ಈ ದೇವರ ದರ್ಶನ ಮಾಡಿದ್ರೆ ಆರ್ಥಿಕ ಸಮಸ್ಯೆ ಮತ್ತು ಚರ್ಮ ರೋಗಗಳು ಗುಣ ಆಗುತ್ತದೆ

0
1346

ನಮ್ಮ ಕರ್ನಾಟಕದಲ್ಲಿ ಎಷ್ಟೆಲ್ಲ ವಿಶೇಷವಾದ ಎಷ್ಟೊಂದು ಪವಾಡಗಳನ್ನು ಮಾಡುವ ದೇಗುಲಗಳು ಇವೆ ಎಂದು ಗೊತ್ತು ಅಲ್ಲವೇ. ಅದೇ ರೀತಿಯಲ್ಲಿ ವಿಶೇಷವಾದ ದೇಗುಲವೊಂದು ಬೀದರ್ ನಗರದ ಹೊರವಲಯದಲ್ಲಿರುವ ಝರಣಿ ನರಸಿಂಹ ಗುಹಾಂತರ ಮಂದಿರವಾಗಿದೆ. ಜೊತೆಗೆ ಈ ದೇವಸ್ಥಾನ ತುಂಬಾ ಅಪರೂಪದ ದೇವಸ್ಥಾನ.ಈ ದೇಗುಲವು ಭಕ್ತಿ ಮತ್ತು ವಿಶ್ವಾಸಕ್ಕೆ ಹೆಸರಾಗಿದೆ. ಈ ದೇಗುಲದ ನರಸಿಂಹ ದೇವರು ತುಂಬಾ ಕತ್ತಲಿನ ಗುಹೆಯಲ್ಲಿ ಇದೆ ಜೊತೆಗೆ ಈ ಗುಹೆಯು ಸದಾ ನೀರಿನಿಂದ ತುಂಬಿರುತ್ತದೆ.ಈ ಗುಹೆಯ ದೇವರನ್ನು ನೋಡಲು ಸುಮಾರು 250 ರಿಂದ 300 ಅಡಿಗಳಷ್ಟು ದೂರವನ್ನು ನಡಿಗೆಯಲ್ಲೇ ಹೋಗಬೇಕು ಜೊತೆಗೆ ಆ ನೀರಿನ ಒಳಗೆ ಹೋಗಿ ಶ್ರೀ ನರಸಿಂಹ ಸ್ವಾಮಿಯ ದರ್ಶನ ಪಡೆಯಬೇಕು.

ಈ ಕ್ಷೇತ್ರದ ಪೌರಾಣಿಕ ಕಥೆಯನ್ನು ತಿಳಿದುಕೊಳ್ಳೋಣ ಬನ್ನಿ. ವಿಷ್ಣುವಿನ ದಶಾವತಾರಗಳಲ್ಲಿ ನರಸಿಂಹಾವತಾರವೂ ನಾಲ್ಕನೇ ಅವತಾರವಾಗಿದೆ. ತ್ರೇತಾಯುಗದಲ್ಲಿ ಮಣಿಮಂದಾಸುರ ಮತ್ತು ಝಾರಾಸುರ ಎಂಬ ಇಬ್ಬರು ರಾಕ್ಷಸರು ಈ ಕ್ಷೇತ್ರಕ್ಕೆ ಬರುತ್ತಾರೆ. ಆ ಸಮಯದಲ್ಲಿ ಒಂದೆಡೆ ಹಿರಣ್ಯ ಕಶ್ಯಪುವಿನ ಸಂಹಾರದ ನಂತರ ನರಸಿಂಹ ಸ್ವಾಮಿ ಈ ಇಬ್ಬರು ರಾಕ್ಷಸರನ್ನು ಸಂಹರಿಸಲು ಬರುತ್ತಾನೆ.
ಆಗ ಇವರಲ್ಲಿ ಝಾರಾಸುರ ಎಂಬ ರಾಕ್ಷಸ ಈ ಕ್ಷೇತ್ರದಲ್ಲಿ ಇರುವಂಥ ಒಂದು ಗುಹೆಯಲ್ಲಿ ಶಿವನನ್ನು ಪ್ರತಿಷ್ಠಾಪಿಸಿ ಪೂಜೆ ಮತ್ತು ತಪ್ಪಸ್ಸನ್ನು ಮಾಡುತ್ತಿರುತ್ತಾನೆ.

ಇತ್ತ ಇವರನ್ನು ಸಂಹರಿಸಲು ಬಂದ ನರಸಿಂಹ ಇವರ ಶಿವನ ಭಕ್ತಿಯನ್ನು ಕಂಡು ಇವನಿಗೆ ಒಂದು ವರವನ್ನು ಕೊಡಲು ಮುಂದಾಗುತ್ತಾನೆ. ಅದು ಏನೆಂದರೆ ಝಾರಾಸುರ ನರಸಿಂಹನಲ್ಲಿ ನೀನು ನನ್ನನು ಸಂಹರಿಸಿದ ನಂತರ ನೀನು ಇದೆ ಜಾಗದಲ್ಲಿ ನೆಲೆಸಬೇಕು ಮತ್ತು ಈ ಸ್ಥಳವು ನನ್ನ ಹೆಸರಿನಿಂದ ಲೋಕ ಪ್ರಸಿದ್ಧಿಯಾಗಬೇಕೆಂದು ಕೇಳಿಕೊಳ್ಳುತ್ತಾನೆ. ಹಾಗಾಗಾಗಿ ಇಲ್ಲಿ ನರಸಿಂಹ ನೀರಿನಲ್ಲಿ ನೆಲೆಸಿರುತ್ತಾನೆ. ಈ ಕಾರಣದಿಂದಲೇ ಈ ಕ್ಷೇತ್ರವನ್ನು ಝರಣಿ ನರಸಿಂಹ ದೇವಸ್ಥಾನ ಎಂದು ಕರೆಯಲಾಯಿತು. ಈ ದೇವಸ್ಥಾನದ ಇನ್ನೊಂದು ವೈಶಿಷ್ಠ್ಯ. ಝರಣಿ ಎಂದರೆ ನೀರಿನ ಸೆಲೆ ಎಂದರ್ಥ. ಗುಹೆಯ ಒಳಗಡೆ ನೀರಿನ ಸೆಲೆಯೊಂದಿಗೆ ನಡೆದು ದೇವರ ದರ್ಶನ ಮಾಡಬೇಕಾದುದರಿಂದಲೇ ಗುಡಿಗೆ ಝರಣಿ ನರಸಿಂಹ ದೇವಾಲಯ ಎಂಬ ಹೆಸರು ಬಂದಿದೆ

ಈ ಗುಹೆಯ ಒಳಗೆ ಎದೆ ಮಟ್ಟದ ಮತ್ತು ಉಗುರು ಬೆಚ್ಚಗಿನ ನೀರಿನಲ್ಲಿ ನಡೆದು ಶ್ರೀ ನರಸಿಂಹ ಸ್ವಾಮಿಯ ದರ್ಶನ ಪಡೆಯುವುದೇ ಒಂದು ವಿಶಿಷ್ಟ. ಈ ಗುಹೆ ಒಳಗಡೆಯ ಮಬ್ಬು ಕತ್ತಲಿನಲ್ಲಿ ಮಾತ್ರವಲ್ಲದೆ ನೀರಿನಲ್ಲಿ ನಡೆಯುವುದಕ್ಕೆ ಮಾನಸಿಕ ಸಿದ್ಧತೆ ಕೂಡ ಅಗತ್ಯ. ಗುಹೆಯಲ್ಲಿನ ನೀರು ಯಾವುದೇ ಸಂದರ್ಭದಲ್ಲಿ ಕೂಡ ಎದೆ ಮಟ್ಟ ಮೀರುವುದಿಲ್ಲ. ಈ ನೀರಿನಲ್ಲಿ ಗಂಧಕದ ಅಂಶ ಉಂಟು. ನೀರು ಚಳಿಗಾಲದಲ್ಲಿ ಕೂಡ ಬೆಚ್ಚಗಿನ ಅನುಭವ ನೀಡುತ್ತದೆ. ಈ ನೀರಿನಲ್ಲಿ ಎಷ್ಟು ಸಲ ಓಡಾಡಿದರು ಕೂಡ ಶೀತ ಆಗುವುದಿಲ್ಲ. ಈ ನೀರು ಔಷಧೀಯ ಗುಣಗಳನ್ನು ಹೊಂದಿರುವ ಈ ನೀರಿನಲ್ಲಿ ನೆನೆದರೆ ಚರ್ಮ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ.

ಈ ದೇವಸ್ಥಾನಕ್ಕೆ ಹೋಗುವ ಮಾರ್ಗ ಬೆಂಗಳೂರಿನಿಂದ ಬರಲು ರೈಲು ಸೌಕರ್ಯವಿದೆ. ಬೆಂಗಳೂರು ನಾಂದೇಡ್ ಎಕ್ಸ್ ಪ್ರೆಸ್ ಟ್ರೇನ್ ಬೀದರ್ ಮೂಲಕ ಬಂದು ಸೇರುತ್ತದೆ. ಇದಲ್ಲದೆ ಯಶವಂತಪುರ ಬೀದರ್ ಎಕ್ಸ ಪ್ರೆಸ್ ಟ್ರೇನ್ ಉಂಟು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಐರಾವತ ಕರೋನಾ ಮತ್ತು ಸುಹಾಸ್ ಮಾದರಿಯ ಬಸ್ಸುಗಳು ಬೆಂಗಳೂರು-ಬೀದರ್ ಸಂಚರಿಸುತ್ತವೆ. ಈ ಮಂದಿರ ಹೈದರಾಬಾದ್ ಹಾಗೂ ಕಲಬುರಗಿಯಿಂದ ಕ್ರಮವಾಗಿ 120 ಕಿಮಿ ಮತ್ತು 100 ಕಿಮಿಗಳ ಅಂತರದಲ್ಲಿದೆ.ಒಮ್ಮೆ ಹೋಗಿ ಬನ್ನಿ ಯಾವುದೇ ರೀತಿಯ ಚರ್ಮ ಖಾಯಿಲೆ ಇದ್ದರು ಗುಣವಾಗುತ್ತದೆ.

LEAVE A REPLY

Please enter your comment!
Please enter your name here