ಯಾವಾಗಲು ಕುಳಿತಲ್ಲೇ ಕುಳಿತು ಕೆಲಸ ಮಾಡುವವರು ಈ ಮಾಹಿತಿ ಒಮ್ಮೆ ಆದರೂ ತಿಳಿಯಬೇಕು

0
766

ಇತ್ತೀಚಿನ ಜನರ ಜೀವನ ಎಂಬುದು ಹೇಗಾಗಿದೆ ಎಂದರೆ ತಮ್ಮ ಜೀವನವನ್ನು ನೆಡೆಸಲು ಕೆಲಸಕ್ಕಾಗಿ ಹೊಡೆದಾಡಿ ಯಾವುದೋ ಒಂದು ಕೆಲಸ ಸಿಕ್ಕರೆ ಸಾಕಪ್ಪಾ ಎನ್ನುತ್ತಾರೆ ಜೊತೆಗೆ ಈಗಿನ ಕೆಲಸಗಳು ಎಲ್ಲವು ಬೆಳಿಗ್ಗೆಯಿಂದ ಸಂಜೆಯವರೆಗೆ ಕುತಲ್ಲೇ ಕುಳಿತು ಕೆಲಸ ಮಾಡುವ ಸ್ಥಿತಿ ಬಂದಿದೇ. ಆದರೆ ಈಗೆ ಕುಳಿತಲ್ಲೇ ಹೆಚ್ಚು ಸಮಯ ಕುಳಿತುಕೊಂಡರೆ ಸಾಕು ಕಾಲುಗಳು ಮರುಗಟ್ಟುತ್ತವೆ. ಹೆಚ್ಚು ಸಮಯ ಒಂದೇ ಭಂಗಿಯಲ್ಲಿದ್ದರೆ ನರಗಳ ಮೇಲೆ ಒತ್ತಡವುಂಟಾಗಿ ಕಾಲುಗಳು ಮರುಗಟ್ಟುವುದಕ್ಕೆ ಕಾರಣವಾಗುತ್ತದೆ.

ಪಾದಗಳು ಮರುಗಟ್ಟುವುದರಿಂದ ಪಾದಗಳು ಜುಮುಗುಡುವುದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೇ. ಆದರೆ ಇದರಿಂದ ಏನು ಸಮಸ್ಯೆ ಆಗುವುದಿಲ್ಲ ಎಂದು ಸುಮ್ಮನಾಗುತ್ತೇವೆ ಆದರೆ ಈ ರೀತಿಯ ಅನುಭವ ಪದೇ ಪದೇ ಕೂಡ ಬರುತ್ತದೆ. ಆದರೆ ಈ ಜುಮುಗುಡುವಿಕೆ ಸುದೀರ್ಘ ಸಮಯ ಮುಂದುವರಿದರೆ ಅಥವಾ ಅದರೊಂದಿಗೆ ನೋವು ಮತ್ತು ಊತವಿದ್ದರೆ ಅದಕ್ಕೆ ಕಾರಣವನ್ನು ತಿಳಿದುಕೊಳ್ಳಲು ಮತ್ತು ಸೂಕ್ತ ಚಿಕಿತ್ಸೆ ಪಡೆಯಲು ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ. ಪಿನ್ಸ್ ಆ್ಯಂಡ್ ನೀಡಲ್ಸ್ ಎಂದೂ ಕರೆಯಲಾಗುವ ಈ ಜುಮುಗುಡುವಿಕೆಗೆ ಕೆಲವು ಸಾಮಾನ್ಯ ಕಾರಣಗಳಿಲ್ಲಿವೆ.

ಡಯಾಬಿಟಿಕ್ ನ್ಯೂರೊಪಥಿ ಅಥವಾ ಮಧುಮೇಹ ನರ ರೋಗವು ಮಧುಮೇಹದಿಂದ ಉಂಟಾಗುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲೊಂದಾಗಿದೆ. ಇದು ರಕ್ತದಲ್ಲಿಯ ಸಕ್ಕರೆ ಮಟ್ಟವು ಅಧಿಕಗೊಂಡು ನರಗಳಿಗೆ ಹಾನಿಯುಂಟಾಗಿರುವ ಸ್ಥಿತಿಯಾಗಿರುತ್ತದೆ. ಕೆಲವು ಗರ್ಭಿಣಿಯರಿಗೆ ಪಾದಗಳಲ್ಲಿ ಜುಮುಗುಡುವಿಕೆಯ ಅನುಭವವಾಗುತ್ತದೆ. ಗರ್ಭಾಶಯವು ದೊಡ್ಡದಾದಂತೆ ಕಾಲುಗಳಿಗೆ ಸಾಗುವ ನರಗಳ ಮೇಲೆ ಒತ್ತಡವುಂಟಾಗುತ್ತದೆ ಮತ್ತು ಇದು ಕಾಲು ಹಾಗೂ ಪಾದಗಳಲ್ಲಿ ಜುಮುಗುಡುವಿಕೆಗೆ ಕಾರಣವಾಗುತ್ತದೆ.

ಪಾದಗಳಿಗೆ ವಿಶ್ರಾಂತಿ ನೀಡುವ ಕುಳಿತ ಭಂಗಿಯನ್ನು ಬದಲಿಸುವ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಆಗಾಗ್ಗೆ ಸಾಕಷ್ಟು ನೀರು ಕುಡಿಯುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ವಿಟಾಮಿನ್‌ಗಳ ಕೊರತೆಯಿಂದ ಕೂಡ ಪಾದಗಳು ಜುಮುಗುಟುತ್ತವೆ ಎ ವಿಟಮಿನ್ ಪೌಷ್ಟಿಕಾಂಶಗಳಿಲ್ಲದ ಆಹಾರ ಸೇವನೆ ಅಥವಾ ಯಾವುದಾದರೂ ಆರೋಗ್ಯ ಸಮಸ್ಯೆ ವಿಟಾಮಿನ್‌ಗಳ ಕೊರತೆಯನ್ನುಂಟು ಮಾಡುತ್ತದೆ. ಬಿ ಕಾಂಪ್ಲೆಕ್ಸ್ ವಿಟಾಮಿನ್‌ಗಳ ಕೊರತೆಯು ಜುಮುಗುಡುವಿಕೆಗೆ ಸಾಮಾನ್ಯ ಕಾರಣಗಳಲ್ಲೊಂದಾಗಿದೆ. ತುಂಬಾ ಬಳಲಿಕೆ ಉಸಿರಾಟದ ತೊಂದರೆ ತಲೆ ಸುತ್ತುವಿಕೆ ತಲೆನೋವು ಕೈಗಳು ಮತ್ತು ಪಾದಗಳು ತಣ್ಣಗಾಗುವುದು ಇತ್ಯಾದಿಗಳು ಬಿ 12 ವಿಟಾಮಿನ್‌ನ ಕೊರತೆಯನ್ನು ಸೂಚಿಸುವ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.

ಸೆಟೆದುಕೊಂಡ ನರದಿಂದ ಬಳಲುತ್ತಿರುವವರಿಗೆ ಪಾದಗಳಲ್ಲಿ ಜುಮುಗುಡುವಿಕೆಯ ಅನುಭವವಾಗುತ್ತದೆ. ಗಾಯ ಅಥವಾ ಊತದಿಂದ ಬೆನ್ನಿನಲ್ಲಿಯ ನರಗಳ ಮೇಲೆ ಒತ್ತಡವು ಇದಕ್ಕೆ ಕಾರಣವಾಗುತ್ತದೆ. ಮೂತ್ರಪಿಂಡ ವೈಫಲ್ಯವು ಪಾದಗಳನ್ನು ಜುಮುಗುಡಿಸುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮೂತ್ರಪಿಂಡ ರೋಗಗಳ ಸಾಮಾನ್ಯ ಕಾರಣಗಳಲ್ಲಿ ಸೇರಿದ್ದು,ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮೂತ್ರಪಿಂಡ ವೈಫಲ್ಯವನ್ನುಂಟು ಮಾಡುತ್ತವೆ. ಸ್ನಾಯುಗಳಲ್ಲಿ ಸೆಳೆತ ಮತ್ತು ದೌರ್ಬಲ್ಯ,ಪಾದಗಳಲ್ಲಿ ನೋವು ಮತ್ತು ಮರಗಟ್ಟುವಿಕೆ ಇವು ಮೂತ್ರಪಿಂಡಕ್ಕೆ ಅಪಾಯವನ್ನು ಸೂಚಿಸುವ ಕೆಲವು ಲಕ್ಷಣಗಳಾಗಿವೆ. ನರಗಳ ಉರಿಯೂತ ಮತ್ತು ಬ್ಯಾಕ್ಟೀರಿಯಾ ಅಥವಾ ನರಗಳ ಸೋಂಕುಗಳಿಗೆ ಕಾರಣವಾಗುತ್ತದೆ. ಹೆಪಟಿಟಿಸ್ ಬಿ ಮತ್ತು ಸಿ ಕುಷ್ಠ ಎಚ್‌ಐವಿ ಏಡ್ಸ್ ಮತ್ತು ಲೈಮ್ ಡಿಸೀಸ್ ಇವು ಪಾದಗಳನ್ನು ಜುಮುಗುಡಿಸುವ ಕೆಲವು ಸಾಮಾನ್ಯ ಸೋಂಕುಗಳಾಗಿವೆ. ಹಾಗಾಗಿ ಕಾಲುಗಳು ಜುಮುಗುಡುತ್ತಿದ್ದರೆ ವೈದ್ಯರನ್ನು ಭೇಟಿ ನೀಡಿ ಪರಿಹಾರ ಕಂಡು ಕೊಳ್ಳುವುದು ತುಂಬಾ ಒಳ್ಳೆಯದು. ಜೊತೆಗೆ ನಾವು ಹೇಳಿರುವ ವಿಟಮಿನ್ ಬಿ 12 ಆಹಾರ ಕ್ರಮ ಪಾಲಿಸಿದರೆ ಶಾಶ್ವತ ಮುಕ್ತಿ ಪಡೆಯಬಹುದು.

LEAVE A REPLY

Please enter your comment!
Please enter your name here