ಜೀವನದಲ್ಲಿ ತುಂಬಾ ಕಷ್ಟ ಇದ್ರೆ ಪರಿಹಾರ ಸಿಗಲು ಈ ದೇಗುಲಕ್ಕೆ ಹೋಗಿ

0
1363

ಇಲ್ಲಿನ ನರಸಿಂಹ ಸ್ವಾಮಿಯು ಸಾಕಷ್ಟು ಶಕ್ತಿಶಾಲಿ ಆಗಿದ್ದು ಅನೇಕ ರೀತಿಯ ಪವಾಡಗಳನ್ನು ಮಾಡುತ್ತಾ ಇದ್ದಾರೆ ಇಲ್ಲಿನ ದೇವರಿಗೆ ಜಾತಿ ಮತ್ತು ಧರ್ಮ ಬೇದ ಎಂಬುದು ಇಲ್ಲವೇ ಇಲ್ಲ ಅದಕ್ಕಾಗಿಯೇ ಅನ್ಯ ಧರ್ಮದ ಜನರು ಈ ದೇವರನ್ನು ಹೆಚ್ಚು ನಂಬುತ್ತಾರೆ. ಭಕ್ತಿಯಿಂದ ಕೋರಿಕೆ ಇಟ್ಟರೆ ಎಂತದೆ ಕಷ್ಟದ ಕೆಲಸ ಇರಲಿ ಅವುಗಳು ಸುಲಲಿತವಾಗಿ ನಡೆಯುತ್ತದೆ. ಈ ದೇಗುಲ ಬೆಂಗಳೂರು ನಗರಕ್ಕೆ ಹತ್ತಿರ ಇದ್ದರು ಸಾಕಷ್ಟು ಜನಕ್ಕೆ ಮಾಹಿತಿ ಇಲ್ಲ ಈ ಪುರಾತನ ದೇಗುಲದ ಸಂಪೂರ್ಣ ಜವಾಬ್ದಾರಿ ಘನ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ನೋಡಿಕೊಳ್ಳುತ್ತದೆ. ಪ್ರತಿ ವರ್ಷ ಇಲ್ಲಿ ಅದ್ದೊರಿ ಜಾತ್ರೆ ನಡೆದು ಲಕ್ಷಾಂತರ ಜನ ಭಾಗಿಯಾಗಿ ನರಸಿಂಹ ದೇವರ ದರ್ಶನ ಪಡೆಯುತ್ತಾರೆ.

ನಮ್ಮ ತಂಡಕ್ಕೆ ತಮ್ಮ ಅನುಭವ ಹಂಚಿಕೊಂಡ ಕೃಷ್ಣ ರಾವ್ ಅವರು ತಮ್ಮ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಭಾವೋದ್ವೇಗಕ್ಕೆ ಒಳಗಾದರು ಬೆಂಗಳೂರು ನಲ್ಲಿ ಸಣ್ಣ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಕೃಷ ರಾವ್ ಅವರ ತಂದೆ ತೀರಿಕೊಂಡ ನಂತರ ಮನೆಯ ಜವಾಬ್ದಾರಿ ಸಣ್ಣ ವಯಸ್ಸಿನಲ್ಲೇ ಇವರ ಮೇಲೆ ಬಿತ್ತು. ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಇದ್ದವರು ಕೆಲವು ಬಾರಿ ನರಸಿಂಹ ಸ್ವಾಮಿಯ ದರ್ಶನ ಪಡೆದು ತಮ್ಮ ಕೋರಿಕೆ ಇಟ್ಟು ಹೋದ ಮೇಲೆ ಕೃಷ್ಣ ರಾವ್ ಅವರು ಇಂದು 2 ಹೋಟೆಲ್ನ ಮಾಲೀಕರು ಆಗಿದ್ದು ಹಂತ ಹಂತವಾಗಿ ಬೆಳೆಯುತ್ತಾ ನಿಂತರು ಇಂದು ಅವರು ಪ್ರತಿ ತಿಂಗಳಿಗೆ ಒಮ್ಮೆ ಆದರು ನರಸಿಂಹ ದೇವರ ದರ್ಶನ ಪಡೆಯುತ್ತಾರೆ. ಉಟಕ್ಕೂ ಕಷ್ಟ ಇದ್ದ ಕೃಷ್ಣ ರಾವ್ ಅವರು ಇಂದು ಲಕ್ಷಾದಿಪತಿ ಆಗಿದ್ದರೆ ಎಲ್ಲವು ನರಸಿಂಹ ಸ್ವಾಮಿಯ ಪವಾಡ ಎನ್ನುತಾರೆ.

ಈ ಗ್ರಾಮದಲ್ಲಿ 18 ನೇ ಶತಮಾನದ ಶ್ರೀ ನರಸಿಂಹಸ್ವಾಮಿ ದೇವಸ್ಥಾನವಿದೆ ಈ ದೇವಸ್ಥಾನದ ತೆರೆಕೋಟೆ ಮತ್ತು ಹಸಿ ಚಿತ್ರಗಳು ಇವೆ. ಈ ದೇವಸ್ಥಾನಕ್ಕೆ ಮೈಸೂರು ರಾಜರ ಕೊಡುಗೆ ಅತ್ಯುತ್ತಮವಾಗಿದೆ ಹಾಗೆಯೇ ಮೈಸೂರು ಸಂಸ್ಥಾನದ ಕೊಡುಗೆಯು ಈ ದೇವಾಲಯಕ್ಕಿದೆ. ಮೈಸೂರು ರಾಜರು ತುಮಕೂರು ಜಿಲ್ಲೆಗೂ ಸಂಬಂಧ ಹೊಂದಿದ್ದು, ತನ್ನ ಸಾಮಂತ ರಾಜರುಗಳ ಮೂಲಕ ಶಿರಾದಲ್ಲಿರುವ ಸೀಬಿ ನರಸಿಂಹಸ್ವಾಮಿ ದೇವಸ್ಥಾನವನ್ನು ನಿರ್ಮಾಣ ಮಾಡಿದರು ಜೊತೆಗೆ ಶ್ರೀರಂಗಪಟ್ಟಣದಲ್ಲಿ ಸಾವಿರ ಎಕರೆ ಜಮೀನನ್ನು ದೇವಸ್ಥಾನಕ್ಕೆ ದಾನವಾಗಿ ಕೊಟ್ಟಿದ್ದಾರೆ. ಸೀಬಿ ಕ್ಷೇತ್ರ ಹಿಂದೆ ಒಂದು ದಟ್ಟ ಅರಣ್ಯವಾಗಿತ್ತು ಅಲ್ಲಿ ಪವಿತ್ರ ಪುರುಷರು ಧ್ಯಾನ -ತಪಸ್ಸು ಮಾಡಿರುವ ಬಗ್ಗೆ ಕುರುಹುಗಳು ಇವೆ. ಪ್ರಹ್ಲಾದನ ಮೊಮ್ಮಗ ಇಲ್ಲಿ ಧ್ಯಾನ ಮಾಡಿದ್ದಾನೆ ಎಂದು ಪುರಾಣ ಹೇಳುತ್ತದೆ.

ಮೊದಲು ಇಲ್ಲಿ ಶ್ರೀಮಂತ ವ್ಯಾಪಾರಿಯೊಬ್ಬರು ಸಣ್ಣ ದೇವಾಲಯವನ್ನು ನಿರ್ಮಿಸಿದರು ನಂತರ ಇತ್ತೀಚಿನ ದಿನಗಳಲ್ಲಿ ಪೂರ್ವಭಾವಿ ದೇವಾಲಯದ ಮೇಲೆ ದೊಡ್ಡ ದೇವಾಲಯವನ್ನು ನಿರ್ಮಿಸಿದವರು ಮೂರು ಶ್ರೀಮಂತ ಸಹೋದರರು ಅವರು ಲಕ್ಷ್ಮಿನರಸಪ್ಪ, ಪುಟ್ಟಣ್ಣ ಮತ್ತು ನಲ್ಲಪ್ಪ ಎಂಬುವರು. ಈ ಮೂರು ಸಹೋದರರು ಮೈಸೂರು ರಾಜ ಟಿಪ್ಪು ಸುಲ್ತಾನನ ಆಸ್ಥಾನದ ನ್ಯಾಯಾಲಯದಲ್ಲಿ ದಿವಾನರಾಗಿದ್ದ ಕಛೇರಿ ಕೃಷ್ಣಪ್ಪನವರ ಪುತ್ರರು. ಈ ದೇವಸ್ಥಾನ ನಿರ್ಮಾಣವಾಗಲು 10 ವರ್ಷಗಳು ತೆಗೆದುಕೊಂಡಿದೆ. 18ನೇ ಶತಮಾನದ ಅಂತ್ಯದಲ್ಲಿ ದ್ರಾವಿಡ ಶೈಲಿಯಲ್ಲಿ ದೇವಸ್ಥಾನ ನಿರ್ಮಾಣವಾಗಿದೆ. ಈ ದೇವಸ್ಥಾನದ ಗೋಪುರ ಮೂರು ಶ್ರೇಣಿಕೃತಗಳಲ್ಲಿ ಬೃಹತ್ ಪ್ರಕಾರದಲ್ಲಿ ನಿರ್ಮಾಣವಾಗಿದೆ. ನವರಂಗವನ್ನು ಸ್ತಂಭಗಳಿಂದ ಒತ್ತುಕೊಟ್ಟು ನಿರ್ಮಿಸಲಾಗಿದೆ ಮತ್ತು ಸುಮಾರು 130 ಸಣ್ಣ ಸಣ್ಣ ಗೂಡುಗಳನ್ನು ದೇವಾಲಯದ ಸಣ್ಣ ವಿಗ್ರಹಗಳ ಸುತ್ತ ಛಾವಣಿಯ ಮೇಲೆ ಕಲಾತ್ಮಕವಾಗಿ ನಿರ್ಮಿಸಲಾಗಿದೆ.ಇಷ್ಟು ಕಲಾತ್ಮಕವಾದ ಹಳೆಯ ಮಾದರಿಯ ದೇಗುಲವನ್ನು ಒಮ್ಮೆ ಆದರೂ ಹೋಗಿ ನೋಡಿ. ಸೀಬಿ ಎಂಬುದೊಂದು ಗ್ರಾಮ ಇದು ತುಮಕೂರು ಜಿಲ್ಲೆಯಲ್ಲಿದೆ. ಬೆಂಗಳೂರಿನಿಂದ ಶಿರಾ ಹೆದ್ದಾರಿಯಲ್ಲಿ ಸುಮಾರು 30 ಕಿಮಿ ದೂರದಲ್ಲಿರುವ ಊರು ಈ ಸೀಬಿ. ಭಗವಂತನ ಮಹಿಮೆ ತಿಳಿದು ಶೇರ್ ಮಾಡಿ ನಿಮಗೂ ಪುಣ್ಯ ಬರಲಿದೆ.

LEAVE A REPLY

Please enter your comment!
Please enter your name here