ಇಂದಿನ ದಿನಗಳಲ್ಲಿ ಕಾಯಿಲೆಗಳು ಎಂಬುದು ಹೇಗೆ ಬರುತ್ತದೆ ಎಂಬುದೇ ಗೊತ್ತಾಗುವುದಿಲ್ಲ ಆದರೆ ಕಾಯಿಲೆಗಳು ಬಂದಾಗಲೇ ಗೊತ್ತಾಗುವುದು ನಮಗೆ ಕಾಯಿಲೆ ಬಂದಿದೆ ಅಂತ ಆದರೆ ಆ ಕಾಯಿಲೆಗಳು ಏಕೆ ಬಂದಿದೆ ಅಂತ ಗೊತ್ತಾಗುವುದಿಲ್ಲ. ನಮಗೆ ಯಾವುದೇ ಕಾಯಿಲೆಗಳು ಬರಲು ಮುಖ್ಯ ಕಾರಣ ನಮ್ಮ ನಿತ್ಯದ ಆಹಾರ ಪದ್ಧತಿ. ನಾವು ಆರೋಗ್ಯವಾಗಿ ಇರಬೇಕು ಎಂದರೆ ನಾವು ನಿತ್ಯ ಸೇವಿಸುವ ಆಹಾರದಲ್ಲಿ ಪೌಷ್ಟಿಕವಾದ ಆಹಾರಗಳು ಇರಬೇಕು. ಅಂದರೆ ತರಕಾರಿ ಹಣ್ಣುಗಳು ಕಾಳುಗಳು ಸೊಪ್ಪು ನೀರು ಜ್ಯುಸ್ ಇವುಗಳಲ್ಲಿ ಹಲವಾರು ಬಗೆಯ ಪೌಷ್ಟಿಕ ಅಂಶಗಳು ಇದ್ದು ಇವುಗಳನ್ನು ಸೇವನೆ ಮಾಡುವುದರಿಂದ ಇವು ನಮ್ಮ ದೇಹಕ್ಕೆ ಸೇರಿಕೊಂಡು ಆರೋಗ್ಯವು ಉತ್ತಮವಾಗಿರುತ್ತದೆ. ನಮ್ಮ ದೇಹದಲ್ಲಿ ಯಾವಾಗಲು ರೋಗ ನಿರೋಧಕ ಶಕ್ತಿ ಹೆಚ್ಚು ಇರುವಂತೆ ನೋಡಿಕೊಳ್ಳಬೇಕು. ಹೀಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವನೆ ನಮಗೆ ಬರುವ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ದೂರ ಇಡುತ್ತದೆ. ದೇಹಕ್ಕೆ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ.

ನಮ್ಮ ಆರೋಗ್ಯದ ಸಮಸ್ಯೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುವುದು ಹೊಟ್ಟೆಯ ಸಮಸ್ಯೆ ಈ ಹೊಟ್ಟೆಯ ಹಲವು ಕಾಯಿಲೆಗಳಲ್ಲಿ ಅಪೆಂಡಿಕ್ಸ್ ಕೂಡ ಒಂದು. ನಾವು ಸಾಮಾನ್ಯವಾಗಿ ವಾತಾವರಣ ಬದಲಾದರೆ ಹೆಚ್ಚಾಗಿ ಕಾಯಿಸಿ ಆರಿಸಿದ ನೀರನ್ನ ಕುಡಿಯುತ್ತೇವೆ ಹೀಗೆ ಬಿಸಿ ನೀರನ್ನ ಕುಡಿಯುವುದರಿಂದ ಅರೋಗ್ಯ ಹಾಳಾಗುವುದಿಲ್ಲ. ಈ ಅಪೆಂಡಿಕ್ಸ್ ಕಾಯಿಲೆಗೂ ಸಹ ಬಿಸಿ ನೀರು ಬಹಳ ಮುಖ್ಯ ಬಿಸಿ ನೀರು ರೋಗಿಯ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಬಿಸಿ ನೀರು ಕರುಳನ್ನು ಸ್ವಚ್ಛಗೊಳಿಸಲು ಸಹಾಯಕವಾಗಿತ್ತದೆ. ಕರುಳಿನಲ್ಲಿ ವಿಷಯುಕ್ತ ಅಂಶ ತುಂಬಿದ್ದಾರೆ ಕರುಳಿನಲ್ಲಿ ಉರಿಯೂತ ಕಂಡುಬರುತ್ತದೆ ಬಿಸಿ ನೀರು ಕುಡಿಯುವುದರಿಂದ ಕರುಳಿನಲ್ಲಿರುವ ವಿಷಾದ ಅಂಶ ಹೊರಹೋಗುತ್ತದೆ.
ಜೊತೆಗೆ ನಾವು ದಿನನಿತ್ಯ ಅಡುಗೆಗೆ ಬಳಸುವ ಹಲವು ಕಾಳುಗಳು ಬಹಳ ಪೌಷ್ಟಿಕತೆಯನ್ನು ಹೊಂದಿವೆ ಅದರಲ್ಲೂ ಹೆಸರು ಕಾಳು ಒಂದು. ಈ ಹೆಸರು ಕಾಳಿನಲ್ಲಿ ವಿವಿಧ ಪೋಷಕಾಂಶಗಳು ಅಡಗಿವೆ ಹೆಸರು ಕಾಳನ್ನ ನೆನೆಸಿ ಮೊಳಕೆ ಕಟ್ಟಿ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಜೊತೆಗೆ ಅಪೆಂಡಿಕ್ಸ್ ಕಾಯಿಲೆಗೆ ಉತ್ತಮ ಮದ್ದು. ಅಪಾಂಡಿಕ್ಸ್ ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ ಮಜ್ಜಿಗೆ ಅಪಾಂಡಿಕ್ಸ್ ನೋವನ್ನು ಕಡಿಮೆ ಮಾಡುತ್ತದೆ. ದಿನಕ್ಕೆ ಒಂದೆರಡು ಎಸಳು ಹಸಿ ಬೆಳ್ಳುಳ್ಳಿಯನ್ನು ಸೇವಿಸಿದರೆ ಅಪೆಂಡಿಕ್ಸ್ ಕಾಯಿಲೆಯಿಂದ ದೂರವಾಗಬಹುದು. ಸೌತೆಕಾಯಿ ಕ್ಯಾರೆಟ್ ಮೂಲಂಗಿ ಮತ್ತು ಕೊತ್ತೊಂಬರಿ ಸೊಪ್ಪು ಹೀಗೆ ಹೆಚ್ಚು ನಾರಿನಂಶವಿರುವ ತರಕಾರಿಗಳ ಜ್ಯೂಸ್ ಕುಡಿಯುವುದರಿಂದ ಅಪೆಂಡಿಕ್ಸ್ ಕಾಯಿಲೆಯಿಂದ ದೂರವಾಗಬಹುದು. ನಮ್ಮ ವೆಬ್ಸೈಟ್ ಎಲ್ಲ ಚಿತ್ರಗಳಿಗೆ ಮತ್ತು ಬರಹಗಳಿಗೆ ಕಾಪಿರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ಚಿತ್ರಗಳು ಅಥವ ಬರವಣಿಗೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಮಾಹಿತಿ ತಪ್ಪದೇ ಹಂಚಿಕೊಳ್ಳಿರಿ.