ಸುಲಭವಾಗಿ ಗರಿ ಗರಿ ಜಿಲೇಬಿ ಮನೆಯಲ್ಲೇ ಮಾಡೋದು ಸುಲಭ

0
871

ಸಿಹಿ ತಿಂಡಿ ಜಿಲೇಬಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಒಮ್ಮೆ ತಿಂದರೆ ಮತ್ತಷ್ಟು ತಿನ್ನುವಷ್ಟು ಚಿಕ್ಕ ಮಕ್ಕಳಿಂದ ಹಿಡಿದು ತಾತ ಅಜ್ಜಿಯವರೆಗೂ ಕೂಡ ಸಿಹಿ ಕಂಡರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಸಿಹಿಯಲ್ಲಿ ಸಕ್ಕರೆ ಅಂಶ ಇರುವುದರಿಂದ ದೇಹಕ್ಕೂ ಒಳ್ಳೆಯದು ಆದರೆ ತುಂಬಾ ಮಿತಿಯಲ್ಲಿ ಇರಬೇಕು ಇದು ಅತೀ ಆದರೆ ಹಲವು ರೀತಿಯ ಆರೋಗ್ಯ ಸಮಸ್ಯೆ ಬರುವುದು ಖಚಿತ. ಆದರೆ ನಾವು ಅಂಗಡಿಯಿಂದ ತರುವ ಜಿಲೇಬಿ ತಿನ್ನುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಬರುವುದು ನಿಮಗೆ ಗೊತ್ತಿದೆ. ಜಿಲೇಬಿ ರುಚಿ ಬರಲು ಟೆಸ್ಟಿಂಗ್ ಪೌಡರ್ ಮತ್ತು ಹೆಚ್ಚು ಬಣ್ಣ ಬರಲು ಒಂದಿಷ್ಟು ಕೆಮಿಕಲ್ ಬಳಕೆ ಮಾಡೋದು ಸರ್ವೇ ಸಾಮಾನ್ಯ ಇದನ್ನು ನಾವು ತಿನ್ನುವುದರಿಂದ ನಮಗೆ ಸಾಕಷ್ಟು ಸಮಸ್ಯೆಗಳು ಬರುತ್ತದೆ. ಈ ಎಲ್ಲ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಮನೆಯಲ್ಲೇ ಸುಲಭವಾಗಿ ಜಿಲೇಬಿ ಮಾಡ್ಕೊಂಡು ತಿನ್ನಬಹುದು. ಮನೆಯಲ್ಲೇ ರುಚಿ ಸೂಚಿ ಶುದ್ದ ಎಣ್ಣೆಯಿಂದ ಕರೆದು ತಿನ್ನುವುದರಿಂದ ಆರೋಗ್ಯ ಸಮಸ್ಯೆ ಬರುವುದಿಲ್ಲ ರುಚಿಯೂ ಸಹ ಅದ್ಬುತವಾಗಿ ಇರುತ್ತದೆ.

ಸಿಹಿ ತಿಂಡಿಗಳಲ್ಲಿ ಸಾಮಾನ್ಯವಾಗಿ ಎಲ್ಲರು ಇಷ್ಟ ಪಡುವ ಸಿಹಿ ತಿಂಡಿ ಎಂದರೆ ಜಿಲೇಬಿ ಇದನ್ನು ಎಲ್ಲ ಶುಭ ಕಾರ್ಯಗಳಲ್ಲಿ ಕೂಡ ತಯಾರಿಸುತ್ತಾರೆ. ಜೊತೆಗೆ ಎಲ್ಲರೂ ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ ಅದರಲ್ಲೂ ಜಾತ್ರೆಗಳಿಗೆ ಹೋದರೆ ಸಾಕು ಅಲ್ಲಿ ಕಾಣುವ ಸ್ವೀಟ್ ಎಂದರೆ ಜಿಲೇಬಿ. ಹಾಗಾದರೆ ಸುಲಭವಾಗಿ ಈ ಜಿಲೇಬಿಯನ್ನು ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ. ಜಿಲೇಬಿ ಮಾಡಲು ಬೇಕಾಗುವ ಸಾಮಗ್ರಿಗಳು: ಶುದ್ದ ಅಡುಗೆ ಎಣ್ಣೆ ಮಜ್ಜಿಗೆ ಕೇಸರಿ ತುಪ್ಪ ಸಕ್ಕರೆ ಮೈದಾ

ಜಿಲೇಬಿ ಮಾಡುವ ವಿಧಾನ ಹೇಗೆ ತಿಳಿಯೋಣ: ಮೊದಲು ಮೈದಾ ಹಿಟ್ಟಿಗೆ ಸ್ವಲ್ಪ ಮಜ್ಜಿಗೆ ಹಾಕಿ ಕಲಸಿಟ್ಟು ಒಂದು ರಾತ್ರಿ ಹಾಗೆ ಬಿಡಬೇಕು. ಮರುದಿನ ಈ ಮಿಶ್ರಣಕ್ಕೆ ಇನ್ನು ಸ್ವಲ್ಪ ಮೈದಾಹಿಟ್ಟು ತುಪ್ಪವನ್ನು ಹಾಕಿ ಮಿಕ್ಸ್‌ ಮಾಡಿಕೊಳ್ಳಬೇಕು. ನಂತರ ಒಂದು ಬಾಣಲೆಯನ್ನು ಸ್ಟವ್‌ ಮೇಲಿಟ್ಟು ಅದು ಸ್ವಲ್ಪ ಬಿಸಿಯಾಗುವಾಗ ಅದಕ್ಕೆ ಸಕ್ಕರೆ ಹಾಕಿ ಅದು ಮುಳುಗುವಷ್ಟು ನೀರು ಹಾಕಿ ಕಲಕುತ್ತ ಇರಬೇಕು ಇದು ಪಾಕ ಹದಕ್ಕೆ ಬಂದಾಗ ಅದಕ್ಕೆ ಕೇಸರಿ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಸ್ಟವ್ ಮೇಲಿಂದ ಕೆಳಗೆ ಇಳಿಸಬೇಕು. ನಂತರ ಸ್ವಲ್ಪ ದೊಡ್ಡದಾದ ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಬೇಕು. ನಂತರ ಕಲಸಿಟ್ಟ ಹಿಟ್ಟನ್ನು ಒಂದು ಜಿಲೇಬಿ ತೂತಿನ ಪರಿಕರದಲ್ಲಿ ವೃತ್ತಾಕಾರವಾಗಿ ಎಣ್ಣೆಗೆ ಬಿಡಬೇಕು ಇದನ್ನು ಗ್ಯಾಸ ಸಿಮ್‌ನಲ್ಲೆ ಇಟ್ಟು ಬೇಯಲು ಬಿಡಬೇಕು ಇದು ಕ್ರಿಸ್ಪಿಯಾಗಿ ಕಂದು ಬಣ್ಣಕ್ಕೆ ತಿರುಗುವಾಗ ತೆಗೆದು ಸಕ್ಕರೆ ಪಾಕಕ್ಕೆ ಹಾಕಬೇಕು.

ಸ್ವಲ್ಪ ಹೊತ್ತು ಹಾಗೇ ಬಿಟ್ಟರೆ ಅದು ಸಕ್ಕರೆ ಪಾಕ ಎಳೆದುಕೊಳತ್ತದೇ ಸ್ವಲ್ಪ ಹೊತ್ತಿನ ನಂತರ ತೆಗೆದು ಸರಿಯಾಗಿ ಬೆಂದಿದಿಯೇ, ಪಾಕ ಕರೆಕ್ಟಾಗಿದ್ಯಾ ಅಂತ ಪರೀಕ್ಷಿಸಬೇಕು ಎಲ್ಲ ಸರಿಯಾಗಿದ್ದರೆ ಉಳಿದ ಹಿಟ್ಟನ್ನು ಇದೇ ರೀತಿಯಲ್ಲಿ ಹಾಕಿ. ಗರಿಗರಿಯಾದ ಜಿಲೇಬಿಯನ್ನು ಮಾಡಬೇಕು. ತಿಳಿದುಕೊಂಡಿರಲ್ಲ ಸುಲಭವಾಗಿ ಹೇಗೆ ಜಿಲೇಬಿ ಮಾಡುವುದು ಅಂತ ಹಾಗಾಗಿ ಇನ್ನು ಮುಂದೆ ನಿಮ್ಮ ಮನೆಯ ಯಾವುದಾದರೂ ಕಾರ್ಯಗಳಲ್ಲಿ ಮಾಡಿ ಎಲ್ಲರೂ ಇಷ್ಟ ಪಡುತ್ತಾರೆ.

LEAVE A REPLY

Please enter your comment!
Please enter your name here