ಹೆಲ್ಮೆಟ್ ಎನ್ನುವುದು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಬಳಸುವ ಒಂದು ವಸ್ತು. ದ್ವಿಚಕ್ರ ವಾಹನಗಳಲ್ಲಿ ಚಲಿಸುವಾಗ ಕಡ್ಡಾಯವಾಗಿ ಮುಂಬಡಿ ಚಾಲಕ ಹಾಗೂ ಹಿಂದೆ ಕುಳಿತಿರುವ ವ್ಯಕ್ತಿ ಇಬ್ಬರು ಕೂಡ ಹೆಲ್ಮೆಟ್ ಅನ್ನು ಧರಿಸಿಕೊಂಡು ಹೋಗಬೇಕು ಹೆಲ್ಮೆಟ್ ಧರಿಸದೆ ಹೋದರೆ ದಂಡ ವಿಧಿಸಬೇಕಾಗುತ್ತದೆ. ಎಂಬುದನ್ನು ಸರ್ಕಾರವು ಕಡ್ಡಾಯವಾಗಿ ನಿಯಮವನ್ನು ಮಾಡಿದೆ. ಹಾಗಾಗಿ ಸಾಮಾನ್ಯವಾಗಿ ಮನೆಯಲ್ಲಿ ತುಂಬಾ ಜನ ಇದ್ದಾರೆ ಒಬ್ಬರ ಹೆಲ್ಮೆಟ್ ಅನ್ನು ಇನ್ನೊಬ್ಬರು ಧರಿಸಿಕೊಂಡು ಹೋಗುತ್ತಾರೆ ಇಲ್ಲವಾದರೆ ಪೊಲೀಸ್ ಹತ್ತಿರ ಸಿಕ್ಕಿ ದಂಡ ಕಟ್ಟಬೇಕಾಗುತ್ತದೆ ಎಂದು ಫ್ರೆಂಡ್ಸ್ ಹತ್ತಿರ ತೆಗೆದುಕೊಂಡು ಹಾಕಿಕೊಳ್ಳುತ್ತೇವೆ ಒಟ್ಟಾರೆ ಜನರ ಅಭಿಪ್ರಾಯ ದಂಡ ಕಟ್ಟಲು ಆಗದೆ ಯಾರದೋ ಹೆಲ್ಮೆಟ್ ಹಾಕಿಕೊಂಡರೆ ಸಾಕು ಎನ್ನುತ್ತಾರೆ. ಆದರೆ ಹೀಗೆ ಬೇರೆಯವರ ಹೆಲ್ಮೆಟ್ ಧರಿಸುವುದರಿಂದ ಏನೆಲ್ಲ ತೊಂದರೆ ಆಗುತ್ತದೆ ಎಂದು ತಿಳಿದುಕೊಂಡು ನಂತರ ಧರಿಸಿದರೆ ಒಳ್ಳೆಯದು.
ಬೇರೆಯವರ ಹೆಲ್ಮೆಟ್ ಧರಿಸುವುದರಿಂದ ಫಂಗಲ್ ಇನ್ಫೆಕ್ಷನ್ ಆಗುತ್ತದೆ ಏಕೆಂದರೆ ತಲೆಯ ನೆತ್ತಿಯ ಮೇಲೆ ಹಲವು ಶಿಲೀಂಧ್ರಗಳು ಇರುತ್ತವೆ ಇವು ನಮ್ಮ ಕೂದಲಿನ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡುತ್ತದೆ ಆದರೆ ಕೊಳಕು, ಮಾಲಿನ್ಯ, ಎಣ್ಣೆ ಮತ್ತು ಸತ್ತ ಕೋಶಗಳು ಅದರ ರಂಧ್ರಗಳನ್ನು ಮುಚ್ಚಿಬಿಡುತ್ತವೆ ಆಗ ಫಂಗಲ್ ಇನ್ಫೆಕ್ಷನ್ ಎಂಬುದು ಕಾಡುತ್ತದೆ. ಬೇರೆಯವರ ಹೆಲ್ಮೆಟ್ ಧರಿಸುವುದರಿಂದ ತಲೆಯ ನೋವು ಎಂಬುದು ಕಾಡುತ್ತದೆ. ಬೇರೆಯವರ ಹೆಲ್ಮೆಟ್ ಧರಿಸುವುದರಿಂದ ತಲೆ ಸುತ್ತುವುದು.

ತಲೆಯಲ್ಲಿ ಗುಳ್ಳೆಗಳು ಆಗುವುದು ಕಣ್ಣುಗಳು ಉರಿಯುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೂ ಬೇರೆಯವರ ಹೆಲ್ಮೆಟ್ ಅನ್ನು ಧರಿಸಬಾರದು ಇದರಿಂದ ನಮ್ಮ ಆರೋಗ್ಯವೇ ಕೆಡುತ್ತದೆ ಪೊಲೀಸ್ ಹತ್ತಿರ ದಂಡ ಕಟ್ಟುವುದನ್ನು ತಪ್ಪಿಸಲು ಹೋಗಿ ಆಸ್ಪತ್ರೆಗೆ ಕಟ್ಟಬೇಕಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಬೇರೆಯವರ ಹೆಲ್ಮೆಟ್ ಅನ್ನು ಧರಿಸಬೇಡಿ. ಒಂದು ವೇಳೆ ಬೇರೆಯವರ ಹೆಲ್ಮೆಟ್ ಧರಿಸಿ ಸಮಸ್ಯೆ ಅನುಭವಿಸುತ್ತಿದ್ದಾರೆ ಅದಕ್ಕೆ ಏನು ಮಾಡಬೇಕು ಅಂದರೆ ಇದಕ್ಕೆ ಪರಿಹಾರ ನಿಂಬೆ ರಸ
ನಿಂಬೆ ರಸ ಕೂದಲಿಗೆ ತುಂಬಾ ಒಳ್ಳೆಯದು. ಆದರೆ ನಿಂಬೆ ರಸವನ್ನು ಹೇಗೆ ಬಳಸುವುದು ಎಂದು ತಿಳಿಯೋಣ. ಒಂದು ಕಪ್ ನೀರಿಗೆ 5 ಚಮಚ ನಿಂಬೆ ರಸವನ್ನು ಸೇರಿಸಿಕೊಂಡು ಸ್ನಾನ ಮಾಡಬೇಕು ನಂತರ ಅದೇ ಮಿಶ್ರಣವನ್ನು ಮತ್ತೆ ತಲೆಗೆ ಹಚ್ಚಿ ತಣ್ಣೀರು ಹಾಕಿ ಕೂದಲನ್ನು ತೊಳೆಯಬೇಕು ಹೀಗೆ 2 ರಿಂದ 3 ಬಾರಿ ಮಾಡುತ್ತ ಬಂದರೆ ಫಂಗಲ್ ಇನ್ಫೆಕ್ಷನ್ ಎಂಬುದು ಹೋಗುತ್ತದೆ. ಬೇರೆಯವರ ಹೆಲ್ಮೆಟ್ ಧರಿಸುವ ಅನಿವಾರ್ಯ ಸಂದರ್ಭ ಬಂದರೆ ಮೊದಲು ತಲೆಗೆ ಒಂದು ಬಟ್ಟೆಯನ್ನು ಸುತ್ತಿಕೊಳ್ಳಿ ನಂತರ ಹೆಲ್ಮೆಟ್ ಅನ್ನು ಧರಿಸಿಕೊಳ್ಳಿ. ಜೊತೆಗೆ ನಿಮ್ಮ ಹೆಲ್ಮೆಟ್ ಅನ್ನು ಕೂಡ ಸಾಮಾನ್ಯವಾಗಿ 1 ರಿಂದ 2 ವರ್ಷಗಳು ಮಾತ್ರ ಬಳಕೆ ಮಾಡಿ ಒಳ್ಳೆಯ ಕಂಪನಿಗಳ ಹೆಲ್ಮೆಟ್ ಆದರೆ ಅದಕ್ಕೆ ಒಂದು ನಿಗದಿತ ದಿನಾಂಕ ಇರುತ್ತದೆ ಆದರೆ ಬೇರೆಯ ಹೆಲ್ಮೆಟ್ ಗಳಿಗೆ ಯಾವುದೇ ದಿನಾಂಕ ಇರುವುದಿಲ್ಲ ಹಾಗಾಗಿ ಆದಷ್ಟು 1 ವರ್ಷದಿಂದ 2 ವರ್ಷಗಳವರೆಗೆ ಬಳಕೆ ಮಾಡುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ ಆದಷ್ಟು ಬೇರೆಯವರ ಹೆಲ್ಮೆಟ್ ಅನ್ನು ಧರಿಸುವುದನ್ನು ತಪ್ಪಿಸಿಕೊಳ್ಳಿ.