ನವಗ್ರಹ ಪ್ರದಕ್ಷಣೆ ಮಾಡುವಾಗ ದಯವಿಟ್ಟು ಈ ತಪ್ಪು ಮಾಡಬೇಡಿ

0
1313

ನಮ್ಮ ಹಿಂದೂ ಸಂಪ್ರದಾಯದಲ್ಲಿ ಎಷ್ಟೆಲ್ಲ ರೀತಿಯ ದೇವರುಗಳು ಇವೆ ಅಲ್ಲವೇ ಹಾಗೆಯೇ ಒಂಬತ್ತು ಗ್ರಹಗಳು ಇವೆ ಎಂಬುದು ಎಲ್ಲರಿಗು ಗೊತ್ತು ಹಾಗೆಯೇ ನಮ್ಮ ಜಾತಕ ಚಕ್ರದ ಅನುಸಾರವಾಗಿ ಆ ಒಂಬತ್ತು ಗ್ರಹಗಳು ಕರ್ಮ ಪುಣ್ಯ ಪಾಪಗಳ ಫಲವನ್ನ ನಮಗೆ ನೀಡುತ್ತಾ ಇರುತ್ತದೇ. ಸಾವಿರಾರು ಕಿಲೋಮೀಟರ್ ದೂರದಲ್ಲಿ ಇರುವ ಗ್ರಹಗಳು ನಮ್ಮನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ನಮಗೆ ತಿಳಿದ ವಿಚಾರವೇ ಆಗಿದೆ. ನೀವೆಲ್ಲ ಒಮ್ಮೆ ಕೇಳಿರಬಹುದು ಜ್ಯೋತಿಷ್ಯರ ಹತ್ತಿರ ಜ್ಯೋತಿಷ್ಯ ಕೇಳಲು ಹೋದಾಗ ಗ್ರಹಗತಿಗಳು ಸರಿಯಿಲ್ಲ ಎಂದು ಹೇಳಿದ್ದನ್ನು ಕೇಳಿರುತ್ತಿರ ಅಲ್ಲವೇ ಆ ಒಂಬತ್ತು ಗ್ರಹಗಳು ನಮ್ಮನ್ನು ಒಂದೇ ಬಾರಿ ಕಾಡುವುದಿಲ್ಲ ನಮ್ಮ ಜಾತಕ ಚಕ್ರದಲ್ಲಿ ಯಾವ ಗ್ರಹ ಉಚ್ಚಸ್ಥಾನದಲ್ಲಿ ಇರುತ್ತದೋ ಆ ಗ್ರಹಕ್ಕೆ ಹೆಚ್ಚಿನ ಪೂಜೆ ಮಾಡಿದರೆ ಉಳಿದ ಗ್ರಹಗಳು ಕೂಡ ಅನುಕೂಲವಾಗಿರುತ್ತದೆ.

ಈ ಒಂಬತ್ತು ಗ್ರಹಗಳು ಕೂಡ ಒಂದೇ ಬಾರಿ ನಮ್ಮ ಜಾತಕದಲ್ಲಿ ಸೇರಿಕೊಳ್ಳುವುದಿಲ್ಲ ಒಂದೊಂದು ಗ್ರಹಗಳು ಒಂದೊಂದು ಬಾರಿ ಸೇರುತ್ತವೆ ಹೀಗೆ ಗ್ರಹಗಳು ಸೇರಿಕೊಂಡಾಗ ಹಲವಾರು ರೀತಿಯ ಕೆಲಸ ಕಾರ್ಯಗಳನ್ನು ಮಾಡಲು ಆಗುವುದಿಲ್ಲ ಹಾಗಾಗಿ ಅದಕ್ಕಾಗಿ ಹಲವಾರು ರೀತಿಯ ಪೂಜೆಗಳನ್ನು ಮಾಡಿಸುತ್ತಾರೆ. ಆದರೆ ಹೀಗೆ ಗ್ರಹ ದೋಷದಿಂದ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ತುಂಬಾ ಸರಳ ವಿಧಾನವೆಂದರೆ. ನವಗ್ರಹ ಪ್ರದಕ್ಷಣೆ ಮಾಡುವುದು ನವಗ್ರಹ ಪ್ರದಕ್ಷಣೆ ಮಾಡುವುದರಿಂದ ದೈವಿಕ ಶಕ್ತಿಯು ಮನುಷ್ಯನನ್ನು ಕಾಪಾಡುತ್ತದೆ ಎಂದು ಸಾವಿರಾರು ವರ್ಷಗಳ ಹಿಂದಿನಿಂದಲು ಕೂಡ ನಂಬುತ್ತಾ ಬಂದಲಾಗಿದೆ.

ನಮ್ಮ ಹಿಂದೂ ಪದ್ದತಿಯ ಪ್ರಕಾರ ನವಗ್ರಹ ಪ್ರದಕ್ಷಣೆ ಮಾಡಿದರೆ ನವಗ್ರಹ ಸಮಸ್ಯೆ ಇಂದ ತುಂಬಾ ಬೇಗ ಫಲಿತಾಂಶವನ್ನು ಕಾಣಬಹುದು. ಜೊತೆಗೆ ನಾವು ನವಗ್ರಹ ದೇವಸ್ಥಾನಕ್ಕೆ ಹೋದಾಗ ಸುಮ್ಮನೆ ಹೋಗಿ ಪ್ರದಕ್ಷಣೆ ಹಾಕಿ ಬರುತ್ತೇವೆ ಜೊತೆಗೆ ಅಲ್ಲಿನ ದೇವರ ವಿಗ್ರಹಗಳನ್ನು ಮುಟ್ಟಿ ಪೂಜೆ ಮಾಡುತ್ತೇವೆ. ಆದರೆ ನವಗ್ರಹ ಪ್ರದಕ್ಷಣೆ ಮಾಡುವಾಗ ತುಂಬಾ ಎಚ್ಚರಿಕೆ ಇರಬೇಕು ಏಕೆ ಅಂದ್ರೆ ಅಲ್ಲಿ ಇರುವುದು ಸಾಮಾನ್ಯ ಮೂರ್ತಿಗಳು ಅಲ್ಲವೇ ಅಲ್ಲ ನಮ್ಮ ಜೀವನವನ್ನು ನಡೆಸುವ ೯ ಗ್ರಹಗಳು ಮತ್ತು ಅಲ್ಲಿ ಪ್ರತಿಷ್ಟಾಪನೆ ಮಾಡುವಾಗ ಹಲವು ರೀತಿಯ ನಿಮಯ ಅನುಸರಿಸಿ ಕ್ರಮ ಬದ್ದವಾಗಿ ಪ್ರತಿಷ್ಠೆ ಮಾಡಿರುತ್ತಾರೆ ಆ ಜಗದಲ್ಲಿ ಒಂದು ಪಾಸಿಟಿವ್ ಎನರ್ಜಿ ಉದ್ಭವ ಆಗಿರುತ್ತದೆ ಹಾಗಾಗಿ ನಾವು ಕೆಲವು ಸಂಪ್ರದಾಯ ಪಾಲಿಸುವುದು ಉತ್ತಮ ಹಾಗಾದರೆ ಅದು ಏನು ಎಂದು ತಿಳಿಯೋಣ.

ನವಗ್ರಹ ಪ್ರದಕ್ಷಣೆ ಸುತ್ತುವಾಗ ನವಗ್ರಹ ಮೂರ್ತಿಯನ್ನ ಯಾವುದೇ ಕಾರಣಕ್ಕೂ ಮುಟ್ಟಿ ಪ್ರದಕ್ಷಣೆ ಮಾಡಬಾರದು. ನವಗ್ರಹಗಳಲ್ಲಿ ಅಧಿಪತಿ ಸೂರ್ಯ ಹಾಗಾಗಿ ಸೂರ್ಯನನ್ನು ಮಧ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇಟ್ಟಿರುತ್ತಾರೆ. ಸೂರ್ಯನಿಗೆ ಬಲಭಾಗದಲ್ಲಿ ಅಂಗಾರಕನು ದಕ್ಷಿಣಾಭಿಮುಖವಾಗಿ ಇರುತ್ತದೇ. ನವಗ್ರಹ ದೇವಸ್ಥಾನಕ್ಕೆ ಒಳ ಪ್ರವೇಶ ಮಾಡುವಾಗ ಸೂರ್ಯನನ್ನ ನೋಡುತ್ತಾ ಪ್ರವೇಶ ಮಾಡಬೇಕು ನಂತರ ಚಂದ್ರನ ಕಡೆಯಿಂದ ಬಲಭಾಗಕ್ಕೆ ಒಂಬತ್ತು ಪ್ರದಕ್ಷಣೆ ಮಾಡಬೇಕು.

ಆ ಒಂಬತ್ತು ಪ್ರದಕ್ಷಣೆಗಳು ಹೇಗಿರಬೇಕು ಎಂದರೆ ಬುದನ ಕಡೆಯಿಂದ ರಾಹು ಕೇತುವನ್ನ ಸ್ಮರಿಸುತ್ತಾ ಎರಡು ಪ್ರದಕ್ಷಣೆ ಮಾಡಬೇಕು ಕೊನೆಯಲ್ಲಿ ಸೂರ್ಯನನ್ನು, ಚಂದ್ರನನ್ನು ಕುಜ ಬುಧ ಭ್ರಮಸ್ಮತಿ ಶುಕ್ರ ಶನಿ ರಾಹು ಕೇತುವನ್ನ ಸ್ಮರಿಸುತ್ತ ಒಂದೊಂದು ಪ್ರದಕ್ಷಿಣೆ ಮಾಡಬೇಕು.ಜೊತೆಗೆ ನವಗ್ರಹಗಳಿಗೆ ಬೆನ್ನು ತೋರಿಸದೆ ಹೊರ ಬರಬೇಕು. ಇದರ ಜೊತೆಗೆ ನವಗ್ರಹ ಸುತ್ತುವಾಗ ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಭುದಾಯಚ ಗುರು ಶುಕ್ರ ಶನಿಭ್ಯಶ್ಚ ರಾಹುವೇ ಕೇತವೇ ನಮಃ ಹೀಗೆ ಹೇಳುತ್ತಾ ಒಂಬತ್ತು ದಿನ ೯ ಸುತ್ತು ಸುತ್ತಿ ಕೊನೆಗೆ ಬೆನ್ನು ತೋರಿಸದೆ ಹೊರಗೆ ಬನ್ನಿ ನಿಮ್ಮ ಸಂಕಷ್ಟ ಏನೇ ಇದ್ದರು ೯ ದಿನದಲ್ಲಿ ಪರಿಹಾರ ಆಗದಿದ್ದರೆ ಕೇಳಿ.

LEAVE A REPLY

Please enter your comment!
Please enter your name here