ಕಲಿಯುಗದ ನಡೆದಾಡುವ ದೇವರಾದ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ಜಗ್ಗತ್ ಪ್ರಸಿದ್ದ ಇವರು ಹೆಸರು ಮತ್ತು ಸಿದ್ದಗಂಗಾ ಮಠ ಬರೀ ಕರ್ನಾಟಕ ಮತ್ತು ಭಾರತಕ್ಕೆ ಮಾತ್ರ ಸೀಮಿತ ಅಲ್ಲವೇ ಅಲ್ಲ ಪ್ರಪಂಚದಲ್ಲಿ ಇರುವ ಕೋಟ್ಯಂತರ ಜನಕ್ಕೆ ಚಿರಪರಿಚಿತ ಇದೆ. ಇಲ್ಲಿನ ತ್ರಿವಿದ ದಾಸೋಹಿ ಶಿವಕುಮಾರ ಮಹಾ ಸ್ವಾಮಿಗಳು ಆಧುನಿಕ ಯುಗ ಪರುಷ ಎಂದರೆ ತಪ್ಪಾಗುವುದಿಲ್ಲ ಬಿಡಿ. ಸರಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಅನ್ನ ಅಕ್ಷರ ಜ್ಞಾನ ನೀಡುತ್ತಿರುವ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡು ಇಡೀ ಕನ್ನಡ ನಾಡು ಅನಾಥವಾಗಿದೆ. ಇಲ್ಲಿನ ಶ್ರೀ ಮಠದಲ್ಲಿ ಜಾತಿ ಧರ್ಮ ಬೇದ ಇಲ್ಲವೇ ಇಲ್ಲ ಎಲ್ಲರಿಗು ಸಮಪಾಲು ಎಲ್ಲರಿಗು ಸಮಬಾಳು ಎಂಬಂತೆ ನಡೆಯುತ್ತಾ ಬಂದಿದೆ. ಒಂದು ಅಚ್ಚರಿ ಸಂಗತಿ ಏನು ಅಂದರೆ ಸರಿ ಸುಮಾರು 90 ವರ್ಷದ ಹಿಂದೆ ಹಚ್ಚಿದ ಓಲೆ ಇಂದಿಗೂ ಸಹ ಆರಿಲ್ಲ ಇದರ ಅರ್ಥ ಮಠದಲ್ಲಿ ಹಸಿವು ಎಂದು ಬಂದ ಮಕ್ಕಳಿಗೆ ಆಹಾರ ನೀಡಿ ಪೋಷಣೆ ಮಾಡಿದ್ದಾರೆ. ಈ ಹಿಂದೆ ಶ್ರೀ ಮಠ ಹೀಗೆ ಹೆಚ್ಚು ಅಭಿವೃದ್ದಿ ಹೊಂದಿರಲಿಲ್ಲ ಅಲ್ಲಿ ಸಂಪತ್ತು ಸಹ ಇರಲಿಲ್ಲ ಆಗ ಸ್ವತಃ ಶಿವ ಕುಮಾರ ಸ್ವಾಮಿಗಳೇ ಬಿಕ್ಷಾಟನೆ ಮಾಡಿ ಆಹಾರ ಧನ್ಯ ಜನರಿಂದ ಸಂಗ್ರಹ ಮಾಡಿ ಮಕ್ಕಳಿಗೆ ಉಟ ಹಾಕುತ್ತಾ ಇದ್ದರು.
ಮಹಾ ಸ್ವಾಮಿಗಳು 1 ಏಪ್ರಿಲ್ 1907 ರಂದು ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಜನಿಸಿದ್ದರು. ತಂದೆ ತಾಯಿಗೆ ೧೩ ನೇ ಮಗನಾಗಿ ಜನಿಸಿದರು ತಂದೆ ಹೆಸರು ಹೊನ್ನೇಗೌಡ ಮತ್ತು ತಾಯಿ ಗಂಗಮ್ಮ. ಸ್ವಾಮಿಗಳ ಮೂಲ ಹೆಸರು ಶಿವಣ್ಣ ಎಂದು. ನಂತರದ ದಿನದಲ್ಲಿ ಇವರು ಶಿವಕುಮಾರ ಸ್ವಾಮಿ ಆಗಿ ಬದಲಾದರು. ಶ್ರೀಗಳು ಉಹಿಸಲಾದ ರೀತಿಯಲ್ಲಿ ಪ್ರಸಿದ್ದಿ ಪಡೆಯುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ ಆದರೆ ಎಲ್ಲವನು ಸಾಧ್ಯ ಮಾಡಿ ತೋರಿಸಿದವರು ಶಿವ ಕುಮಾರ ಮಹಾ ಸ್ವಾಮಿಗಳು. ಶ್ರೀ ಮಠದಲ್ಲಿ ಓದಿದ ಎಷ್ಟೋ ವ್ಯಕ್ತಿಗಳು ಇಂದು ದೇಶ ವಿದೇಶದಲ್ಲಿ ನೆಲೆಸಿದ್ದಾರೆ ಅವರಿಗೆಲ್ಲ ಇಂದು ಉನ್ನತ ಸ್ಥಾನದಲ್ಲಿ ಇದ್ದಾರೆ ಅದಕೆಲ್ಲ ಕಾರಣ ಈ ಸಿದ್ದಗಂಗಾ ಮಠ ಮತ್ತು ಶಿವಕುಮಾರ ಸ್ವಾಮಿಗಳು ಎಂದರೆ ತಪ್ಪಾಗುವುದಿಲ್ಲ.

ಶ್ರೀಗಳು ಬಾಲ್ಯದಲ್ಲಿ ವೀರಾಪುರ ಗ್ರಾಮದಲ್ಲೇ ವಾಸ ಇದ್ದರು ನಂತರ ತಾಯಿಯನ್ನು ಕಳೆದುಕೊಂಡ ನಂತರ ಅಕ್ಕನ ಆಶ್ರಯಕ್ಕೆ ಬಂದರು. ನಂತರ ಸಂಪೂರ್ಣ ಶಿಕ್ಷಣ ಮುಗಿಸಿದ ಶ್ರೀಗಳಿಗೆ ಉದ್ದಾನ ಶಿವಯೋಗಿಗಳ ಒಡನಾಟ ಬೆಳೆಯಿತು. ಅದೇ ವರ್ಷದಲ್ಲಿ ಎಂಟ್ರನ್ಸ್ ಎಕ್ಷಾಮ್ ಉತೀರ್ಣರಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೆಂಟ್ರಲ್ ಕಾಲೇಜಿಗೆ ಸೇರಿಕೊಂಡು ಅಲ್ಲಿ ಉಳಿದುಕೊಂಡಿದ್ದು ಶ್ರೀ ಗುಬ್ಬಿ ತೋಟದಪ್ಪ ಧರ್ಮ ಚತ್ರದಲ್ಲಿ. ವಿಧ್ಯಬ್ಯಾಸ ಮಾಡುತ್ತಾ ಶಿವಣ್ಣ ಅವರು ಶಿಸ್ತಿನ ವಿಧ್ಯಾರ್ಥಿಯಾಗಿದ್ದರು. ವಿದ್ಯಾಭ್ಯಾಸ ಮಾಡುತ್ತಲೇ ಶಿವಣ್ಣ ಅವರು ಮಠದ ಜೊತೆಗೆ ಹೆಚ್ಚಿನ ಸಂಪರ್ಕ ಹೊಂದಿದ್ದರು. ಒಮ್ಮೆ ತುಮಕೂರು ನಗರಕ್ಕೆ ಪ್ಲೇಗ್ ರೋಗ ಆವರಿಸಿ ಸಾವಿರಾರು ಜನ ಸತ್ತು ಹೋದರು ಆಗಲು ದೃತಿಗೆಡದೆ ಶಿವಣ್ಣ ಅವರು ಮಠದ ಸಂಪರ್ಕದಲ್ಲಿ ಇದ್ದರು. ಅಲ್ಲಿನ ಉದ್ದಾನ ಶ್ರೀಗಳಿಗೆ ಶಿವಣ್ಣ ಕಂಡರೆ ಅಚ್ಚು ಮೆಚ್ಚು ಆಗಿತ್ತು.
ಒಮ್ಮೆ ಮಠಕ್ಕೆ ಬರ ಸಿಡಿಲು ಬಡಿಯುವ ಸುದ್ದಿ ಬಂದಿತ್ತು ಅದು ಏನು ಅಂದ್ರೆ ಉದ್ದಾನ ಶಿವಯೋಗಿ ಗಳಿಗೆ ಕಿರಿಯ ಶ್ರೀಗಳು ಆಗಿದ್ದ ಮರುಳಾರಾಧ್ಯರು ಶಿವೈಕ್ಯರಾದರು ಕಾರ್ಯಕ್ರಮಕ್ಕೆ ಆಗಮಸಿದ್ದ ಶಿವಣ್ಣನನ್ನು ಕಂಡು ಶಿವಯೋಗಿಗಳು ಹಿಂದೆ ಮುಂದೆ ನೋಡದೆ ಮಠದ ಉತ್ತರಾಧಿಕಾರಿ ಘೋಷಣೆ ಮಾಡಿಯೇ ಬಿಟ್ಟರು. ಎಲ್ಲರಂತೆ ಕ್ರಿಯಾ ಸಮಾಧಿ ಕಾರ್ಯಕ್ಕೆ ಬಂದಿದ್ದ ಶಿವಣ್ಣ ಅವರು ಕಾವಿ ಧರಿಸಿ ರುದ್ರಾಕ್ಷಿ ಹಾಕಿಕೊಂಡು ಶಿವ ಕುಮಾರ ಸ್ವಾಮಿಗಳು ಎಂಬ ನಾಮಾಂಕಿತದೊಂದಿಗೆ ಹಿಂದಿರುಗಿದರು. ಇದೆಲ್ಲವನ್ನು ನೋಡಿ ಜನರು ಆಶ್ಚರ್ಯ ಪಟ್ಟಿದ್ದು ನಿಜ. ಆ ದಿನ ಮಠ ನಡೆಸುವುದು ಅಷ್ಟು ಸುಲಭದ ಮಾತು ಆಗಿರಲಿಲ್ಲ. ಮಠದಲ್ಲಿ ಇದ್ದ ಮಕ್ಕಳಿಗೆ ಉಟ ಹಾಕುವುದು ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲ. ಮಠದ ಬರ ಭೂಮಿಯಲ್ಲಿ ಬೆಳೆ ಬೆಳೆಯುವುದು ಅಸಾಧ್ಯದ ಮಾತಾಗಿತ್ತು. ಎಲ್ಲವನ್ನು ಶಿವಕುಮಾರ ಸ್ವಾಮಿಗಳು ನಿಬಾಯಿಸಿಕೊಂಡು ಇಡೀ ಶ್ರೀ ಮಠವನ್ನು ಜಗತ್ತು ತಿರುಗಿ ನೋಡುವಂತೆ ಮಾಡಿದರು. ಇಂದು ಇವರು ನಮ್ಮನು ಅಗಲಿರಬಹುದು ಆದ್ರೆ ಶ್ರೀ ಮಠ ಅತೀ ಎತ್ತರಕ್ಕೆ ಬೆಳೆದು ನಿಂತಿದೆ ಶಿವಕುಮಾರ