ಮಿಕ್ಸ್ ಮಸಾಲ ದೋಸೆ ಮತ್ತು ಹಿರೇಕಾಯಿ ದೋಸೆ ಮಾಡುವುದು ತುಂಬಾ ಸುಲಭ

0
692

ಭಾರತೀಯರಿಗೆ ದೋಸೆ ಕಂಡರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಬಿಸಿ ಬಿಸಿ ಅದ ದೋಸೆಗೆ ಖಾರವಾದ ಚಟ್ನಿ ಕೊಟ್ಟರೆ ಎಷ್ಟು ತಿಂದರು ತಿನ್ನುತ್ತಲೇ ಇರಬೇಕು ಎನ್ನಿಸುತ್ತದೆ ಅದರಲ್ಲೂ ಈ ದೋಸೆಗಳು ಒಂದಲ್ಲ ಎರಡಲ್ಲ ನಾನಾ ರೀತಿಯ ದೋಸೆಗಳನ್ನು ಮಾಡುತ್ತಾರೆ ಆ ಎಲ್ಲ ದೋಸೆಗಳು ಒಂದ್ಕಕಿಂತ ಒಂದು ರುಚಿಯಾಗಿರುತ್ತದೆ. ಬೀದಿಬದಿಯಲ್ಲೇ ಇತ್ತೇಚೆಗೆ 99 ಬಗೆಯ ದೋಸೆಗಳು ದೊರೆಯುತ್ತದೆ ಎಂಬುದು ನಿಮಗೆ ಗೊತ್ತು ಕೆಲವರು ಸಹ ಹಲವು ರೀತಿಯ ದೋಸೆ ತಿಂದಿರುತ್ತಾರೆ. ಆದ್ರೆ ಹೊರಗಡೆ ಆಹಾರ ಆರೋಗ್ಗ್ಯಕ್ಕೆ ಎಷ್ಟು ಸೂಕ್ತ ಎಂಬ ಪ್ರಶ್ನೆ ಬಂದಾಗ ಮನೆಯಲ್ಲೇ ಮಾಡಿಕೊಂಡು ತಿನ್ನುವುದು ಲೇಸು ಎಂಬುದು. ಆದರೆ ಎಲ್ಲರೂ ಮನೆಯಲ್ಲೇ ಸುಮ್ಮನೆ ಇರುವುದಿಲ್ಲ ಕೆಲ್ಸಕ್ಕೆ ಹೋಗುವ ಜನಕ್ಕೆ ಸಮಯವೇ ಸಿಗುವುದಿಲ್ಲ. ಆದರೆ ವೀಕ್ ಎಂಡ್ ಟೈಮ್ ನಲ್ಲಿ ಹೊಸ ಹೊಸ ರೀತಿಯ ರೆಸ್ಸಿಪಿ ನೀವು ಪ್ರಯತ್ನ ಮಾಡಬಹುದು ನಾವು ಇಂದು ನಿಮಗೆ ತೋರಿಸಿರುವ ಈ ರೆಸಿಪಿ ಮಾಡಲು ತುಂಬಾ ಸುಲಭ ಮತ್ತು ಅತ್ಯಂತ ರುಚಿ ಆಗಿಯೂ ಇರುತ್ತದೆ. ಯಾವಾಗಲು ಮಾಮೂಲಿ ದೋಸೆ ತಿಂದು ತಿಂದು ಬೇರ ಆಗಿದ್ರೆ ಇದನ್ನು ಸಹ ಒಮ್ಮೆ ಪ್ರಯತ್ನ ಮಾಡಿರಿ.

ಈ ನಾನಾ ರೀತಿಯ ದೋಸೆಗಳಲ್ಲಿ ಮಿಕ್ಸ್ ಮಸಾಲಾ ದೋಸೆ ಹಾಗೂ ಹೀರೆಕಾಯಿ ದೋಸೆ ಕೂಡ ಒಂದು ಹಾಗಾದರೆ ಈ ಎರಡು ದೋಸೆಗಳನ್ನು ಮಾಡುವುದು ಹೇಗೆಂದು ತಿಳಿದುಕೊಳ್ಳೋಣ ಬನ್ನಿ. ಮಿಕ್ಸ್ ಮಸಾಲ ದೋಸೆ ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳು. ಅಕ್ಕಿ ಮೆಂತೆ ಉದ್ದಿನಬೇಳೆ ಕಡ್ಲೆಬೇಳೆ ಈರುಳ್ಳಿ ಶುಂಠಿ ಹಸಿಮೆಣಸಿನಕಾಯೀ ಕೊತ್ತಂಬರಿ ಸೊಪ್ಪು ಉಪ್ಪು ಕರಿಬೇವು ಇದನ್ನು ಮಾಡುವ ವಿಧಾನ ತಿಳಿಯೋಣ.

ಹಿಂದಿನ ರಾತ್ರಿಯೇ ಅಕ್ಕಿ ಕಡ್ಲೆಬೇಳೆ ಉದ್ದಿನ ಬೆಳೆ ಮೆಂತೆಯನ್ನು ನೆನೆಯಲು ಹಾಕಿಡಿ. ಬೆಳಗ್ಗೆ ಅದನ್ನು ತೆಗೆದುಕೊಂಡು ಮಿಕ್ಸಿ ಮಾಡಿಕೊಳ್ಳಿ. ಇನ್ನೊಂದೆಡೆ ಕರಿಬೇವು ಶುಂಠಿ ಮೆಣಸಿನ ಕಾಯಿ ಈರುಳ್ಳಿ ಕೊತ್ತಂಬರಿ ಸೊಪ್ಪು ಉಪ್ಪು ಹಾಕಿ ಮಿಕ್ಸಿ ಮಾಡಿ ನಂತರ ಅದನ್ನು ಮೊದಲು ಮಾಡಿಟ್ಟ ಹಿಟ್ಟಿನ ಸೇರಿಸಿ ಮಿಕ್ಸ್ ಮಾಡಿ ಅಳತೆ ನೋಡಿಕೊಂಡು ಅಗತ್ಯವಿದ್ದರೆ ನೀರು ಸೇರಿಸಿ ಹೆಚ್ಚು ತೆಳ್ಳಗೆ ಮಾಡದೆ ಮಂದವಾಗಿಯೇ ಇರಲಿ. ಬಳಿಕ ಎಣ್ಣೆ ಸವರಿ ದೋಸೆಕಲ್ಲಿನಲ್ಲಿ ಹೊಯ್ಯಿರಿ. ಘಮ ಘಮ ಮಿಕ್ಸ್ ಮಸಾಲ ದೋಸೆ ರೆಡಿ ಆಗುತ್ತದೆ.

ಹೀರೆಕಾಯಿ ದೋಸೆ ಮಾಡೋದು ಹೇಗೆ ಎಂದು ತಿಳಿದುಕೊಳ್ಳಣ ಬನ್ನಿ: ಹೀರೆಕಾಯಿ ದೋಸೆಗೆ ಬೇಕಾಗುವ ಪದಾರ್ಥಗಳು ಹೀರೆಕಾಯಿ ಬೇಸನ್ ಪೌಡರ್ ಇಂಗು ಉಪ್ಪು ಕಾರದಪುಡಿ ಜೀರಿಗೆ ಎಣ್ಣೆ ಬೆಣ್ಣೆ ಹೀರೆಕಾಯಿದೋಸೆ ಮಾಡುವ ವಿಧಾನ ಮೊದಲಿಗೆ ಹೀರೆಕಾಯಿಯನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿ ಅದನ್ನು ಮಿಕ್ಸಿ ಮಾಡಿಕೊಳ್ಳಬೇಕು. ಬಳಿಕ ತೆಗೆದು ಅದಕ್ಕೆ ಬೇಸನ್, ಜೀರಿಗೆ, ಉಪ್ಪು, ಇಂಗು, ಕಾರದ ಪುಡಿ ಹಾಕಿ ಮಿಕ್ಸ್ ಮಾಡಿ ದೋಸೆ ಹಿಟ್ಟಿನಷ್ಟು ಹದ ಮಾಡಿಕೊಂಡು ತಾವಾದಲ್ಲಿ ಎಣ್ಣೆ ಸವರಿ ಹಾಕಬೇಕು ಅದನ್ನು ಚೆನ್ನಾಗಿ ಬೇಯಿಸಬೇಕು ಆಗ ಹೀರೆಕಾಯಿ ದೋಸೆ ರೆಡಿ ಆಗುತ್ತದೆ. ಈ ದೋಸೆಗೆ ಖಾರವಾದ ಕಾಯಿ ಚಟ್ನಿ ಜೊತೆ ತಿಂದರೆ ತುಂಬಾ ರುಚಿಯಾಗಿ ಇರುತ್ತದೆ.

LEAVE A REPLY

Please enter your comment!
Please enter your name here