ವಿಶ್ವದಲ್ಲೇ ಪ್ರಸಿದ್ದ ಗರುಡ ದೇವಾಲಯ ಇರುವುದು ಕರ್ನಾಟಕದಲ್ಲಿ

0
1088

ನಮ್ಮ ವಿಶ್ವದಲ್ಲಿ ಹಲವಾರು ರೀತಿಯ ಹಲವಾರು ಪ್ರಸಿದ್ದಿ ಪಡೆದಿರುವ ದೇವಾಲಯಗಳು ಇವೆ ಆದರೆ ವಿಶ್ವದಲ್ಲೇ ಪ್ರಸಿದ್ದಿ ಪಡೆದಿರುವ ಗರುಡ ದೇವಾಲಯ ಕೋಲಾರ ಜಿಲ್ಲೆಯಲ್ಲಿ ಇದೆ. ಈ ದೇಗುಲದ ಇತಿಹಾಸವನ್ನು ತಿಳಿದುಕೊಳ್ಳೋಣ. ಸೀತೆಯ ರಕ್ಷಣೆಗೆಂದು ಬಂದ ಜಟಾಯು ಅನ್ನುವ ಪಕ್ಷಿಯನ್ನು ರಾವಣನು ಕೊಲ್ಲಲ್ಪಟ್ಟ ಸ್ಥಳವೆ ಇದು. ಇದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಗ್ರಾಮದಲ್ಲಿ ಇರುವ ಏಕೈಕ ಗರುಡ ದೇವಸ್ಥಾನ. ಈ ದೇಗುಲದ ಬಗ್ಗೆ ಪುರಾಣಗಳಲ್ಲಿ ಕಂಡು ಬಂದಿರುವುದು ಏನೆಂದರೆ ಮಹಾಭಾರತದ ವೇಳೆ ಅರ್ಜುನನಿಂದ ಇಲ್ಲಿ ಶ್ರೀಗರುಡ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ ಎಂದಿದೆ.

ಹಾಗೆಯೇ ಮುಳಬಾಗಿಲು ತಾಲೂಕು ಕೇಂದ್ರದಿಂದ 14 ಕಿ.ಮೀ. ದೂರ ಹೋದರೆ ಸಾಕು ಕೊಲದೇವಿ ಎಂಬ ಗ್ರಾಮ ಸಿಗುತ್ತದೆ. ಈ ಗ್ರಾಮವು ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳ ಹಿನ್ನೆಲೆಯನ್ನು ಹೊಂದಿರುವ ಸ್ಥಳವಾಗಿದೆ. ಹಲವು ಶತಮಾನಗಳ ಹಿಂದೆ ಬೃಗ ಮಹಾಋಷಿಗಳಿಂದ ಈ ಪ್ರದೇಶಕ್ಕೆ ಕೊಲದೇವಿ ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ. ಈ ದೇವಾಲಯ ಸಾವಿರ ವರ್ಷಗಳ ಹಿಂದೆಯೇ ರಾಮಾನುಜಾ ಚಾರ್ಯರಿಂದ ಪ್ರತಿಷ್ಠಾಪನೆ ಆಗಿದೆ. ವಿಷ್ಣು ವರ ಕೊಟ್ಟು ಭೂಲೋಕಕ್ಕೆ ಹೋಗು ಎಂದಾಗ ಹನುಮನು ಇಲ್ಲಿ ಬಂದು ನೆಲೆಸಿದ್ದಾನೆ ಎನ್ನಲಾಗುತ್ತಿದೆ.ಜೊತೆಗೆ ಇಲ್ಲಿಯ ಗರುಡ ದೇವರು ಒಂದು ಕೈಯಲ್ಲಿ ನಾರಾಯಣ, ಇನ್ನೊಂದು ಕೈಯಲ್ಲಿ ಲಕ್ಷ್ಮೀಯನ್ನು ಹೊಂದಿರುವುದನ್ನು ಸಹ ಕಾಣಬಹುದು.

ಈ ದೇವಸ್ಥಾನದ ಪುರಾಣವನ್ನು ತಿಳಿಯೋಣ ರಾವಣ ಸೀತೆಯನ್ನು ಅಪಹರಿಸಿದ ವೇಳೆ ವಿಷ್ಣುವಿನ ವಾಹನ ಜಟಾಯು ಪಕ್ಷಿ ಸೀತೆಯನ್ನು ಕಾಪಾಡಲು ಮುಂದಾದಾಗ ರಾವಣ ಜಟಾಯುವಿನ ಎರಡು ರೆಕ್ಕೆಗಳನ್ನು ಕತ್ತರಿಸಿ ಹಾಕುತ್ತಾನೆ. ಆ ಎರಡು ರೆಕ್ಕೆಗಳು ಈ ಭಾಗದಲ್ಲಿ ಬಂದು ಬಿದ್ದವು ಎನ್ನುವುದು ಇತಿಹಾಸ. ಹಾಗಾಗಿಯೇ ರಾವಣನಿಂದ ಗರುಡ ಕೊಲ್ಲಲ್ಪಟ್ಟ ಸ್ಥಳ ಇದಾಗಿದ್ದು ಇದಕ್ಕೆ ಕೊಲದೇವಿ ಎಂಬ ಹೆಸರು ಬಂದಿದೆ ಎಂದು ಪುರಾಣಗಳು ಹೇಳುತ್ತವೆ. ಇನ್ನೂ ಜಟಾಯು ಬಿದ್ದ ಸ್ಥಳದಲ್ಲೇ ಹನುಮನು ಬಂದು ನೆಲೆಸಿದ್ದಾನೆ ಎನ್ನಲಾಗುತ್ತದೆ.

ಇಲ್ಲಿರುವ ಆಂಜನೇಯ ಹಲ್ಲು ಹಾಗೂ ಕೈಯಲ್ಲಿ ಬ್ರಹ್ಮಾಸ್ತ್ರವನ್ನು ಹೊಂದಿದ್ದಾನೆ. ಈ ದೇಗುಲಕ್ಕೆ ಬಂದು ಗರುಡ ದೇವರ ದರ್ಶನ ಮಾಡಿದರೆ ಸಾಕು ಅದೃಷ್ಟ ಎಂಬುದು ಬರುತ್ತದೆ ಎನ್ನುವುದು ಗರುಡ ಪುರಾಣಗಳಲ್ಲಿ ಕಂಡು ಬರುತ್ತದೆ. ಇನ್ನೊಂದೆಡೆ ಮೇಲುಕೋಟೆ ಚಲುವನಾರಾಯಣಸ್ವಾಮಿ ಹಾಗೂ ತಿರುಪತಿಯ ದೇವಾಲಯಗಳಿಗೂ ಈ ಗರುಡ ದೇವರಿಗೂ ಸಂಬಂಧವಿದೆ ಎಂಬ ಇತಿಹಾಸವೂ ಕೂಡ ಇದೇ. ಇಲ್ಲಿರುವ ಈ ಗರುಡ ದೇವರನ್ನು ದರ್ಶನ ಮಾಡಿ ಪೂಜೆ ಸಲ್ಲಿಸಿದರೆ ಸರ್ಪ ದೋಷಗಳು ನಿವಾರಣೆಯಾಗುತ್ತವೆ. ಜೊತೆಗೆ ಕಲ್ಯಾಣ ಭಾಗ್ಯ ಸಂತಾನಭಾಗ್ಯ ಸೇರಿದಂತೆ ವೈದ್ಯಲೋಕಕ್ಕೆ ಸವಾಲಾದ ಹಲವು ಕಾಯಿಲೆಗಳು ಇಲ್ಲಿ ವಾಸಿಯಾಗುತ್ತವೆ. ವಾಮಾಚಾರ ಮಾಟ ಮಂತ್ರಗಳ ನಿವಾರಣೆಗೆ ಬಂದ ಭಕ್ತ ಕೋಟಿಯನ್ನು ಗರುಡ ದೇವರು ರಕ್ಷಿಸಿದ್ದಾನೆ. ಪ್ರತಿ ಶನಿವಾರ ಭಾನುವಾರ ಇಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಹಾಗಾಗಿ ಒಮ್ಮೆ ಈ ದೇಗುಲಕ್ಕೆ ಹೋಗಿ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ.

LEAVE A REPLY

Please enter your comment!
Please enter your name here