ಈಗಂತೂ ಎಲ್ಲರ ಬಳಿಯೂ ಮೊಬೈಲ್ ಇದ್ದೆ ಇರುತ್ತದೆ ನಮ್ಮ ಹಣಕ್ಕೆ ತಕ್ಕಂತೆ ಮೊಬೈಲ್ ಗಳು ಕೈ ಸೇರುತದೆ ಆದರೆ ಇತ್ತೇಚೆಗೆ ಬಿಟ್ಟ ಕೆಲವು ಮೊಬೈಲ್ ಗಳಲ್ಲಿ ವಾಟರ್ ರೆಸಿಸ್ತೆಂಟ್ ಇದ್ದರೆ ಶೇಕಡಾ ಎಂಬತ್ತರಷ್ಟು ಜನರು ಉಪಯೋಗ ಮಾಡುವ ಮೊಬೈಲ್ ನಲ್ಲಿ ವಾಟರ್ ಪ್ರೂಫ್ ಇರೋದಿಲ್ಲ. ಕೆಲವೊಮ್ಮೆ ನಾವು ಎಷ್ಟೇ ಜಾಗೃತವಾಗಿ ಇದ್ದರು ಸಮಸ್ಯೆ ಎಂಬುದು ಎದುರಾಗಬಹುದು ಆ ಸಮಸ್ಯೆಗಳಲ್ಲಿ ಮೊಬೈಲ್ ನೀರೊಳಗೆ ಬಿದ್ದು ಹೋಗುವುದು ಎಲ್ಲಾದರೂ ಪ್ರವಾಸ ಹೋದಾಗ ಇಲ್ಲ ಯಾವುದಾದರೂ ನೀರಿನ ಸ್ಥಳದಲ್ಲಿ ಇದ್ದಾಗ ಕೈ ತಪ್ಪಿ ಮೊಬೈಲ್ ನೀರಿನ ಒಳಗಡೆ ಬಿದ್ದು ಹೋಗುತ್ತದೆ ಆದರೆ ಮೊಬೈಲ್ ನೀರೊಳಗೆ ಬಿದ್ದ ತಕ್ಷಣ ಎಲ್ಲರೂ ಅಂದು ಕೊಳ್ಳುವುದು ಮೊಬೈಲ್ ಕೆಟ್ಟು ಹೋಯಿತು ಎಂದು
ಜೊತೆಗೆ ಎಲ್ಲರೂ ಮಾಡುವುದು ನೀರೊಳಗೆ ಬಿದ್ದಿರುವ ಮೊಬೈಲ್ ಅನ್ನು ತೆಗೆದುಕೊಂಡು ತಕ್ಷಣ ಆನ್ ಮಾಡುತ್ತಾರೆ ಆನ್ ಆಗಲಿಲ್ಲ ಎಂದು ಚಾರ್ಜ್ ಗೆ ಹಾಕುತ್ತಾರೆ ಹೀಗೆ ಮಾಡುವುದರಿಂದ ಮೊಬೈಲ್ ಬ್ಲಾಸ್ಟ್ ಆಗುವು ಸಂಭವ ಹೆಚ್ಚಿದೆ ಇಲ್ಲವೇ ಮೊಬೈಲ್ ಶಾಶ್ವತವಾಗಿ ಆನ್ ಆಗದೆ ಇರುವ ರೀತಿ ಆಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ನೀರೊಳಗೆ ಬಿದ್ದ ಮೊಬೈಲ್ ಅನ್ನು ತಕ್ಷಣ ತೆಗೆದುಕೊಂಡು ಆನ್ ಮಾಡುವುದು ಬೇಡ ಮತ್ತು ಚಾರ್ಜ್ ಮಾಡುವುದು ಬೇಡ.

ಮೊಬೈಲ್ ನೀರೊಳಗೆ ಬಿದ್ದರು ಸಹ ಮೊಬೈಲ್ ಅನ್ನು ಸರಿ ಪಡಿಸಿಕೊಳ್ಳಬಹುದು ಅದು ಹೇಗೆ ಹಾಗಾದರೆ ಮೊಬೈಲ್ ನೀರೊಳಗೆ ಬಿದ್ದ ತಕ್ಷಣ ಏನು ಮಾಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ಮೊಬೈಲ್ ನೀರಲ್ಲಿ ಬಿದ್ದ ತಕ್ಷಣ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡ ಬೇಕು. ನಂತರ ಅದರ ಎಲ್ಲ ಬಿಡಿ ಭಾಗಗಳನ್ನ ಬೇರೆ ಬೇರೆಯಾಗಿ ತೆಗೆಯಬೇಕು. ಅಂದರೆ ಬ್ಯಾಟರಿ ಸಿಮ್ ಮತ್ತು ಮೆಮೊರಿ ಕಾರ್ಡ್ ನಂತರ ಚೆನ್ನಾಗಿ ಒಣಗಿರುವ ಬಟ್ಟೆಯಿಂದ ಮೊಬೈಲ್ ಅನ್ನು ಸುತ್ತಿ ಅದರ ನೀರನ್ನು ಒರೆಸಬೇಕು. ಮುಖ್ಯವಾಗಿ ನೀರು ಹೆಡ್ ಫೋನ್ ರಂದ್ರ ಅಥವಾ ಚಾರ್ಜಿಂಗ್ ಮಾಡುವ ಜಾಗದಲ್ಲಿ ಹೋಗಿರುತ್ತದೆ ಅದನ್ನು ಚೆನ್ನಾಗಿ ತೆಗೆಯಬೇಕು.
ನಂತರ ಮೊಬೈಲ್ ನ ಎಲ್ಲ ಭಾಗಗಳನ್ನು ಹಾಗೂ ಮೊಬೈಲ್ ಅನ್ನು ಮೂರು ದಿನಗಳ ಕಾಲ ಅಕ್ಕಿಯ ಡಬ್ಬದ ಒಳಗೆ ಹಾಕಿ ಇಡಬೇಕು. ಏಕೆಂದರೆ
ಅಕ್ಕಿಯಲ್ಲಿ ನೀರನ್ನು ಹೀರುವ ಗುಣವಿರುತ್ತದೆ ಇದು ಮೊಬೈಲ್ ಒಳಗೆ ಹೋದ ನೀರನ್ನ ಹಾಗು ಮದರ್ ಬೋರ್ಡ್ ತೇವವಾಗಿದ್ದರೆ ನೀರನ್ನ ಹೀರುತ್ತದೆ ಈ ಅಕ್ಕಿ. ಹಾಗೂ ಈ ಮೊಬೈಲ್ ಅನ್ನು ಎರಡು ಅಥವಾ ಮೂರು ದಿನಗಳವರೆಗೆ ತೆಗೆಯಬಾರದು. ನಂತರ ಅಕ್ಕಿಯಿಂದ ಮೊಬೈಲ್ ಹೊರತೆಗೆದು ಅದರ ಬ್ಯಾಟರಿಯನ್ನು ಹಾಕಿ ಆನ್ ಮಾಡಿದರೆ ಮೊಬೈಲ್ ಆನ್ ಆಗುತ್ತದೆ ಜೊತೆಗೆ ಯಾವುದೇ ರೀತಿಯಲ್ಲಿ ಸಂಶಯ ಬೇಡವೇ ಬೇಡ ಮೊಬೈಲ್ ಹಾಳಾಗುವುದಿಲ್ಲ. ಹೀಗೆ ಮಾಡಿದರೆ ನೀರಿನಲ್ಲಿ ಬಿದ್ದಿರುವ ನಿಮ್ಮ ಮೊಬೈಲ್ ಕೆಟ್ಟು ಹೋಗುವುದನ್ನು ತಡೆಯಬಹುದು.