ಸೆಕ್ಯೂರಿಟಿ ಗಾರ್ಡ್ ಚಿನ್ನದ ಪದಕ ಗೆದ್ದ ಸ್ಪೂರ್ತಿದಾಯಕ ಕಥೆ ಎಲ್ಲರು ತಿಳಿದುಕೊಳ್ಳಿ

0
940

ಇಂದಿನ ದಿನಗಳಲ್ಲಿ ಓದು ಎಂಬುದು ಎಷ್ಟು ಮುಖ್ಯವಾಗಿದೆ ಅಂದರೆ ಅಲ್ಪ ಸ್ವಲ್ಪ ಓದಿ ತಿಳಿದುಕೊಂಡಿದ್ದಾರೆ ಮಾತ್ರ ಜೀವನವನ್ನು ನೆಡೆಸಲು ಸದ್ಯ ಅಷ್ಟರ ಮಟ್ಟಿಗೆ ಆಧುನಿಕ ಪ್ರಪಂಚ ಬೆಳೆದು ನಿಂತಿದೆ. ಇದರ ಜೊತೆಗೆ ಒಬ್ಬ ಮನುಷ್ಯ ತಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅವರು ಒಳ್ಳೆಯ ಹೆಸರು ಗಳಿಸಬೇಕು ಎಲ್ಲರಿಗೂ ಮಾದರಿಯಾಗಬೇಕು ಹೀಗೆ ಇದ್ದರೆ ಆ ಮನುಷ್ಯನ ಜೀವನ ಸಾರ್ಥಕವಾಗುತ್ತದೆ. ಇಂದು ನಮ್ಮ ಜ್ಞಾನಕ್ಕಾಗಿ ಸ್ವಲ್ಪ ಆದರು ಓದಿರಬೇಕು ಅಥವ ಅಪ್ಪ ಮಾಡಿಟ್ಟ ಆಸ್ತಿ ಚೆನ್ನಾಗಿ ಇರಬೇಕು ಈ ಎರಡು ಇಲ್ಲವೇ ಇಲ್ಲ ಅಂದ್ರೆ ಜೀವನ ಮುಗಿದ ಕಥೆ ಬಿಡಿ. ಕಷ್ಟ ಪಟ್ಟವರಿಗೆ ಮಾತ್ರ ಹಣದ ಬೆಲೆ ಗೊತ್ತಿರುತ್ತದೆ ಹಾಗೆಯೇ ಕಷ್ಟ ಪಟ್ಟು ಓದಿದವರಿಗೆ ಮಾತ್ರ ಅದರ ಬೆಲೆ ಗೊತ್ತಿರುತ್ತದೆ.

ಅಂತಹ ಅಪರೂಪದ ವ್ಯಕ್ತಿಯಾದ ರಮೇಶ್ ಎನ್ನು ಹುಡುಗನ ಜೀವನದ ಕಥೆಯನ್ನು ನೋಡೋಣ ಬನ್ನಿ. ರಮೇಶ್ ಎನ್ನುವ ಒಬ್ಬ ವ್ಯಕ್ತಿ ರಾತ್ರಿ ಸಮಯದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಾರೆ. ಹಾಗೂ ಬೆಳಗ್ಗೆ ಸಮಯದಲ್ಲಿ ಕಾಲೇಜಿಗೆ ಹೋಗುತ್ತಾರೆ. ಪಾರ್ಟ್ ಟೈಂ ಮಾಡಿ ಕಲಿಯುವುದು ಅಷ್ಟು ಸುಲಭ ಅಲ್ಲ. ಹಾಲು ಮಾರಿ ಪೇಪರ್ ಹಾಕಿ ಕಲಿತು ದೊಡ್ಡ ವ್ಯಕ್ತಿಗಳಾದವರನ್ನು ನಾವು ನೋಡಿದ್ದೇವೆ. ಹಾಗೆಯೇ ರಾತ್ರಿ ನಿದ್ದೆ ಬಿಟ್ಟು ಹಗಲು ಕಲಿತು ಚಿನ್ನದ ಪದಕ ಗಳಿಸಿದ ಈ ರಮೇಶ್ ಯುವಕನ ಕಥೆ ಒಮ್ಮೆ ತಿಳಿಯೋಣ ಬನ್ನಿ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಗೂಂಡೂರು ಗ್ರಾಮದ ರಮೇಶ ಮನೆಯಲ್ಲಿ ಬಡತನ ಮತ್ತು ಆರ್ಥಿಕ ಸಮಸ್ಯೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಕಾಲು ಚಾಚಿ ಮಲಗಲು ಜಾಗ ಇಲ್ಲ ಇಷ್ಟು ಇದ್ದರೂ ಓದುವ ಛಲವನ್ನು ಬಿಡದೇ ಸಾಧನೆ ಮಾಡಿದ್ದಾರೆ. ಮನೆಯಲ್ಲಿ ಬಡತನ ಇದೆಯೆಂದು ಹೆತ್ತವರು ಕೆಲಸಕ್ಕೆ ಹೋಗು ಎನ್ನುತ್ತಿದ್ದರು. ಅದಕ್ಕಾಗಿ ಕೂಲಿ ಇನ್ನಿತರ ಕೆಲಸಗಳನ್ನು ಮಾಡುತ್ತಲೇ ತನ್ನ ಕಲಿಕೆಯನ್ನು ಮುಂದುವರೆಸುತ್ತಾನೆ. ರಾತ್ರಿ ಎಲ್ಲ ಎಟಿಎಂ ಮೆಷಿನ್ ಅನ್ನು ಕಾಯುವ ಕೆಲಸಕ್ಕೆ ಸೇರುತ್ತಾನೆ. ಬೆಳಿಗ್ಗೆ ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ಎಂ.ಎ, ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ. ಸ್ನಾತಕೋತ್ತರ ಪದವಿಯ ಕನ್ನಡ ವಿಭಾಗದಲ್ಲಿ 2200 ಅಂಕಗಳಿಗೆ 1734 ಅಂಕ ಪಡೆಯುವ ಮೂಲಕ ಶೇಕಡ 78.8 ರಷ್ಟುಸಾಧನೆ ಮಾಡಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ.

ಜೊತೆಗೆ ಇವರು ಕೆಲಸ ಮಾಡುತ್ತಲೇ ಬಿ ಎಡ್ ಪದವಿಯನ್ನು ಗಳಿಸಿಕೊಂಡಿದ್ದಾರೆ. ಮನೆಯ ಎಲ್ಲ ಜವಾಬ್ದಾರಿ ಹೊತ್ತುಕೊಂಡು ಮನೆಯವರ ಕಷ್ಟಕ್ಕೆ ಸ್ಪಂದಿಸುತ್ತ ತಂದೆ ತಾಯಿಯರ ಕಷ್ಟಕ್ಕೆ ಭಾಗಿಯಾಗಿದ್ದರೆ. ನೋಡಿ ಎಷ್ಟೇ ಕಷ್ಟ ಇದ್ದರು ಓದಬೇಕು ಏನಾದರೂ ಸಾಧಿಸಬೇಕು ಎಂಬುವ ಹಠ ನಮ್ಮನ್ನು ಯಾವ ಮಟ್ಟಕ್ಕೆ ಕೆಡುಕೊಂಡು ಹೋಗುತ್ತದೆ ಹಾಗಾಗಿ ಮನುಷ್ಯನಿಗೆ ಛಲ. ಆತ್ಮವಿಶ್ವಾಸ ಎಂಬುದು ಇರಬೇಕು. ನಮ್ಮಲ್ಲೂ ಕೆಲವು ಮಕ್ಕಳು ಇದ್ದಾರೆ ಅವರಿಗೆ ಎಲ್ಲ ರೀತಿಯ ಸೌಲಭ್ಯ ಕೊಟ್ಟು ಲಕ್ಷ ಲಕ್ಷ ಹಣ ಸುರಿದು ಕಾಲೇಜಿಗೆ ಕಳಿಸಿದರೆ ಹಲವು ರೀತಿಯ ದುಶ್ಚಟಗಳಿಗೆ ದಾಸರಾಗಿ ತಮ್ಮ ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ತನ್ನ ತಂದೆಗೆ ಒಳ್ಳೆ ಮಗಳನು ಆಗದೆ ಇತ್ತ ಓದಿನ ಕಡೆ ಗಮನ ಕೂಡ ಕೊಡದೆ ಜೀವನ ಹಾಳು ಮಾಡಿಕೊಳ್ಳುವ ಸಾಕಷ್ಟು ವಿದ್ಯಾರ್ಥಿಗಳು ನಮ್ಮ ಕಣ್ಣ ಮುಂದೆಯೇ ಸಿಗುತ್ತಾರೆ ಇಂತಹ ಹಲವು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಹುಡುಗ ರಮೇಶ್.

LEAVE A REPLY

Please enter your comment!
Please enter your name here