ದೇವರ ಪೂಜೆ ಸಲ್ಲಿಸುವಾಗ ಅಗರಬತ್ತಿಯನ್ನು ಹಚ್ಚಿದರೆ ಏನೆಲ್ಲಾ ಲಾಭ

0
807

ಸಾಮಾನ್ಯವಾಗಿ ನಾವು ದೇವರಿಗೆ ಪೂಜೆ ಸಲ್ಲಿಸುವಾಗ ಅಗರಬತ್ತಿಯನ್ನು ಹಚ್ಚಿ ಅದರಿಂದ ದೇವರಿಗೆ ಬೆಳಗುತ್ತೇವೆ. ಇದು ಹಿಂದಿನ ಕಾಲದಿಂದಲೂ ಕೂಡ ನೆಡೆದುಕೊಂಡು ಬರುತ್ತಿರುವ ಆಚಾರ ವಿಚಾರವಾಗಿದೆ. ಆದರೆ ಇತ್ತೀಚಿಗೆ ಕೆಲವು ಮನೆಗಳಲ್ಲಿ ದೇವರಿಗೆ ಪೂಜೆ ಸಲ್ಲಿಸಿದರು ಅಗರಬತ್ತಿಯನ್ನು ಹಚ್ಚುವುದಿಲ್ಲ ಏಕೆಂದರೆ ಅಗರಬತ್ತಿಯಿಂದ ಬರುವ ಹೊಗೆ ಗೋಡೆಯ ಮೇಲೆ ಕುಳಿತುಕೊಳ್ಳುತ್ತದೆ ಗೋಡೆಯಲ್ಲ ಹಾಳಾಗುತ್ತದೆ ಜೊತೆಗೆ ಮನೆಯ ತುಂಬಾ ಹೊಗೆ ತುಂಬಿಕೊಳ್ಳುತ್ತದೆ ಎಂದು ಅಗರಬತ್ತಿಯನ್ನು ಹಚ್ಚುವುದಿಲ್ಲ. ಆದರೆ ಈ ಅಗರ ಬತ್ತಿಯನ್ನು ಏಕೆ ಹಚ್ಚಬೇಕು ಅದರಿಂದ ಏನು ಆಗುತ್ತದೆ ಎಂದು ತಿಳಿದರೆ ತುಂಬಾ ಒಳ್ಳೆಯದು. ಅಗರಬತ್ತಿಯನ್ನು ಹಚ್ಚುವುದರಿಂದ ಅದರಿಂದ ಬರುವ ಹೊಗೆಯ ಮೂಲಕ ನಮ್ಮ ಮನಸ್ಸು ದೇವರನ್ನು ತಲುಪುತ್ತದೆ ಎಂಬುದು ನಂಬಿಕೆ.

ಒಂದು ವೇಳೆ ಶಾಸ್ತ್ರೋಪ್ತವಾಗಿ ಪೂಜೆ ಮಾಡಲು ಸಾಧ್ಯವಾಗದೆ ಇದ್ದರೆ ಬೆಳಿಗ್ಗೆ ಸಂಜೆ ದೇವರ ಫೋಟೋಕ್ಕೆ ಕೈಮುಗಿಯುವಾಗಲಾದರೂ ಗಂಧದ ಕಡ್ಡಿ ಹಚ್ಚಬೇಕು. ನಿಮ್ಮ ಮನಸಿನ ಬಯಕೆಗಳನ್ನು ಹೇಳಿಕೊಳ್ಳಬೇಕು. ಪೂಜೆಯ ಸ್ಥಳದಲ್ಲಿರುವ ಕೆಟ್ಟ ವಾಸನೆಗಳನ್ನು ಹೋಗಿ ಒಳ್ಳೆಯ ಪರಿಮಳ ಮನೆಯಲ್ಲಿ ಹರಡಿದರೆ ಮನೆ ಯಾವಾಗಲೂ ಶಾಂತಿಯಿಂದ ಕೂಡಿರುತ್ತದೆ. ನಾವು ಪೂಜೆಗೆ ಬಳಸುವಂತ ಆಗರ ಬತ್ತಿಯನ್ನು ಬಳಸಿದರೆ ದೇವರು ನಮ್ಮ ಮೊರೆಯನ್ನು ಕೇಳಬಹುದು ಅನ್ನೋ ನಂಬಿಕೆ.

ಅಗರ ಬತ್ತಿಯ ಹೊಗೆಯಿಂದ ಮನಸ್ಸಿನ ದುಗುಡ ಬೆಚ್ಚಿ ಬೀಳುವಿಕೆ ಹಿಸ್ಟೀರಿಯಾ ಕೀಲುಗಳನೋವು ಮೊದಲಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಹೊಗೆಯಿಂದ ವಾತಾವರಣದಲ್ಲಿರುವ ಬ್ಯಾಕ್ಟೀರಿಯ ಸಣ್ಣ ಕ್ರಿಮಿಗಳು ವೈರಸ್ ಗಳು ನಾಶವಾಗುತ್ತವಂತೆ.ಅಗರ ಬತ್ತಿಯ ಹೊಗೆಯು ದೇಹದ ಒಳಗೆ ಹೋಗುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ ಚರ್ಮದ ಕಾಯಿಲೆಗಳು ಗುಣವಾಗುತ್ತವೆ. ಅಗರಬತ್ತಿಯನ್ನು ಮನೆಯಲ್ಲಿ ಬಳಸುವುದರಿಂದ ಮನೆಯಲ್ಲಿ ಕ್ರಿಮಿಕೀಟಗಳು ಸಹ ನಿವಾರಣೆಯಾಗುವುದರ ಜೊತೆಗೆ ಮನೆಯಲ್ಲಿ ಕೆಟ್ಟ ವಾಸನೆ ಇಲ್ಲದಂತೆ ಮನೆಯ ತುಂಬಾ ಪರಿಮಳದ ಸೊಬಗನ್ನು ಬೀರುತ್ತದೆ.

ಮನೆಯಲ್ಲಿ ಅಗರ ಬತ್ತಿ ಹಚ್ಚಿದರೆ ಮನೆಯ ಒಳಗೆ ಯಾವುದು ದುಷ್ಟ ಶಕ್ತಿ ಇರುವುದಿಲ್ಲ. ಆದರೆ ಈ ಅಗರ ಬತ್ತಿಯು ನಾನಾ ರೀತಿಯಲ್ಲಿವೆ ದುಡ್ಡು ಮಾಡಲು ಏನೋ ಕೆಮಿಕಲ್ ಬಳಸಿ ಅಗರಬತ್ತಿಯನ್ನು ತಯಾರಿಸುತ್ತಾರೆ ಹಾಗಾಗಿ ತೆಗೆದುಕೊಳ್ಳುವ ಮುಂಚೆ ಆದಷ್ಟು ಗಮನಿಸಿ ತೆಗೆದುಕೊಳ್ಳಬೇಕು. ಕಳಪೆ ಅಗರ ಬತ್ತಿ ಎಂದು ಹೇಗೆ ಗೊತ್ತಾಗುತ್ತದೆ ಎಂದರೆ ಅವು ಸಾಮಾನ್ಯವಾಗಿ ತುಂಬಾ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಜೊತೆಗೆ ಅದರ ವಾಸನೆಗೆ ಮಾರು ಹೋಗಿ ತೆಗೆದುಕೊಳ್ಳಲು ಹೋಗಬೇಡಿ. ಹಾಗೇ ಕಡಿಮೆ ಬೆಲೆಯ ಮತ್ತು ಕೆಮಿಕಲ್ ಮಿಶ್ರಿತ ಅಗರಬತ್ತಿ ಬಳಕೆ ಮಾಡಿದ್ರೆ ನಿಮಗೆ ಶ್ವಾಸಕೋಶ ಸಮಸ್ಯೆ. ಅಸ್ತಮಾ ಇನ್ನು ಹಲವು ರೀತಿಯ ಖಾಯಿಲೆ ಬರುವ ಸಂಭವ ಹೆಚ್ಚು ಇರುತ್ತದೆ. ಹಾಗಾಗಿ ಅಗರ ಬತ್ತಿಯನ್ನು ಹಚ್ಚದೆ ಇರುವವರು ಇನ್ನು ಮುಂದಿನ ದಿನಗಳಲ್ಲಿ ಆದರೂ ಹಚ್ಚಲು ಪ್ರಾರಂಭಿಸಿ ಈ ಅಗರ ಬತ್ತಿಯ ಉಪಯೋಗವನ್ನು ಪಡೆದುಕೊಳ್ಳಿ. ಅಗರಬತ್ತಿಯನ್ನು ಹಚ್ಚಿ ದೇವರಿಗೆ ಪೂಜೆ ಸಲ್ಲಿಸಿ ಮನೆಯ ಒಳಗೆ ಅದನ್ನು ಇಡಲು ಆಗದೆ ಇರುವವರು ಮನೆಯ ಮುಂದಿನ ಬಾಗಿಲಿಗೆ ಹಾಕಬಹುದು.

LEAVE A REPLY

Please enter your comment!
Please enter your name here