ಬೆಳಗ್ಗೆ ಎದ್ದ ಕೂಡಲೇ ಕರದರ್ಶನ ಮಾಡಿದ್ರೆ ನಿಮಗೆ ಈ ಲಾಭಗಳು ಸಿಗುತ್ತೆ

0
962

ಸಾಮಾನ್ಯವಾಗಿ ಎಲ್ಲರೂ ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಎರಡು ಕೈಗಳನ್ನು ಸವರಿಕೊಂಡು ಕೈಗಳನ್ನು ನೋಡಿ ನಮಸ್ಕಾರ ಮಾಡಿಕೊಂಡು ನಂತರ ಆ ಎರಡು ಕೈಗಳನ್ನು ಜೋಡಿಸಿ ದೇವರಿಗೆ ನಮಸ್ಕಾರ ಮಾಡುತ್ತೇವೆ. ನಮ್ಮ ಎರಡು ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮನಸ್ಸನ್ನು ಏಕಾಗ್ರತೆಗೊಳಿಸಿ ಕರಾಗ್ರೇ ವಸತೇ ಲಕ್ಷ್ಮೀಃ. ಎಂಬ ಶ್ಲೋಕವನ್ನು ಹೇಳುವುದರಿಂದ ಬ್ರಹ್ಮಾಂಡದಲ್ಲಿನ ಎಲ್ಲ ದೇವತೆಗಳ ಲಹರಿಗಳು ನಮ್ಮ ಬೊಗಸೆಯತ್ತ ಆಕರ್ಷಿತವಾಗುತ್ತವೆ. ತಮ್ಮ ಎರಡೂ ಕೈಗಳಿಂದ ಬೊಗಸೆಯನ್ನು ಮಾಡುವುದರಿಂದ ಬ್ರಹ್ಮ ಮುದ್ರೆಯು ತಯಾರಾಗಿ ದೇಹದಲ್ಲಿನ ಸುಷುಮ್ನಾನಾಡಿಯು ಕಾರ್ಯ ನಿರತವಾಗುತ್ತದೆ.

ಸೂಕ್ಷ್ಮ ನಾಡಿಯು ಜೀವದ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿದೆ. ಜೊತೆಗೆ ಈಶ್ವರನೊಂದಿಗೆ ಅವನ ಅನು ಸಂಧಾನವಾಗುವುದು ಮತ್ತು ಅವನ ಮೇಲಿನ ತ್ರಾಸದಾಯಕ ಶಕ್ತಿಯ ಆವರಣವು ದೂರವಾಗುತ್ತದೆ. ರಾತ್ರಿಯ ನಿದ್ರೆಯಿಂದ ವ್ಯಕ್ತಿಯ ದೇಹದಲ್ಲಿ ತಮೋ ಗುಣಿ ಸ್ಪಂದನಗಳು ನಿರ್ಮಾಣವಾಗುತ್ತವೆ. ಇದರಿಂದ ಅವನ ಮೇಲೆ ತ್ರಾಸದಾಯಕ ಶಕ್ತಿಯು ಹೆಚ್ಚುತ್ತದೆ. ಹಾಗಾಗಿ ಪ್ರಾತಃ ಕಾಲದಲ್ಲಿ ಎದ್ದ ನಂತರ ಕರದರ್ಶನ ಪಡೆಯುತ್ತಾ ಕರಾಗ್ರೇ ವಸತೇ ಲಕ್ಷ್ಮೀಃ ಎಂಬ ಶ್ಲೋಕವನ್ನು ಪಠಿಸುವುದರಿಂದ ವ್ಯಕ್ತಿಯ ವೃತ್ತಿಯು ಅಂತರ್ಮುಖವಾಗುತ್ತದೆ.

ಹಾಗೆಯೇ ಅವನ ಮೇಲಿನ ತ್ರಾಸದಾಯಕ ಶಕ್ತಿಯ ಆವರಣವು ದೂರವಾಗಿ ಈಶ್ವರನ ಅನುಸಂಧಾನ ಪ್ರಾರಂಭ ವಾಗುತ್ತದೆ ಮತ್ತು ಆ ವ್ಯಕ್ತಿಯು ದಿನವಿಡೀ ಅದೇ ಸ್ಥಿತಿಯಲ್ಲಿರಲು ಉಲ್ಲಾಸ ಭರಿತವಾಗಿರಲು ಸಹಾಯವಾಗುತ್ತದೆ. ಅಯಮ್ ಆತ್ಮಾ ಬ್ರಹ್ಮ ಅಂದರೆ ಆತ್ಮವೇ ಬ್ರಹ್ಮ ವಾಗಿದೆ ಎಂಬುದನ್ನು ಕಲಿಸಲಾಗುತ್ತದೆ. ಕರಾಗ್ರೇ ವಸತೇ ಲಕ್ಷ್ಮೀಃ. ಈ ಶ್ಲೋಕವು ಒಂದು ಉದಾಹರಣೆಯಾಗಿದೆ. ಆದುದರಿಂದ ಪ್ರಾತಃಕಾಲ ಎದ್ದ ಮೇಲೆ ಕರದರ್ಶನ ಪಡೆಯುತ್ತಾ ಈ ಶ್ಲೋಕವನ್ನು ಪಠಿಸುವುದೆಂದರೆ ತನ್ನಲ್ಲಿರುವ ಈಶ್ವರನನ್ನು ನೋಡುವುದು. ಒಬ್ಬ ವ್ಯಕ್ತಿಯಿಂದ ನಿತ್ಯ ಅನೇಕ ಕರ್ಮಗಳು ಆಗುತ್ತಿರುತ್ತವೆ ಈ ಯೋಗ್ಯ ಮತ್ತು ಅಯೋಗ್ಯ ಕರ್ಮಗಳು ವ್ಯಕ್ತಿಯ ಪಾಪ ಪುಣ್ಯಕ್ಕೆ ಕಾರಣ ವಾಗುತ್ತವೆ. ಬೆಳಿಗ್ಗೆ ಎದ್ದು ಕರ ದರ್ಶನ ಮಾಡುವುದರಿಂದ ನಮಗೆ ಗೊತ್ತಿಲ್ಲದ ಹಾಗೆ ನೆಡೆಯುವ ಅಯೋಗ್ಯ ಕರ್ಮಗಳ ಸಮಯದಲ್ಲಿ ಅವನ ಅಂತರ್ಮನಸ್ಸಿಗೆ ಅವುಗಳ ಅರಿವಾಗಿ ಅವನಿಂದ ಅಯೋಗ್ಯ ಕರ್ಮಗಳು ಘಟಿಸುವುದಿಲ್ಲ.

ವ್ಯಕ್ತಿಯಲ್ಲಿರುವ ಭಾವದಿಂದ ಅವನ ಕೈಗಳ ಅಗ್ರಭಾಗದಲ್ಲಿ ಲಕ್ಷ್ಮೀದೇವಿತತ್ತ್ವ ಮಧ್ಯಭಾಗದಲ್ಲಿ ಸರಸ್ವತಿ ದೇವಿ ತತ್ತ್ವ ಮತ್ತು ಮೂಲದಲ್ಲಿ ಶ್ರೀ ಕೃಷ್ಣನ ತತ್ತ್ವವು ಗ್ರಹಣವಾಗುತ್ತದೆ. ಈ ಶ್ಲೋಕವು ಸಂಸ್ಕೃತ ಭಾಷೆಯಲ್ಲಿ ಅಂದರೆ ದೇವ ಭಾಷೆಯಲ್ಲಿರುವುದರಿಂದ ವ್ಯಕ್ತಿಗೆ ಸಂಸ್ಕೃತದಲ್ಲಿನ ಚೈತನ್ಯವೂ ಸಿಗುತ್ತದೆ. ಹೀಗೆ ದೈವ ಭಕ್ತಯ ಮೇಲೆ ಜನರು ನಂಬಿಕೆ ಇಡುತ್ತಾರೆ. ಹಾಗಾಗಿಯೇ ಬೆಳಿಗ್ಗೆ ಎದ್ದ ತಕ್ಷಣ ಕರದರ್ಶನ ಮಾಡುವುದು ತುಂಬಾ ಒಳ್ಳೆಯದು. ಈ ಉಪಯುಕ್ತ ಮಾಹಿತಿ ತಪ್ಪದೇ ಎಲ್ಲರೊಂದಿಗೂ ಶೇರ್ ಮಾಡಿರಿ ನಿಮಗೂ ಶುಭ ಆಗಲಿದೆ. ನಮ್ಮ ವೆಬ್ಸೈಟ್ ನಲ್ಲಿ ಪ್ರಕಟವಾದ ಎಲ್ಲ ಮಾಹಿತಿಗಳಿಗೆ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here