ಅಯ್ಯಪ್ಪ ಸ್ವಾಮಿಯ ಮಕರಜ್ಯೋತಿಗೆ ಬಗ್ಗೆ ತಿಳಿಯಿರಿ

0
848

ಸಂಕ್ರಾಂತಿ ಹಬ್ಬದ ದಿನ ಈ ಮಕರ ಜ್ಯೋತಿಯ ದರ್ಶನವಾಗುತ್ತದೆ. ಶಬರಿಮಲೆಯಲ್ಲಿ ಕಾಣುವ ಈ ಮಕರಜ್ಯೋತಿಗೆ ಸಂಕ್ರಾಂತಿ ಹಬ್ಬದ ದಿನ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಾರೆ ಅಯ್ಯಪ್ಪ ವ್ರತಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆ ನಮಸ್ಕರಿಸಿ ಮಕರ ಜ್ಯೋತಿಯ ದರ್ಶನ ಪಡೆದರೆ ಜನ್ಮ ಸಾರ್ಥಕ ವಾಗುವುದೆಂಬ ನಂಬಿಕೆಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷ ಪ್ರತಿ ಶಬರಿಮಲೆ ಸನ್ನಿಧಾನಕ್ಕೆ ಆಗಮಿಸುತ್ತಾರೆ. ಇಲ್ಲಿನ ಜನಜಂಗುಳಿ ವರ್ಷದಿಂದ ವರ್ಷಕ್ಕೆ ಮತ್ತಷ್ಟು ಏರಿಕೆ ಆಗುತ್ತಲೇ ಇದೆ. ಈ ಶುಭ ಸಮಯದಲ್ಲಿ ೧೮ ಪಾದಗಳನ್ನು ಹತ್ತಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರೆ ಜೀವನ ಪಾವನವಾಗಲಿದೆ.

ಮಕರ ಜ್ಯೋತಿ ಮತ್ತು ಮಕರ ವಿಳಕ್ಕು ಎಂದು ಕರೆಯಲ್ಪಡುವ ಈ ಜ್ಯೋತಿಗಳು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ. ಈ ಮಕರ ಜ್ಯೋತಿಯನ್ನು ನೋಡಲು ದೇಶ ವಿದೇಶಗಳಿಂದ ಅಯ್ಯಪ್ಪ ಭಕ್ತರು ಇಲ್ಲಿಗೆ ಬರುತ್ತಾರೆ. ಈ ಮಕರ ಜ್ಯೋತಿಯನ್ನು ನೋಡಿ ನಮಸ್ಕರಿಸಿದರೆ ನಮ್ಮ ಜೀವನ ಪಾವನವಾಗುತ್ತದೆ ನಮ್ಮ ಕಷ್ಟಗಳೆಲ್ಲ ದೂರವಾಗುತ್ತವೆ. ಎಂಬುದು ಜನರ ನಂಬಿಕೆ. ಒಟ್ಟಿನಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ಲೋಕದ ಕಷ್ಟಗಳನ್ನು ಹೋಗಲಾಡಿಸುವಂತೆ ಜನರು ಈ ಕಾಲದಲ್ಲಿ ಪುಣ್ಯ ಕಾರ್ಯಗಳಲ್ಲಿಯೂ ಆಧ್ಯಾತ್ಮಿಕ ಚಿಂತೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಮುಕ್ತಿ ಮಾರ್ಗದಲ್ಲಿ ಸಾಗುವಂತೆ ಈ ಆಚರಣೆಯು ಪ್ರೇರಣೆಯನ್ನು ನೀಡುತ್ತದೆ.

ಮಕರ ಸಂಕ್ರಮಣದ ಶುಭ ಸಮಯದಲ್ಲಿ ಶಬರಿ ಮಲೈನಲ್ಲಿ ಜ್ಯೋತಿ ಕಾಣಿಸುವುದರ ಜೊತೆಗೆ ಆಕಾಶದಲ್ಲಿ ಒಂದು ನಕ್ಷತ್ರದ ದರ್ಶನವು ಆಗುತ್ತದೆ ಎಂದು ಕಾಣದ ಈ ನಕ್ಷತ್ರ ಮಕರ ಸಂಕ್ರಮಣ ದಿನದಂದು ಮಾತ್ರ ಕಾಣಿಸುತ್ತದೆ ಈ ನಕ್ಷತ್ರ ಸಾಕ್ಷಾತ್ ಅಯ್ಯಪ್ಪ ಸ್ವಾಮಿಯ ದರ್ಶನ ಎಂದು ಕೋಟ್ಯಂತರ ಭಕ್ತರು ಇಂದಿಗೂ ನಂಬಿದ್ದಾರೆ. ಈ ದಿನ ಅಯ್ಯಪ್ಪ ಸ್ವಾಮಿಯು ತನ್ನ ಕೋಟ್ಯಂತರ ಭಕ್ತರಿಗೆ ದರ್ಶನ ನೀಡಲು ಆಗಮಿಸಿ ಭಕ್ತರ ಇಚ್ಛೆ ಮತ್ತು ಕಷ್ಟಗಳನ್ನೂ ತೀರಿಸುತ್ತಾರೆ. ಶಬರಿಮಲೈ ನಲ್ಲಿ ಮಕರ ಸಂಕ್ರಮಣ ಈ ಶುಭ ಸಮಯದಲ್ಲಿ ಶಬರಿ ಮಲೈಗೆ ತೆರಳಲು ಸಾಧ್ಯ ಆಗದ ಭಕ್ತರು ನಿಮ್ಮ ಹತ್ತಿರದಲ್ಲಿರುವ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದುಕೊಂಡರೆ ಖಂಡಿತ ನಿಮಗೆ ಶುಭ ಫಲ ಪ್ರಾಪ್ತಿಯಾಗಲಿದೆ. ಅಯ್ಯಪ್ಪ ಸ್ವಾಮಿಯ ಈ ಮಾಹಿತಿ ಶೇರ್ ಮಾಡಿ ನಿಮಗೂ ಖಂಡಿತ ಶುಭ ಫಲ ಸಿಗಲಿದೆ. ನಮ್ಮ ವೆಬ್ಸೈಟ್ ನಲ್ಲಿ ಪ್ರಕಟವಾದ ಎಲ್ಲ ಚಿತ್ರಗಳಿಗೂ ಮತ್ತು ಬರಹಗಳಿಗೂ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ಚಿತ್ರಗಳು ಅಥವ ಬರವಣಿಗೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here