ರಾತ್ರಿ ಟೈಮ್ ನಿಮಗೆ ಸಕ್ಖತ್ ಆಗಿ ನಿದ್ರೆ ಬರಬೇಕ ಈ ಟಿಪ್ಸ್ ಫಾಲೋ ಮಾಡಿ ಸಾಕು

0
855

ಒಬ್ಬ ಮನುಷ್ಯನಿಗೆ ನಿದ್ರೆ ಎಂಬುದು ಎಷ್ಟು ಮುಖ್ಯ ಎಂದರೆ ಅವನು ನೆಮ್ಮದಿಯ ಜೀವನವನ್ನು ಆರೋಗ್ಯವಾಗಿ ನೆಡೆಸಬೇಕು ಎಂದರೆ ಅವನಿಗೆ ಒಳ್ಳೆಯ ನಿದ್ರೆ ಎಂಬುದು ತುಂಬಾ ಮುಖ್ಯ. ಆದರೆ ನಮ್ಮ ಇಂದಿನ ಕೆಲಸದ ಒತ್ತಡದಲ್ಲಿ ನಿದ್ರೆ ಮರೆಯುವಂತೆ ಮಾಡಿದೆ. ಒಬ್ಬ ಮನುಷ್ಯ ಆರೋಗ್ಯವಾಗಿ ಇರಲು ಕನಿಷ್ಠ ಎಂಟು ಗಂಟೆ ನಿದ್ರೆ ಮಾಡಲೇ ಬೇಕು ಎಂದು ವೈದ್ಯರು ಹೇಳುತ್ತಾರೆ ಆದ್ರೆ ಕೆಲವರು ಮಾತ್ರ ನಾಲ್ಕೈದು ತಾಸು ಮಲಗಿದರೆ ಅದೇ ಹೆಚ್ಚು. ಮತ್ತಷ್ಟು ಜನರಿಗೆ ಎಷ್ಟೇ ಕಷ್ಟ ಪಟ್ಟರು ರಾತ್ರಿ ಸಮಯ ನಿದ್ರೆ ಬೇಗನೆ ಬರುವುದೇ ಇಲ್ಲ. ಒಂದು ರಾತ್ರಿ ನಿದ್ರೆ ಎಂಬುದು ಆಗಿಲ್ಲ ಎಂದರೆ ಆ ದಿನ ಪೂರ್ತಿ ಮನಸ್ಸು ಸರಿಯಿರುವುದಿಲ್ಲ ಯಾವುದೇ ಕೆಲಸ ಮಾಡಲು ಆಸಕ್ತಿ ಬರುವುದಿಲ್ಲ. ಯಾರ ಜೊತೆ ಮಾತನಾಡಲು ಇಷ್ಟ ಆಗುವುದಿಲ್ಲ ಒಟ್ಟಾರೆ ಆ ದಿನವೆಲ್ಲ ಒಂಟಿಯಾಗಿ ಇರಬೇಕು ಅನ್ನಿಸುತ್ತದೆ.

ಪ್ರತಿಯೊಬ್ಬರ ಮನುಷ್ಯನಿಗೂ ಅವನ ವಯಸ್ಸಿಗೆ ತಕ್ಕಂತೆ ಎಷ್ಟು ನಿದ್ರೆ ಅವಶ್ಯಕತೆ ಇದಿಯೋ ಅಷ್ಟು ನಿದ್ರೆ ಎಂಬುದನ್ನು ಮಾಡಿದರೆ ಅವನ ಆರೋಗ್ಯ ಚೆನ್ನಾಗಿರುತ್ತದೆ. ಹಾಗಾದರೆ ಒಳ್ಳೆಯ ನಿದ್ರೆ ಬರಲು ಏನು ಮಾಡಬೇಕು ಗೊತ್ತೇ. ಮನುಷ್ಯನಿಗೆ ಒಳ್ಳೆಯ ನಿದ್ರೆ ಎಂಬುದು ಮಾನಸಿಕ ಮತ್ತು ದೈಹಿಕ ನವ ಚೈತನ್ಯವನ್ನು ನೀಡುತ್ತದೆ. ನೀವು ಮಲಗುವ ಮುನ್ನ ನಿಮ್ಮ ದಿನದ ಎಲ್ಲ ಕೆಲಸಗಳನ್ನು ಅಲ್ಲಿಯೇ ಬಿಟ್ಟುಬಿಡಿ ಮಲಗುವಾಗ ಕೆಲಸದ ಬಗ್ಗೆ ಚಿಂತಿಸಬೇಡಿ. ನೀವು ಮಲಗುವ ಕೋಣೆಗೆ ಲ್ಯಾಪ್ಟಾಪ್ ಅಥವಾ ಮೊಬೈಲ್ ಅನ್ನು ತೆಗೆದುಕೊಂಡು ಹೋಗಬೇಡಿ. ರಾತ್ರಿ ಹಾಲು ಕುಡಿದರೆ ಬೇಗನೆ ನಿದ್ರೆ ಬರುತ್ತದೆ ಎಂದು ಹೇಳುತ್ತಾರೆ ಆದರೆ ಮತ್ತೋ ಬೇಗನೆ ನಿದ್ರೆಗೆ ಜಾರಲು ಹಾಲಿನೊಂದಿಗೆ ಶುದ್ದ ಬಾದಾಮಿ ಬೀಜ ನಾಲ್ಕು ಪುಡಿ ಬೆರೆಸಿಕೊಂಡು ಕುಡಿಯಿರಿ ಕುಡಿದ 20 ನಿಮಿಷದ ಒಳಗೆ ನಿದ್ರೆ ಬರಲಿದೆ.

ಮಲಗೋ ಮುಂಚೆ ಬಿಸಿ ನೀರನ್ನು ಒಂದು ಟಬ್ ನಲ್ಲಿ ತುಂಬಿ ನಂತರ ನಿಮ್ಮ ಕಾಲನು ಸ್ವಲ್ಪ ಸಮಯ ಇಡಿ ಹೀಗೆ ಮಾಡುವುದರಿಂದ ಒಂದಿಷ್ಟು ಒತ್ತಡ ಕಡಿಮೆ ಆಗಿ ಬೇಗನೆ ನಿದ್ರೆಗೆ ಜಾರುತ್ತೀರಿ. ಮಲಗೋ ಕೋಣೆಯಲ್ಲಿ ಗಾಳಿ ಚೆನ್ನಾಗಿ ಓಡಾಡ್ತಾ ಇರಲಿ ತಣ್ಣಗೆ ಇರಲಿ. ಮಧ್ಯಾಹ್ನ 20 ನಿಮಿಷಕ್ಕಿಂತ ಜಾಸ್ತಿ ನಿದ್ದೆ ಮಾಡಬೇಡಿ. ಮಲಗುವ ಕೋಣೆಯಲ್ಲಿ ಮಂದವಾದ ಬೆಳಕು ಇರಲಿ. ಮಲಗಿ 15 ನಿಮಿಷ ನಿದ್ದೆ ಬರಲ್ಲಿಲವೆಂದಾದ್ರೆ ಏನಾದ್ರೂ ಪುಸ್ತಕ ಓದಿ. ರಾತ್ರಿ ಸಮಯದಲ್ಲಿ ಹೊಟ್ಟೆ ಬಿರಿಯುವ ಹಾಗೆ ತಿನ್ನಬಾರದು. ಮಲಗೋ ಮುಂಚೆ ಸರಳ ಯೋಗ ಮಾಡಿ ಯಾವುದಾದರೂ ಇಂಪಾದ ಸಂಗೀತವನ್ನು ಹಾಕಿ ಮಲಗಿ.

ಮಲಗುವ ಮುಂಚೆ ಮನಸ್ಸಿನ ಚಿಂತೆ. ಯೋಚನೆ ಇವುಗಳೆಲ್ಲವನ್ನು ತೆಗೆದು ಹಾಕಿ. ಮನೆಯಲ್ಲಿ ಮಕ್ಕಳು ಇದ್ದರೆ ಮಲಗುವ ಮುನ್ನ ಮಕ್ಕಳ ಜೊತೆ ಆಟವಾಡಿ ಆಗ ಮನಸ್ಸು ಸಂತೋಷ ಆಗುತ್ತದೆ ನಿದ್ರೆ ಬರುತ್ತದೆ. ಮಲುಗುವ ಸಮಯದಲ್ಲಿ ಟೀ ಕಾಫಿ ಮದ್ಯಪಾನ ಧೂಮಪಾನ ಮಾಡಬೇಡಿ. ರಾತ್ರಿ ಮಂದ ಬೆಳಕಲ್ಲಿ 20 ನಿಮಿಷಕ್ಕಿಂತ ಹೆಚ್ಚು ಮೊಬೈಲ್ ಉಪಯೋಗ ಮಾಡಿದ್ರೆ ಏನೇ ಮಾಡಿದ್ರು ನಿದ್ರೆ ಬರಲ್ಲ ಮಲಗುವ ಕೋಣೆಯು ವಿಶಾಲವಾಗಿ ಇರಬೇಕು. ಜೊತೆಗೆ ಒಳ್ಳೆಯ ಗಾಳಿ ಬೆಳಕು ಇರಬೇಕು. ಹೀಗೆ ಮಾಡಿದರೆ ಸಾಕು ಮಕ್ಕಳ ಹಾಗೆ ನಮಗೂ ಕೂಡ ರಾತ್ರಿ ಒಳ್ಳೆಯ ನಿದ್ರೆ ಬರುತ್ತದೆ. ಜೊತೆಗೆ ಮನಸ್ಸಿಗೂ ಕೂಡ ಸಂತೋಷ ಸಿಗುತ್ತದೆ.

LEAVE A REPLY

Please enter your comment!
Please enter your name here