ಕೂದಲು ಉದುರುವ ಸಮಸ್ಯೆ ಮತ್ತು ಸಾಮಾನ್ಯ ಜ್ವರ ಮೈ ಕೈ ನೋವು ಇನ್ನು ಹತ್ತಾರು ಸಮಸ್ಯೆಗೆ ಹೂವು ಮನೆ ಮದ್ದು

0
1261

ಸಂಪಿಗೆ ಹೂ ಕಂಡರೆ ಯಾರು ಇಷ್ಟ ಪಡುವುದಿಲ್ಲ ಹೇಳಿ ಆ ಸಂಪಿಗೆ ಹೂವಿನ ಸುವಾಸನೆಗೆ ಎಲ್ಲರೂ ಮೈ ಮರೆಯುತ್ತಾರೆ. ಈ ಸಂಪಿಗೆ ಹೂ ಕಂಡ ತಕ್ಷಣ ಎಲ್ಲ ಹೆಣ್ಣು ಮಕ್ಕಳು ತಮ್ಮ ತಲೆಗೆ ಮುಡಿದುಕೊಳ್ಳುತ್ತಾರೆ. ಈ ಸಂಪಿಗೆ ಹೂವನ್ನು ದೇವರ ಪೂಜೆಗು ಕೂಡ ಬಳಸುತ್ತಾರೆ. ಈ ಸಂಪಿಗೆ ಹೂವಿನಲ್ಲೂ ಎರಡು ರೀತಿಯ ಸಂಪಿಗೆ ಹೂವನ್ನು ಕಾಣಬಹುದು. ಸಂಪಿಗೆ ಹೂವು ಸಾಮಾನ್ಯವಾಗಿ ವರ್ಷದ ಮೇ ಅಥವಾ ಅಕ್ಟೋಬರ್ ತಿಂಗಳಲ್ಲಿ ಹೂ ಬಿಡುತ್ತದೆ ಇದರಲ್ಲಿ ಕೆಂಡಸಂಪಿಗೆ ಬಹು ಸುವಾಸನೆಯುಳ್ಳದ್ದು. ಬಿಳಿ ಬೂದು ಕಡುಹಳದಿ ನೀಲ ಹಳದಿ ಹೀಗೆ ಹಲವಾರು ಬಣ್ಣಗಳಲ್ಲಿ ಇದು ಹೂವು ಬಿಡುತ್ತದೆ ಬಿಡುತ್ತದೆ.

ಈ ಹೂವು ಸಾಮಾನ್ಯವಾಗಿ ಉದ್ಯಾನಗಳಲ್ಲಿ ಸಸ್ಯೋದ್ಯಾನಗಳಲ್ಲಿ ದೇವಸ್ಥಾನದ ಅಂಗಳದಲ್ಲಿ ಹಾಗೂ ಕೆಲವರ ಮನೆಗಳ ಅಂಗಳದಲ್ಲಿ ಅಥವಾ ಹಿತ್ತಲಲ್ಲಿ ಕಾಣಸಿಗುತ್ತದೆ. ಸಂಸ್ಕೃತದಲ್ಲಿ ಚಂಪಕ ಸುವರ್ಣ ತೆಲುಗಿನಲ್ಲಿ ಚಂಪಕಮು ಇಂಗ್ಲಿಷ್‌ನಲ್ಲಿ ಗೋಲ್ಡನ್ ಚಂಪಕ್ ಎಂದು ಕರೆಸಿಕೊಳ್ಳುವ ಈ ಹೂವಿನ ಸಸ್ಯನಾಮ ಮೈಕೇಲಿಯ ಚಂಪಕ. ಈ ಸಂಪಿಗೆ ಹೂವನ್ನು ಕೇವಲ ಪೂಜೆಗೆ ಹೆಣ್ಣು ಮಕ್ಕಳ ಮುಡಿಗೆ ಅಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಉಪಯೋಗ ಆಗುತ್ತದೆ. ಹಾಗಾದರೆ ಈ ಸಂಪಿಗೆ ಹೂವಿನಿಂದ ಏನೆಲ್ಲ ಉಪಯೋಗ ಆಗುತ್ತದೆ ಎಂದು ತಿಳಿಯೋಣ ಬನ್ನಿ.

ಕುದಿಯುವ ನೀರಿಗೆ ಸಂಪಿಗೆ ಹೂವನ್ನು ಹಾಕಿ ಚೆನ್ನಾಗಿ ಕುದಿಸಬೇಕು ನಂತರ ಅದು ಚೆನ್ನಾಗಿ ಹಾರಿದ ನಂತರ ಅದನ್ನು ಕುಡಿಯುವುದರಿಂದ ಮೂತ್ರ ಕಟ್ಟುವಿಕೆ. ಮೂತ್ರದ ಸಮಸ್ಯೆಗಳು ಹೋಗುತ್ತವೆ. ಸಂಪಿಗೆ ಮರದಲ್ಲಿ ಬರುವ ಚಕ್ಕೆಯಲ್ಲಿ ಕಷಾಯವನ್ನು ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ. ಸಂಪಿಗೆ ಮರದ ಎಲೆಗಳ ರಸವನ್ನು ಜೇನುತುಪ್ಪದ ಜೊತೆ ಸೇವಿಸಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಸಂಪಿಗೆ ಹೂವಿನಿಂದ ತಯಾರಿಸಿದ ಎಣ್ಣೆಯನ್ನು ತಲೆ ನೋವು ಮತ್ತು ದೇಹದಲ್ಲಾಗುವ ಗಂಟುಗಳ ನೋವಿಗೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ದೇಹದ ಯಾವುದಾದರು ಭಾಗದಲ್ಲಿ ದೊಡ್ಡ ಗಾಯವಾಗಿದ್ದರೆ ಸಂಪಿಗೆ ಮರದ ಚಕ್ಕೆಯ ಕಷಾಯದಿಂದ ಗಾಯವನ್ನು ತೊಳೆದರೆ ಗಾಯ ಬೇಗ ವಾಸಿಯಾಗುತ್ತದೆ. ಪ್ರತಿ ದಿನ ಸಂಪಿಗೆ ಮರದ ಎಲೆಗಳನ್ನು ಬಿಸಿ ನೀರಲ್ಲಿ ಹಾಕಿ ಆ ನೀರಲ್ಲಿ 10 ರಿಂದ 15 ನಿಮಿಷ ಕಾಲನ್ನು ಇಟ್ಟುಕೊಂಡರೆ ಕಾಲು ನೋವು ಗುಣವಾಗುತ್ತದೆ.

ಹೆಣ್ಣು ಮಕ್ಕಳ ಮುಟ್ಟಿನ ಸಮಯದ ಕಡಿಮೆ ರಕ್ತಸ್ರಾವ ಆಗುತ್ತಿದ್ದರೆ ಸಂಪಿಗೆ ಮರದ ಚಕ್ಕೆಯ ರಸಕ್ಕೆ ಜೀರಿಗೆ ಪುಡಿ ಮತ್ತು ಸಕ್ಕರೆ ಸೇರಿಸಿ ಸೇವಿಸಿದರೆ ರಕ್ತಸ್ರಾವ ಸರಿಯಾದ ಪ್ರಮಾಣದಲ್ಲಿ ಆಗುತ್ತದೆ. ದೇಹದ ಯಾವುದಾದರು ಭಾಗದಲ್ಲಿ ದೊಡ್ಡ ಗಾಯವಾಗಿದ್ದರೆ ಸಂಪಿಗೆ ಮರದ ಚಕ್ಕೆಯ ಕಷಾಯದಿಂದ ಗಾಯವನ್ನು ತೊಳೆದರೆ ಗಾಯ ಬೇಗ ವಾಸಿಯಾಗುತ್ತದೆ. ನಿಂಬೇಹಣ್ಣಿನ ರಸದಲ್ಲಿ ಸಂಪಿಗೆ ಹೂವುಗಳನ್ನು ರಾತ್ರಿ ಪೂರಾ ನೆನೆಹಾಕಿ ಮುಂಜಾನೆ ಹೂಗಳನ್ನು ಹಿಸುಕಿ ತೆಗೆದು ತಲೆಕೂದಲಿನ ಬುಡಕ್ಕೆ ಹಚ್ಚಿದರೆ ತಲೆಕೂದಲು ಉದುರುವುದು ಹೊಟ್ಟು ಕಡಿಮೆಯಾಗುತ್ತದೆ. ನೋಡಿದರಲ್ಲ ಸಂಪಿಗೆ ಹೂವಿನಲ್ಲಿ ಎಷ್ಟೆಲ್ಲ ಲಾಭಗಳು ಇವೆ ಹಾಗಾಗಿ ಇದರ ಪ್ರಯೋಜನ ಪಡೆದುಕೊಳ್ಳುವುದು ಒಳ್ಳೆಯದು.

LEAVE A REPLY

Please enter your comment!
Please enter your name here