ಪವಾಡ ಮಾಡುತ್ತಿರುವ ದಶರಥ ರಾಮೇಶ್ವರ ವಜ್ರ ದೇವಸ್ಥಾನ

0
1770

ನಮ್ಮ ಕರ್ನಾಟಕದಲ್ಲಿ ಹಲವಾರು ದೇವಸ್ಥಾನಗಳು ಅಪಾರವಾದ ಸಂಪತ್ತು ಅನ್ನು ಹೊಂದಿದೆ. ಆ ರೀತಿಯ ದೇವಸ್ಥಾನಗಳಲ್ಲಿ ಹೊಸದುರ್ಗದಲ್ಲಿ ಇರುವ ದೇವಸ್ಥಾನ ಕೂಡ ಒಂದು. ಅದು ಯಾವ ದೇವಸ್ಥಾನ ಎಂದರೆ. ಹೊಸದುರ್ಗ ಪಟ್ಟಣದಿಂದ ಸುಮಾರು 30ಕಿಮೀ ದೂರದಲ್ಲಿರುವ ಗುಡ್ಡದ ನೇರಲಕೆರೆಯ ದಶರಥ ರಾಮೇಶ್ವರ ವಜ್ರ ಇದು ತುಂಬಾ ಅತ್ಯಂತ ಪ್ರಾಚೀನ ಕ್ಷೇತ್ರವಾಗಿದೆ. ವೃದ್ಧ ತಂದೆ ತಾಯಿಗಳನ್ನು ಹೆಗಲ ಮೇಲೆ ಹೊತ್ತು ಅವರಿಗೆ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸಿದ ಶ್ರವಣ ಕುಮಾರನ ಪ್ರಸಂಗ ‘ರಾಮಾಯಣ’ದಲ್ಲಿ ಓದಿದ್ದೇವೆ ಅಲ್ಲವೇ.

ಶ್ರವಣ ಕುಮಾರ ಮಾತ ಪಿತೃಗಳ ಸೇವೆಗೆ ಹೆಸರಾದವರು. ಅಂಧರಾದ ತಂದೆ ತಾಯಿಗೆ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸುವ ಸಂದರ್ಭದಲ್ಲಿ ಗುಡ್ಡದ ನೇರಲಕೆರೆ ಪ್ರದೇಶಕ್ಕೆ ಬರುತ್ತಾನೆ. ಆಗ ಅವರ ತಂದೆ ತಾಯಿಯರ ಬಾಯರಿಕೆಯನ್ನು ಹೋಗಿಸಲು ಅವರನ್ನು ಅಲ್ಲೇ ಒಂದು ಮರದ ಕೆಳಗೆ ಕುಳ್ಳಿರಿಸಿ ನೀರು ತರಲು ಅಲ್ಲೇ ಸಮೀಪದ ಕೊಳದ ಬಳಿಗೆ ಹೋಗುತ್ತಾನೆ. ಇದೇ ಸಮಯದಲ್ಲಿ ಅಲ್ಲಿ ದಶರಥ ಮಹಾರಾಜ ಶಬ್ಧವೇಧಿ ಬಾಣ ಪ್ರಯೋಗದಲ್ಲಿ ನಿರತನಾಗಿರುತ್ತಾನೆ. ಕೊಳದಲ್ಲಿ ನೀರಿನ ಶಬ್ದ ಕೇಳುತ್ತದೆ. ಯಾವುದೋ ಕಾಡು ಪ್ರಾಣಿ ನೀರು ಕುಡಿಯುತ್ತಿದೆ ಎಂದು ಭಾವಿಸಿದ ದಶರಥ ಶಬ್ದ ಬಂದ ದಿಕ್ಕಿಗೆ ಬಾಣ ಹೊಡಿಯುತ್ತಾನೆ ಆದರೆ ಅದು ಶ್ರವಣನಿಗೆ ತಗುಲುತ್ತದೆ ನೋವಿನಿಂದ ಶ್ರವಣ ಕೂಗಿಕೊಳ್ಳುತ್ತಾನೆ. ಅದನ್ನು ಕೇಳಿಸಿಕೊಂಡ ದಶರಥ ಅಲ್ಲಿಗೆ ಬರುತ್ತಾನೆ.

ಆಗ ಬಾಯಾರಿದ ತನ್ನ ತಂದೆ ತಾಯಿಗಳಿಗೆ ನೀರು ಒಯ್ಯಲು ಬಂದುದಾಗಿ ಶ್ರವಣ ದಶರಥನಿಗೆ ತಿಳಿಸಿ ಅಲ್ಲೇ ಪ್ರಾಣ ಬಿಡುತ್ತಾನೆ. ನಂತರ ದಶರಥನೇ ಶ್ರವಣ ಕುಮಾರನ ತಂದೆ ತಾಯಿಗಳ ಬಳಿ ಹೋಗಿ ಅವರಿಗೆ ನೀರು ಕೊಡುತ್ತಾನೆ. ತನ್ನಿಂದ ಆದ ಅಚಾತುರ್ಯವನ್ನು ತಿಳಿಸಿ ನಿಮ್ಮ ಮಗ ಮೃತಪಟ್ಟನೆಂದು ಹೇಳುತ್ತಾನೆ. ಮಗ ಸತ್ತುವೊದ ಸಂಗತಿ ತಿಳಿದು ಕೋಪಗೊಂಡ ಶ್ರವಣನ ತಂದೆ ತಾಯಿ ದಶರಥನಿಗೆ ಶಾಪ ಕೊಡುತ್ತಾರೆ. ಮಗನ ಅಗಲಿಕೆ ನೋವು ತಾಳಲಾರದೆ ಪ್ರಾಣ ಬಿಡುತ್ತಾರೆ. ದಶರಥ ಶಾಪ ವಿಮೋಚನೆಗಾಗಿ ಮಗ ಶ್ರೀರಾಮನೊಂದಿಗೆ ಸಮೀಪದ ಗವಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಾನೆ. ದಶರಥ ಮತ್ತು ರಾಮ ಇಬ್ಬರೂ ಸೇರಿ ಪೂಜಿಸಿದ ಲಿಂಗಕ್ಕೆ ದಶರಥ ರಾಮೇಶ್ವರ ಎಂಬ ಹೆಸರು ಬಂತು ಎಂಬ ಇತಿಹಾಸವಿದೆ.

ಪುರಾಣ ಕಾಲದಿಂದ ಈ ಕ್ಷೇತ್ರಕ್ಕೆ ದಶರಥ ರಾಮೇಶ್ವರ ವಜ್ರ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದೆ. ಇಲ್ಲಿ ಶ್ರವಣಕುಮಾರ ಮತ್ತು ಅವನ ತಂದೆ ಹಾಗೂ ತಾಯಿಯರ ಸಮಾಧಿಗಳಿವೆ. ಶ್ರಾವಣ ಮಾಸದಲ್ಲಿ ದಶರಥ ರಾಮೇಶ್ವರ ಕ್ಷೇತ್ರದಲ್ಲಿ ನಿತ್ಯ ರುದ್ರಾಭಿಷೇಕ ನಡೆಯುತ್ತದೆ. ದಶರಥ ವಜ್ರದ ಸಮೀಪ ಕಂಚೀ ವರದರಾಜಸ್ವಾಮಿ ಬೆಟ್ಟ ಗಿಳಿ ವಜ್ರ ರಂಗನಾಥಸ್ವಾಮಿ ವಜ್ರ ಹೆಸರಿನ ಕ್ಷೇತ್ರಗಳಿವೆ. ಪ್ರತಿ ವರ್ಷ ಶಿವರಾತ್ರಿ ನಂತರದ ಹನ್ನೊಂದನೆ ದಿನ ದಶರಥ ರಾಮೇಶ್ವರ ರಥೋತ್ಸವ ನಡೆಯುತ್ತದೆ. ಈ ಕ್ಷೇತ್ರಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ. ಸರಳ ವಿವಾಹಗಳಿಗೂ ಇಲ್ಲಿ ಅವಕಾಶವಿದೆ. ಅದಕ್ಕಾಗಿ ಎಂದು ಸಮುದಾಯ ಭವನವಿದೆ. ಇಲ್ಲಿ ಉಳಿದುಕೊಳ್ಳಲು ಸಮೀಪದ ಹೊಸದುರ್ಗ ಅಥವಾ ಹಿರಿಯೂರಿನಲ್ಲಿ ಲಾಡ್ಜ್‌ಗಳಿವೆ.

ಈ ಕ್ಷೇತ್ರಕ್ಕೆ ಹೋಗುವ ದಾರಿ ದಶರಥ ರಾಮೇಶ್ವರಕ್ಕೆ ಬರುವವರು ಚಿತ್ರದುರ್ಗದಿಂದ ಹೊಸದುರ್ಗಕ್ಕೆ ಬಂದು ಅಲ್ಲಿಂದ ನೇರಲಕೆರೆಗೆ ಹೋಗಬಹುದು. ಜೊತೆಗೆ ಖಾಸಗಿ ಬಸ್‌ಗಳ ಸೌಲಭ್ಯವಿದೆ. ಬೆಂಗಳೂರಿನಿಂದ ಬರುವವರು ತುಮಕೂರು ಚಿಕ್ಕನಾಯ್ಕನಹಳ್ಳಿ ಮಾರ್ಗವಾಗಿ ಹುಳಿಯಾರಿಗೆ ಬಂದು ಅಲ್ಲಿಂದ ನೇರಲಕೆರೆಗೆ ಹೋಗಬಹುದು. ಈ ದೇಚಸ್ಥಾನಕ್ಕೆ ಮಕ್ಕಳು ಆಗದೆ ಇರುವ ದಂಪತಿಗಳು ಈ ದೇವಸ್ಥಾನಕ್ಕೆ ಬಂದು ಹರಕೆ ಮಾಡಿಕೊಂಡ್ರೆ ಮಕ್ಕಳು ಆಗುತ್ತವೆ ಅನ್ನೋ ನಂಬಿಕೆ ಕೂಡ ಇದೆ.

LEAVE A REPLY

Please enter your comment!
Please enter your name here