ಜನಕ್ಕೆ ಫ್ರೀ ಉಟ ಕೊಡುವ ಹೋಟಲ್ ಇದು

0
1258

ಈ ಪ್ರಪಂಚದಲ್ಲಿ ಹಣ ಇಲ್ಲದೆ ಯಾವುದೇ ಹೋಟೆಲ್ ನಲ್ಲಿ ಉಚಿತವಾಗಿ ಉಟ ಕೊಡಲ್ಲ ಬಿಡಿ ಅಕಸ್ಮಾತ್ ಅಂತ ಹೋಟಲ್ ಇದ್ರೂ ಅದೇನು ರಾಜಕೀಯ ಗಿಮಿಕ್ ಆಗಿರುತ್ತೆ. ಲಾಭ ಇಲ್ಲ ಅಂದ್ರೆ ಹೆತ್ತ ತಾಯಿಗೂ ಒಂದು ಹೊತ್ತು ಅನ್ನ ಹಾಕೋಕೆ ಸ್ವಂತ ಮಕ್ಕಳೇ ಹಿಂದೆ ಮುಂದೆ ನೋಡ್ತಾ ಇರ್ತಾರೆ ಇಂತಹ ಜನರ ಮಧ್ಯೆ ಉಚಿತವಾಗಿ ಉಟ ಕೊಟ್ಟು ನಿಮಗೆ ಇಷ್ಟ ಇದ್ರೆ ಮಾತ್ರ ಹಣ ಕೊಡಿ ಇಲ್ಲವೇ ಫ್ರೀ ಆಗಿಯೇ ತಿನ್ನಿ ಎಂದು ಹೇಳುವ ವಿಚಿತ್ರ ಹೋಟಲ್ ಒಂದು ಸಹ ಇದೆ.

ನಾವು ಯಾವುದೇ ಹೋಟೆಲ್ ಗೆ ಹೋದರು ಎಲ್ಲ ಕಡೆ ಮೊದಲು ಎಲ್ಲ ವಿಧದ ತಿನಿಸುಗಳಿಗೂ ನಿಗದಿತ ಬೆಲೆಯನ್ನು ಹಾಕಿರುತ್ತಾರೆ. ಆದರೆ ಯಶೋಧಮ್ಮ ಎಂಬುವ ಮಹಿಳೆಯೊಬ್ಬಳು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯಿಂದ ಎರಡು ಕಿ ಮಿ ದೂರ ಇರುವ ರೈಲ್ವೆ ಸ್ಟೇಷನ್ ಹತ್ತಿರ ಯಶೋಧಮ್ಮ ಹೋಟೆಲ್ ಎಂದು ಒಂದು ಹೋಟೆಲ್ ಅನ್ನು ಇಟ್ಟುಕೊಂಡಿದ್ದಾರೆ. ಆ ಹೋಟೆಲ್ ಅಲ್ಲಿ ಯಾವುದೇ ಆಹಾರಕ್ಕೆ ಯಾವುದೇ ರೀತಿಯ ನಿಗದಿತ ಬೆಲೆ ಇಲ್ಲ. ಜಿಎಸ್ಟಿ ಬಿಲ್ ಇಲ್ಲ ಇದರ ಬದಲಿಗೆ ಒಂದು ಪ್ಲಾಸ್ಟಿಕ್ ಬುಟ್ಟಿಯನ್ನು ಇಟ್ಟಿರುತ್ತಾರೆ ಅದೇ ಈ ಹೋಟೆಲ್ ನ ಕ್ಯಾಷ್ ಕೌಂಟರ್.

ಹಸಿವು ಎಂದು ಹೋದ ತಕ್ಷಣ ಹೊಟ್ಟೆ ತುಂಬುವ ತನಕ ಅಲ್ಲಿ ಎಷ್ಟು ಬೇಕಾದರೂ ಸೇವನೆ ಮಾಡಬಹುದು ಆದರೆ ನಾವು ಎಷ್ಟು ಸೇವನೆ ಮಾಡಿದ್ದೇವೆ ಎಂದು ತಿಳಿದು ನಮ್ಮ ಬಳಿ ದುಡ್ಡು ತೆಗೆದುಕೊಳ್ಳುವುದಿಲ್ಲ. ನಮ್ಮ ಬಳಿ ಎಷ್ಟು ಇದಿಯೋ ನಮಗೆ ಎಷ್ಟು ಹಣ ಕೊಡುವುದಕ್ಕೆ ಆಗುತ್ತದೋ ಅಷ್ಟನ್ನು ಆ ಪ್ಲಾಸ್ಟಿಕ್ ಬುಟ್ಟಿಯ ಹೊಳಗೆ ಹಾಕಬೇಕು ಅಷ್ಟೇ. ಅಲ್ಲಿ ಯಾವುದೇ ಒತ್ತಾಯ ಪೂರ್ವಕವಾಗಿ ಹಣ ಕೇಳೋದಿಲ್ಲ. ಈ ಹೋಟೆಲ್ ನಲ್ಲಿ ಕೇವಲ ಯಶೋಧಮ್ಮ ಒಬ್ಬರೇ ಕೆಲಸ ಮಾಡುತ್ತಾರೆ ಯಾವುದೇ ರೀತಿಯ ಕೆಲಸ ಗಾರರನ್ನು ಇವರು ಇಟ್ಟುಕೊಂಡಿಲ್ಲ. ಜೊತೆಗೆ ಈ ಹೋಟೆಲ್ ಅಲ್ಲಿ ಸಸ್ಯಹಾರಿ ಅಹಾರದ ಜೊತೆಗೆ ಮಾಂಸಹಾರಿ ಆಹಾರ ಕೂಡ ಸಿಗುತ್ತದೆ.

ಎಷ್ಟೇ ಕಷ್ಟ ಆದರೂ ಕೂಡ ಯಾವುದೇ ಕಾರಣಕ್ಕೂ ಇವರು ಲಾಭದ ಆಸೆಯನ್ನು ಪಡುವುದಿಲ್ಲ ಜೊತೆಗೆ ಅಕ್ಕ ಪಕ್ಕದವರ ಹಸಿವು ತಿರಿಸುವರಲ್ಲಿ ಸಿಗುವ ತೃಪ್ತಿ ಇನ್ನೂ ಯಾವುದರಲ್ಲಿ ಸಿಗುತ್ತದೆ ಎನ್ನುವ ಮನಸ್ಸು ದೊಡ್ಡ ಗುಣ ಈ ಯಶೋಧಮ್ಮ ಅವರದು. ಇಲ್ಲಿನ ರುಚಿಕರ ಆಹಾರ ಎಷ್ಟರ ಮಟ್ಟಿಗೆ ಇದೆ ಅಂದ್ರೆ ದೊಡ್ಡ ದೊಡ್ಡ ಅಧಿಕಾರಿಗಳು ಪ್ರತಿ ನಿತ್ಯ ಈ ಅಜ್ಜಿಯ ಉಟವನ್ನು ತಪ್ಪದೇ ಸವಿಯುತ್ತಾರೆ. ಮನೆಯಲ್ಲಿ ಮಾಡುವ ರೀತಿಯಲ್ಲೇ ಇಲ್ಲಿ ಅಡುಗೆ ಇರುತ್ತದೆ. ಯಶೋದಮ್ಮ ಅವರು ತಮಗೆ ಎಷ್ಟೇ ಕಷ್ಟ ಆದರು ಪರವಾಗಿಲ್ಲ ಜನಕ್ಕೆ ಹಸಿವನ್ನು ನೀಗಿಸಬೇಕು ಒಂದು ಹೇಳುತ್ತಾರೆ. ನಿತ್ಯ ಇಲ್ಲಿ 500 ಕ್ಕೂ ಹೆಚ್ಚು ಮಂದಿ ಊಟ ಮಾಡುತ್ತಾರೆ ಇವರ ಅಡುಗೆಯ ಬಗ್ಗೆ ನಮ್ಮ ತಂಡದ ಜನರು ವಿಚಾರಣೆ ಮಾಡಿದಾಗ ಇಲ್ಲಿನ ರುಚಿ ಕೂಡ ಅಮೃತದ ರೀತಿ ಇದೆ ಎಂದು ಇಲ್ಲಿ ಊಟ ಮಾಡುವವರು ತಿಳಿಸುತ್ತಾರೆ.

LEAVE A REPLY

Please enter your comment!
Please enter your name here