ಜೀವನದಲ್ಲಿ ಒಮ್ಮೆ ಆದರು ಈ ದೇವಸ್ಥಾನಕ್ಕೆ ಹೋಗಲೇ ಬೇಕು

0
1095

ನಮ್ಮ ಭಾರತದಲ್ಲಿ ದೇವಾಲಯಗಳು ಇಲ್ಲದ ಊರಿಲ್ಲ ಒಂದು ಊರಿನಲ್ಲಿ ಗಲ್ಲಿ ಗಲ್ಲಿಯಲ್ಲೂ ದೇವಸ್ಥಾನಗಳು ಇರುತ್ತವೆ.ಆದರೆ ಒಂದು ಒಂದು ದೇವಸ್ಥಾನದಲ್ಲಿ ಒಂದೊಂದು ರೀತಿಯ ಮಹಿಮೆ ಇರುತ್ತದೆ. ಹಾಗೂ ಅದರದೇ ಆದ ಶಕ್ತಿಯನ್ನು ದೇವಸ್ಥಾನಗಳು ಒಂದಿರುತ್ತವೆ. ಜೊತೆಗೆ ನಮ್ಮ ಭಾರತದಲ್ಲಿ ಇತರೆ ದೇವರುಗಳ ದೇವಾಲಯಗಳಿಗೆ ಹೋಲಿಸಿ ಕೊಂಡರೆ ಶಿವನಿಗೆ ಸಮರ್ಪಿತವಾದ ದೇವಾಲಯಗಳು ಒಂದು ರೀತಿಯ ವಿಶಿಷ್ಟತೆಯನ್ನು ಹೊಂದಿರುತ್ತವೆ. ಕೆಲವು ದೇವಾಲಯಗಳಲ್ಲಿ ಶಿವನ ಮೂಲ ವಿಗ್ರಹಗಳಿದ್ದರೆ ಕೆಲವು ದೇವಾಲಯಗಳಲ್ಲಿ ಶಿವನ ರೂಪವಾದ ಶಿವಲಿಂಗಗಳನ್ನು ಪೂಜಿಸುತ್ತಾರೆ. ಹಾಗೆಯೇ ಇಲ್ಲೊಂದು ಮಹತ್ವ ಹಾಗೂ ತುಂಬಾ ವಿಶಿಷ್ಟವಾದ ದೇವಲಯವೊಂದು ಹಾವೇರಿ ತಾಲ್ಲೂಕಿನ ಹಾನಗಲ್ ನಲ್ಲಿದೆ.

ಹಾನಗಲ್ ಒಂದು ಪ್ರವಾಸಿತಾಣವಾಗಿದ್ದು ಇಲ್ಲಿ ಶ್ರೀ ತಾರಕೇಶ್ವರ ದೇವಸ್ಥಾನ ಹಾಗೂ ಕೋಟೆ ಕೂಡಾ ಇವೆ. ಇಲ್ಲಿಗೆ ಬನವಾಸಿ ಸಿರಸಿ ಬಂಕಾಪುರ ಜೋಗ ಮುಂಡಗೋಡ ಕೂಡ ಸಮೀಪವಿವೆ. ಇಲ್ಲಿ ಇರುವ ದೇವಸ್ಥಾನ ಶ್ರೀ ತಾರಕೇಶ್ವರ ದೇವಸ್ಥಾನ ಇದು ಅದರದೇ ಆದ ಮಹತ್ವವನ್ನು ಒಳಗೊಂಡಿದೆ. ಜೊತೆಗೆ ಯಾತ್ರಾ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಈ ದೇಗುಲದ ಇತಿಹಾಸವನ್ನು ನೋಡುವುದಾದರೆ. ಈ ದೇವಾಲಯ ಐತಿಹಾಸಿಕ ಜಕಣಾಚಾರಿ ಕಟ್ಟಿಸಿದ ದೇವಸ್ಥಾನ ವಾಗಿದೆ. ಶ್ರೀ ತಾರಕೇಶ್ವರ ದೇವಸ್ಥಾನ ಪಶ್ಚಿಮ ಚಾಲುಕ್ಯ ಶಿಲ್ಪಕಲಾ ಶೈಲಿಯಲ್ಲಿದೆ ಇಲ್ಲಿ ಶಿವನ ರೂಪವಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ಶ್ರೀ ತಾರಕೇಶ್ವರ ದೇವಸ್ಥಾನವು ತುಂಬಾ ಚಿಕ್ಕದಾಗಿದ್ದರು ತುಂಬಾ ಉದ್ಧವಿದೆ. ಇಲ್ಲಿ ಮುಖಮಂಟಪ 2 ಹಂತಗಳಲ್ಲಿದೆ. ಮೊದಲ ಹಂತದಲ್ಲಿ 16 ಕಂಬಗಳಿವೆ. ಎರಡನೇ ಹಂತದಲ್ಲಿ 3 ದ್ವಾರಗಳಿವೆ ಮತ್ತು 64 ಕಂಬಗಳಿವೆ. ತಾರಕೇಶ್ವರ ಗುಡಿ ದೊಡ್ಡದೂ ಕಲಾತ್ಮಕವಾದುದೂ ಆಗಿದೆ. ದೇವಾಲಯ ಕಪ್ಪು ಹಸುರು ಕಲ್ಲಿನಿಂದ ಕಟ್ಟಿದ್ದು ಪೂರ್ವಾಭಿ ಮುಖವಾಗಿದೆ. ಇದು ಕಲ್ಯಾಣದ ಚಾಳುಕ್ಯರ ಕಾಲದ ಉತ್ತಮ ಗುಡಿಗಳಲ್ಲಿ ಒಂದು. ಈ ಗುಡಿಯ ದಕ್ಷಿಣದ ಹೊರಗೋಡೆಯ ಮೇಲೆ ಶೂರ್ಪನಖಿಯ ಮೂಗು ಕೊಯ್ಯುತ್ತಿರುವುದು ಮಾರೀಚ ವಧೆ ಮೊದಲಾದ ರಾಮಾಯಣದ ದೃಶ್ಯಗಳೂ ಶ್ರೀಕೃಷ್ಣ ಜನನ ನಂದ ಅವನನ್ನು ಕರೆದುಕೊಂಡು ಯಮುನಾ ನದಿಯನ್ನು ದಾಟಿದ್ದು ಶಕಟಾಸುರವಧೆ ಕಾಳಿಮರ್ದನ ಇತ್ಯಾದಿ ಭಾಗವತದ ದೃಶ್ಯಗಳೂ ಮತ್ತೊಂದೆಡೆ ಪಾಂಡವರ ಶಿಲ್ಪಗಳೂ ಇವೆ.

ಜೊತೆಗೆ ಹೊರಗೋಡೆಗಳ ಮೇಲೆ ಕೀರ್ತಿಮುಖಗಳನ್ನು, ಭೈರವ ಮತ್ತು ಬ್ರಹ್ಮ ಇವರ ವಿಗ್ರಹಗಳನ್ನು ಕೆತ್ತಲಾಗಿದೆ. ಈ ಗುಡಿಯ ಮುಂದೆ ಇದ್ದ ಕೋಟೆಕಾಳಗವನ್ನು ತೋರಿಸುವ ವೀರಗಲ್ಲುಗಳನ್ನು ಈಗ ಮಂಟಪದಲ್ಲಿಟ್ಟಿದ್ದಾರೆ. ಇಲ್ಲಿ ಎರಡು ದೊಡ್ಡ ಶೈವ ದ್ವಾರಪಾಲಕರ ವಿಗ್ರಹಗಳನ್ನು ಇಡಲಾಗಿದೆ. 20ಕ್ಕೂ ಮೇಲ್ಪಟ್ಟು ಶಿಲಾಶಾಸನಗಳಿವೆ. ಇವುಗಳಲ್ಲಿ ಕೆಲವು 12 ಮತ್ತು 13ನೆಯ ಶತಮಾನದವು.

ಚಾಳುಕ್ಯ ಆರನೆಯ ವಿಕ್ರಮಾದಿತ್ಯ, ಕಳಚುರಿ ಬಿಜ್ಜಳ ಮತ್ತು ಕದಂಬ ಅರಸರಾದ ತೈಲಪ, ಕಾಮದೇವ, ಸೋವಿದೇವ ಮತ್ತು ಮಲ್ಲಿದೇವರ ಆಳಿಕೆಯವು. ಇಲ್ಲಿನ ತಾರಕೇಶ್ವರ ಗುಡಿಯ ಮುಂದಿನ ಒಂದು ಶಾಸನದಿಂದ ಎರಡನೆಯ ತೈಲಪ, ಮುಖ್ಯಮಂತ್ರಿಯೂ ದಂಡನಾಯಕನೂ ಆದ ಮಸಣ ಎಂಬುವವನು ಕಟ್ಟಿಸಿದ ತೈಲೇಶ್ವರ ದೇವರಿಗೆ ಭೂಮಿ ದಾನಕೊಟ್ಟ ವಿಚಾರ ಹಿಂದಿನ ಪುರಾಣಗಳಲ್ಲಿ ತಿಳಿದು ಬರುತ್ತದೆ. ಈ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕಡೆಯ ಸೋಮವಾರ ಬುತ್ತಿ ಪೂಜೆ ಎಂದು ಮಾಡುತ್ತಾರೆ ಎಂದರೆ ಬುತ್ತಿ ಅನ್ನು ಮೊಸರನ್ನ ದಿಂದ ಶಿವನ ರೂಪವನ್ನು ಮಾಡುತ್ತಾರೆ. ಈ ದೇಗುಲಕ್ಕೆ ಹೋಗುವ ಮಾರ್ಗ ಧಾರವಾಡದ ದಕ್ಷಿಣಕ್ಕೆ 90 ಕಿಮೀ ದೂರದಲ್ಲಿದೆ ಹಾಗೂ ಹಾವೇರಿಯಿ೦ದ 30 ಕಿ ಮೀ ದೂರದಲ್ಲಿ ಸ್ಥಳವಿದೆ.

LEAVE A REPLY

Please enter your comment!
Please enter your name here