ಆಹಾರ ಪದಾರ್ಥದಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಾಂಬಾರ ಪದಾರ್ಥ ಎಂದರೆ ಶುಂಠಿ ಪ್ರತಿಯೊಬ್ಬರ ಮನೆಯಲ್ಲೂ ಅಡುಗೆ ರುಚಿಯಾಗಿರಲಿ. ಸುಗಂಧ ಬಿರಲಿ. ಆರೋಗ್ಯವು ಚೆನ್ನಾಗಿರಲಿ ಎಂಬ ಕಾರಣಕ್ಕೆ ಅಡುಗೆಯಲ್ಲಿ ಶುಂಠಿಯನ್ನು ಬಳಕೆ ಮಾಡುತ್ತಾರೆ ಇದರ ಜೊತೆಗೆ ಶುಂಠಿಯಲ್ಲಿ ಟೀ ಕಷಾಯ ಎಲ್ಲವನ್ನು ಮಾಡಿಕೊಂಡು ಕುಡಿಯುತ್ತಾರೆ ಇಷ್ಟೇ ಅಲ್ಲದೆ ಶುಂಠಿಯನ್ನು ತಲೆ ನೋವು ಹಾಗೂ ಇನ್ನಿತರ ಸಮಸ್ಯೆಗಳಿಗು ಕೂಡ ಬಳಕೆ ಮಾಡುತ್ತಾರೆ.
ಶುಂಠಿಯು ಭೂಮಿಯೊಳಗೆ ಕಾಂಡದ ರೀತಿಯಲ್ಲಿ ಬೆಳೆಯುತ್ತದೆ. ಜೊತೆಗೆ ಶುಂಠಿಯ ಕೃಷಿಗೆ ಸುದೀರ್ಘವಾದ ಇತಿಹಾಸ ಕೂಡ ಹಾಗೂ ಇದರ ಬೆಲೆಯು ಕೂಡ ದುಪ್ಪಟ್ಟು. ಶುಂಠಿಯನ್ನು ಆಹಾರದಲ್ಲಿ ಸೇವಿಸುವ ಜೊತೆಗೆ ನಿತ್ಯ ಕುಡಿಯುವ ನೀರಿನಲ್ಲಿ ಶುಂಠಿಯ ರಸವನ್ನು ಬೆರೆಸಿಕೊಂಡು ಕುಡಿದರೆ ಹಲವಾರು ರೀತಿಯ ಲಾಭಗಳನ್ನು ಪಡೆಯಬಹುದು. ಹಾಗಾದರೆ ನೀರಿನಲ್ಲಿ ಶುಂಠಿಯ ರಸವನ್ನು ಬೆರೆಸಿಕೊಂಡು ಕುಡಿಯುವುದರಿಂದ ಏನೆಲ್ಲ ಲಾಭಗಳು ಆಗುತ್ತವೆ ಎಂದು ನೋಡೋಣ ಬನ್ನಿ.

ಚರ್ಮ ಮತ್ತು ಕೂದಲುಗಳಿಗೆ: ಶುಂಠಿಯ ರಸವನ್ನು ನೀರಿನಲ್ಲಿ ಹಾಕಿಕೊಂಡು ಕುಡಿಯುವುದರಿಂದ ಚರ್ಮ ಮತ್ತು ಕೂದಲಿಗೆ ತುಂಬಾ ಒಳ್ಳೆಯದು. ಹೇಗೆಂದರೆ ಶುಂಠಿಯಲ್ಲಿರುವ. ಪೋಷಕ ಸತ್ವಗಳು ನಮ್ಮ ಚರ್ಮವನ್ನು ಕಾಂತಿಯುತವಾಗಿ ಮತ್ತು ಮೃದುವಾಗಿ ಮಾಡುತ್ತದೆ ಜೊತೆಗೆ ಇದರಲ್ಲಿ. ವಿಟಮಿನ್ ಎ ಮತ್ತು ಸಿ ಗುಣವು ಇದ್ದು ಇದು ನಮ್ಮ ಕೂದಲು ಬೆಳೆಯಲು ಹಾಗೂ ತಲೆಯ ಹೊಟ್ಟನ್ನು ಹೋಗಿಸಲು ಸಹಾಯ ಮಾಡುತ್ತದೆ.
ನೀರಿನಲ್ಲಿ ಸ್ವಲ್ಪ ಶುಂಠಿಯ ರಸ ಹಾಗೂ ನಿಂಬೆ ರಸವನ್ನು ಹಾಕಿಕೊಂಡು ಕುಡಿದರೆ ಮೂತ್ರಪಿಂಡದ ಸಮಸ್ಯೆ ಮತ್ತು ಮಧುಮೇಹದ ಸಮಸ್ಯೆಗಳು ದೂರ ಆಗುತ್ತವೆ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಶುಂಠಿ ಹಾಕಿದ ನೀರು ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಕುಡಿಯುವ ನೀರಿಗೆ ಶುಂಠಿ ರಸವನ್ನು ಹಾಕಿಕೊಂಡು ಕುಡಿಯುವುದರಿಂದ ತಲೆ ಸುತ್ತುವುದು ಎದೆಯುರಿ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಕುಡಿಯುವ ನೀರಿಗೆ ಸ್ವಲ್ಪ ಶುಂಠಿ ರಸ ಪುದಿನಾ ಸೊಪ್ಪಿನ ರಸ ಜೇನು ತುಪ್ಪ ಹಾಕಿ ಸೇವಿಸುವುದರಿಂದ ಗರ್ಭಿಣಿಯರಿಗೆ ಆಗುವ ಹಲವಾರು ತೊಂದರೆಗಳು ದೂರವಾಗುತ್ತವೆ.
ಶುಂಠಿ ಹಾಕಿದ ನೀರಿಗೆ ಸ್ವಲ್ಪ ಸಕ್ಕರೆಯನ್ನು ಹಾಕಿಕೊಂಡು ಕುಸಿಯುವುದರಿಂದ ತೂಕ ಕಡಿಮೆ ಆಗುತ್ತದೆ. ನಿತ್ಯ ಬೆಳಿಗ್ಗೆ ನೀರಿಗೆ ಶುಂಠಿಯ ರಸವನ್ನು ಹಾಕಿಕೊಂಡು ಸೇವಿಸುವುದರಿಂದ ದಿನ ಪೂರ್ತಿ ಆಕ್ಟಿವ್ ಆಗಿ ಇರಬಹುದು. ನೋಡಿದರಲ್ಲ ನೀರಿನಲ್ಲಿ ಶುಂಠಿಯ ರಸವನ್ನು ಹಾಕಿಕೊಂಡು ಕುಡಿಯುವುದರಿಂದ ಎಷ್ಟೆಲ್ಲ ಲಾಭ ಆಗುತ್ತದೆ ಹಾಗಾಗಿ ನೀವು ಸಹ ಕುಡಿಯುವ ನೀರಿಗೆ ಶುಂಠಿಯ ರಸವನ್ನು ಹಾಕಿಕೊಂಡು ಕುಡಿದು ಅದರ ಪ್ರಯೋಜನ ಪಡೆದುಕೊಳ್ಳಿ. ಈ ಉಪಯುಕ್ತ ಮಾಹಿತಿ ತಪ್ಪದೇ ಶೇರ್ನ ಮಾಡಿ ನಿಮ್ಮ ಎಲ್ಲ ಸ್ನೇಹಿತರಿಗೂ ಸಹಾಯ ಆಗಲಿ . ನಮ್ಮ ವೆಬ್ಸೈಟ್ ನಲ್ಲಿ ಪ್ರಕಟವಾದ ಎಲ್ಲ ಮಾಹಿತಿ ಮತ್ತು ಚಿತ್ರಗಳಿಗೆ ವಿಶೇಷ ಕಾಪಿ ರೈಟ್ಸ್ ಒಳಪಟ್ಟಿದ್ದು ನಮ್ಮ ಅನುಮತಿ ಇಲ್ಲದೆ ಚಿತ್ರಗಳು ಅಥವ ಮಾಹಿತಿ ನಕಲು ಮಾಡುವ ಪ್ರಯತ್ನ ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.