ಕ್ಷೇತ್ರದಲ್ಲಿ ಸಾವಿರ ವರ್ಷದ ಹಿಂದೆ ನೆಲೆಸಿರುವ ಶಕ್ತಿಶಾಲಿ ದೇವಿ

0
854

ಉತ್ತರ ಕರ್ನಾಟಕದಲ್ಲಿ ಎಷ್ಟೋ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು ಇವೆ ಅದರಲ್ಲಿ ಒಂದಾಗಿರುವುದು ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ.ಇದು ಒಂದು ತಾಯಿಯ ದೇವಸ್ಥಾನ ಈ ದೇವಸ್ಥಾನಕ್ಕೆ ಬಂದು ಕಷ್ಟಗಳನ್ನು ಹೇಳಿಕೊಂಡರೆ ಸಾಕು ಭಕ್ತರ ಆಸೆಗಳನ್ನು ಈಡೇರಿಸಲು ಸಾಕ್ಷಾತ್ ರೇಣುಕಾಂಬ ದೇವಿಯೇ ಇಲ್ಲಿಗೆ ಬಂದು ಹುಲಿಗೆಮ್ಮಳಾಗಿ ಇಲ್ಲಿ ನೆಲೆಸಿದ್ದಾಳೆ. ಈ ಸ್ಥಳವನ್ನು ವ್ಯಾಘ್ರಪುರಿ ಎಂದು ಸಂಸ್ಕೃತದಲ್ಲಿ ಕರೆಯುತ್ತಾರೆ. ಇಲ್ಲಿರುವ ಮೂಲ ದೇವರೆಂದರೆ ದುರ್ಗಾದೇವಿ ಸ್ವರೂಪಿಯಾದ ಹುಲಿಗೆಮ್ಮ ದೇವಿ ಹಾಗು ಈ ದೇವಸ್ಥಾನದಲ್ಲೇ ಸೋಮನಾಥನ ದೇವಸ್ಥಾನ ಕೂಡ ಇದೆ.

ಈ ದೇವಸ್ಥಾನದಲ್ಲಿ ಈಶ್ವರ ಸೋಮೇಶ್ವರನ ರೂಪದಲ್ಲಿ ನೆಲೆಸಿದ್ದಾನೆ. ಹುಲಿಗಮ್ಮ ದೇವಸ್ಥಾನದ ಇತಿಹಾಸ. ಸುಮಾರು 13 ನೆಯ ಶತಮಾನಕ್ಕೆ ಸೇರಿದ ಈ ದೇವಸ್ಥಾನದಲ್ಲಿ ನಾಗಜೋಗಿ ಹಾಗು ಬಸವಜೋಗಿ ಎಂಬ ಇಬ್ಬರು ತುಂಬಾ ಕಷ್ಟದಿಂದ ಬಳಲುತ್ತಿದ್ದರು ಹಾಗಾಗಿ ಈ ಭಕ್ತರ ಆಸೆಗಳನ್ನು ಈಡೇರಿಸಲು ರೇಣುಕಾಂಬ ದೇವಿಯೇ ಹುಲಿಗೆಮ್ಮಳಾಗಿ ಇಲ್ಲಿ ನೆಲೆಸಿದ್ದಾಳೆ. ಈ ದೇವಸ್ಥಾನದಲ್ಲಿ ಇರುವ ಕೆತ್ತನೆಯ ಪ್ರಕಾರ ಈ ದೇವಸ್ಥಾನವನ್ನು ಚತುರ್ವೇದಿ ಭಟ್ಟರಿಗೆ ಒಬ್ಬ ಚಾಲುಕ್ಯ ರಾಜನಾದ ವಿಕ್ರಮಾದಿತ್ಯ ಉಡುಗೊರೆಯಾಗಿ ನೀಡಿದ್ದಾನೆ. ಈ ದೇವಸ್ಥಾನದ ಮುಂದೆ 25 ಅಡಿ ಎತ್ತರದ ಧ್ವಜ ಸ್ಥಂಬವಿದ್ದು ಅದರ ಮುಂದೆ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಪ್ರತಿ ಮಂಗಳವಾರ ಹಾಗು ಶುಕ್ರವಾರ ದೇವಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಭಾರತ ಹುಣ್ಣಿಮೆಯ ದಿನ ತುಂಬಾ ವಿಶೇಷವಾದ ಪೂಜೆಗಳನ್ನು ಇಲ್ಲಿ ಮಾಡುತ್ತಾರೆ. ಕಷ್ಟ ಎಂದು ಬಂದ ಭಕ್ತದಾದಿಗಳಿಗೆ ಇಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪರಿಹಾರ ಸಿಗುತ್ತದೆ.

800 ವರ್ಷಕ್ಕೂ ಹೆಚ್ಚು ವರ್ಷಗಳ ಹಿಂದಿನಿಂದಲೂ ನೆಲೆಸಿರುವ ಈ ತಾಯಿ ಈಗಾಗಲೇ ಲಕ್ಷಾಂತರ ಜನರ ಪಾಪ ಕಳೆದಿದ್ದಾಳೆ ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿ ವರ್ಷದ ಜಾತ್ರ ಮಹೋತ್ಸವದಲ್ಲಿ ಲಕ್ಷಾಂತರ ಜನ ಸೇರಿ ದೇವಿಯ ಅನುಗ್ರಹ ಪಡೆಯುತ್ತಾರೆ. ಇತ್ತೇಚೆಗೆ ನಮ್ಮ ತಂಡದೊಂದಿಗೆ ಹುಬ್ಬಳ್ಳಿಯಲ್ಲಿ ನೆಲೆಸಿರುವ ದ್ಯಾವಪ್ಪ ಅವರು ತಮ್ಮ ಅನುಭವದ ನುಡಿಗಳನ್ನು ದೇವರ ದರ್ಶನ ಪಡೆಯುವವೇಳೆ ಹಂಚಿಕೊಂಡರು. ಇವರದ್ದು ದೊಡ್ಡ ಕುಟುಂಬ ಇವರ ಅಣ್ಣ ತಮ್ಮಂದಿರು ಎಲ್ಲರಿಗು ವಿವಾಹ ಆಗಿ ಒಟ್ಟಿಗೆ ಸುಖಿ ಜೀವನ ನಡೆಸುತ್ತಾ ಇದ್ದಾರೆ ಇವರ ಕೊರಗು ಇದ್ದಿದ್ದು ಮದ್ವೆ ಆದ ಹತ್ತು ವರ್ಷ ಕಳೆದರು ಸಂತಾನ ಭಾಗ್ಯ ಇಲ್ಲದೆ ಇರುವುದು. ಸಾಕಷ್ಟು ದೊಡ್ಡ ದೊಡ್ಡ ಆಸ್ಪತ್ರೆ ಸುತ್ತಿದರು ಲಕ್ಷಾಂತರ ರುಪಾಯಿ ಹಣ ಖರ್ಚು ಮಾಡಿದರು ಕಡೆಗೆ ಇವರಿಗೆ ಮಕ್ಕಳು ಆಗುವ ಯೋಗವೇ ಇಲ್ಲ ಎಂದು ವೈದ್ಯರು ಹೇಳಿದರು ಆದರು ದೃತಿಗೆಡದೆ ದ್ಯವ್ವಪ್ಪ ದಂಪತಿಗಳು ತಾಯಿಯ ಬಳಿ ತಮ್ಮ ಕಷ್ಟಗಳನ್ನು ತಮ್ಮ ಕೋರಿಕೆಯನ್ನು ಇಟ್ಟ ನಂತರ ಕೇವಲ ನಾಲ್ಕು ತಿಂಗಳಲ್ಲೇ ಶುಭ ಸುದ್ದಿ ಬಂದಿತ್ತು. ಇದು ವೈದ್ಯ ಲೋಕಕ್ಕೂ ವಿಚಿತ್ರ ವಿಸ್ಮಯವಾಯಿತು. ಹೀಗೆ ಸಾಕಷ್ಟು ಉದಾಹರಣೆಗಳು ಇಲ್ಲಿ ನಡೆದಿವಿ ಇತಿಹಾಸ ಪುಟ ತಿರುಚಿ ಹಾಕಿ ಎಲ್ಲವನ್ನು ಹೇಳುತ್ತಾ ಹೋದರೆ ವರ್ಷವೇ ಬೇಕು.

ಈ ದೇಗುಲ ಇರುವುದು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಇರುವುದು ಉತ್ತರ ಕರ್ನಾಟಕದ ಕೊಪ್ಪಳ ತಾಲ್ಲೂಕಿನ ತುಂಗ ಭದ್ರಾ ನದಿಯ ದಡದ ಮೇಲಿರುವ ಹುಲಿಗಿ ಎನ್ನುವ ಪಟ್ಟಣದಲ್ಲಿ. ಇಲ್ಲಿಗೆ ಕರ್ನಾಟಕ ಮಾತ್ರ ಅಲ್ಲದೆ ಪಕ್ಕದ ಆಂಧ್ರ ತೆಲಂಗಾಣ ಮಹಾರಾಷ್ಟ್ರ ಹೀಗೆ ನಾನ ಮೊಲೆಗಳಿಂದ ಭಕ್ತರು ಆಗಮಿಸಿ ದೇವಿಯ ಆಶಿರ್ವಾದ ಪಡೆಯುತ್ತಾರೆ ತಮ್ಮ ಕೋರಿಕೆ ಈಡೇರಿಸಿಕೊಳ್ಳುತ್ತಾರೆ. ಈ ದೇವಿಯ ಪವಾಡ ಮತ್ತು ಮಾಹಿತಿ ಶೇರ್ ಮಾಡುವುದು ಸಹ ಒಂದು ಪುಣ್ಯದ ಕೆಲಸವೇ ಆಗಿದೆ ತಪ್ಪದೇ ಶೇರ್ ಮಾಡಿ ಎಲ್ಲರಿಗು ಶುಭ ಆಗಲಿ.

LEAVE A REPLY

Please enter your comment!
Please enter your name here