ತೆಂಗಿನ ಹಾಲಿನ ಲಾಭ ಗೊತ್ತಾದ್ರೆ ಇವತ್ತೇ ಉಪಯೋಗ ಮಾಡ್ತೀರ

0
930

ತೆಂಗಿನ ಮರ ಎಂದರೆ ಭಾರತೀಯರಿಗೆ ಏನೋ ಒಂದು ರೀತಿಯ ಪೂಜ್ಯ ಭಾವ ಈ ತೆಂಗಿನ ಮರವನ್ನು ಕಲ್ಪವೃಕ್ಷ ಎಂತಲೂ ಕರೆಯುತ್ತಾರೆ. ಏಕೆಂದರೆ ತೆಂಗಿನಮರ ಕೊಡುವ ತೆಂಗಿನ ಕಾಯಿ, ಇದರ ಗರಿ ಕಾಂಡ ಎಲ್ಲವು ಕೂಡ ಉಪಯೋಗಕಾರಿಯಾಗಿವೆ. ಈ ತೆಂಗಿನ ಮರವನ್ನು ಕರ್ನಾಟಕದಲ್ಲಿ ತುಮಕೂರು ಹಾಸನ ಚಿತ್ರದುರ್ಗ ಚಿಕ್ಕಮಗಳೂರು ಮಂಡ್ಯ ಮೈಸೂರು ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.

ಎಲ್ಲರೂ ಸಾಮಾನ್ಯವಾಗಿ ತಿಳಿದಿರುವಂತೆ ತೆಂಗಿನ ಕಾಯಿಯನ್ನು ನಿತ್ಯದ ಅಡುಗೆಯಲ್ಲಿ ಬಳಸಿಕೊಳ್ಳುತ್ತಾರೆ. ಈ ತೆಂಗಿನ ಕಾಯಿ ಚೆನ್ನಾಗಿ ಒಣಗಿದ ನಂತರ ಅದರ ಒಳಗೆ ಇರುವ ನೀರೆಲ್ಲ ಇಂಗಿಹೋಗಿ ಅದು ಕೊಬ್ಬರಿ ಆಗುತ್ತದೆ ಈ ಕೊಬ್ಬರಿಯನ್ನು ಸಹ ಹಲವು ರೀತಿಯ ತಿನಿಸುಗಳನ್ನು ಮಾಡಲು ಬಳಸುತ್ತಾರೆ ಆದರೆ ಈ ಕೊಬ್ಬರಿಯಿಂದ ಎಣ್ಣೆಯನ್ನು ಹೊರ ತೆಗೆಯುತ್ತಾರೆ ಇದನ್ನು ಕೇವಲ ತಲೆಗೆ. ಮೈಕೈ ಮಸಾಜ್ಗೆ ಬಳಸುತ್ತಾರೆ ಎಂದು ಗೊತ್ತು. ಆದರೆ ಈ ತೆಂಗಿನ ಕಾಯಿ ಹಸಿಯಾಗಿ ಇರುವಾಗಲೇ ಇದರ ರಸವನ್ನು ತೆಗೆದುಕೊಂಡರೆ ಅದರಿಂದ ಎಷ್ಟೆಲ್ಲ ಉಪಯೋಗ ಆಗುತ್ತದೆ ಗೊತ್ತೇ ನೋಡೋಣ ಬನ್ನಿ.

ತೆಂಗಿನ ಹಾಲಿನಲ್ಲಿ ಪೌಷ್ಟಿಕಾಂಶ ಹಾಗು ವಿಟಮಿನ್ ಗಳ ಅಂಶವನ್ನು ಹೊಂದಿದ್ದು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಚ್ಚಗಿರುವ ನೀರಿನಲ್ಲಿ ತುರಿದ ತೆಂಗಿನಕಾಯಿಯನ್ನ ಹಾಕಿ ಅದನ್ನು ಜ್ಯೂಸ್ ರೀತಿಯಲ್ಲಿ ರುಬ್ಬಿ ಅದನ್ನು ನೇರವಾಗಿ ಅಥವಾ ಅಡುಗೆಯಲ್ಲಿ ಬಳಸುವುದರಿಂದ ತುಂಬಾ ಪ್ರಯೋಜನ ಆಗುತ್ತದೆ. ತೆಂಗಿನ ಹಾಲಿನಲ್ಲಿ ಲ್ಯುರಿಕ್​ ಆ್ಯಸಿಡ್​ ಅಂಶ ಇರುವುದರಿಂದ ಇದು ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸುತ್ತದೆ. ತೆಂಗಿನ ಹಾಲು ದೇಹದ ಅತಿಯಾದ ಬೊಜ್ಜನ್ನ ಕರಗಿಸಲು ಸಹಾಯ ಮಾಡುತ್ತದೆ,

ತೆಂಗಿನ ಕಾಯಿಯಲ್ಲಿ ಎಮ್​ಸಿಟಿ ಎಂಬುವ ಅಂಶವು ಹೇರಳವಾಗಿದ್ದು ದೇಹದ ಫ್ಯಾಟ್ ಅನ್ನು ಕಡಿಮೆ ಮಾಡುತ್ತದೆ. ತೆಂಗಿನ ಹಾಲು ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವಂತೆ ನೋಡಿಕೊಳ್ಳುತ್ತದೆ ಜೊತೆಗೆ ಮಲಬದ್ಧತೆ ಅಥವಾ ಅಜೀರ್ಣ ಸಮಸ್ಯೆ ಹೋಗುತ್ತದೆ. ತೆಂಗಿನ ಹಾಲಿನಲ್ಲಿ ಇರುವ ವಿಟಮಿನ್​ ಮತ್ತು ಮಿನರಲ್ಸ್​ ಅಂಶವು ದೇಹವನ್ನು ತುಂಬಾ ಶಕ್ತಿವಂತವಾಗಿ ಜೊತೆಗೆ ಆಕ್ಟಿವ್ ಆಗಿ ಇಡುತ್ತದೆ. ತೆಂಗಿನ ಹಾಲು ದೇಹದ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಕೂದಲಿಗೆ ತೆಂಗಿನ ಹಾಲನ್ನು ಕೂದಲಿಗೆ ಹಚ್ಚಿ ಮಸಾಜ್​ ಮಾಡಿ 30 ನಿಮಿಷ ಬಿಟ್ಟು ತೊಳೆದರೆ ಕೂದಲು ಹೊಳೆಯುತ್ತದೆ.

ತೆಂಗಿನ ಹಾಲಿನಲ್ಲಿ ಕಬ್ಬಿಣದ ಅಂಶ ಇದ್ದು ಇದು ದೇಹದ ರಕ್ತಹೀನತೆಯ ಸಮಸ್ಯೆಯನ್ನು ಹೋಗಿಸುತ್ತದೆ. ಸಂಧಿವಾತ ಉರಿಯೂತದ ಸಮಸ್ಯೆ ಇರುವವರಿಗೆ ತೆಂಗಿನ ಹಾಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ತೆಂಗಿನ ಹಾಲಿನಿಂದ ಮುಖವನ್ನು ಮಾಸಜ್ ಮಾಡಿಕೊಂಡರೆ ಮುಖದ ಕಾಂತಿ ಹೆಚ್ಚುತ್ತದೆ. ನೋಡಿದರಲ್ಲ ತೆಂಗಿನ ಹಾಲಿನಿಂದ ಎಷ್ಟೆಲ್ಲ ಉಪಯೋಗ ಇದೆ ಎಂದು ಹಾಗಾಗಿ ಇನ್ನು ಮುಂದೆ ತೆಂಗಿನ ಹಾಲನ್ನು ಉಪಯೋಗಿಸಿ. ಮಾಹಿತಿ ತಪ್ಪದೇ ಶೇರ್ ಮಾಡಿ ಎಲ್ಲರಿಗು ಸಹಾಯ ಆಗಲಿ.

LEAVE A REPLY

Please enter your comment!
Please enter your name here