ನೀವು ಈ ಮನೆ ಮದ್ದು ಮಾಡಿದ್ರೆ ಮೊಬೈಲ್ ಮತ್ತು ಕಂಪ್ಯೂಟರ್ ನೋಡಿದ್ರೆ ಕಣ್ಣು ಉರಿ ಬರಲ್ಲ

0
845

ಇತ್ತೀಚಿನ ದಿನಗಳಲ್ಲಿ ಯಾರನ್ನು ನೋಡಿದರು ಎಲ್ಲರ ಕೈಯಲ್ಲೂ ಮೊಬೈಲ್ ಇರುತ್ತದೆ ಜೊತೆಗೆ ಇತ್ತೀಚಿನ ಕೆಲಸಗಳೆಲ್ಲ ಕೇವಲ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದು ಆದರೆ ಹೀಗೆ ಕಂಪ್ಯೂಟರ್ ಮೊಬೈಲ್ ನೋಡುವುದರಿಂದ ಹಲವಾರು ರೀತಿಯ ತೊಂದರೆಗಳು ಆಗುತ್ತವೆ ಎಂದು ಎಲ್ಲರಿಗೂ ಗೊತ್ತು ಆದರೂ ಅವುಗಳ ಬಳಕೆಯನ್ನು ಮಾತ್ರ ಕಡಿಮೆ ಮಾಡುವುದಿಲ್ಲ. ಹೀಗೆ ನಿತ್ಯ ಸದಾ ಮೊಬೈಲ್ ಕಂಪ್ಯೂಟರ್ ನೋಡುತ್ತಿದ್ದರೆ ಆ ಬೆಳಕಿನಿಂದ ಕಣ್ಣುಗಳಿಗೆ ತೊಂದರೆ ಆಗುವುದು ನಿಜ ಕೆಲವೊಮ್ಮೆ ಇದರಿಂದ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬಂದು ಬಿಡುತ್ತದೆ. ಇನ್ನು ಇವುಗಳನ್ನು ನೋಡುವುದರಿಂದ ಎಲ್ಲರಿಗೂ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂದರೆ ಕಣ್ಣಿನ ಉರಿ. ಅಲ್ಲವೇ ಅದಕ್ಕಾಗಿ ಕಂಪ್ಯೂಟರ್ ಮೊಬೈಲ್ ನೋಡಿ ಕಣ್ಣು ಉರಿ ಬಂದರೆ ಹೀಗೆ ಮಾಡಿ ಕಣ್ಣಿನ ಉರಿಯನ್ನು ಹೋಗಿಸಿಕೊಳ್ಳಿ.ಹಾಗಾದರೆ ಏನು ಮಾಡಬೇಕು ಎಂದು ತಿಳಿಯೋಣ ಬನ್ನಿ.

ಪ್ರತಿಯೊಬ್ಬರ ಮನೆಯಲ್ಲೂ ಹೆಸರು ಕಾಳು ಇರುತ್ತದೆ ಅಲ್ಲವೇ ಆ ಕಾಳನ್ನು ಚೆನ್ನಾಗಿ ಪುಡಿ ಮಾಡಿ ನೀರಲ್ಲಿ ಕಲಸಿ ಪೇಸ್ಟ್ ರೀತಿ ಮಾಡಿಕೊಳ್ಳಿ ಇದನ್ನು ನಿಮ್ಮ ಮುಖ ಮತ್ತು ಕಣ್ಣಿನ ರೆಪ್ಪೆಯ ಮೇಲ್ಭಾಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಬೇಕು ಹೀಗೆ ಮಾಡಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ. ಬಸಳೆ ಸೊಪ್ಪಿನ ರಸಕ್ಕೆ ಸ್ವಲ್ಪ ಬೆಣ್ಣೆ ಹಾಕಿ ಕಲಸಿ ಅದನ್ನು ಸ್ವಲ್ಪ ಹತ್ತಿಯ ಮೇಲೆ ಹಾಕಿಕೊಂಡು ಅದನ್ನು ಕಣ್ಣುಗಳ ಮೇಲೆ ಇಟ್ಟುಕೊಂಡರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ.

ಸೌತೆಕಾಯಿಯನ್ನು ವೃತ್ತ ಕಾರದಲ್ಲಿ ಕಟ್ ಮಾಡಿ ಅದನ್ನು ಕಣ್ಣಿನ ಮೇಲೆ ಇಟ್ಟುಕೊಂಡರೆ ಕಣ್ಣಿನ ಉರಿ ಕಡಿಮೆ ಆಗುತ್ತದೆ. ಶ್ರೀಗಂಧವನ್ನು ರೋಸ್‌ವಾಟರ್‌ನಲ್ಲಿ ಕಲಸಿ ಕಣ್ಣಿನ ರೆಪ್ಪೆಗಳ ಮೇಲೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ತೊಳೆದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ. ಕೊತ್ತಂಬರಿ ಬೀಜದಿಂದ ಕಷಾಯ ಮಾಡಿ ಅದನ್ನು ತಣ್ಣಗೆ ಹಾರಿಸಿ ಅದರಲ್ಲಿ ಹತ್ತಿಯಲ್ಲಿ ನೆನೆಸಿ ಆ ಹತ್ತಿಯನ್ನು ಕಣ್ಣುಗಳ ಮೇಲೆ ಇಟ್ಟುಕೊಂಡರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.

ರೋಸ್ ವಾಟರ್ ನಿಂದ ಕಣ್ಣು ಶುಚಿಗೊಳಿಸಿದರೆ ಕಣ್ಣು ಉರಿ ಕಡಿಮೆಯಾಗುತ್ತದೆ. ಗರಿಕೆಯಲ್ಲಿ ಪೇಸ್ಟ್‌ ಮಾಡಿ ಅದನ್ನು ರಾತ್ರಿ ಮಲಗುವ ಮುನ್ನ ಕಣ್ಣಿನ ರೆಪ್ಪೆ ಮೇಲೆ ಹಚ್ಚಿಕೊಂಡು 30 ನಿಮಿಷ ಬಿಟ್ಟು ತೊಳೆದರೆ ಕಣ್ಣು ಉರಿ ಕಡಿಮೆಯಾಗುತ್ತದೆ. ನುಗ್ಗೆ ಸೊಪ್ಪನ್ನು ನುಣ್ಣಗೆ ಅರೆದು ಆ ರಸವನ್ನು ಕಣ್ಣಿನ ರೆಪ್ಪೆ ಮೇಲೆ ಹಚ್ಚಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ. ಆಲೂಗೆಡ್ಡೆ ಕತ್ತರಿಸಿ ಕಣ್ಣಿಗೆ ಇಟ್ಟರೆ ಕಣ್ಣಿನ ಉರಿ ಕಡಿಮೆಯಾಗುವುದು. ಹೀಗೆ ಮಾಡಿದರೆ ಸಾಕು ಸುಲಭವಾಗಿ ಕಣ್ಣಿನ ಉರಿಯನ್ನು ಕಡಿಮೆ ಮಾಡಿಕೊಳ್ಳಬಹುದು. ನಮ್ಮ ವೆಬ್ಸೈಟ್ ನಲ್ಲಿ ಪ್ರಕಟವಾದ ಎಲ್ಲ ಮಾಹಿತಿ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here