ಇತ್ತೀಚಿನ ದಿನಗಳಲ್ಲಿ ಮಕ್ಕಳು ಆಗದೆ ಎಷ್ಟೋ ಜನ ನೋವು ಅನುಭವಿಸುತ್ತಿದ್ದಾರೆ ಅವರು ಎಲ್ಲ ರೀತಿಯ ಆಸ್ಪತ್ರೆಗಳು. ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ ಅಲ್ಲಿ ಹೇಳುವ ಎಲ್ಲ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ ಆದರೂ ಕೆಲವರಿಗೆ ಮಕ್ಕಳ ಭಾಗ್ಯ ಇಲ್ಲದೆ ನೋವಲ್ಲಿ ಕೈ ತೋಳಿಯುತ್ತಿದ್ದರೆ. ಒಂದು ಹೆಣ್ಣಿಗೆ ಅವಳ ಜನ್ಮ ಪವನವಾಗಬೇಕು ಎಂದರೆ ಅದು ಅವಳು ಒಂದು ಮಗುವಿನ ಹತ್ತಿರ ಅಮ್ಮ ಎಂದು ಕರೆಸಿಕೊಂಡಗ. ಕೆಲವರು ಮಕ್ಕಳೇ ಆಗದ ಪರಿಸ್ಥಿತಿಯಲ್ಲಿ ಅನಾಥ ಆಶ್ರಮದಿಂದ ಮಕ್ಕಳನ್ನು ದತ್ತು ತೆಗೆದುಕೊಂಡು ಬೆಳೆಸುತ್ತಾರೆ ಆದರೆ ಎಷ್ಟೇ ಮಕ್ಕಳನ್ನು ದತ್ತು ತೆಗೆದುಕೊಂಡು ಬೆಳೆಸಿದರು ನಮ್ಮ ಗರ್ಭದಲ್ಲಿ ಜನಿಸಿದ ಮಗುವಿನ ಭಾವನೆ ಬರುವುದಿಲ್ಲ. ಹಾಗಾಗಿ ಈ ಮಕ್ಕಳು ಆಗದೆ ಇರುವವರು ಒಮ್ಮೆ ಈ ಸೂರ್ಯನ ದೇಗುಲಕ್ಕೆ ಬಂದರೆ ಸಾಕು ಎಂತಹ ಕಷ್ಟ ಇದ್ದರು ಕೂಡ ಅವರಿಗೆ ಮಕ್ಕಳು ಆಗುತ್ತವೆ ಹಾಗಾದರೆ ಈ ದೇಗುಲ ಎಲ್ಲಿದೆ ಈ ದೇಗುಲದ ಮಹಿಮೆ ಏನು ಎಂಬುದನ್ನು ತಿಳಿಯೋಣ.
ಇದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮರೋಳಿ ಮತ್ತು ಬೆಳ್ತಂಗಡಿಯ ನಾರಾವಿಯಲ್ಲಿ ಶ್ರೀ ಸೂರ್ಯನಾರಾಯಣ ದೇವಸ್ಥಾನವಿದೆ ಇವೆರಡರಲ್ಲಿ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನವು ಅತ್ಯಂತ ಪುರಾತನವಾಗಿದ್ದು ತನ್ನ ಇತಿಹಾಸ ಹಾಗೂ ವಿಶೇಷತೆಗಳಿಂದ ಪ್ರಾಮುಖ್ಯತೆ ಪಡೆದಿದೆ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನವು ದಕ್ಷಿಣಕನ್ನಡ ಜಿಲ್ಲೆಯ ಏಕೈಕ ಹಳೆಯ ದೇವಸ್ಥಾನವಾಗಿದೆ.

ಈ ದೇವಸ್ಥಾನದ ವಿಶೇಷತೆ ಈ ದೇವಸ್ಥಾನಕ್ಕೆ ಬಂದು ಮಕ್ಕಳ ಭಾಗ್ಯ ಬೇಡಿಕೊಂಡು ಹರಕೆ ಹೊತ್ತಿಕೊಂಡರೆ ಸಾಕು ಏನೇ ಕಷ್ಟ ಆದರೂ ಸಂತಾನ ಭಾಗ್ಯ ಎಂಬುದು ಬರುತ್ತದೆ. ಅಷ್ಟೇ ಅಲ್ಲದೆ ಅತೀಯಾದ ತಲೆ ನೋವಿನಿಂದ ಬಳಲುವರು ಈ ಕ್ಷೇತ್ರಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರೆ ತಲೆ ನೋವು ಗುಣವಾಗುತ್ತದೆ. ಕಣ್ಣಿನ ತೊಂದರೆ ಅನುಭವಿಸುವವರು ಈ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ ದೃಷ್ಟಿ ಸಮಸ್ಯೆ ಪರಿಹಾರವಾಗುತ್ತದೆ. ಮನಸ್ಸು ಸರಿಯಿಲ್ಲದೆ ಮನಸ್ಸು ತುಂಬಾ ನೋವಿನಲ್ಲಿ ಭಯದಲ್ಲಿ ಆತಂಕದಲ್ಲಿ ಇದ್ದಾಗ ಈ ದೇಗುಲಕ್ಕೆ ಬಂದು ದರ್ಶನ ಮಾಡಿದರೆ ಎಲ್ಲ ರೀತಿಯ ನೋವು ಗುಣವಾಗುತ್ತದೆ. ಹಾಗೆಯೇ ಈ ಗ್ರಾಮಗಳಲ್ಲಿ ಮಳೆ ಬರದೇ ಇದ್ದಂತಹ ಸಂದರ್ಭದಲ್ಲಿ ಶ್ರೀ ಸೂರ್ಯನಾರಾಯಣ ದೇವರಿಗೆ ಪೂಜೆ, ಸೀಯಾಳಾಭಿಷೇಕ ಮಾಡಿದರೆ ಮಳೆ ಬರುತ್ತದೆ ಇದು ಹಿಂದಿನ ಸಂಪ್ರದಾಯವಾಗಿದೆ.
ಈ ದೇಗುಲದಲ್ಲಿ ಪ್ರತಿ ವರ್ಷ ಜನವರಿ ತಿಂಗಳ ರಥಸಪ್ತಮಿಯಂದು ಶ್ರೀ ಸೂರ್ಯ ದೇವರ ರಥೋತ್ಸವ ಅದ್ಧೂರಿಯಾಗಿ ನಡೆಯುತ್ತದೆ. ಈ ದೇಗುಲದಲ್ಲಿ ನಿತ್ಯ ಪೂಜೆ ನೆಡೆಯುವ ಸಮಯ ಬೆಳಿಗ್ಗೆ ಆರು ಗಂಟೆಗೆ ಮದ್ಯಾಹ್ನ ಹನ್ನೆರಡು ಗಂಟೆ ಸಾಯಂಕಾಲ ಎಂಟು ಗಂಟೆ. ಮಕ್ಕಳು ಆಗದೆ ನೋವಲ್ಲಿ ಇದ್ದರೆ ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ. ಈ ಉಪಯುಕ್ತ ಮಾಹಿತಿ ಮರೆಯದೇ ಶೇರ್ ಮಾಡಿ ನಿಮಗೂ ಶುಭವಾಗಲಿದೆ. ನಮ್ಮ ವೆಬ್ಸೈಟ್ ಎಲ್ಲ ಮಾಹಿತಿಗಳಿಗೆ ಕಾಪಿರೈಟ್ಸ್ ಹೊಂದಿದ್ದು ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.