ಮಕ್ಕಳು ಬುದ್ದಿವಂತರಾಗಬೇಕೇ ಈ ಸಣ್ಣ ಕೆಲಸ ಮಾಡಿ ಸರಸ್ವತಿ ಕೃಪೆ ಸಿಗಲಿದೆ

0
1454

ನಮ್ಮ ಸಂಸ್ಕೃತಿ ಧಾರ್ಮಿಕತೆ ಆಚಾರ ವಿಚಾರಗಳ ಪ್ರಕಾರ ನಾವು ಎಲ್ಲ ದೇವರನ್ನು ಪೂಜಿಸುತ್ತೇವೆ ನಾವು ನಂಬಿರುವುದು ನಮ್ಮ ಒಂದೊಂದು ಸಮಸ್ಯೆಗೆ ಒಂದೊಂದು ದೇವರು ಪರಿಹಾರ ನೀಡುತ್ತಾರೆ ಎಂದು. ಏನು ವಿಘ್ನಗಳು ಬರದೆ ಇರಲಿ ಎಂದು ವಿಘ್ನೇಶ್ವರನನ್ನು ಪ್ರತಿಸುತ್ತವೆ. ನಮ್ಮಿಲ್ಲಿನ ಎಲ್ಲ ಆರ್ಥಿಕ ಸಮಸ್ಯೆಗಳು ಹೋಗಲಿ ಎಂದು ಲಕ್ಷ್ಮಿ ದೇವರನ್ನು ಪ್ರತಿಸುತ್ತೇವೆ ನಮ್ಮ ವಿದ್ಯಾ ಬುದ್ದಿ ನೀಡಲು ಸರಸ್ವತಿ ದೇವಿಯನ್ನು ನೆನೆಯುತ್ತೇವೆ ಅಲ್ಲವೇ. ಹಾಗೇಯೇ ನಮ್ಮ ಹಿಂದಿನ ಜೀವನಕ್ಕೆ ಓದು ಎಂಬುದು ತುಂಬಾ ಮುಖ್ಯ ಅದು ಇಲ್ಲ ಎಂದರೆ ಎಷ್ಟು ಕೀಳು ಭಾವನೆಯಿಂದ ನೋಡುತ್ತಾರೆ ಎಂದು ಗೊತ್ತಲ್ಲವೇ. ಅದಕ್ಕಾಗಿ ಎಲ್ಲ ತಂದೆ ತಾಯಿಯರು ತಮ್ಮ ಮಕ್ಕಳು ಒಳ್ಳೆಯ ವಿದ್ಯಾವಂತರಗಲಿ ಎಂದು ಹರ ಸಾಹಸ ಪಡುತ್ತಾರೆ ದೊಡ್ಡ ದೊಡ್ಡ ಶಾಲೆಗಳಿಗೆ ಸೇರಿಸುತ್ತಾರೆ

ಆದರೆ ಕೆಲವು ಮಕ್ಕಳನ್ನು ಯಾವುದೇ ದೊಡ್ಡ ಶಾಲೆಗೆ ಸೇರಿಸಿದರು ಎಷ್ಟೇ ಹೇಳಿಕೊಟ್ಟರು ವಿದ್ಯಾ ಎಂಬುದು ತಲೆಗೆ ಹತ್ತುವುದಿಲ್ಲ. ಅದಕ್ಕಾಗಿ ಈ ರೀತಿ ಓದಿನಲ್ಲಿ ತುಂಬಾ ಸಮಸ್ಯೆ ಅನುಭವಿಸುತ್ತಿರುವವರು ಓದು ಎಂಬುದು ತಲೆಗೆ ಹತ್ತದೆ ಇರುವವರು ಆ ಸರಸ್ವತಿಯ ಕೃಪೆ ಪಡೆದು ಓದಿನಲ್ಲಿ ಮುನ್ನುಗ್ಗುವುದು ಹೇಗೆ ಎಂದು ತಿಳಿಯೋಣ ಬನ್ನಿ. ಹಗಲು ರಾತ್ರಿ ಎಂಬುದನ್ನು ನೋಡದೆ ಓದಿದರೂ ಓದಿದ್ದು ಸಮಯಕ್ಕೆ ಸರಿಯಾಗಿ ಜ್ಞಾಪಕಕ್ಕೆ ಬರದೆ ವಿದ್ಯಾರ್ಥಿಗಳು ತುಂಬಾ ಖಿನ್ನತೆಗೆ ಒಳಗಾಗುತ್ತಾರೆ.

ಇನ್ನು ಕೆಲ ವಿದ್ಯಾರ್ಥಿಗಳು ಓದಬೇಕು ಅಂತ ಎಷ್ಟು ಆಸೆ ಪಟ್ಟರು ಓದುವ ಸಮಯದಲ್ಲಿ ಏಕಾಗ್ರತೆ ಬರುವುದಿಲ್ಲ. ಇದಕ್ಕೆಲ್ಲ ಏನು ಮಾಡಬೇಕು ಎಂದರೆ ಓದುವ ಮುನ್ನ ಓಂ ಶ್ರೀಮ್ ಹ್ರೀಂ ಸರಸ್ವತಿ ಯಾ ನಮಃ ಎಂಬ ಮಂತ್ರವನ್ನ 21 ಬಾರಿ ಜಪಿಸಬೇಕು. ಓದುವ ಕೋಣೆಯಲ್ಲಿ ಸರಸ್ವತಿ ತಾಯಿಯ ಫೋಟೋವನ್ನ ಇಟ್ಟಿರಬೇಕು. ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಾಗಬೇಕು ಅಂದರೆ ಮಕ್ಕಳು ಓದುವ ಸ್ಥಳದಲ್ಲಿ ಸ್ಟಡಿ ರೂಮ್ ಅನ್ನು ಹಸಿರು ಬಣ್ಣದ ಕರ್ಟನ್ ಹಸಿರು ಬಣ್ಣದಿಂದ ಸಿಂಗರಿಸಬೇಕು.

ಏಕಾಗ್ರತೆ ಎಂಬುದು ಬರಲು ಪ್ರತಿ ಗುರುವಾರ ಐದು ರೀತಿಯ ಸಿಹಿ ತಿಂಡಿಗಳನ್ನು ಎರಡು ಏಲಕ್ಕಿಯ ಜೊತೆಗೆ ಅಶ್ವಥ ಮರದ ಕೆಳಗೆ ನೈವೆದ್ಯವಾಗಿ ಸಮರ್ಪಿಸಿದರೆ ಏಕಾಗ್ರತೆ ಹೆಚ್ಚಾಗುತ್ತದೆ. ಕೈಗೆ ಚೌಕಕಾರದ ತಾಮ್ರವನ್ನು ಧರಿಸಿದರೆ ಜ್ಞಾಪಕಶಕ್ತಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ. ಪ್ರತಿ ನಿತ್ಯ ಬೆಳಿಗ್ಗೆ ತಿಂಡಿಯ ಮುಂಚೆ ಒಂದು ಸ್ಪೂನ್ ತುಳಸಿ ಜ್ಯೂಸು ಜೊತೆ ಒಂದು ಸ್ಪೂನ್ ಜೇನುತುಪ್ಪ ಸೇರಿಸಿ ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ಬುಧವಾರದ ದಿನ ಹೆಸರುಬೇಳೆ ಮತ್ತು ಏಲಕ್ಕಿಯನ್ನು ಹಸಿರು ವಸ್ತ್ರದಲ್ಲಿ ಸುತ್ತಿ ಗಣೇಶನ ದೇವಸ್ಥಾನದಲ್ಲಿ ಗಣೇಶನಿಗೆ ಸಮರ್ಪಿಸಿದರೆ ಜ್ಞಾನ ಹೆಚ್ಚಾಗುತ್ತದೆ.

ಪ್ರತಿನಿತ್ಯ ಗಾಯತ್ರಿ ಮಂತ್ರ ಜಪಿಸುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯ ವಿದ್ಯಾ ಲಭಿಸುತ್ತದೆ. ಓದುವಾಗ ಪೂರ್ವ ದಿಕ್ಕಿನಲ್ಲಿ ಕುಳಿತು ಓದಬೇಕು. ಓದುವಾಗ ಶಿಸ್ತಿನಿಂದ ಕುಳಿತು ಓದಬೇಕು. ಓದಬೇಕು ಒಳ್ಳೆಯ ವಿದ್ಯಾ ಲಭಿಸಬೇಕು ಎಂಬ ಆಸೆ ಮನಸ್ಸಿನಲ್ಲಿ ಇರಬೇಕು. ಓದುವ ಸ್ಥಳ ಸ್ವಚ್ಛವಾಗಿ ಇರಬೇಕು. ಯಾವುದೇ ಕಾರಣಕ್ಕೂ ಪುಸ್ತಕಗಳನ್ನು ಹರಿಯಬಾರದು. ಹೀಗೆ ಮಾಡಿದರೆ ಸಾಕು ಸರಸ್ವತಿ ದೇವಿಯ ಕೃಪೆ ಸಿಗುತ್ತದೆ. ನಿಮ್ಮ ಶ್ರಮ ಇಲ್ಲದೆ ನಿಮಗೆ ಯಾವುದೇ ರೀತಿಯ ಫಲ ಸಿಗುವುದಿಲ್ಲ. ನಾವು ಹೇಳಿರುವ ಮಾಹಿತಿ ಅನುಸರಿಸಿ ಜೊತೆಗೆ ನಿಮ್ಮ ಶ್ರಮವು ಇದ್ದಲ್ಲಿ ಯಶಸ್ಸು ನಿಮ್ಮನು ಹುಡುಕಿಕೊಂಡು ಬರಲಿದೆ.

LEAVE A REPLY

Please enter your comment!
Please enter your name here