೋಕೆ ಮನಿ ಪ್ಲಾಂಟ್ ಅತೀ ಮುಖ್ಯ

0
1024

ಮನಿಪ್ಲಾಂಟ್ ಅನ್ನು ಮನೆಯಲ್ಲಿ ಇಟ್ಟುಕೊಂಡರೆ ಸಾಕು ಎಲ್ಲ ರೀತಿಯಲ್ಲೂ ಆರ್ಥಿಕ ಸಮಸ್ಯೆ ಎಂಬುದು ದೂರವಾಗುತ್ತದೆ ಜೊತೆಗೆ ಪಾಸಿಟಿವ್ ಎನರ್ಜಿ ಎಂಬುದು ಮನೆಯಲ್ಲಿ ತುಂಬಿಕೊಳ್ಳುತ್ತದೆ ಧನ ಲಾಭ ಹೆಚ್ಚುತ್ತದೆ.ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನಮ್ಮಲ್ಲಿ ಸಾಕಷ್ಟು ಜನರ ಮನೆಯಲ್ಲಿ ಮನಿ ಪ್ಲಾಂಟ್ ಇದ್ದೆ ಇರುತ್ತದೆ ಆದ್ರೆ ಇದರ ಬಗ್ಗೆ ತಿಳಿಯದ ಜನರು ಏನೋ ಶೋ ಗಿಡ ಎಂದು ಸಹ ತಿಳಿಯುತ್ತಾರೆ ಆದರೆ ಆ ಗಿಡದಿಂದ ಲಾಭ ಪಡೆದ ಜನಕ್ಕೆ ಮಾತ್ರ ಗೊತ್ತು ಅದರ ಮಹತ್ವ ಏನು ಎಂದು. ಮನಿ ಪ್ಲಾಂಟ್ ಬಗ್ಗೆ ಮಾಹಿತಿ ಸಿಕ್ಕ ಕೊಡಲೇ ಮತ್ತು ಅದ್ರ ಬಗ್ಗೆ ಅಕ್ಕಪಕ್ಕದ ಜನರು ಅಥವ ಸ್ನೇಹಿತರು ತಿಳಿಸಿದ ಕೂಡಲೇ ಖರೀದಿ ಮಾಡಿ ಯಾವುದೋ ಒಂದು ಮೂಲೆಯಲ್ಲಿ ಇಡೋದು ಅಲ್ಲ ಅದಕ್ಕೆ ಒಂದು ರೀತಿ ನೀತಿ ನಿಯಮ ಅನ್ನೋದು ಇದೆ. ಮನಿ ಪ್ಲಾಂಟ್ ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಯಾವ ಯಾವ ಜಗದಲ್ಲೋ ಇಟ್ಟುಕೊಳ್ಳುವುದಲ್ಲ ಹಾಗೆ ಇಟ್ಟುಕೊಂಡರೆ ಆ ಮನಿಪ್ಲಾಂಟ್ನಿಂದ ಯಾವುದೇ ರೀತಿಯ ಲಾಭ ಆಗುವುದಿಲ್ಲ.

ಹಾಗಾದರೆ ಮನಿಪ್ಲಾಂಟ್ ಅನ್ನು ಮನೆಯ ಯಾವ ದಿಕ್ಕಿನಲ್ಲಿ ಇಟ್ಟುಕೊಂಡರೆ ಒಳ್ಳೆಯದು ಎಂದು ತಿಳಿದುಕೊಳ್ಳೋಣ ಬನ್ನಿ. ಸಾಮಾನ್ಯವಾಗಿ ಎಲ್ಲರೂ ಯಾರಾದರೂ ಮನೆಗೆ ಹೋದಾಗ ಅವರ ಮನೆಯಲ್ಲಿ ಇರುವ ಗಿಡಗಳನ್ನು ನೋಡಿ ಅವರ ಮನೆಯಲ್ಲಿ ಒಂದು ಗಿಡಗವನ್ನು ತೆಗೆದುಕೊಂಡು ಬಂದು ಬೆಳೆಸುತ್ತಾರೆ. ಆದರೆ ಮನಿ ಪ್ಲಾಂಟ್ ಅನ್ನು ಬೇರೆಯವರ ಮನೆಯಿಂದ ತರಬೇಕಾದರೆ ಯಾವ ಕಾರಣಕ್ಕೂ ಈ ಮನೆಯವರಿಗೆ ಹೇಳಿ ತರಬಾರದು ಹೀಗೆ ಮಾಡಿದರೆ ಅದೃಷ್ಟ ಒಲಿಯುವುದಿಲ್ಲ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಅನ್ನು ಮನೆಯ ಒಳಗಡೆ ಆಗ್ನೇಯ. ಅಥವಾ ದಕ್ಷಿಣ ಪೂರ್ವ ದಿಕ್ಕಿನಲ್ಲಿ ಇಡಬೇಕು ಹೀಗೆ ಇಡುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಸಿಗುತ್ತದೆ ಎಲ್ಲ ರೀತಿಯಲ್ಲೂ ಲಾಭ ಆಗುತ್ತದೆ. ಹಾಗೂ ಮನಿ ಪ್ಲಾಂಟ್ ಗಿಡವನ್ನು ಯಾವುದೇ ಕಾರಣಕ್ಕೂ ಉತ್ತರಪೂರ್ವ ದಿಕ್ಕಿನ ಕಡೆಗೆ ಇಡಬಾರದು ಹೀಗೆ ಇಟ್ಟರೆ ಎಲ್ಲ ಕಷ್ಟಗಳು ಮನೆಯ ಒಳಗಡೆ ಬರುತ್ತವೆ. ಮನಿ ಪ್ಲಾಂಟ್ ಗಿಡವನ್ನು ಹಾಗಾಗೆ ಅದರ ಎಲೆಗಳು ಒಣಗುತ್ತಿರುವಾಗ ಅವುಗಳನ್ನು ಕಿತ್ತುಹಾಕಬೇಕು. ಗಿಡಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು

ಎಷ್ಟೋ ಚೆನ್ನಾಗಿ ನೋಡಿಕೊಂಡರು ಗಿಡ ಒಣಗುತ್ತಿದೇ ಅಥವಾ ಬೆಳೆಯುತ್ತಿಲ್ಲ ಅಂದರೆ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟದಿ ಎಂದು ಅರ್ಥ. ಹಾಗಾಗಿ ಮನೆಯಲ್ಲಿ ಮನಿ ಪ್ಲಾಂಟ್ ಇಟ್ಟುಕೊಳ್ಳುವ ಮೊದಲು ಸರಿಯಾದ ದಿಕ್ಕನ್ನು ನೋಡಿಕೊಂಡು ಇಟ್ಟು ಆರೈಕೆ ಮಾಡಿ ಆರ್ಥಿಕ ಸಂಪತ್ತು ಸುಧಾರಿಸುತ್ತದೆ. ಈ ಉಪಯುಕ್ತ ಮಾಹಿತಿ ತಪ್ಪದೇ ಎಲ್ಲರೊಂದಿಗೂ ಶೇರ್ ಮಾಡಿ ಎಲ್ಲರಿಗು ಸಹಾಯ ಆಗಲಿ.
ನಮ್ಮ ವೆಬ್ಸೈಟ್ ಬರವಣಿಗೆಗಳಿಗೆ ವಿಶೇಷ ಕಾಪಿ ರೈಟ್ಸ್ ಇರುತ್ತದೆ ಅನುಮತಿ ಇಲ್ಲದೆ ನಕಲು ಮಾಡುವ ಪ್ರಯತ್ನ ಮಾಡಲೇ ಬೇಡಿ. ನಮ್ಮ ಅನುಮತಿ ಇಲ್ಲದೆ ಬೇರೆಡೆ ಪ್ರಕಟಣೆ ಮಾಡುವುದು ಅಥವ ಬೇರೆ ಯಾವುದೇ ರೀತಿ ಮಾಡಿದರು ನಾವು ನಿಮ್ಮ ಮೇಲೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here